Homeಮುಖಪುಟಸತತ 3 ನೇ ಬಾರಿ ಗಣರಾಜ್ಯೋತ್ಸವ ಪರೇಡ್‌ನಿಂದ ಕೇರಳ ಹೊರಕ್ಕೆ: ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ...

ಸತತ 3 ನೇ ಬಾರಿ ಗಣರಾಜ್ಯೋತ್ಸವ ಪರೇಡ್‌ನಿಂದ ಕೇರಳ ಹೊರಕ್ಕೆ: ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರದ ನಿರಾಕರಣೆ

- Advertisement -
- Advertisement -

ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿದೆ. ಸತತ ಮೂವರನೇ ಬಾರಿಗೆ ಕೇರಳ ಗಣರಾಜ್ಯೋತ್ಸವ ಪರೇಡ್‌ನಿಂದ ಹೊರಗುಳಿಯಲಿದೆ.

ಕೇಂದ್ರ ಸರ್ಕಾರದ ಈ ಕ್ರಮಕ್ಕೆ ರಾಜಕಾರಣಿಗಳು ಸೇರಿದಂತೆ ಶ್ರೀ ನಾರಾಯಣ ಧರ್ಮ ಸಂಘಮ್ ಟ್ರಸ್ಟ್ ಖಂಡಿಸಿದೆ.

ಕೇರಳವು ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯದೊಂದಿಗೆ ಜಟಾಯು ಪಕ್ಷಿ ಪ್ರತಿಮೆ ಮತ್ತು ನಾರಾಯಣ ಗುರು ಪ್ರತಿಮೆಯನ್ನು ಕೇರಳ ಸಿದ್ಧಪಡಿಸಿತ್ತು. ಆದರೆ, ಕೇಂದ್ರ ಸರ್ಕಾರವು ಶಂಕರಾಚಾರ್ಯರ ಮೂರ್ತಿಯನ್ನು ಬಳಸಲು ಸೂಚಿಸಿತ್ತು.

ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ, ಒಕ್ಕೂಟ ಸರ್ಕಾರದ ನಿಯಮವನ್ನು ಟೀಕಿಸಿದ್ದು, ’ಕೇಂದ್ರ ಸರ್ಕಾರದಂತೆ ರಾಜ್ಯ ಬಿಜೆಪಿ ಕೂಡ ಶ್ರೀನಾರಾಯಣ ಗುರುವನ್ನು ತಿರಸ್ಕರಿಸುತ್ತದೆಯೇ’ ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

“ನಾರಾಯಣ ಗುರುವಿನಂತಹ ಸುಧಾರಕನಿಗೆ ಕೇಂದ್ರ ಸರ್ಕಾರ ಅವಮಾನ ಮಾಡುತ್ತಿದೆ. ಗುರುಗಳು ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ವಿರುದ್ಧ ಕೆಲಸ ಮಾಡಿದ್ದಾರೆ. ಅದಕ್ಕಾಗಿಯೇ ಅವರನ್ನು ಸ್ತಬ್ಧಚಿತ್ರಕ್ಕೆ ಸೇರಿಸಿದ್ದೇವೆ. ತೀರ್ಪುಗಾರರ ಉತ್ತಮ ಅಭಿಪ್ರಾಯದ ಹೊರತಾಗಿಯೂ ಕೇರಳವನ್ನು ಕೊನೆಯ ಕ್ಷಣದಲ್ಲಿ ತೆಗೆದುಹಾಕಲಾಗಿದೆ. ಏಕೆ ನಮ್ಮ ಸ್ತಬ್ಧಚಿತ್ರವನ್ನು ತಿರಸ್ಕರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಕನಿಷ್ಠ ಸ್ಪಷ್ಟಪಡಿಸಬೇಕು” ಸಚಿವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ದ್ವೇಷ ಭಾಷಣ ಕೇಸ್: ’ನೀವೆಲ್ಲರೂ ಸಾಯುತ್ತೀರಿ’ ಎಂದು ಪೊಲೀಸರಿಗೆ ಯತಿ ನರಸಿಂಗಾನಂದ ಬೆದರಿಕೆ

ಇನ್ನು ಗಣರಾಜ್ಯೋತ್ಸವದ ಸ್ತಬ್ಧಚಿತ್ರ ವಿವಾದವು ಶಿವಗಿರಿ ಮಠ ಮತ್ತು ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಮಠವನ್ನು ನಿರ್ವಹಿಸುವ ಶ್ರೀ ನಾರಾಯಣ ಧರ್ಮ ಸಂಘಮ್ ಟ್ರಸ್ಟ್ ಕೇರಳದ ಸ್ತಬ್ಧಚಿತ್ರ ವಿನ್ಯಾಸವನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ.

“ಇದು ಮಲಯಾಳಿಯಲ್ಲದ ಅಧಿಕಾರಿಗಳು ಮಾಡಿದ ತಪ್ಪಾಗಿರಬಹುದು ಅಥವಾ ಮೇಲ್ಜಾತಿಯ ಪ್ರಾಬಲ್ಯದಿಂದಾದ ಉದ್ದೇಶಪೂರ್ವಕ ಕೃತ್ಯವಾಗಿರಬಹುದು. ಆದರೆ ತೀರ್ಪುಗಾರರ ಪಕ್ಷಪಾತ ಧೋರಣೆಯಿಂದ ಗುರು ಮತ್ತು ಮಠದ ಲಕ್ಷಾಂತರ ಅನುಯಾಯಿಗಳಿಗೆ ಅವಮಾನವಾಗಿದೆ. ಈ ತಪ್ಪನ್ನು ಸರಿಪಡಿಸಲು ಕೇಂದ್ರ ಸರ್ಕಾರಕ್ಕೆ ಇನ್ನು ಸಾಕಷ್ಟು ಸಮಯವಿದೆ” ಎಂದು ಶಿವಗಿರಿ ಮಠದ ಆಡಳಿತ ನಡೆಸುತ್ತಿರುವ ಶ್ರೀ ನಾರಾಯಣ ಧರ್ಮ ಸಂಘಮ್ ಟ್ರಸ್ಟ್‌ನ ಅಧ್ಯಕ್ಷ ಸ್ವಾಮಿ ಸಚ್ಚಿದಾನಂದ ಅವರನ್ನು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಿಪಿಎಂ ಪಕ್ಷದ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಕೂಡ ಈ ನಿರ್ಧಾರವನ್ನು ಟೀಕಿಸಿದ್ದಾರೆ. ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿರುವಲ್ಲಿ ರಾಜಕೀಯ ಕೈವಾಡವಿದೆ ಎಂಬ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಯೇ ಈ ಹೇಳಿಕೆಗಳು ಬರುತ್ತಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

2019 ಮತ್ತು 2020 ರಲ್ಲೂ ಕೇರಳವನ್ನು ಗಣರಾಜ್ಯೋತ್ಸವದ ಪರೇಡ್‌ನಿಂದ ಹೊರಹಾಕಲಾಗಿತ್ತು. ಈ ಬಾರಿಯೂ ಒಕ್ಕೂಟ ಸರ್ಕಾರ ಅವಕಾಶ ನೀಡಿಲ್ಲ.


ಇದನ್ನೂ ಓದಿ: ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಪ್ರತ್ಯೇಕ ಜೈಲು ಆವರಣ ನಿರ್ಮಿಸಿ: ರಾಜ್ಯಗಳಿಗೆ ಒಕ್ಕೂಟ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಒಕ್ಕೂಟ ಸರ್ಕಾರದ ಇಂತಹ ಕ್ರಮ, ನಮ್ಮ ಒಕ್ಕೂಟ ವ್ಯವಸ್ಥೆಗೆ ದಕ್ಕೆ ತರುತ್ತದೆ. ಇದು ಆಗಬಾರದು.

  2. ಒಕ್ಕೂಟ ಸರ್ಕಾರದಲ್ಲಿ ಇರೋರು ಜಾತಿ ವಾದಿಗಳು ಅದನ್ನು ನೆಡೆಸುತಿರೋರು ಜಾತಿವಾದಿಗಳು.

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...