Homeಎಕಾನಮಿಕಳೆದ 5 ವರ್ಷದಲ್ಲಿ 12 ಲಕ್ಷ ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ : ಆದರೂ...

ಕಳೆದ 5 ವರ್ಷದಲ್ಲಿ 12 ಲಕ್ಷ ಕೋಟಿ ರೂ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ : ಆದರೂ ಆರ್ಥಿಕ ಕುಸಿತ ಏಕೆ?

- Advertisement -
- Advertisement -

2007-08ರಲ್ಲಿ ಬಹುತೇಕ ದೇಶಗಳ ಆರ್ಥಿಕತೆ ಕುಸಿತದಲ್ಲಿತ್ತು. ಆದರೆ ಭಾರತದಲ್ಲಿ ಅಪಾಯ ಜಾಸ್ತಿ ಆಗಲಿಲ್ಲ. ಏಕೆಂದರೆ ಗ್ರಾಮೀಣ ಭಾರತದಲ್ಲಿ ಬೇಡಿಕೆ ಹೆಚ್ಚಾಗಿತ್ತು. ಅದಕ್ಕೆ ಕಾರಣ 2006ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗ ಯೋಜನೆಯಾಗಿತ್ತು. ಅದೇ ಸಮಯದಲ್ಲಿ ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟವೂ ತಾರಕಕ್ಕೇರಿತ್ತು ಎಂದು ಗ್ರಾಮೀಣ ಕೂಲಿಕಾರರ ಸಂಘದ ಅಭಯ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಶಾಸಕರ ಭವನದಲ್ಲಿ ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ವತಿಯಿಂದ ನಡೆದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, 1991ರ ಜಾಗತೀಕರಣದ ನಂತರ ಅಗ್ಗದ ಕೂಲಿಗೆ ಕೆಲಸ ಮಾಡುವ ಕಾರ್ಮಿಕರು, ಅಗ್ಗದ ಬೆಲೆಗೆ ಭೂಮಿ ಮತ್ತು ಸಂಪನ್ಮೂಲಗಳು, ಕಡಿಮೆ ಬಡ್ಡಿ ದರಕ್ಕೆ ಬ್ಯಾಂಕುಗಳಿಂದ ಸಾಲ ಸಿಗುವುದರಿಂದ ಬಹಳಷ್ಟು ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿದವು. ದೊಡ್ಡ ಬಂಡವಾಳಶಾಹಿಗಳು ಇಂದು ಲಾಬಿ ನಡೆಸುತ್ತಿವೆ. ಅವರಿಗೆ ಇನ್ನೂ ಅಗ್ಗದ ಕೂಲಿಗಳು ನಗರ ಪ್ರದೇಶಗಳಲ್ಲಿ ಬೇಕಿರುವುದರಿಂದ ಜನರನ್ನು ನಗರಗಳಿಗೆ ವಲಸೆ ಬರುವಂತಹ ನೀತಿಗಳನ್ನು ಜಾರಿಗೆ ತರಲು ಸರ್ಕಾರಗಳ ಮೇಲೆ ಒತ್ತಡ ತರುತ್ತಿವೆ. ಹಾಗಾಗಿ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ಜನರು ಅನಿವಾರ್ಯವಾಗಿ ನಗರಗಳಿಗೆ ವಲಸೆ ಬರುವಂತೆ ಮಾಡುತ್ತಿವೆ. ಇದರಿಂದ ಬಂಡವಾಳಶಾಹಿಗಳಿಗೆ ಎರಡು ರೀತಿಯ ಲಾಭಗಳಿವೆ. ಒಂದು ಜನ ನಗರಗಳಿಗೆ ವಲಸೆ ಬರುವುದರಿಂದ ಕಡಿಮೆ ಕೂಲಿಗೆ ಕಾರ್ಮಿಕರು ಸಿಗುತ್ತಾರೆ. ಎರಡನೇಯದಾಗಿ ಕೃಷಿ ಲಾಭದಾಯಕವಲ್ಲದ ಕಾರಣಕ್ಕಾಗಿ ಅವರು ತಮ್ಮ ಜಮೀನುಗಳನ್ನು ಮಾರುವುದರಿಂದ ಬಂಡವಾಳಿಗರಿಗೆ ಭೂಮಿ ಸಿಗುತ್ತಿದೆ. ಬಂಡವಾಳಶಾಹಿಗಳು ಲಾಭ ಮಾಡಿದರೆ ಅದು ಅವರ ವಯಕ್ತಿಕ ಖಾತೆಗೆ ಹೋಗುತ್ತದೆ. ಒಂದು ವೇಳೆ ಅವರು ನಷ್ಟ ಅನುಭವಿಸಿದರೆ ಅದರ ಪರಿಣಾಮ ಇಡೀ ಸಮಾಜವನ್ನು ತಟ್ಟುತ್ತದೆ ಎಂದರು.

ಇಂದು ಶೇ.60% ಜನ ಗ್ರಾಮೀಣ ಭಾರತದಲ್ಲಿದ್ದಾರೆ. ಇನ್ನು 20% ಜನ ನಗರಗಳಿಗೆ ವಲಸೆ ಬರುವಂತೆ ಮಾಡುವುದು ಸರ್ಕಾರಗಳ ಗುರಿಯಾಗಿದೆ. ಇದು ದೊಡ್ಡ ಬದಲಾವಣೆಯನ್ನು ತರಲಿದೆ. ಇಂದು ಆಟೋಮೇಷನ್ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಪುಣೆಯ ಟಾಟಾ ಕಂಪನಿಯ ಕಾರು ತಯಾರಿಕ ಘಟಕದಲ್ಲಿ ಹಲವು ವರ್ಷಗಳಿಂದ 25 ಸಾವಿರ ಕಾರ್ಮಿಕರಿದ್ದು ವರ್ಷಕ್ಕೆ 2 ಲಕ್ಷ ಕಾರುಗಳನ್ನು ಉತ್ಪಾದಿಸುತ್ತಿದ್ದಾರೆ. ಆದರೆ ಹೊಸದಾಗಿ ಚನ್ನೈನಲ್ಲಿ ಸ್ಥಾಪಿಸಿರುವ ಅವರ ಹೊಸ ಘಟಕದಲ್ಲಿ ಕೇವಲ 1200 ಕಾರ್ಮಿಕರಿದ್ದು ಅವರು ವರ್ಷಕ್ಕೆ 4 ಲಕ್ಷ ಕಾರು ತಯಾರಿಸುವ ಸಾಮಥ್ರ್ಯ ಹೊಂದಿದ್ದಾರೆ. ಅಂದರೆ ಮಾನವರಹಿತ ಘಟಕಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಚಾರ್ಟಡ್ ಅಕೌಂಟೆಂಟ್ ಆದ ಜಿ.ವಿ ಸುಂದರ್ ರವರು ಮಾತನಾಡಿ 2014ರಲ್ಲಿ ಭಾರತದ ಒಟ್ಟಾರೆ ರಫ್ತು 325 ಬಿಲಿಯನ್ ಇತ್ತು. ಕಳೆದ ಆರು ವರ್ಷಗಳಿಂದ ಅದು ಕುಸಿಯುತ್ತಲೇ ಇದೆ. ಭಾರತದ ವಿದೇಶಿ ವ್ಯವಹಾರ ಬೆಳೆಯುತ್ತಿಲ್ಲ. ಸಾಫ್ಟ್ ವೇರ್ ಕ್ಷೇತ್ರ 10%ನಷ್ಟು ಬೆಳೆದಿದ್ದರೂ ಸಹ ಜೆಮ್ಸ್ ಅಂಡ್ ಜ್ಯುವೆಲ್ಲರಿ ಸೇರಿದಂತೆ ಉಳಿದೆಲ್ಲಾ ಕ್ಷೇತ್ರಗಳು ಕುಸಿದಿವೆ.  ಗಾರ್ಮೆಟ್ಸ್ ಕ್ಷೇತ್ರದಲ್ಲಿ ಭಾರತದ ರಫ್ತು ಕಡಿಮೆಯಾಗಿದೆ. ಚಿಕ್ಕ ದೇಶ ಬಾಂಗ್ಲಾದೇಶ ವರ್ಷಕ್ಕೆ 35 ಬಿಲಿಯನ್ ಡಾಲರ್ ರಫ್ತು ಮಾಡಿದರೆ ಭಾರತದ ಪಾಲು 15-16 ಬಿಲಿಯನ್ ಡಾಲರ್ ಮಾತ್ರ ಆಗಿದೆ. ರಿಯಲ್ ಎಸ್ಟೇಟ್ ಉದ್ಯಮ ನೆಲಕಚ್ಚಿದೆ. ಆಟೋಮೊಬೈಲ್ ಕ್ಷೇತ್ರ ಕುಸಿದಿದೆ. ಇವೆಲ್ಲವೂಗಳಿಂದ ಭಾರತ ತೀವ್ರ ಆರ್ಥಿಕ ದುಸ್ಥಿತಿಯಲ್ಲಿದೆ ಎಂದು ಸುಲಭವಾಗಿ ಹೇಳಬಹುದಾಗಿದೆ ಎಂದರು.

ಇದಕ್ಕೆ ಕಾರಣಗಳೇನು ಎಂದು ನೋಡಿದರೆ ಅದು ನೋಟು ರದ್ದತಿಯತ್ತ ಕೈತೋರಿಸುತ್ತದೆ. 2 ತಿಂಗಳು ಹಣ ಜನರ ಕೈಯ್ಯಲಿರದೇ ಬ್ಯಾಂಕುಗಳಲ್ಲಿತ್ತು. ಸರಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವಾಗಲೇ ಜಿ.ಎಸ್.ಟಿ ಹೊಡೆತ ಬಿದ್ದಿತು. ಈ.ಎಸ್.ಟಿ ಜಾರಿಗೆ ತಂದಿದ್ದು ಬಹಳ ಒಳ್ಳೆಯದು. 5-6 ರೀತಿಯ ತೆರಿಗೆಗಳ ಬದಲಾಗಿ ಒಂದು ರೀತಿಯ ತೆರಿಗೆ ಪದ್ದತಿ ದೂರದೃಷ್ಠಿಯಿಂದ ಒಳ್ಳೇಯದು. ಆದರೆ ಅದನ್ನು ಜಾರಿಗೆ ತಂದ ರೀತಿ ಮಾತ್ರ ಸಂಪೂರ್ಣ ಅವೈಜ್ಞಾನಿಕವಾಗಿತ್ತು. ಸಾವಿರಾರು ಕೋಟಿಯ ಬಂಡವಾಳಿಗರಿಗೂ ಒಂದೇ ತೆರಿಗೆ 1-2 ಲಕ್ಷ ಹೂಡಿಕೆ ಮಾಡುವ ಅತಿ ಸಣ್ಣ ಉದ್ಯಮಿಗಳಿಗೂ ಒಂದೇ ತೆರಿಗೆ ಎಂಬುದು ಸರಿಯಲ್ಲ. ಜಿ.ಎಸ್.ಟಿ ಜಾರಿಗೆ ಬಂದ ಮೇಲೆ ಅವುಗಳನ್ನು ಸುಲಭ ಮಾಡುವ ಸಲುವಾಗಿ ಇದುವರೆಗೂ 700 ತಿದ್ದುಪಡಿಗಳಾಗಿವೆ. ಇದು ಜನರಿಗೆ ಸರಳವಾಗಿ ಅರ್ಥವಾಗದೇ ಮತ್ತಷ್ಟು ತೊಂದರೆ ಕೊಟ್ಟಿದೆ ಎಂಬುದನ್ನು ಮರೆಯಬಾರದು ಎಂದರು.

2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಬಂದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್‍ರವರು ಬಹಳಷ್ಟು ಕ್ಷೇತ್ರಗಳಿಗೆ ತೆರಿಗೆ ಮನ್ನಾ ಮಾಡಿದ್ದರು. ಉದ್ಯಮಿಗಳ ಸಾಲ ಮರುಪಾವತಿಯ ಅವಧಿಯನ್ನು ಹೆಚ್ಚು ಮಾಡಿದ್ದರು. ಆದರೆ ಈಗಿನ ಸರ್ಕಾರ ಆರ್ಥಿಕ ಕುಸಿತವನ್ನು ಒಪ್ಪಿಕೊಳ್ಳುತ್ತಲೇ ಇಲ್ಲ. ಇನ್ನು ಇದನ್ನು ಅರ್ಥಮಾಡಿಕೊಳ್ಳುವ ಪ್ರಮುಖ ಅರ್ಥಶಾಸ್ತ್ರಜ್ಞರು ಕೂಡ ಸರ್ಕಾರದ ಬಳಿಯಿಲ್ಲ. ಇದ್ದ ಒಬ್ಬೊಬ್ಬರು ಸಹ ತಮ್ಮ ಮಾತುಗಳನ್ನು ಈ ಸರ್ಕಾರ ಕೇಳದ ಕಾರಣದಿಂದ ರಾಜಿನಾಮೇ ನೀಡಿ ಹೊರಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಬಳಿ ಹಣವಿಲ್ಲವೇ?
2014ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಚಾತೈಲದ ಬೆಲೆ 120 ಡಾಲರ್ ಇತ್ತು. ಆಗ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 71ರೂ ಇತ್ತು. ಇನ್ನು 2016ರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಚಾತೈಲದ ಬೆಲೆ 30 ಡಾಲರ್‍ಗೆ ಇಳಿದಿದೆ. ಆದರೂ ಪೆಟ್ರೋಲ್ ಬೆಲೆ ಲೀಟರ್ ಗೆ 65ರೂನಿಂದ 75 ರೂಗಳ ಆಸುಪಾಸಿನಲ್ಲಿಯೇ ಇದೆ. ಅಂದರೆ ಪ್ರೆಟ್ರೋಲ್ ಬೆಲೆ ಸಹ ಶೇ66% ರಷ್ಟು ಇಳಿಯಬೇಕಾಗಿತ್ತು. ಆದರೆ ಸರ್ಕಾರ ಹಲವು ತೆರಿಗೆಗಳನ್ನು ಹಾಕಿ ಪ್ರೆಟ್ರೋಲ್ ಬೆಲೆಯನ್ನು ಅಷ್ಟೇ ಮಾಡಿದ್ದಾರೆ. ಹೀಗಾಗಿ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 12 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎನ್ನಲಾಗುತ್ತಿದೆ.
ಈ ಹಣವನ್ನು ಸರ್ಕಾರ ಹೇಗೆ ಬಳಸಿದೆ ಎಂದು ಯಾರಿಗೂ ತಿಳಿದಿಲ್ಲ. ಈ ನಡುವೆ ಭಾರತದಲ್ಲಿರುವ 18 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 14 ಬ್ಯಾಂಕುಗಳು ನಷ್ಟದಲ್ಲಿವೆ. ಆರ್.ಬಿ.ಐ 1.76 ಲಕ್ಷ ಕೋಟಿ ರೂಗಳನ್ನು ಸರ್ಕಾರಕ್ಕೆ ನೀಡುವ ಪರಿಸ್ಥಿತಿ ಬಂದಿದೆ ಎಂದರು.

ಯುವ ಉದ್ಯಮಿ ಆದರ್ಶ್ ಯಲ್ಲಪ್ಪ ಮಾತನಾಡಿ ಬೇರೆ ಯಾವ ದೇಶಕ್ಕೂ ಇಲ್ಲದ ದೊಡ್ಡ ದೇಶಿಯ ಮಾರುಕಟ್ಟೆ ಭಾರತಕ್ಕಿತ್ತು. ಹಾಗಾಗಿಯೇ 2008ರಲ್ಲಿ ಆರ್ಥಿಕ ಕುಸಿತ ಕಂಡಾಗಲೂ ಭಾರತಕ್ಕೆ ಅದರ ಹೊಡೆತ ಬಿದ್ದಿರಲಿಲ್ಲ. ಅಂತಹ ದೇಶಿಯ ಬೇಡಿಕೆಯೂ ಇಂದು ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ನೇರ ಕಾರಣ ನೋಟು ರದ್ದತಿ ಮತ್ತು ಜಿ.ಎಸ್.ಟಿ ಆಗಿದೆ. ಸರ್ಕಾರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾಲೀಕರಿಗೆ ಹಲವು ಕಾನೂನು ಕಟ್ಟಳೆಗಳ ಮೂಲಕ ಬಹಳ ತೊಂದರೆ ಕೊಡುತ್ತಿದೆ. ದೊಡ್ಡ ಬಂಡವಾಳಶಾಹಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಇದು ತಪ್ಪು ಕ್ರಮ. ದೊಡ್ಡ ಬಂಡವಾಳಶಾಹಿಗಳು ಬೇರೆ ಯಾವ ದೇಶದಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು. ಆದರೆ 50 ಲಕ್ಷ, 1-2 ಕೋಟಿಯಷ್ಟೇ ಹೂಡಿಕೆ ಮಾಡಬಹುದಾದ ಸಣ್ಣ, ಅತಿಸಣ್ಣ ಉದ್ಯಮಿಗಳು ಭಾರತದಲ್ಲಷ್ಟೇ ಹೂಡಿಕೆ ಮಾಡಲು ಸಾಧ್ಯ. ಅಂತವರ ವ್ಯವಹಾರದಲ್ಲಿ ಸರ್ಕಾರದ ಹಸ್ತಕ್ಷೇಪ ತಪ್ಪಬೇಕು ಎಂದರು.

ಸರ್ಕಾರದ ಯಾವುದೇ ನೀತಿಗಳು ಜನರ ಪರವಿರಬೇಕೆ ಹೊರತು ಜನರ ವಿರುದ್ಧವಲ್ಲ. ಯಾವುದೇ ರಾಜ್ಯದಲ್ಲಿ ವಿದ್ಯುತ್‍ಗಾಗಿ ಸಾಕಷ್ಟು ಬೇಡಿಕೆ ಇದೆ ಎಂದಾದರೆ ಆರ್ಥಿಕ ಬೆಳವಣಿಗೆ ಇದೆ ಎಂದರ್ಥ. ಈಗ ವಿದ್ಯುತ್ ಬೇಡಿಕೆಯಿಲ್ಲ ಎನ್ನಲಾಗುತ್ತಿದೆ. ಅಂದರೆ ನಮ್ಮ ಆರ್ಥಿಕ ಬೆಳವಣಿಗೆ ಎಷ್ಟು ಕುಸಿದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.

ಸಭೆಯಲ್ಲಿ ಬಂದ ಹಕ್ಕೊತ್ತಾಯಗಳು
* ಗ್ರಾಮೀಣ ಭಾರತದ ಆರ್ಥಿಕ ಪುನಶ್ಚೇತನಕ್ಕೆ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು.
* ಕೃಷಿ ಆಧಾರಿತ ಸ್ಥಳೀಯ ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಬೇಕು.
* ಎಂಎಸ್‍ಎಂಇ ಉದ್ದಿಮೆದಾರರ ಹಿತರಕ್ಷಣೆಗಾಗಿ ಕಾನೂನು ಮಾಡಬೇಕು.
* ಪರಿಸರಸ್ನೇಹಿ, ವಿಕೇಂದ್ರಿಕೃತ, ಉದ್ಯೋಗ ಸೃಷ್ಟಿಗೆ ಕೇಂದ್ರಿತ ಗ್ರಾಮೀಣ ಸಹಕಾರಿ ಕಾರ್ಖಾನೆಗಳ ಸ್ಥಾಪನೆಗೆ ಸರ್ಕಾರ ಒತ್ತು ಕೊಡಬೇಕು.
* ಎಂಎಸ್‍ಎಂಇ ಗೆ ಜಿ.ಎಸ್.ಟಿ ತೆರಿಗೆ ಇಳಿಸಬೇಕು.
* ರಾಜ್ಯ ಸರ್ಕಾರ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನೂ ಕೂಡಲೇ ಭರ್ತಿ ಮಾಡಬೇಕು. ಗುತ್ತಿಗೆ ನೌಕರರಿಗೆ ಸೇವಾಭದ್ರತೆ ನೀಡಬೇಕು.
* ಕೇಂದ್ರ ಸರ್ಕಾರದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂತೆ ರಾಜ್ಯ ಸರ್ಕಾರವೂ 100 ದಿನಗಳ ಉದ್ಯೋಗ ನೀಡುವ ಯೋಜನೆಯನ್ನು ಜಾರಿಗೆ ತರಬೇಕು.
* ಗ್ರಾಮೀಣ ಜನರಿಗೆ ಇರುವ ನರೇಗ ಯೋಜನೆಯಂತೆ ನಗರ ಪ್ರದೇಶಗಳಲ್ಲಿನ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯೊಂದನ್ನು ಸರ್ಕಾರ ಜಾರಿಗೆ ತರಬೇಕು.
* ಕೌಶಲ್ಯ ತರಬೇತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ತರಬೇತಿಗೆ ಸೇರಿದವರಿಗೆಲ್ಲರಿಗೂ ಕೌಶಲ್ಯಗಳು ತಲುಪುವಂತೆ ಖಾತರಿ ಮಾಡಿಕೊಳ್ಳಬೇಕು.
* ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಬದಲಾಗಬೇಕು. ಹೂಡಿಕೆಗೆ ಉತ್ತೇಜನ ನೀಡುವ ಬದಲು ಬೇಡಿಕೆಗೆ ಉತ್ತೇಜನವಾಗಲು ಕ್ರಮಗಳನ್ನು ಕೈಗೊಳ್ಳಬೇಕು.
* ಉದ್ಯೋಗಿಗಳಿಗೆ ವಿಮೆ ಇರಬೇಕು. ಅನಿವಾರ್ಯ ಕಾರಣಗಳಿಂದ ಉದ್ಯೋಗ ಕಡಿತವಾದರೆ ಅವರು ಹೊಸ ಉದ್ಯೋಗ ಪಡೆಯುವವರೆಗೂ ಆಸರೆಯಾಗಬೇಕು
* ಗ್ರಾಮೀಣ ಉದ್ದಿಮೆದಾರರ ಒಕ್ಕೂಟಗಳನ್ನು ರಚಿಸಿ ಅವರಿಗೆ ಸರ್ಕಾರ ನೆರವು ನೀಡಬೇಕು.
* ಉದ್ಯೋಗ ಸಚಿವಾಲಯವೊಂದನ್ನು ಸರ್ಕಾರ ರಚಿಸಬೇಕು ಮತ್ತು ಅದಕ್ಕೊಬ್ಬರು ಸಚಿವರು ಇರಬೇಕು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ, ವಿದ್ಯಾರ್ಥಿ ಬಂಧುತ್ವ ವೇದಿಕೆ, ಸಾಲಿಡಾರಿಟಿ ಯೂತ್ ಮೂವ್‍ಮೆಂಟ್, ಫ್ರೆಟರ್ನಿಟಿ ಮೂವ್‍ಮೆಂಟ್, ಸ್ವರಾಜ್ ಅಭಿಯಾನ, ಕರ್ನಾಟಕ ಜನಶಕ್ತಿ, ಎಸ್ಸಿ, ಎಸ್ಟಿ ಉದ್ದಿಮೆದಾರರ ಸಂಘ ಎಲ್ಲವೂ ಸೇರಿ ಒಟ್ಟಾಗಿ ಕೆಲಸ ಮಾಡುವುದಾಗಿ ನಿರ್ಧರಿಸಲಾಯಿತು.

ಎಸ್ ಸಿ/ಎಸ್‌‌ಟಿ ಉದ್ದಿಮೆದಾರರ ಸಂಘದ ಉಪಾಧ್ಯಕ್ಷರಾದ ಸಿ.ಜಿ. ಶ್ರೀನಿವಾಸನ್, ಫ್ರೆಟರ್ನಿಟಿ ಮೂವ್‌ಮೆಂಟ್ ನ ನಿಜಾಮುದ್ದೀನ್, ಮೋಹಿನ್ ಕಮರ್, ನಸೀಮ್, ಸ್ವರಾಜ್ ಅಭಿಯಾನದ ರಾಜಶೇಖರ್ ಅಕ್ಕಿ,  ಲೇಖಕರಾದ ಬಿ.ಶ್ರೀಪಾದ್ ಭಟ್, ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ನರಸಿಂಹ ಮೂರ್ತಿ, ಸರೋವರ್ ಬೆಂಕಿಕೆರೆ, ಡಾ.ಸ್ವಾತಿ ಶುಕ್ಲಾ, ಮುತ್ತುರಾಜು, ಪತ್ರಕರ್ತರಾದ ಸುನಿಲ್ ಸಿರಸಂಗಿ, ವಿದ್ಯಾರ್ಥಿ ಬಂಧುತ್ವ ವೇದಿಕೆಯ ತೋಳಿ ಭರಮಣ್ಣ, ಕರ್ನಾಟಕ ಜನಶಕ್ತಿಯ ಡಾ.ವಾಸು ಎಚ್.ವಿ, ಮಲ್ಲಿಗೆ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜೇಂದ್ರ ರಾಜವಾಳ, ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಸಂತೋಷ್, ದೀಪಿಕ, ಮರಿಸ್ವಾಮಿ, ನಾಗರಾಜು, ಉಪನ್ಯಾಸಕರಾದ ಡಾ.ರಾಜೇಶ್, ಸಾಲಿಡಾರಿಟಿ ಯೂತ್ ಮೋವ್‌ಮೆಂಟ್ ನ ಮಹ್ಹಮದ್ ನವಾಜ್ ಮತ್ತಿತರರ ಭಾಗವಹಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...