Homeಕರ್ನಾಟಕಗುತ್ತಿಗೆದಾರರಿಂದ ಬಿಜೆಪಿ ಶಾಸಕನ ವಿರುದ್ಧ ಮತ್ತೆ ಕಮೀಷನ್ ಆರೋಪ; ಆಡಿಯೋ ರಿಲೀಸ್

ಗುತ್ತಿಗೆದಾರರಿಂದ ಬಿಜೆಪಿ ಶಾಸಕನ ವಿರುದ್ಧ ಮತ್ತೆ ಕಮೀಷನ್ ಆರೋಪ; ಆಡಿಯೋ ರಿಲೀಸ್

- Advertisement -
- Advertisement -

ರಾಜ್ಯ ಬಿಜೆಪಿ ಸರ್ಕಾರದಲ್ಲಿ 40% ಕಮೀಷನ್ ಪಡೆದು ಕಾಮಗಾರಿ ಕೆಲಸ ನೀಡುತ್ತಾರೆ ಎಂದು ಈ ಹಿಂದೆ ಗುತ್ತಿಗೆದಾರರ ಸಂಘ ಆರೋಪ ಮಾಡಿತ್ತು. ಇದೀಗ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಲಂಚ ಪಡೆದಿರುವ ಬಗ್ಗೆ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಅವರು ಆರೋಪ ಮಾಡಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ತಿಪ್ಪಾರೆಡ್ಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, “ನಮ್ಮ ಜಿಲ್ಲೆಯಲ್ಲಿ ಯಾವತ್ತೂ ಲಂಚ, ಕಮೀಷನ್ ಪ್ರಸ್ತಾಪ ಇರಲಿಲ್ಲ. ಆದರೆ ಇದೀಗ ಕಾಮಗಾರಿಗೆ ಅಥವಾ ಸರ್ಕಾರದ ಯಾವುದೇ ಕೆಲಕ್ಕೆ 10% 4%, 2% ಲಂಚ ಪಡೆಯಲಾಗುತ್ತಿದೆ ಎಂದು ಕೆಲವು ದಾಖಲೆಗಲನ್ನು ಬಿಡುಗಡೆ ಮಾಡಿದರು.

ಇದನ್ನೂ ಓದಿ: ಸರ್ಕಾರದ 40% ಕಮಿಷನ್ ಭ್ರಷ್ಟಾಚಾರಕ್ಕೆ ಅಮಿತ್ ಶಾ ಅಧಿಕೃತ ಒಪ್ಪಿಗೆ: ಸಿದ್ದರಾಮಯ್ಯ ಟೀಕೆ

ನಗರದ ಪಿಡಬ್ಲ್ಯೂಡಿ ಕಟ್ಟಡ ಕಟ್ಟಿದ ಬಿಲ್ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ನಿಮಿಷದ ಆಡಿಯೋ ಬಿಡುಗಡೆ ಮಾಡಿದ್ದು, ಈ ಆಡಿಯೋದಲ್ಲಿ “ಆರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಮಗಾರಿ, ನಿನ್ನ ಹತ್ತಿರ ಮಾತಾಡಲ್ಲ, ಹಲವರ ಹತ್ರ ಅಡ್ಜಸ್ಟ್ ಆಗಿದ್ದೇನೆ. ನೀನು ಸಣ್ಣ ಅಥವಾ ದೊಡ್ಡ ಕಾಂಟ್ಯಾಕ್ಟರ್ ಇರಬಹುದು. ನಿಂಗೆ ಕೆಲಸ ನಿಲ್ಲಿಸು ಎಂದಿಲ್ಲ, ಇಂಜನಿಯರ್ ಗೆ ಹೇಳಿದ್ದೇನೆ” ಎನ್ನುವ ಮಾತುಗಳು ಇದರಲ್ಲಿದ್ದು, ಇದು ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಆಡಿಯೊ ಬಿಡುಗಡೆ ಬಳಿಕ ಮಾತನಾಡಿದ ಅವರು, “3 ವರ್ಷದಲ್ಲಿ ತಿಪ್ಪಾರೆಡ್ಡಿ ನನ್ನ ಬಳಿ 90 ಲಕ್ಷ ರೂ. ಹಣ ನಗದು ರೂಪದಲ್ಲಿ ಲಂಚ ಪಡೆದಿದ್ದಾರೆ. 1 ಕೋಟಿಗೆ 10 ಲಕ್ಷ ರೂ. ಲಂಚ ಪಡೆದಿದ್ದಾರೆ. 2019 ರಿಂದ ಇಲ್ಲಿಯವರೆಗೂ ಜಿಡಬ್ಲ್ಯೂಡಿ ಕಟ್ಟಡ ಕಾಮಗಾರಿ ಗೆ 12 ಲಕ್ಷ ರೂ., ಹಾಸ್ಪಿಟಲ್ ರಿಪೇರಿಗೆ 12.5 ಲಕ್ಷ ರೂ. ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಒಟ್ಟು 22 ಲಕ್ಷ ರೂ. ಹಣ ಲಂಚವಾಗಿ ಪಡೆದಿದ್ದಾರೆ. ಲೇಔಟ್‌ನ ಅಪ್ರೂವಲ್‌ಗೆ 18 ಲಕ್ಷ ರೂ., ಮೆಡಿಕಲ್ ಗ್ಯಾಸ್ ಸಂಬಂಧ 4 ಲಕ್ಷ ರೂ. ಲೇಔಟ್ ವಿಚಾರವಾಗಿ 4 ಲಕ್ಷ ರೂ., ಡಿ. 22ರಂದು ಆಸ್ಪತ್ರೆ ಕಾಮಗಾರಿ ಸಂಬಂಧ 20 ಲಕ್ಷ ರೂ. ಕ್ಲಬ್ ಗೆ ಕರೆಸಿಕೊಂಡು 13 ಲಕ್ಷ ಪಡೆದಿದ್ದಾರೆ. ಹೊಸ ಕಾಮಗಾರಿ ಕೆಲಸ ನೀಡಿ ಎಂದು ಅವರ ಮನೆಗೆ ಹೋದಾಗ 30 ಲಕ್ಷ ಹಣ ಅಡ್ವಾನ್ಸ್ ಆಗಿ ಕೇಳಿದ್ದರು ಎಂದು ಆರೋಪ ಮಾಡಿದರು.

“ಈ ಬಾರಿ ಕಾಂಟ್ಯಾಕ್ಟರ್ ಬಳಿ ಹಣ ಪಡೆದು ಚುನಾವಣೆ ಮಾಡುತ್ತೇನೆ ಎಂದು ತಿಪ್ಪಾರೆಡ್ಡಿ ಹೇಳಿದ್ದಾರೆ. ಇದೀಗ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ ಇನ್ನೂ 14-15 ಆಡಿಯೋ ಇವೆ. ಈ ಸಂಬಂಧ ನಾನು ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ. ಕೇವಲ ಇವರೊಬ್ಬರೇ ಅಲ್ಲದೇ ಇನ್ನೂ 13 ಶಾಸಕರು ಹಾಗೂ ನಾಲ್ವರು ಸಚಿವರ ದಾಖಲೆಗಳು ನನ್ನ ಬಳಿ ಇವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತೇನೆ” ಎಂದು ಮಂಜುನಾಥ್ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಎಎಸ್‌ ಅಧಿಕಾರಿ ಫೌಝಿಯಾ ತರನ್ನುಮ್‌ ಅವರನ್ನು ಪಾಕಿಸ್ತಾನಿ ಎಂದ ಪ್ರಕರಣ : ಬಿಜೆಪಿ ಎಂಎಲ್‌ಸಿ ರವಿಕುಮಾರ್‌ಗೆ ಹೈಕೋರ್ಟ್‌ ತರಾಟೆ

ಕಲಬುರಗಿಯಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಐಎಎಸ್‌ ಅಧಿಕಾರಿ ಫೌಝಿಯಾ ತರನ್ನುಮ್‌ ಅವರನ್ನು ಭಾರತೀಯರೋ ಅಥವಾ ಪಾಕಿಸ್ತಾನಿಯೋ ಎಂದಿದ್ದ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ ವಿರುದ್ಧ ಶುಕ್ರವಾರ (ಆ.7) ಕರ್ನಾಟಕ ಹೈಕೋರ್ಟ್‌...

ಸಿಲಿಕಾನ್ ಸಿಟಿಯ ಐಷಾರಾಮಿ ಹೋಟೆಲ್‌ಗಳ ಮೇಲೆ ದಾಳಿ: ಅಡುಗೆ ಮನೆಯಲ್ಲಿ ಸಿಕ್ತು 250.KG ಕೊಳೆತ ಮಾಂಸ ಮತ್ತು ತರಕಾರಿ

ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟದ ವಿರುದ್ಧ ಸಮರ ಸಾರಿದ್ದ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ (FSDA) ಇಲಾಖೆ, ಶುಕ್ರವಾರ ಬೆಂಗಳೂರಿನ ಫೈವ್-ಸ್ಟಾರ್ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ...

‘ರಷ್ಯಾ ನಿರ್ಬಂಧ ಮಸೂದೆ’ ಅಂಗೀಕರಿಸಿದ ಅಮೆರಿಕ ಸೆನೆಟ್: ಭಾರತದ ಮೇಲೆ ಶೇ. 100ರಷ್ಟು ಸುಂಕ ವಿಧಿಸುವ ಎಚ್ಚರಿಕೆ

ಉಕ್ರೇನ್ ವಿರುದ್ಧದ ಯುದ್ಧಕ್ಕೆ ಆರ್ಥಿಕ ನೆರವು ಸಿಗದಂತೆ ಮಾಡಲು, ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸುವ ಭಾರತ ಮತ್ತು ಚೀನಾದಂತಹ ಪ್ರಮುಖ ದೇಶಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಸೆನೆಟ್‌ ಬೃಹತ್‌ ಬೆಂಬಲದೊಂದಿಗೆ ಹೊಸ ಮಸೂದೆಯನ್ನು...

ಆರ್‌ಎಸ್‌ಎಸ್‌ ಗೂಂಡಾಗಳಿಗೆ ಶಾಯಿ ಇರುವುದು ಬರೆಯಲು, ಎರಚಲು ಅಲ್ಲ ಎಂಬುವುದು ಗೊತ್ತಿಲ್ಲ, ನಮ್ಮ ಸಂಕಲ್ಪಕ್ಕೆ ಮಿತಿಯಿಲ್ಲ : ನೇಹಾ ಬೋರಾ

ಜಾರ್ಖಂಡ್ ವಿದ್ಯಾರ್ಥಿ ಹೋರಾಟವನ್ನು ಬೆಂಬಲಿಸಲು ಹೋಗಿದ್ದ ವೇಳೆ ತನ್ನ ಮೇಲೆ ಶಾಯಿ ಎರಚಿರುವುದಕ್ಕೆ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ...

ಮನೆಗೆ ಬರುವ ಸಂದರ್ಶಕರೊಂದಿಗೆ ಪಿಎಸ್‌ಐ ‘ಅಸಭ್ಯ’ ವರ್ತನೆ; ಆಕ್ರೋಶ ವ್ಯಕ್ತಪಡಿಸಿದ ಅಭಿಜೀತ್ ದಿಪ್ಕೆ

ಛತ್ರಪತಿ ಸಂಭಾಜಿನಗರದಲ್ಲಿರುವ ತಮ್ಮ ಮನೆಯಲ್ಲಿ ಭದ್ರತಾ ಪಡೆಯ ಭಾಗವಾಗಿ ನಿಯೋಜಿಸಲಾದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಅವರು, ಜನರು ನಮ್ಮನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದಿಪ್ಕೆ...

ಮೋಹನ್ ಭಾಗವತ್‌ ದೇಶಪ್ರವೇಶ ನಿಷೇಧಿಸುವಂತೆ ಕೆನಡಾದ 40ಕ್ಕೂ ಹೆಚ್ಚು ಸಂಘಟನೆಗಳಿಂದ ಸರ್ಕಾರಕ್ಕೆ ಒತ್ತಾಯ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್‌ ದೇಶದೊಳಗೆ ಪ್ರವೇಶಿಸುವುದನ್ನು ತಡೆಯುವಂತೆ ಕೆನಡಾದ 40ಕ್ಕೂ ಹೆಚ್ಚು ನಾಗರಿಕ, ಮಾನವ ಹಕ್ಕುಗಳು, ಕಾರ್ಮಿಕ ಮತ್ತು ಧಾರ್ಮಿಕ ಸಂಘಟನೆಗಳು ಅಲ್ಲಿನ ಸಾರ್ವಜನಿಕ ಸುರಕ್ಷತಾ ಸಚಿವರಿಗೆ...

SIR: BLO ಮನೆ-ಮನೆ ಭೇಟಿ ಗಡುವು ಆಗಸ್ಟ್‌ 17ರವರೆಗೆ ವಿಸ್ತರಣೆ!

ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ECI) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮನೆ-ಮನೆ ಗಣತಿ ಪ್ರಕ್ರಿಯೆಯ ಗಡುವನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದ್ದು,...

ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲ್ಲ: ತಮಿಳುನಾಡು ಸಿಎಂ ವಿಜಯ್

ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ವಿಚಾರವಾಗಿ ತಮಿಳುನಾಡಿನಲ್ಲಿ ರಾಜಕೀಯ ಕಾವು ಏರುತ್ತಿರುವ ಬೆನ್ನಲ್ಲೇ, ಈ ಕುರಿತು ತಕ್ಷಣವೇ ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಯಾವುದೇ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ....

ಬೆಂಗಳೂರಿನ ಜಕ್ಕೂರಿನಲ್ಲಿ 22-23 ವರ್ಷದ ಇಬ್ಬರು ನೇಪಾಳಿ ಯುವತಿಯರ ಶವಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಜಕ್ಕೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಸೀರೆಯಿಂದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಮೃತರನ್ನು ನೇಪಾಳ...

NEET Paper Leak: ಒಂದೇ ಒಂದು CCTV ಇರಲಿಲ್ಲ, ಚೆಕಿಂಗ್ ಇರಲಿಲ್ಲ! ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಹೇಗೆ? CBI ವರದಿ ಇಲ್ಲಿದೆ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA)...