Homeರಾಜಕೀಯಸಿಪಿಐ(ಎಂ) ನಾಯಕನ ಹತ್ಯೆ: 11 ಮಂದಿ ಆರೆಸ್ಸೆಸ್‌‌ ದುಷ್ಕರ್ಮಿಗಳು ತಪ್ಪಿತಸ್ಥರೆಂದು ತೀರ್ಪು

ಸಿಪಿಐ(ಎಂ) ನಾಯಕನ ಹತ್ಯೆ: 11 ಮಂದಿ ಆರೆಸ್ಸೆಸ್‌‌ ದುಷ್ಕರ್ಮಿಗಳು ತಪ್ಪಿತಸ್ಥರೆಂದು ತೀರ್ಪು

- Advertisement -
- Advertisement -

ತಿರುವನಂದಪುರಂ ಜಿಲ್ಲೆಯ ಅನವೂರಿನಲ್ಲಿ ನಡೆದ ಸಿಪಿಐ(ಎಂ) ನಾಯಕ ಅನವೂರ್ ನಾರಾಯಣನ್ ನಾಯರ್ ಹತ್ಯೆ ಪ್ರಕರಣದಲ್ಲಿ 11 ಮಂದಿ ಆರೆಸ್ಸೆಸ್‌ ದುಷ್ಕರ್ಮಿಗಳು ತಪ್ಪಿತಸ್ಥರೆಂದು ಕೇರಳದ ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದ್ದು, ಶಿಕ್ಷೆ ಸೋಮವಾರ ಪ್ರಕಟವಾಗಲಿದೆ. ತಪ್ಪಿತಸ್ಥರಲ್ಲಿ ಬಿಜೆಪಿ ಬೆಂಬಲಿತ ಕಾರ್ಮಿಕ ಸಂಘಟನೆ ಬಿಎಂಎಸ್ (ಕೆಎಸ್‌ಆರ್‌ಟಿಸಿ ನೌಕರರ ಸಂಘ) ನ ರಾಜ್ಯ ಮಟ್ಟದ ನಾಯಕ ಕೂಡ ಸೇರಿದ್ದಾನೆ.

ಸಿಪಿಎಂ ಅನವೂರು ಶಾಖೆಯ ಕಾರ್ಯದರ್ಶಿ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಸ್ಟಾಫ್ ಯೂನಿಯನ್ ರಾಜ್ಯ ಸಮಿತಿಯ ಸದಸ್ಯರಾಗಿದ್ದ ನಾರಾಯಣನ್ ಅವರನ್ನು 2013 ರ ನವೆಂಬರ್ 4 ರಂದು ಅವರ ಮನೆಗೆ ನುಗ್ಗಿದ ಶಸ್ತ್ರಧಾರಿ ಆರೆಸ್ಸೆಸ್‌‌ ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನಾರಾಯಣನ್‌ ಅವರನ್ನು, ಅವರ ಪತ್ನಿ ಮತ್ತು ಇಬ್ಬರು ಪುತ್ರರ ಎದುರೇ ಕೊಚ್ಚಿ ಕೊಲೆ ಮಾಡಲಾಗಿತ್ತು. ಘಟನೆಯಲ್ಲಿ ನಾರಾಯಣನ್‌ ಅವರ ಮಕ್ಕಳಾದ ಶಿವಪ್ರಸಾದ್ ಹಾಗೂ ಮತ್ತೊಬ್ಬ ಪುತ್ರ ತೀವ್ರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ: ಬೀದರ್: ಮೊರಾರ್ಜಿ ಶಾಲೆಗಳಲ್ಲಿ RSS ಶಿಬಿರ ವಿರೋಧಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ದಾಳಿಕೋರರ ಪ್ರಮುಖ ಗುರಿ ನಾರಾಯಣನ್ ಅವರ ಮಗ ಶಿವಪ್ರಸಾದ್ ಆಗಿದ್ದರು. ವಿದ್ಯಾರ್ಥಿ ಸಂಘಟನೆಯಾಗಿದ್ದ ಎಸ್‌ಎಫ್‌ಐನ ವೆಳ್ಳಾರಡ ಪ್ರದೇಶ ಕಾರ್ಯದರ್ಶಿಯಾಗಿದ್ದ ಅವರನ್ನು ಕೊಲ್ಲಲು ಆರೆಸ್ಸೆಸ್‌ನ ದುಷ್ಕರ್ಮಿಗಳು ಅವರ ಮನೆಗೆ ಬಂದಿದ್ದರು.

ತನ್ನ ಮಗನನ್ನು ಉಳಿಸಲು ಯತ್ನಿಸಿದಾಗ ನಾರಾಯಣನ್ ಅವರನ್ನು ಕಡಿದು ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೂ ಮುನ್ನ ಎಸ್‌ಎಫ್‌ಐ ಸದಸ್ಯರು ಬಿಜೆಪಿ ಬೆಂಬಲಿತ ಕಾರ್ಮಿಕ ಸಂಘಟನೆಯ ಬಿಎಂಎಸ್‌‌‌ನ ಕಾರ್ಯಕರ್ತನಾಗಿದ್ದ ಬಸ್ ಚಾಲಕನೊಂದಿಗೆ ಘರ್ಷಣೆ ನಡೆಸಿದ್ದರು.

ಇದರ ಪ್ರತೀಕಾರವಾಗಿ, ಶಿವಪ್ರಸಾದ್ ಅವರನ್ನು ಗುರಿಯಾಗಿಸಿಕೊಂಡು ನಾರಾಯಣನ್ ಮನೆಗೆ ಆರೆಸ್ಸೆಸ್‌ ದುಷ್ಕರ್ಮಿಗಳ ಗುಂಪು ನುಗ್ಗಿತ್ತು. ಆದರೆ ಅವರನ್ನು ನಾರಾಯಣನ್ ತಡೆದಿದ್ದು, ಈ ವೇಳೆ ಹರಿತವಾದ ಆಯುಧಗಳಿಂದ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.

ಇದನ್ನೂ ಓದಿ: 10% ಮೀಸಲಾತಿ: ಆರ್‌‌ಎಸ್‌ಎಸ್‌ ಮಂದಿ ಹಬ್ಬಿಸಿರುವ 100% ಸುಳ್ಳುಗಳು!

ಕೆಎಸ್‌ಆರ್‌ಟಿಸಿ ನೌಕರರ ಸಂಘದ (ಬಿಎಂಎಸ್) ರಾಜ್ಯ ಕಾರ್ಯದರ್ಶಿ ವೆಲ್ಲಂಕೊಲ್ಲಿ ರಾಜೇಶ್ ಮತ್ತು ಆರ್‌ಎಸ್‌ಎಸ್ ಪ್ರಚಾರಕ ಅನಿಲ್ ಕೂಡಾ ತಪ್ಪಿತಸ್ಥರಲ್ಲಿ ಸೇರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...