Homeಮುಖಪುಟಎರಡು ದಶಕಗಳಲ್ಲಿಯೆ ಅತ್ಯಧಿಕ ರೂಪಾಯಿ ಕುಸಿತ: ಡಾಲರ್ ಎದುರು 80.49 ರೂ

ಎರಡು ದಶಕಗಳಲ್ಲಿಯೆ ಅತ್ಯಧಿಕ ರೂಪಾಯಿ ಕುಸಿತ: ಡಾಲರ್ ಎದುರು 80.49 ರೂ

- Advertisement -
- Advertisement -

ಅಮೇರಿಕನ್‌‌ ಡಾಲರ್‌‌ ವಿರುದ್ಧ ಭಾರತೀಯ ರೂಪಾಯಿ ಸತತ ಕುಸಿತ ಕಂಡಿದ್ದು ಕಳೆದ ಎರಡು ದಶಕಗಳಲ್ಲಿ ಸಾರ್ವಕಾಲಿಕ ಕುಸಿತ ಕಂಡಿದೆ. ಈ ಮೂಲಕ ರುಪಾಯಿ ಡಾಲರ್‌ ಮುಂದೆ 80.49 ರೂಗೆ ತಲುಪಿ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದೆ. US ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಏರಿಸಿದ್ದರಿಂದ ಈ ಪರಿಣಾಮ ಉಂಟಾಗಿದೆ ಎನ್ನಲಾಗಿದೆ.

ಭಾರತೀಯ ಕರೆನ್ಸಿಯು ಪ್ರತಿ ಅಮೇರಿಕನ್‌ ಡಾಲರ್‌ ಮುಂದೆ 80 ರಿಂದ 81 ರ ತನಕ ಕುಸಿಯುವ ಸಾಧ್ಯತೆಯಿದೆ ಎಂದು ಆರ್ಥಿಕ ವಿಶ್ಲೇಷಕರು ಊಹಿಸಿದ್ದರು. ಅದೀಗ ನಿಜವಾಗಿದೆ.

ಮುಂದಿನ ದಿನಗಳಲ್ಲಿ ಭಾರತೀಯ ಕರೆನ್ಸಿ ಮತ್ತಷ್ಟು ಕುಸಿಯಲಿದೆ ಎಂದು ಮನಿಕಂಟ್ರೋಲ್‌.ಕಾಂ ವರದಿ ಹೇಳಿದೆ. ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದಾಗಿನಿಂದ, ಹೂಡಿಕೆದಾರರು ಅಮೆರಿಕದಂತಹ ಸುರಕ್ಷಿತ ಮಾರುಕಟ್ಟೆಗೆ ಹೆಚ್ಚಾಗಿ ಸ್ಥಳಾಂತರಗೊಂಡಿದ್ದಾರೆ. ಹಾಗಾಗಿ ಡಾಲರ್ ಮೌಲ್ಯ ಹೆಚ್ಚಲಿದೆ ಎಂದು ವರದಿ ಉಲ್ಲೇಖಿಸಿದೆ.

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ, ಪ್ರಪಂಚದಾದ್ಯಂತದ ದೇಶಗಳ ಮೇಲೆ ಹಣದುಬ್ಬರವು ತೀವ್ರವಾಗಿ ಹೊಡೆತ ನೀಡಿದೆ. ಇದು ಹೆಚ್ಚಿನ ದೇಶಗಳ ಕರೆನ್ಸಿಯ ದರದ ಇಳಿಕೆಗೆ ಕಾರಣವಾಗಿದೆ. ಭಾರತವು ಹಣದುಬ್ಬರದಿಂದ ತಪ್ಪಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡರೂ ಪರಿಣಾಮ ಬೀರಿಲ್ಲ ಎಂದು ಮನಿಕಂಟ್ರೋಲ್.ಕಾಂ ವರದಿ ಹೇಳಿದೆ.

ಇದನ್ನೂ ಓದಿ: ದಲಿತ ಬಾಲಕ ದೇವರು ಮುಟ್ಟಿದ ಪ್ರಕರಣ: ಮನೆಯಲ್ಲಿ ದೇವರ ಫೋಟೋ ಇದ್ದ ಜಾಗದಲ್ಲಿ ಈಗ ಅಂಬೇಡ್ಕರ್‌ ಭಾವಚಿತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...