Homeಮುಖಪುಟರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಬೇಕು: ಕೆಸಿಆರ್ ಹೇಳಿಕೆಗೆ ಕಾಂಗ್ರೆಸ್ ತೀವ್ರ ವಿರೋಧ

ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಬೇಕು: ಕೆಸಿಆರ್ ಹೇಳಿಕೆಗೆ ಕಾಂಗ್ರೆಸ್ ತೀವ್ರ ವಿರೋಧ

- Advertisement -
- Advertisement -

ಕರ್ನಾಟಕದ ರಾಯಚೂರು ಜಿಲ್ಲೆಯನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಿಕೊಳ್ಳಬೇಕೆಂದು ಅಲ್ಲಿನ ಜನ ಹೇಳುತ್ತಿದ್ದಾರೆಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಕೆಸಿಆರ್ ಹೇಳಿಕೆಯನ್ನು ವಿರೋಧಿಸಿದ್ದಾರೆ.

ತೆಲಂಗಾಣದಲ್ಲಿ 2016 ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಕಾರಾಬಾದ್ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಛೇರಿ ಉದ್ಘಾಟನೆ ವೇಳೆ ಕೆಸಿಆರ್, “ತೆಲಂಗಾಣದಲ್ಲಿ ನಡೆಯುತ್ತಿರುವ ಕಲ್ಯಾಣ ಕಾರ್‍ಯಕ್ರಮಗಳನ್ನು ನೋಡಿ ರಾಯಚೂರು ಗಡಿ ಭಾಗದ ಜನ ಸಹ ತಮ್ಮ ಜಿಲ್ಲೆಯನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಬೇಕು, ಇಲ್ಲವೇ ಅಲ್ಲಿ ನೀಡುತ್ತಿರುವ ಸವಲತ್ತುಗಳನ್ನು ನಮಗೂ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಜನರಿಗೆ ಉಚಿತ ಕುಡಿಯುವ ನೀರು ಒದಗಿಸುವ ಭಗೀರಥ ಯೋಜನೆ ಜಾರಿಗೊಳಿಸಿದ್ದೇವೆ. ಬಸುರಿ-ಬಾಣಂತಿಯರಿಗೆ ಕೆಸಿಆರ್‌ ಕಿಟ್ ನೀಡುತ್ತಿದ್ದೇವೆ, ಉಚಿತ ವಿದ್ಯುತ್ ಜೊತೆಗೆ ರೈತರಿಗೆ ವಾರ್ಷಿಕ 10,000 ಧನ ಸಹಾಯ ನೀಡುತ್ತಿದ್ದೇವೆ. ಇವೆಲ್ಲವೂ ಅಲ್ಲಿನ ಜನರನ್ನು ಆಕರ್ಷಿಸಿದೆ ಎಂದು ಕೆಸಿಆರ್ ಹೇಳಿದ್ದಾರೆ.

ಕಳೆದ ವರ್ಷ ರಾಯಚೂರಿನ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ್‌ರವರು ರಾಯಚೂರು ತೆಲಂಗಾಣಕ್ಕೆ ಸೇರಬೇಕೆಂದು ಹೇಳಿಕೆ ನೀಡಿದ್ದರು. ಅದನ್ನು ತೆಲಂಗಾಣದ ಕೆ.ಟಿ ರಾಮರಾವ್ ಸೇರಿದಂತೆ ಹಲವು ನಾಯಕರು ಟ್ವೀಟ್ ಮಾಡಿ ಸ್ವಾಗತಿಸಿದ್ದರು.

ಸದ್ಯದ ಕೆಸಿಆರ್ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. “ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಬೇಕೆಂದಿರುವ ಶಾಸಕ ಡಾ.ಶಿವರಾಜ ಪಾಟೀಲ್ ಮತ್ತು ಕೆಸಿಆರ್‌ ಅವರ ಹೇಳಿಕೆ ಅತ್ಯಂತ ಖಂಡನೀಯ, ರಾಯಚೂರು ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗವಾಗಿರಲಿದೆ” ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

ಈ ಹೇಳಿಕೆ ಮತ್ತು ಸರ್ಕಾರದ ಮೌನವನ್ನು ಗಮನಿಸಿದರೇ ಬಿಜೆಪಿ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕದ ಬಗ್ಗೆ ಇರುವ ದ್ವೇಷ ಮತ್ತು ಈ ಭಾಗದ ಬಗ್ಗೆ ಅವರ ಮಲತಾಯಿ ಧೋರಣೆ ಎಷ್ಟೊಂದು ಅನ್ನೋದು ಮತ್ತೊಮೆ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ,  “ಕೆಸಿಆರ್‌ರವರು ಹೇಳಿಕೆ ನೀಡಿ 24 ಗಂಟೆಗಳಾಗಿವೆ. ಆದರೂ ಸರ್ಕಾರದ ವತಿಯಿಂದ ಒಬ್ಬರೂ ಆದನ್ನು ಖಂಡಿಸಿಲ್ಲ. ಬೆಳಗಾವಿ ಗಡಿ ವಿವಾದವಾದರೆ ಇಡೀ ಕ್ಯಾಬಿನೆಟ್ ಮುಂದೆ ಬಂದು ಮಾತನಾಡುತ್ತದೆ. ಆದರೆ ನಮ್ಮ ಬಗ್ಗೆ ನೀವು ದನಿಯೆತ್ತುವುದಿಲ್ಲವೇಕೆ? ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕವನ್ನು ಕರ್ನಾಟಕದ ಭಾಗ ಎಂದು ಪರಿಗಣಿಸುತ್ತದೆಯೋ ಅಥವಾ ಇಲ್ಲವೋ? ರಾಯಚೂರು ತೆಲಂಗಾಣದ ಭಾಗವಾಗಬೇಕೆಂದು ಹೇಳಿಕೆ ನೀಡಿದ ನಿಮ್ಮ ಶಾಸಕನ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

“ರಾಯಚೂರಿನ ಜನ ತೆಲಂಗಾಣಕ್ಕೆ ಸೇರಿಸಿ ಅಂತ ಒತ್ತಾಯ ಮಾಡ್ತಿದ್ದಾರೆ ಅಂತ ಮಾಧ್ಯಮಗಳಲ್ಲಿ ಸ್ಟೇಟ್ಮೆಂಟ್ ಮಾಡುತ್ತಿರುವ ಮಾನ್ಯ ತೆಲಂಗಾಣ ಮುಖ್ಯಮಂತ್ರಿ KCR ಅವ್ರೆ , ಸಂವಿಧಾನದ ಆಶಯದೊಂದಿಗೆ ರಾಜ್ಯದ ಏಕೀಕರಣ ವ್ಯವಸ್ಥೆಯನ್ನು ಗೌರವಿಸುತ್ತಾ ಆದಾಗ್ಯೂ ಕರ್ನಾಟಕದ ಎಷ್ಟು ಜಾಗ ಇಂದು ತೆಲಂಗಾಣಕ್ಕೆ ಸೇರಿಹೋಗಿದೆ ಅಂತ ದಾಖಲೆಗಳ ಸಮೇತ ನಿರೂಪಿಸುತ್ತೇನೆ. ನಿಮಗೆ ಇದು ಓಪನ್ ಚಾಲೆಂಜ್ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ; ಮಂತ್ರಿಯಾಗುವ ಎಲ್ಲಾ ಅರ್ಹತೆ ನನಗಿದ್ದು, ನಾನು ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಪಕ್ಷಕ್ಕೆ 150 ಸೀಟು ಬರುತ್ತದೆ:…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ತೆಲಂಗಾಣ ಮುಖ್ಯಮಂತ್ರಿಗಳ ಈ ಹೇಳಿಕೆ ಕಂಡನಾರ್ಹ. ಟಿ.ಆರ್.ಎಸ್. ಮತ್ತು ಕಾಂಗ್ರೆಸ್ ಪಕ್ಷಗಳನ್ನು ಒಳಗೊಂಡಂತೆ, ಎಲ್ಲಾ ವಿರೋಧ ಪಕ್ಷದವರು ಒಂದಾಗಿ ಬಿ.ಜೆ.ಪಿ.ಯನ್ನು ಎದುರಿಸಬೇಕಾಗಿರುವ ಈ ವಿಷಮ ಪರಿಸ್ಥಿತಿಯಲ್ಲಿ, ಮುಗಿದುಹೋಗಿರುವ ಗಡಿ ವಿವಾದವನ್ನು ಕೆದಕುವುದರಿಂದ, ತೆಲಂಗಾಣಕ್ಕಾಗಲೀ, ಕರ್ನಾಟಕಕ್ಕಾಗಲಿ ಯಾವುದೇ ಪ್ರಯೋಜನ ಇಲ್ಲ.

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...