Homeಮುಖಪುಟಸಿಎಂ ಕೆಸಿಆರ್‌ ವಿರುದ್ಧ ಟೀಕೆ: ತೆಲಂಗಾಣ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ರೇವಂತ್ ರೆಡ್ಡಿ ಬಂಧನ

ಸಿಎಂ ಕೆಸಿಆರ್‌ ವಿರುದ್ಧ ಟೀಕೆ: ತೆಲಂಗಾಣ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ರೇವಂತ್ ರೆಡ್ಡಿ ಬಂಧನ

- Advertisement -
- Advertisement -

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಟೀಕೆ ಮಾಡಿದ ಹಿನ್ನೆಲೆಯಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಎ.ರೇವಂತ್ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಂ ಕೆಸಿಆರ್‌ ಹುಟ್ಟುಹಬ್ಬದ ಆಚರಣೆಯನ್ನು ಅಪಹಾಸ್ಯ ಮಾಡಿದ ಕಾರಣಕ್ಕೆ ಈ ಬಂಧನ ನಡೆದಿದೆ ಎನ್ನಲಾಗಿದೆ.

ಸಿಎಂ ಕೆಸಿಆರ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ನಿರುದ್ಯೋಗದ ಕುರಿತು ಪ್ರತಿಭಟನೆ ನಡೆಸಲು, ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲು ಪಕ್ಷಕ್ಕೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯಲಿದ್ದ ಗಾಂಧಿ ಭವನಕ್ಕೆ ರೇವಂತ್ ರೆಡ್ಡಿ ತೆರಳಲಿದ್ದರು.

ಆದರೆ, ಜುಬಿಲಿ ಹಿಲ್ಸ್‌ನಲ್ಲಿ ನಗರ ಪೊಲೀಸರು ಜುಬಿಲಿ ಹಿಲ್ಸ್‌ನಲ್ಲಿರುವ ಅವರ ನಿವಾಸದಿಂದ ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರ ಬಂಧನವನ್ನು ತಡೆಯಲು ಮುಂದಾದ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಕಾಂಗ್ರೆಸ್ ಬೆಂಬಲಿಗರು ಯಾವುದೇ ರ್‍ಯಾಲಿ ನಡೆಸದಂತೆ ನಾಂಪಲ್ಲಿ ಗಾಂಧಿ ಭವನದಲ್ಲಿ ಪೊಲೀಸರು ಬಂದೋಬಸ್ತ್ ಮಾಡಿದ್ದರು.

ಇದನ್ನೂ ಓದಿ: ಮೋದೀಜಿ, ಇದೇನಾ ಭಾರತೀಯ ಸಂಸ್ಕೃತಿ?: ಅಸ್ಸಾಂ ಸಿಎಂ ವಜಾಕ್ಕೆ ತೆಲಂಗಾಣ ಸಿಎಂ ಆಗ್ರಹ

“ಕೆಸಿಆರ್ ಹುಟ್ಟುಹಬ್ಬ… ವಿರೋಧ ಪಕ್ಷದ ನಾಯಕರಿಗೆ ಜೈಲು ದಿನ ಆಗಬೇಕೆ..? ನಿರುದ್ಯೋಗಿಗಳ ಪರವಾಗಿ ನಾವು ಪ್ರಶ್ನಿಸುವುದು ಅಪರಾಧವೇ? ಉದ್ಯೋಗ ಬದಲಾವಣೆಗೆ ಮೆಗಾ ಅಧಿಸೂಚನೆಗೆ ಆಗ್ರಹಿಸಿ ಎಲ್ಲಾ ವಲಯ ಕೇಂದ್ರಗಳಲ್ಲಿ ಕೆಸಿಆರ್ ಪ್ರತಿಕೃತಿ ದಹಿಸುವಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಒತ್ತಾಯಿಸುತ್ತೇನೆ” ಎಂದು ರೇವಂತ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.

“ಕೆಸಿಆರ್ ತನ್ನ ನೆರಳಿಗೂ ಹೆದರುತ್ತಾರೆ. ಸಿಎಂ ಹುಟ್ಟುಹಬ್ಬ ಆಚರಿಸಲು ಎರಡನೇ ದಿನವೂ ಪೊಲೀಸರು ಬಂಧಿಸಿದ್ದಾರೆ. ನಿರುದ್ಯೋಗಿ ಯುವಕರು ಪ್ರಾಣ ಬಿಡುತ್ತಿದ್ದಾರೆ. ಇದು ಸಂಭ್ರಮಿಸುವ ಸಮಯವೇ…?!” ಎಂದು ಟ್ವೀಟ್ ಮಾಡಿದ್ದ ರೇವಂತ್ ರೆಡ್ಡಿ,  #TelanganaUnemployementDay ಮತ್ತು #ByeByeKCR ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದರು. ಇದಕ್ಕೂ ಮೊದಲು ಊಸರವಳ್ಳಿಯ ಚಿತ್ರ ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.

ಈ ಹಿಂದೆ ಮೂರು ದಿನಗಳ ಹುಟ್ಟುಹಬ್ಬದ ಸಂಭ್ರಮದ ಬದಲು ‘ಮರಣೋತ್ಸವ’ ಆಚರಿಸುವಂತೆ ಸಿಎಂಗೆ ಕೇಳಿಕೊಂಡಿದ್ದರು. ಉದ್ಯೋಗ ಅಧಿಸೂಚನೆ ವಿಳಂಬದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಕತ್ತೆಗಳ ಹುಟ್ಟುಹಬ್ಬವನ್ನು ಆಚರಿಸುವಂತೆ ಕಾಂಗ್ರೆಸ್ ಮುಖಂಡ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದ್ದರು.


ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಪ್ರಕರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read