Homeಮುಖಪುಟಅತ್ಯಾಚಾರದ ಕಾನೂನನ್ನು ಪುರುಷರ ವಿರುದ್ಧ ಅಸ್ತ್ರವಾಗಿ ದುರ್ಬಳಕೆ: ಉತ್ತರಾಖಂಡ ಹೈಕೋರ್ಟ್

ಅತ್ಯಾಚಾರದ ಕಾನೂನನ್ನು ಪುರುಷರ ವಿರುದ್ಧ ಅಸ್ತ್ರವಾಗಿ ದುರ್ಬಳಕೆ: ಉತ್ತರಾಖಂಡ ಹೈಕೋರ್ಟ್

- Advertisement -
- Advertisement -

ಮಹಿಳೆಯರು ತಮ್ಮ ಪುರುಷ  ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾದಾಗ ಅಥವಾ ಬೇರೆ ಕಾರಣಗಳಿಗಾಗಿ ಅವರ ವಿರುದ್ಧ ಅತ್ಯಾಚಾರದ ಕಾನೂನನ್ನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಉತ್ತರಾಖಂಡ್ ಹೈಕೋರ್ಟ್ ಜುಲೈ 5 ರಂದು ಹೇಳಿದೆ ಎಂದು ಗುರುವಾರ ವರದಿಯಾಗಿದೆ.

ಮಹಿಳೆಯೊಬ್ಬಳೊಂದಿಗೆ ವ್ಯಕ್ತಿಯೊಬ್ಬ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಆಕೆಯನ್ನು ಮದುವೆಯಾಗುಬೇಕು ಎಂದು ಆತನ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಾಗ ಜಸ್ಟಿಸ್ ಶರದ್‌ ಕುಮಾರ್ ಶರ್ಮಾ ಈ ತೀರ್ಪು ನೀಡಿದ್ದಾರೆ.

”ಮನೋಜ್ ಕುಮಾರ್ ಆರ್ಯ ಎಂಬ ವ್ಯಕ್ತಿ 2005ರಿಂದ ದೂರುದಾರರೊಂದಿಗೆ ಒಮ್ಮತದ ಲೈಂಗಿಕ ಸಂಬಂಧವನ್ನು ಹೊಂದಿದ್ದರು. ಇಬ್ಬರಲ್ಲಿ ಯಾರಿಗಾದರೂ ಕೆಲಸ ಸಿಕ್ಕಿದ ತಕ್ಷಣ ಮದುವೆಯಾಗುವುದಾಗಿ ಇಬ್ಬರೂ ಪರಸ್ಪರ ಭರವಸೆ ನೀಡಿದ್ದರು” ಎಂದು ಹೈಕೋರ್ಟ್ ಗಮನಿಸಿದೆ.

ವಿವಾಹದ ಭರವಸೆಯ ಮೇರೆಗೆ ಪುರುಷ ಮತ್ತು ದೂರುದಾರರು ದೈಹಿಕ ಸಂಬಂಧ ಬೆಳೆಸಿದ್ದರು. ಆದರೆ, ಅವರು ಬೇರೆ ಮಹಿಳೆಯನ್ನು ಮದುವೆಯಾದ ನಂತರವೂ ಅವರ ಸಂಬಂಧ ಮುಂದುವರೆಯಿತು ಎಂದು ಬಾರ್ ಬೆಂಚ್ ವರದಿ ಮಾಡಿದೆ.

”ಅರ್ಜಿದಾರರು ಈಗಾಗಲೇ ವಿವಾಹಿತ ವ್ಯಕ್ತಿಯಾಗಿರುವ ವಿಚಾರ ದೂರುದಾರರಿಗೆ ತಿಳಿದ ನಂತರವೂ ಸ್ವಯಂಪ್ರೇರಣೆಯಿಂದ ಸಂಬಂಧವನ್ನು ಮುಂದುವರೆಸಿದ್ದಾರೆ. ಹಾಗಾಗಿ ಇದರಲ್ಲಿ ಒಪ್ಪಿಗೆಯ ಅಂಶವು ಒಳಗೊಂಡಿದೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಮಹಿಳೆಯು ಜೂನ್ 30, 2020ರಂದು ಮನೋಜ್ ಕುಮಾರ್ ಆರ್ಯ ಅವರ ವಿರುದ್ಧ ದೂರು ದಾಖಲಿಸಿದ್ದರು. ಅವರು ಬೇರೆ ಯುವತಿಯನ್ನು ಮದುವೆಯಾಗಿದ್ದಕ್ಕೆ ಪ್ರತಿಕಾರವಾಗಿ ಮಹಿಳೆ ಆರೋಪ ಮಾಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.

ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೋ ಇಲ್ಲವೋ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಯಬೇಕು ಆನಂತರ ವರದಿಯನ್ನು ನೀಡಿದ ನಂತರವೇ ಆಕೆಯ ಆರೋಪಗಳನ್ನು ದೃಢಪಡಿಸಬಹುದಿತ್ತು ಎಂದು ನ್ಯಾಯಾಧೀಶರು ಹೇಳಿದರು.

”ಮದುವೆಯ ಒಂದು ಅಂಶ ಅಥವಾ ಭರವಸೆ, ಮತ್ತು ಆ ನೆಪದಲ್ಲಿ, ಒಮ್ಮತದ ಸಂಬಂಧಕ್ಕೆ ಪ್ರವೇಶಿಸುವಾಗ, ಮದುವೆಯ ಭರವಸೆಯ ಸುಳ್ಳುತನವನ್ನು ಅದರ ಪ್ರಾರಂಭದ ಆರಂಭಿಕ ಹಂತದಲ್ಲಿ ಪರೀಕ್ಷಿಸಬೇಕು ಮತ್ತು ನಂತರದ ಹಂತದಲ್ಲಿ ಅಲ್ಲ” ಎಂದು ತೀರ್ಪು ಹೇಳಿದೆ.

”ಆರಂಭಿಕ ಹಂತವನ್ನು 15 ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಹೇಳಲಾಗುವುದಿಲ್ಲ ಮತ್ತು ಅರ್ಜಿದಾರರ ಮದುವೆಯ ನಂತರವೂ ಮುಂದುವರೆದಿದೆ.”

ಇದನ್ನೂ ಓದಿ: ಮಣಿಪುರ ಮಹಿಳೆ ಅತ್ಯಾಚಾರ ಪ್ರಕರಣದ ಆರೋಪಿ ಮುಸ್ಲಿಂ ಎಂದು ಸುಳ್ಳು ಸುದ್ದಿ ಪ್ರಕಟಿಸಿ ನಂತರ ಡಿಲೀಟ್ ಮಾಡಿದ ANI: ತೀವ್ರ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...