Homeಮುಖಪುಟಕೇರಳ: ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಬಿಷಪ್ ಫ್ರಾಂಕೋ ಖುಲಾಸೆ

ಕೇರಳ: ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಬಿಷಪ್ ಫ್ರಾಂಕೋ ಖುಲಾಸೆ

- Advertisement -
- Advertisement -

ಎರಡು ವರ್ಷಗಳಲ್ಲಿ ಸನ್ಯಾಸಿನಿಯೊಬ್ಬರ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ ಆರೋಪ ಹೊತ್ತಿದ್ದ ಮಾಜಿ ಪಾದ್ರಿ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಈ ಪ್ರಕರಣ ಕೇರಳದಲ್ಲಿ ಭಾರೀ ಆಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿತ್ತು.

57 ವರ್ಷದ ಫ್ರಾಂಕೋ ಮುಲಕ್ಕಲ್ ಅವರು ಸನ್ಯಾಸಿನಿಯೊಬ್ಬರ ದೂರಿನ ಮೇರೆಗೆ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆಗೆ ಒಳಗಾದ ಭಾರತದ ಮೊದಲ ಕ್ಯಾಥೋಲಿಕ್ ಬಿಷಪ್ ಆಗಿದ್ದರು. 100 ದಿನಗಳಿಗಿಂತ ಹೆಚ್ಚು ನಡೆದ ವಿಚಾರಣೆಯ ನಂತರ, ಕೊಟ್ಟಾಯಂನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅವರನ್ನು ತಪ್ಪಿತಸ್ಥರಲ್ಲ ಎಂದು ಹೇಳಿ ಖುಲಾಸೆಗೊಳಿಸಿದೆ.

ನ್ಯಾಯಾಧೀಶ ಜಿ.ಗೋಪಕುಮಾರ್ ಶುಕ್ರವಾರ ‘ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ’ ಎಂಬ ಒಂದು ಸಾಲಿನೊಂದಿಗೆ ತೀರ್ಪು ನೀಡಿದ್ದಾರೆ. “ಅಂತಿಮವಾಗಿ ಸತ್ಯ ಗೆದ್ದಿದೆ” ಎಂದ ಬಿಷಪ್, ನಗುಮೊಗದಿಂದ ಕೊಟ್ಟಾಯಂನ ನ್ಯಾಯಾಲಯದಿಂದ ನಿರ್ಗಮಿಸಿದ್ದಾರೆ.

ಆಗ ಕೊಟ್ಟಾಯಂ ಪೊಲೀಸ್ ಮುಖ್ಯಸ್ಥರಾಗಿದ್ದ ಎಸ್ ಹರಿ ಶಂಕರ್ ಅವರು ಇಂದಿನ ತೀರ್ಪಿಗೆ ಆಘಾತ ವ್ಯಕ್ತಪಡಿಸಿದ್ದಾರೆ. “ಈ ಪ್ರಕರಣದಲ್ಲಿ ಬಲವಾದ ಪುರಾವೆಗಳಿವೆ. ಯಾವುದೇ ಸಾಕ್ಷಿಗಳು ಪ್ರತಿಕೂಲವಾಗಿರಲಿಲ್ಲ” ಎಂದಿದ್ದಾರೆ ಎಂದು NDTV ಉಲ್ಲೇಖಿಸಿದೆ.

ಇದನ್ನೂ ಓದಿ: ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಜನವರಿ 14 ರಂದು ತೀರ್ಪು ಪ್ರಕಟ

ಘಟನೆಯ ಹಿನ್ನೆಲೆ

ಜಲಂಧರ್ ಡಯಾಸಿಸ್‌ನ ಬಿಷಪ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ, ಮಿಷನರೀಸ್ ಆಫ್ ಜೀಸಸ್ ಸಭೆಗೆ ಸೇರಿದ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಫ್ರಾಂಕೋ ಮೇಲೆ ಹೊರಿಸಲಾಗಿತ್ತು. 2014 ಮತ್ತು 2016 ರ ನಡುವೆ ಕೇರಳಕ್ಕೆ ಭೇಟಿ ನೀಡಿದಾಗ, 43 ವರ್ಷದ ಸನ್ಯಾಸಿನಿಯ ಮೇಲೆ 13 ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪ ಹೊರಿಸಲಾಗಿತ್ತು. ಈ ಆರೋಪದ ನಂತರ ಫ್ರಾಂಕೊ ಅವರನ್ನು ಜಲಂಧರ್ ಡಯಾಸಿಸ್ ಉಸ್ತುವಾರಿಯಿಂದ ತೆಗೆದುಹಾಕಲಾಗಿತ್ತು.

ಕ್ರೈಸ್ತ ಸನ್ಯಾಸಿನಿಯರು ತೀವ್ರ ರಸ್ತೆ ಪ್ರತಿಭಟನೆಗಳನ್ನು ನಡೆಸಿದ್ದರು. ಚರ್ಚ್, ಪೊಲೀಸರು ಮತ್ತು ಕೇರಳ ಸರ್ಕಾರದಿಂದ ಕ್ರಮಕ್ಕೆ ಒತ್ತಾಯಿಸಿದ್ದರು. ಬಿಷಪ್ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಜೂನ್ 2018 ರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ದಾಖಲಿಸಲಾಗಿತ್ತು. ಇದರ ನಂತರ ಆರೋಪಿಯನ್ನು ಸೆಪ್ಟೆಂಬರ್ 21, 2018 ರಂದು ಬಂಧಿಸಲಾಯಿತು. ಅಕ್ಟೋಬರ್ 16, 2018 ರಂದು ಜಾಮೀನು ಪಡೆದಿದ್ದರು.

ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ಬಿಷಪ್ ಅವರನ್ನು ಬಂಧಿಸಿ ಅಕ್ರಮ ಬಂಧನ, ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪವನ್ನು ಹೊರಿಸಿತ್ತು. ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ಯಾವುದೇ ವಿಷಯವನ್ನು ತನ್ನ ಅನುಮತಿಯಿಲ್ಲದೆ ಪ್ರಕಟಿಸದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

ಪ್ರಕರಣದ ವಿಚಾರಣೆ ನವೆಂಬರ್ 2019 ರಲ್ಲಿ ಪ್ರಾರಂಭವಾಯಿತು. ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ನ ಕಾರ್ಡಿನಲ್ ಮಾರ್ ಜಾರ್ಜ್ ಅಲೆಂಚೇರಿ, ಮೂವರು ಬಿಷಪ್‌ಗಳು, 11 ಪಾದ್ರಿಗಳು ಮತ್ತು 22 ಸನ್ಯಾಸಿನಿಯರು ಸೇರಿದಂತೆ 83 ಸಾಕ್ಷಿಗಳನ್ನು ಚಾರ್ಜ್‌ಶೀಟ್‌‌ ಹೆಸರಿಸಿದೆ. 83 ಸಾಕ್ಷಿಗಳ ಪೈಕಿ 39 ಮಂದಿಯನ್ನು ಕರೆಸಿ ವಿಚಾರಣೆ ನಡೆಸಲಾಯಿತು.

ಈ ಮಧ್ಯೆ, ಫ್ರಾಂಕೋ ತನ್ನ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ಎರಡೂ ನ್ಯಾಯಾಲಯಗಳು ಇದನ್ನು ನಿರಾಕರಿಸಿದ್ದವು.


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನ್ಯಾಯಾಲಯ ನಿನ್ನನ್ನು ನಿರ್ಧೋಷಿ ಎಂದು ಖುಲಾಸೆ ಮಾಡಿರಬಹುದು. ಆದರೆ ನೀನು ಮಾಡಿರುವ ಕೃತ್ಯ ಸುಳ್ಳಾಗಲು ಸಾಧ್ಯವಿಲ್ಲ. ಏಕೆಂದರೆ ಒಬ್ಬ ಸನ್ಯಾಸಿನಿ ತನ್ನ ಮಾನವನ್ನು ಪಣಕ್ಕಿಟ್ಟು ತನ್ನ ಮೇಲೆ ಮಾನಭಂಗದಂತಹ ಕೃತ್ಯ ಹೊತ್ತುಕೊಳ್ಳಲಾರಳು. ಘನ ನ್ಯಾಯಾಲಯ ಸಾಕ್ಷಿಯ ಮೇಲೆ ತೀರ್ಪು ಕೊಟ್ಟಿರುತ್ತದೆ. ಆ ಸಾಕ್ಷಿಗಳನ್ನೇ ನೀನು ಕೊಂಡುಕೊಂಡಿರಲಿಕ್ಕೆ ಸಾಧ್ಯ. ನೀನು ಸಮಾಜದ ದೃಷ್ಟಿಯಲ್ಲಿ ನೀನು ಹತ್ಯಾಚಾರಿಯೆ. ನಿನ್ನ ಕೃತ್ಯದಿಂದ ಧರ್ಮವನ್ನು ಅಪವಿತ್ರಗೊಳಿಸಿದೆ. ನಿನಗೆ ಯಾವತ್ತೂ ಕ್ಷಮೆ ಇಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...