Homeಕರ್ನಾಟಕಬೆಂಗಳೂರು, ಹೈದರಾಬಾದ್‌ನಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿರುವ ರಿಲಯನ್ಸ್ ಜಿಯೋ

ಬೆಂಗಳೂರು, ಹೈದರಾಬಾದ್‌ನಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿರುವ ರಿಲಯನ್ಸ್ ಜಿಯೋ

- Advertisement -
- Advertisement -

ರಿಲಯನ್ಸ್ ಜಿಯೋ ತನ್ನ 5G ನೆಟ್‌ವರ್ಕ್ ಸೇವೆಗಳನ್ನು ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ವಿಸ್ತರಿಸಲು ಸಿದ್ಧವಾಗಿದೆ. ಎರಡು ನಗರಗಳಲ್ಲಿ ಜಿಯೋ ಟ್ರೂ 5G ಸೇವೆಗಳ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಲಾಗುತ್ತದೆ ಎಂದು ಜಿಯೋ ಘೋಷಿಸಿದೆ. ಅಷ್ಟೆ ಅಲ್ಲದೆ, ತನ್ನ “ಜಿಯೋ ವೆಲ್ಕಮ್‌‌ ಆಫರ್”ನ ಭಾಗವಾಗಿ, ಜಿಯೋ ಪ್ರತಿ ಸೆಕೆಂಡಿಗೆ 1 GB ವರೆಗಿನ ವೇಗದಲ್ಲಿ ಅನಿಯಮಿತ 5G ಡೇಟಾವನ್ನು ಒದಗಿಸುವುದಾಗಿ ಹೇಳಿದೆ.

ಈ ಹಿಂದೆ, ಜಿಯೋ ತನ್ನ 5G ಸೇವೆಗಳ ಬೀಟಾ ಪ್ರಯೋಗವನ್ನು ಚೆನ್ನೈ, ಮುಂಬೈ, ನಾಥದ್ವಾರ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ ಆರು ನಗರಗಳಲ್ಲಿ ನಡೆಸಿತ್ತು. 5G ಸೇವೆಗಳನ್ನು ಸಕ್ರಿಯಗೊಳಿಸುವ ಆಯ್ಕೆಯು ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬೀಟಾ ಪ್ರಯೋಗವನ್ನು ನಡೆಸಿದ ಇತರ ನಗರಗಳಲ್ಲಿ ಕೂಡಾ ಇದೇ ವಿಧಾನವನ್ನು ಜಿಯೊ ಅನುಸರಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

700 MHz, 800 MHz, 3300 MHz, ಮತ್ತು 26 GHz ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಖರೀದಿಸಲು ರಿಲಯನ್ಸ್‌ ಜಿಯೋ ಆಗಸ್ಟ್‌ನಲ್ಲಿ 88,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಗಳು ಹೇಳಿವೆ.

ಅಕ್ಟೋಬರ್‌ನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಡಿಸೆಂಬರ್ 2023 ರ ವೇಳೆಗೆ ಪ್ರತಿಯೊಬ್ಬ ನಾಗರಿಕರಿಗೂ 5G ಸೇವೆಗಳನ್ನು ತರಲಿದ್ದೇವೆ ಎಂದು ಹೇಳಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ಇಂಡಿಯನ್ ಮೊಬೈಲ್ ಕಾಂಗ್ರೆಸ್ (IMC) 2022 ರ ಆರನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡುತ್ತಾ, “2023ರ ಡಿಸೆಂಬರ್‌ ವೇಳೆಗೆ ದೇಶದ ಪ್ರತಿ ಗ್ರಾಮವೂ 5ಜಿ ಸೇವೆಯನ್ನು ಆನಂದಿಸಲಿದೆ ಎಂದು ಜಿಯೋ ಖಚಿತಪಡಿಸುತ್ತದೆ” ಎಂದು ಅಂಬಾನಿ ಹೇಳಿದ್ದರು.

ಇದನ್ನೂ ಓದಿ: #BoycottJio ಜಿಯೊ ತೊಲಗಿಸಿ ಟ್ರೆಂಡಿಂಗ್‌. ಏಕೆ ಗೊತ್ತಾ?

“ಜಿಯೊ 5G ಸೇವೆಗಳು ಪ್ರತಿಯೊಬ್ಬರನ್ನು, ಪ್ರತಿ ಸ್ಥಳವನ್ನು ಮತ್ತು ಎಲ್ಲವನ್ನೂ ಅತ್ಯುನ್ನತ ಗುಣಮಟ್ಟ ಮತ್ತು ಕೈಗೆಟುಕುವ ದರದಲ್ಲಿ ಸಂಪರ್ಕಿಸುತ್ತದೆ. ಚೀನಾ ಮತ್ತು ಯುಎಸ್‌ಗಿಂತಲೂ ಭಾರತವನ್ನು ಡೇಟಾ ಚಾಲಿತ ಆರ್ಥಿಕತೆಯಾಗಿ ಮಾಡಲು ನಾವು ಬದ್ಧರಾಗಿದ್ದೇವೆ” ಎಂದು ಅಂಬಾನಿ ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...