Homeಮುಖಪುಟಸಿಎಂಗೆ ಸಂಭಾಲ್ ಹಿಂಸಾಚಾರದ ವರದಿ ಸಲ್ಲಿಕೆ: ಹಿಂದೂ ವಲಸೆಯತ್ತ ಆಯೋಗದ ಒತ್ತು, ನಿಜಾಂಶವಿಲ್ಲ ಎಂದ ಜನ

ಸಿಎಂಗೆ ಸಂಭಾಲ್ ಹಿಂಸಾಚಾರದ ವರದಿ ಸಲ್ಲಿಕೆ: ಹಿಂದೂ ವಲಸೆಯತ್ತ ಆಯೋಗದ ಒತ್ತು, ನಿಜಾಂಶವಿಲ್ಲ ಎಂದ ಜನ

- Advertisement -
- Advertisement -

ಸಂಭಾಲ್: 9 ತಿಂಗಳುಗಳ ನಂತರ ಸಂಭಾಲ್ ಹಿಂಸಾಚಾರ ಕುರಿತು ರಚಿಸಿದ್ದ ನ್ಯಾಯಾಂಗ ತನಿಖಾ ಆಯೋಗವು 450 ಪುಟಗಳ ವರದಿಯನ್ನು ಗುರುವಾರ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದೆ.

ಉತ್ತರಪ್ರದೇಶದ ಸಂಭಾಲ್‌ನಲ್ಲಿ ಸಂಭವಿಸಿದ ಹಿಂಸಾಚಾರ ಕುರಿತ ನ್ಯಾಯಾಂಗ ತನಿಖಾ ವರದಿ ಸೋರಿಕೆ ಆದ ನಂತರ ವಿವಾದ ಉಂಟಾಗಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿದೆ. ಮುಸ್ಲಿಂ ಸಮುದಾಯದವರು ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ, ಸರ್ಕಾರ ಈ ದುರಂತವನ್ನು ಸಮುದಾಯದ ನಡುವಣ ದ್ವೇಷವನ್ನು ಹೆಚ್ಚಿಸಲು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷದ ನವೆಂಬರ್ 24ರಂದು ಸಂಭಾಲ್‌ನ ಐತಿಹಾಸಿಕ ಶಾಹಿ ಜಾಮಾ ಮಸೀದಿ ಬಳಿ ನಡೆದ ಸರಕಾರದ ಸಮೀಕ್ಷೆ ವೇಳೆ ಹಿಂಸಾಚಾರವು ಉದ್ಭವಿಸಿತ್ತು. ಆ ವೇಳೆ ಪೊಲೀಸ್ ಗುಂಡಿನ ದಾಳಿಯಲ್ಲಿ ಐದು ಮುಸ್ಲಿಂ ಯುವಕರು ಮೃತರಾದರು, ಅನೇಕರಿಗೆ ಗಾಯಗಳಾದವು ಮತ್ತು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈ ಗಲಭೆಯ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿವೃತ್ತ ನ್ಯಾಯಾಧೀಶ ದೇವೇಂದ್ರಕುಮಾರ್ ಅರೋರಾ ನೇತೃತ್ವದ ನ್ಯಾಯಾಂಗ ಆಯೋಗವನ್ನು ರಚಿಸಿದರು. ಅವರೊಂದಿಗೆ ನಿವೃತ್ತ ಐಎಎಸ್ ಅಮಿತ್ ಮೋಹನ್ ಮತ್ತು ನಿವೃತ್ತ ಐಪಿಎಸ್ ಅರ್ವಿಂದ್ ಕುಮಾರ್ ಜೈನ್ ಇದ್ದರು.

ಹಿಂಸಾಚಾರದ ವಿಷಯಕ್ಕೆ ಸಂಬಂಧಿಸಿ ಕಾರಣವೇನು ಎಂಬ ಕುರಿತು ಈ ವರದಿ ಒತ್ತು ನೀಡಬೇಕಿತ್ತು. ಆದರೆ ಅದು ಹಿಂದೂ ಜನಸಂಖ್ಯೆಯ ವಲಸೆ ವಿಚಾರಕ್ಕೆ ಹೆಚ್ಚಿನ ಒತ್ತುಕೊಡುತ್ತದೆ. ವರದಿಯ ಪ್ರಕಾರ, ಸಂಭಾಲ್‌ನ ಹಿಂದೂ ಜನಸಂಖ್ಯೆ ಸ್ವಾತಂತ್ರ್ಯದ ಕಾಲದಲ್ಲಿ 45 ಶೇಕಡದಿಂದ ಇಂದಿಗೆ 15 ಶೇಕಡಕ್ಕೆ ಇಳಿದಿದೆ. ಸುಮಾರು 30 ಶೇಕಡ ಇಳಿಕೆ ನಡೆದಿದೆ, ಅದು ಗಲಭೆಗಳು ಮತ್ತು ಬೆದರಿಕೆಗಳ ಕಾರಣದಿಂದ ಸಂಭವಿಸಿದೆ ಎಂಬ ಆರೋಪವಿದೆ.

ಈ ವರದಿಯು ಸಂಭಾಲ್‌ನ ಮುಸ್ಲಿಂ ಸಮುದಾಯದಲ್ಲಿ ಅಸಹಮತಿಯ ಅಲೆ ಎಬ್ಬಿಸಿದೆ. ಶಾಹಿ ಜಾಮಾ ಮಸೀದಿ ಸಮಿತಿಯ ಪರವಾಗಿ ವಕೀಲ ಶಕೀಲ್ ವಾರ್ಸಿ ಅವರು ಮಾತನಾಡುತ್ತಾ, “ಇಂತಹ ವರದಿಯ ಆಧಾರದ ಮೇಲೆ ಯಾರನ್ನೂ ದಂಡಿಸಲಾಗದು. ನಿಜವಾದ ಸತ್ಯವನ್ನು ನ್ಯಾಯಾಲಯವೇ ನಿರ್ಧರಿಸಬೇಕು. ಹಿಂಸಾಚಾರವನ್ನು ಹಿಂದೂ ವಲಸೆಯೊಂದಿಗೆ ತಳಕುಹಾಕುವುದು ಅಡಳಿತಾತ್ಮಕ ರಾಜಕೀಯಕ್ಕೆ ಸೇರಿದ್ದು, ಅರ್ಥವಿಲ್ಲದದ್ದು,” ಎಂದರು.

ಪ್ರಮುಖ ಪತ್ರಕರ್ತ ಶಮ್ಸ್ ಸಿದ್ಧೀಕಿ ಅವರು ಕೂಡ ವರದಿಯ ಮಾಹಿತಿಯನ್ನು ಪ್ರಶ್ನಿಸಿದರು. “ಈ ವರದಿ ಇತಿಹಾಸದ ದಾಖಲೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಅವರು 1947ರಲ್ಲಿ ಹಿಂದೂ ಜನಸಂಖ್ಯೆ 45 ಶೇಕಡವೆಂದು ಹೇಳುವುದು ಸುಳ್ಳು, ಏಕೆಂದರೆ ಜನಗಣತಿಯ ಮಾಹಿತಿ ಇದನ್ನು ಸಮರ್ಥಿಸದು. ಇದು ಹಿಂಸಾಚಾರದ ವಿಚಾರಣೆಯ ವರದಿಯೇನಾ, ಅಥವಾ ಜನಗಣತಿಯ ಸಮೀಕ್ಷೆಯಾ? ವರದಿ ನಂಬಲರ್ಹವಲ್ಲ,” ಎಂದು ಹೇಳಿದರು.

ಇನ್ನೊಬ್ಬ ಮುಸ್ಲಿಂ ಹಿರಿಯರು ಸರ್ಕಾರಿ ನಡವಳಿಕೆಯನ್ನು ಆಕ್ರೋಶದಿಂದ ಟೀಕಿಸಿದರು: “ನಾವು ಮಸೀದಿಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿಯನ್ನು ತೋರಿಸಿದ್ದರೂ, ಇನ್ನೂ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಅಪಾಯಕರ ಮತ್ತು ಅಸಮಾನತೆಯದ್ದಾಗಿದೆ,” ಎಂದು ಹೇಳಿದರು.

ಈ ವರದಿಯನ್ನು ಮುಸ್ಲಿಂ ಮುಖಂಡರು ತಿರಸ್ಕರಿಸಿದರೆ, ಹಿಂದೂ ಪ್ರತಿನಿಧಿಗಳಿಂದ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಸ್ಥಳೀಯ ಹಿಂದೂ ಪ್ರತಿನಿಧಿ ಗೋಪಾಲ್ ಅವರು, “ಹೌದು, ಕೆಲವರು ವಾಸಸ್ಥಾನ ಬದಲಾಯಿಸುತ್ತಿದ್ದಾರೆ. ಆದರೆ ಅದು ಮುಸ್ಲಿಂ ಭಯದಿಂದಲ್ಲ. ಹೆಚ್ಚಿನ ವ್ಯವಹಾರ ಅವಕಾಶಗಳಿಗಾಗಿ ಇತರ ದೊಡ್ಡ ನಗರಗಳಿಗೆ ಹೋಗುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವುದು ತಪ್ಪು,” ಎಂದು ಹೇಳಿದರು.

ಆದರೆ ವಿವಾದಾತ್ಮಕ ಹನುಮಾನ್‌ಗಢಿ ಪೀಠದ ಪುಜಾರಿ ರಾಜು ದಾಸ್ ಅವರು ಈ ವರದಿಯನ್ನು ಆಧಾರವನ್ನಾಗಿ ಮಾಡಿಕೊಂಡು ಕಿಡಿಕಾರಿದರು. “ಇದು ಸ್ಪಷ್ಟವಾಗಿಸುತ್ತದೆ — ಹಿಂದೂಗಳು ಬಲವಂತವಾಗಿ ವಲಸೆ ಹೋಗುತ್ತಿದ್ದಾರೆ. ಇವತ್ತಿಗೆ ಕೇವಲ 15 ಶೇಕಡ ಮಾತ್ರ ಉಳಿದಿದ್ದಾರೆ. ಎಲ್ಲೆಲ್ಲಿ ಮುಸ್ಲಿಂ ಸಂಖ್ಯಾಬಲ ಹೆಚ್ಚಿದೆಯೋ ಅಲ್ಲಿ ಗಲಭೆ ಮತ್ತು ಭಯ ವಾತಾವರಣ ಇರುತ್ತದೆ,” ಎಂದು ಆರೋಪಿಸಿದರು.

ಅವರ ಈ ಹೇಳಿಕೆಗಳು ಮುಸ್ಲಿಂ ಸಮುದಾಯವನ್ನು ಆಕ್ರೋಶಕ್ಕೆ ದೂಡಿವೆ. ಸಂಭಾಲ್‌ನ ಒಬ್ಬ ಮುಸ್ಲಿಂ ಅಂಗಡಿ ಮಾಲೀಕರು ಪ್ರತಿಕ್ರಿಯಿಸಿ, “ಹಿಂದೂಗಳು ಉದ್ಯೋಗಕ್ಕಾಗಿ ಹೋಗುತ್ತಿದ್ದರೆ ಅದಕ್ಕೆ ನಾವು ಹೊಣೆ ಹೇಗೆ? ನಾವು ಎಪ್ಪತ್ತು ವರ್ಷಗಳಿಂದ ಜೊತೆಯಾಗಿ ಬದುಕುತ್ತಿದ್ದೇವೆ. ಇಂತಹ ಹೇಳಿಕೆಗಳು ಕೇವಲ ದ್ವೇಷವನ್ನೇ ಹೆಚ್ಚಿಸುತ್ತವೆ” ಎಂದು ಹೇಳಿದರು.

ಪರಿಶೀಲಕರು ಆಕ್ಷೇಪಿಸಿದ್ದು, ನವೆಂಬರ್ 2024ರ ಹಿಂಸಾಚಾರದಲ್ಲಿ ಸತ್ತವರ ಕುಟುಂಬಗಳು ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿರುವಾಗ, ಸರ್ಕಾರ ಈ ವರದಿಯನ್ನು ಮುನ್ನೆಡೆಸಿಕೊಂಡು ಸಂಭಾಲ್‌ ಅನ್ನು ಹಿಂದೂಗಳಿಗೆ ಅಪಾಯಕಾರಿಯಾದ ಪ್ರದೇಶವೆಂಬಂತೆ ಬಿಂಬಿಸಲು ಯತ್ನಿಸುತ್ತಿದೆ ಎಂದಿದ್ದಾರೆ.

ವಿರೋಧಿ ಪತ್ರಕರ್ತ ಶಮ್ಸ್ ಸಿದ್ಧೀಕಿ ಅವರು, “ಈ ಸೋರಿಕೆ ಆದ ವರದಿ ಚುನಾವಣೆಗಳ ಮುನ್ನ ನಿರ್ದಿಷ್ಟ ವಾದವನ್ನು ಬೆಂಬಲಿಸಲು ರೂಪುಗೊಂಡದಂತೆ ತೋರುತ್ತದೆ. ಸಂಪೂರ್ಣ ವರದಿ ಅಧಿಕೃತವಾಗಿ ಬಿಡುಗಡೆಯಾಗದವರೆಗೆ ಇಂತಹ ಲೀಕ್‌ಗಳ ಆಧಾರದ ಮೇಲೆ ನಂಬುವುದು ಅಪಾಯಕರ” ಎಂದು ಹೇಳಿದರು.

ಮುಸ್ಲಿಂ ನಾಯಕರೊಬ್ಬರು, ಸರ್ಕಾರವು ಸಂಪೂರ್ಣ ವರದಿಯನ್ನು ಪ್ರಕಟಿಸಬೇಕು ಹಾಗೂ ನಿಜವಾಗಿಯೂ ಹೊಣೆಗಾರರಾಗಿರುವವರಿಗೆ ಶಿಕ್ಷೆ ನೀಡಬೇಕು. ಸಂಪೂರ್ಣ ಸಮುದಾಯವನ್ನು ಗುರಿಯಾಗಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಮರ್ಯಾದೆಗೇಡು ಹತ್ಯೆ: ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಪತ್ನಿ ಸಂಬಂಧಿಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...