Homeಮುಖಪುಟರಾಜಸ್ಥಾನ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆ

ರಾಜಸ್ಥಾನ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆ

- Advertisement -
- Advertisement -

ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಇಂದು 33 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸರ್ದಾರ್‌ಪುರದಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ಮಾಜಿ ಉಪನಾಯಕ ಸಚಿನ್ ಪೈಲಟ್ ಅವರನ್ನು ಟೋಂಕ್‌ನಿಂದ ಕಣಕ್ಕಿಳಿಸಿದೆ.

ರಾಜಸ್ಥಾನ ವಿಧಾನಸಭಾ ಸ್ಪೀಕರ್ ಸಿ ಪಿ ಜೋಶಿ ಅವರು ತಮ್ಮ ನಾಥದ್ವಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಅವರನ್ನು ಲಚ್ಮಂಗಢದಿಂದ ಕಣಕ್ಕಿಳಿಸಲಾಗಿದೆ.

ನವೆಂಬರ್ 25ರಂದು ನಡೆಯಲಿರುವ ನಿರ್ಣಾಯಕ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಲು ಕಾಂಗ್ರೆಸ್‌ನ ರಾಜ್ಯ ಚುನಾವಣಾ ಸಮಿತಿಯು ಕೊನೆಯ ಸಭೆಯನ್ನು ನಡೆಸಿತು. ಚುನಾವಣೆಯ ಸಂಭಾವ್ಯ ತಂತ್ರಗಳ ಬಗ್ಗೆಯೂ ಪಕ್ಷದ ಮುಖಂಡರು ಚರ್ಚಿಸಿದರು.

ರಾಜಸ್ಥಾನದ ಚುನಾವಣೆಗಳು ಕಾಂಗ್ರೆಸ್‌ಗೆ ನಿರ್ಣಾಯಕವಾಗಿವೆ, ಏಕೆಂದರೆ ಇಲ್ಲಿ ಅಧಿಕಾರದಲ್ಲಿ ಪಕ್ಷವು ಪುನಃ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಮಾತಿದೆ, ಹಾಗಾಗಿ ಈ ಸಂಪ್ರದಾಯವನ್ನು ಮುರಿಯಲು ಪಕ್ಷವು ಆಶಿಸುತ್ತಿದೆ. ಆದರೆ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯವು ಸನ್ನಿವೇಶವನ್ನು ಗೊಂದಲಕ್ಕೀಡು ಮಾಡಿದೆ.

ಆದಾಗ್ಯೂ, ಇಬ್ಬರು ನಾಯಕರು ಹಲವಾರು ಪ್ರಯತ್ನಗಳ ನಂತರ ಸಮನ್ವಯಕ್ಕೆ ಮುಂದಾದರು. ಗೆಹ್ಲೋಟ್ ಮತ್ತು ಪೈಲಟ್ ಇಬ್ಬರೂ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ವ್ಯಾಪಕ ಚರ್ಚೆಯಲ್ಲಿ ತೊಡಗಿದ್ದರು.

ಸಚಿನ್ ಪೈಲಟ್ ಕಳೆದ ತಿಂಗಳು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ”ಒಗ್ಗಟ್ಟಿನಿಂದ ಹೋರಾಡಲಿದೆ ಎಂದು ಹೇಳಿದ್ದರು. ನಾವು ಜನಾದೇಶವನ್ನು ಪಡೆದುಕೊಂಡ ನಂತರ, ಶಾಸಕರು ಮತ್ತು ನಾಯಕತ್ವವು ಮುಖ್ಯಮಂತ್ರಿಯನ್ನು ನಿರ್ಧರಿಸುತ್ತದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ದೇವೇಗೌಡರಂತಹ ಪಳಗಿದ ರಾಜಕಾರಣಿ ಆಧಾರರಹಿತ ಸುಳ್ಳು ಹೇಳಿರುವುದು ನಾಚಿಕೆಗೇಡು: ಪಿಣರಾಯಿ ವಿಜಯನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...