Homeಎಕಾನಮಿಆರ್ಥಿಕ ಪುನಶ್ಚೇತನಕ್ಕೆ ರೆಪೋ ದರ ಇಳಿಕೆ: ದಶಕದಲ್ಲೇ ಕನಿಷ್ಠ ಮಟ್ಟಕ್ಕಿಳಿದ ರೆಪೋ ದರ

ಆರ್ಥಿಕ ಪುನಶ್ಚೇತನಕ್ಕೆ ರೆಪೋ ದರ ಇಳಿಕೆ: ದಶಕದಲ್ಲೇ ಕನಿಷ್ಠ ಮಟ್ಟಕ್ಕಿಳಿದ ರೆಪೋ ದರ

- Advertisement -
- Advertisement -

ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕತೆ ತಡೆಯಲು ಮತ್ತು ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಿ, ಅಭಿವೃದ್ಧಿ ಸೃಷ್ಟಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ರೆಪೋ ದರವನ್ನು ಕಡಿತಗೊಳಿಸಿದೆ. ಈ ಮೂಲಕ ಆರ್‌ಬಿಐ ಸತತ 5ನೇ ಬಾರಿಗೆ ಕನಿಷ್ಠ 25 ಮೂಲಾಂಕದಷ್ಟು ರೆಪೋ ದರ ಇಳಿಕೆ ಮಾಡಿದೆ. ರೆಪೋ ದರ ದಶಕದಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆಯ ಹಣಕಾಸು ನೀತಿ ಸಂಹಿತೆಯ ಆರು ಸದಸ್ಯರೂ ರೆಪೋ ದರ ಇಳಿಕೆಗೆ ಒಪ್ಪಿಗೆ ಸೂಚಿಸಿದ್ದರು. ಕೇಂದ್ರೀಯ ಬ್ಯಾಂಕ್ ತನ್ನ ಪ್ರಮುಖ ಸಾಲದ ದರವನ್ನು ಕನಿಷ್ಠ 25 ಮೂಲಾಂಕದಷ್ಟು ಕಡಿತಗೊಳಿದ್ದು, ರೆಪೋ ದರ 5.15 ಪ್ರತಿಶತಕ್ಕೆ ಇಳಿಕೆಯಾಗಿದೆ. ಇಲ್ಲಿಯವರೆಗೆ 135 ಮೂಲಾಂಕ ರೆಪೋ ದರ ಕಡಿತವಾಗಿದೆ.

ರಾಷ್ಟ್ರದಲ್ಲಿ ತಲೆದೋರಿರುವ ಹಣದುಬ್ಬರ ತಡೆಯಲು ಮತ್ತು ಆರ್ಥಿಕ ಪುನಶ್ಚೇತನಕ್ಕೆ ರೆಪೋ ದರ ಇಳಿಕೆ ಮಾಡಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು. ಇತ್ತೀಚೆಗಷ್ಟೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಪೊರೇಟ್ ತೆರಿಗೆ ಹೊರೆಯನ್ನು ಕಡಿತಗೊಳಿಸಿದ್ದರು. ಉದ್ಯಮ ವಲಯ ಚೇತರಿಕೆ ಹಾಗೂ ಮಾರುಕಟ್ಟೆಯಲ್ಲಿ ಹಣದ ಕೊರತೆ ಸರಿಪಡಿಸಲು ರೆಪೋ ದರ ಇಳಿಕೆ ಮಾಡಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...