Homeಮುಖಪುಟಉತ್ತರಾಖಂಡ: ಜೈಶ್ರೀರಾಂ ಘೋಷಣೆ ಕೂಗುತ್ತಾ ಮಝರ್‌ಗಳ ಧ್ವಂಸ

ಉತ್ತರಾಖಂಡ: ಜೈಶ್ರೀರಾಂ ಘೋಷಣೆ ಕೂಗುತ್ತಾ ಮಝರ್‌ಗಳ ಧ್ವಂಸ

- Advertisement -
- Advertisement -

ಉತ್ತರಾಖಂಡದ ಋಷಿಕೇಶದ ಅಮಿತ ಗ್ರಾಮ ಪ್ರದೇಶದಲ್ಲಿ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಎರಡು ಮಝರ್‌ಗಳನ್ನು ಸುತ್ತಿಗೆಗಳು ಮತ್ತು ಜೆಸಿಬಿಗಳನ್ನು ಬಳಸಿ ಧ್ವಂಸಗೊಳಿಸಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೈಶ್ರೀರಾಂ ಘೋಷಣೆಗಳನ್ನು ಕೂಗುತ್ತಾ ಇಬ್ಬರು ಯುವಕರು ಸುತ್ತಿಗೆಗಳನ್ನು ಬಳಸಿ ಮಝರ್‌ನ್ನು ಧ್ವಂಸ ಮಾಡುವುದು ಒಂದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನೊಂದು ವೈರಲ್ ವಿಡಿಯೋದಲ್ಲಿ ಧ್ವಂಸಮಾಡಿದ ಮಝರ್‌ನ ಅವಶೇಷಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುತ್ತಿರುವುದು ಕಂಡು ಬಂದಿದೆ. ವ್ಯಕ್ತಿಯೋರ್ವ ಇದೇ ವೇಳೆ ಅಕ್ರಮ ಮಝರ್‌ಗಳು ಎಲ್ಲಿದೆಯೋ ಅಲ್ಲೆಲ್ಲ ಧ್ವಂಸ ಮಾಡುತ್ತೇವೆ, ಇದು ದೇವಭೂಮಿ, ಮಝರ್ ಭೂಮಿ ಅಲ್ಲ ಎಂದು  ವಿಡಿಯೋದಲ್ಲಿ ಹೇಳುವುದು ಸೆರೆಯಾಗಿದೆ.

ಮಝರ್‌ನ್ನು ಧ್ವಂಸಗೊಳಿಸಿದ ದೇವಭೂಮಿ ರಕ್ಷಾ ಅಭಿಯಾನದ ಅಧ್ಯಕ್ಷ ನಮಗೆ ಮಝರ್‌ಗಳನ್ನು ಧ್ವಂಸ ಮಾಡಲು ಆ ಭೂಮಿಯ ಮಾಲಕ ಅನುಮತಿ ನೀಡಿದ್ದ ಎಂದು ಹೇಳಿದ್ದಾರೆ. ಮಜರ್‌ಗಳನ್ನು ನಿರ್ಮಿಸಿದ್ದ ಭೂಮಿ ಇಬ್ಬರು ಹಿಂದೂಗಳಿಗೆ ಸೇರಿದೆ. ಅವುಗಳನ್ನು ಕೆಡವಲು ಅವರು ನಮಗೆ ಅನುಮತಿ ನೀಡಿದರು. ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿಯೇ ಕಡೆವಿದ್ದೇವೆ ಎಂದು ಹೇಳಿದ್ದಾರೆ.

ಋಷಿಕೇಶದ ಗುಮಾನಿವಾಲಾ ಮತ್ತು ಶ್ಯಾಮ್‌ಪುರ ಪ್ರದೇಶಗಳಲ್ಲಿ ಇಂತಹ 25-30 ಮಜರ್‌ಗಳಿವೆ. ಅವನ್ನೂ ಕೆಡವುತ್ತೇವೆ, ದೇವಭೂಮಿಯಲ್ಲಿ ಮಜಾರ್‌ಗಳನ್ನು ನಿರ್ಮಿಸುವುದು ನಮ್ಮ ಧರ್ಮದ ಮೇಲಿನ ದಾಳಿಯಾಗಿದೆ ಎಂದು  ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ರಿಷಿಕೇಶ್ ಕೊತ್ವಾಲಿ ಎಸ್‌ಎಚ್‌ಒ ಖುಷಿ ರಾಮ್ ಪಾಂಡೆ ತಿಳಿಸಿದ್ದಾರೆ.

ಮಝರ್‌ಗಳನ್ನು ಧ್ವಂಸಗೊಳಿಸಿರುವುದು ನಾವೇ ಎಂದು ದೇವಭೂಮಿ ರಕ್ಷಾ ಅಭಿಯಾನದ ಅಧ್ಯಕ್ಷ ಹೇಳಿದ್ದು, ಈ ವೇಳೆ ಪೊಲೀಸರು ಕೂಡ ಉಪಸ್ಥಿತರಿದ್ದರು ಎಂದು ಹೇಳಿದ್ದಾರೆ. ಆದರೆ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಇದನ್ನು ಓದಿ: ‘ಒಂದು ದೇಶ, ಒಂದು ಚುನಾವಣೆ’ ಸಮಿತಿಯ ಭಾಗವಾಗಲು ನಿರಾಕರಿಸಿದ ಅಧೀರ್ ರಂಜನ್ ಚೌಧರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...