Homeಕರ್ನಾಟಕಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

ಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

- Advertisement -
- Advertisement -

ದಸರಾ ಉದ್ಘಾಟನಾ ಭಾಷಣದಲ್ಲಿ “ಮಹಿಳೆ ಮುಟ್ಟಾದಾಗ ಆಫೀಸಿಗೆ ಹೋಗೋದು ಬೇರೆ ದೇವಸ್ಥಾನಕ್ಕೆ ಹೋಗೋದು ಬೇರೆ” ಎಂದು ಹೇಳುವ ಮೂಲಕ ಮಹಿಳೆಯರ ಸಹಜ ಮುಟ್ಟನ್ನು ಅವಮಾನಿಸಿದ್ದ ಎಸ್.ಎಲ್ ಭೈರಪ್ಪನವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಸಾಹಿತಿ ಭೈರಪ್ಪನವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿದ್ದು ಆಯ್ದ ಕೆಲವು ಇಲ್ಲಿವೆ.

ಎಡಗಡೆ ಮುಖ್ಯಮಂತ್ರಿ ಯಡಿಯೂರಪ್ಪ, ಬಲಗಡೆ ಕೇಂದ್ರ ಸಚಿವ ಸದಾನಂದರನ್ನು ಕೂರಿಸಿಕೊಂಡಿದ್ದ ಬೈರಪ್ಪ ನಾಡಿನ ಬಗ್ಗೆ ಕಾಳಜಿ ಇರುವ ಮನುಷ್ಯನೇ ಆಗಿದ್ದರೆ, ಪ್ರವಾಹದಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಉತ್ತರ ಕರ್ನಾಟಕ, ಉತ್ತರ ಕನ್ನಡ, ಕರಾವಳಿಯ ಜನರ ಬದುಕಿನ ಬಗ್ಗೆ‌ ಮಾತನಾಡಬೇಕಿತ್ತು. ಅವರು ಬದುಕು ಕಟ್ಟಿಕೊಳ್ಳಲು ಸರ್ಕಾರ ಏನು ಮಾಡಬೇಕು ಎಂಬ ಸಲಹೆ ಕೊಡಬಹುದಿತ್ತು.

ಅಲ್ಲಿ ಕೂತು ಬೆಂಡೆತ್ತಬೇಕಾಗಿರುವುದು ಪ್ರವಾಹ ಪರಿಹಾರಕ್ಕೆಂದು ಚಿಕ್ಕಾಸೂ ಕೊಡದ ಕೇಂದ್ರ ಸರ್ಕಾರವನ್ನು. ವಿಚಾರವಾದಿಗಳು, ಮುಟ್ಟಾಗುವ ಮಹಿಳೆಯರ ಬಗ್ಗೆ ಮಾತಾಡಿದರೆ ಯಾರಿಗೆ ಏನು ಪ್ರಯೋಜನ?

“ನಾಡಹಬ್ಬ ಉದ್ಘಾಟಕರಾಗಿ ಯಾವ ವಿಷಯ ಮಾತನಾಡಬೇಕು ಎಂಬ ಕನಿಷ್ಠ ಜ್ಞಾನವಿಲ್ಲದ ಬೈರಪ್ಪನವರಿಗೇನಾದರೂ, ಈ ಎಲ್ಲಾ ಘನಂದಾರಿ ಸಾಧನೆಗೆ ಜ್ಞಾನಪೀಠ ಕೊಟ್ಟರೆ ಅಲ್ಲಿಗೆ ಜ್ಞಾನಪೀಠದ ಮಾನ ಮೂರ್ಕಾಸಿಗೆ ಹರಾಜಾದಂತೆಯೇ ಸರಿ” ಎಂದು ಪತ್ರಕರ್ತೆ ಹೇಮಾವತಿ ವೆಂಕಟ್‌ರವರು ಕಿಡಿಕಾರಿದ್ದಾರೆ.

ಮುಟ್ಟು ಎಂಬ ಪ್ರಕೃತಿ ವಿಸ್ಮಯ ಪುರುಷರ ದೇಹದಲ್ಲಿ ಆಗಿರುತ್ತಿದ್ದರೆ, ಇಲ್ಲ ಶಿಶ್ನವೇ ತಿಂಗಳಿಗೆ ನಾಲ್ಕೈದು ದಿನಗಳ ಕಾಲ ರಕ್ತ ಕಾರುವಂತೆ ಇದ್ದಿದ್ದರೆ ಅದಕ್ಕೆಂದೇ ಹಬ್ಬ, ವೃತಗಳು ಹುಟ್ಟಿರುತ್ತಿದ್ದವು. ಹಾಗಾಗಿ ಭೈರಪ್ಪನಂಥವರ ವಿರೋಧ ಕೇವಲ ಮುಟ್ಟಿಗಲ್ಲ ಬದಲಾಗಿ ಅದು ಪುರುಷ ಪ್ರಧಾನ ಸಮಾಜ ಮಹಿಳಾ ವಿರೋಧಿ ಧೋರಣೆಗಳ ಒಂದು ಭಾಗವಷ್ಟೇ. ಒಂದಂತೂ ಸತ್ಯ. ಮುಟ್ಟು ಪುರುಷರ ದೇಹದಲ್ಲಾಗಿರುತ್ತಿದ್ದರೂ ಮನೆಯಿಂದ ಆಚೆ ಹೆಣ್ಮಕ್ಕಳೇ ಹೋಗಬೇಕಾಗಿತ್ತು. ಮುಟ್ಟು ಪವಿತ್ರ. ಮುಟ್ಟಾದ ಪುರುಷರು Holy of Holies Periodನಲ್ಲಿರುವಾಗ ಮುಟ್ಟಾಗದ ಅಪವಿತ್ರ ಮಹಿಳೆಯರು ಪುರುಷರಿಂದ ದೂರವಿರಬೇಕೆಂದು ಕಟ್ಟಳೆಗಳನ್ನು ಮಾಡಿ ಮಹಿಳೆಯರನ್ನೇ ಮನೆಯಿಂದ ಹೊರಗಿಡುತ್ತಿದ್ದರು. ಪುರುಷ ಪ್ರಧಾನ ವ್ಯವಸ್ಥೆಯ ನೀಚತನಕ್ಕೆ ಪರಿಧಿಗಳಿಲ್ಲ. ಎಂದು ಆಲ್‌ಮೀಡಿಯಾ ಗ್ಲಾಡ್‌ಸನ್ ಅಭಿಪ್ರಾಯಪಟ್ಟಿದ್ದಾರೆ.

ಕರುಳಿನಲ್ಲಿ ಮಲವಿರುತ್ತದೆ. ಮೂತ್ರಾಶಯದಲ್ಲಿ ಮೂತ್ರ ಇರುತ್ತದೆ. ಅದನ್ನೆಲ್ಲ ಭರ್ತಿ ಇರಿಸಿಕೊಂಡು ದೇವಸ್ಥಾನಕ್ಕೆ ಹೋಗಬಹುದು. ಆದರೆ ಋತುಸ್ರಾವ ಅನುಭವಿಸುತ್ತಿರುವ ಹೆಣ್ಣುಮಗಳು ಮಾತ್ರ ದೇವಸ್ಥಾನ ಪ್ರವೇಶಿಸಕೂಡದು ಅಲ್ವಾ ಬೈರಪ್ಪನವರೇ?!
ಸಾಹಿತಿಯಾದವರಲ್ಲಿ ಜೀವಪರ ಸಂವೇದನೆ ಇರುತ್ತದೆ ಅಂದುಕೊಂಡಿದ್ದೆವು, ವಯಸ್ಸಾಗುತ್ತಿದ್ದಂತೆ ಬುದ್ಧಿ ಬೆಳೆಯುತ್ತದೆ ಅಂದುಕೊಂಡಿದ್ದೆವು! ತಪ್ಪು ನಮ್ಮದೇ…

ಒಬ್ಬ ಅತ್ಯಾಚಾರಿ ದೇವಸ್ಥಾನ ಪ್ರವೇಶಿಸಬಹುದು. ಕೊಲೆಗಡುಕ, ಕಳ್ಳ, ಭ್ರಷ್ಟ, ವಂಚಕ, ದರೋಡೆಕೋರ ದೇವಸ್ಥಾನ ಪ್ರವೇಶಿಸಬಹುದು. ಜಗತ್ತಿಗೆ ಜೀವ ಕೊಟ್ಟ ಹೆಣ್ಣುಮಗಳು ಮಾತ್ರ ಋತುಸ್ರಾವ ಕಾರಣಕ್ಕೆ ದೇವಸ್ಥಾನ ಪ್ರವೇಶಿಸಬಾರದು!.
ವಾವ್! ಅದ್ಭುತ ವಾದ ಬೈರಪ್ನೋರೆ!-
ಎಂದು  ಶ್ರೀನಿವಾಸ ಕಾರ್ಕಳರವರು ಬರೆದಿದ್ದಾರೆ.

ಅದೇ ರೀತಿ ಶ್ರೀನಿವಾಸ ಕಾರ್ಕಳರವರು ಮುಟ್ಟಿನ ಬಗ್ಗೆ ಬರೆದಿದ್ದ ಜಾಗೃತಿ ಹಾಡು ಕೂಡ ವೈರಲ್ ಆಗಿದೆ.

ಮುಟ್ಟುಮುಟ್ಟೆಂದೇಕೆ ಕೀಳಾಗಿ ಕಾಣುವಿರಿ
ಮುಟ್ಟಿನಿಂದಲ್ಲವೇ ನಮ್ಮೆಲ್ಲರ ಹುಟ್ಟು
ಮುಟ್ಟುಮುಟ್ಟೆಂದೇಕೆ ಕೀಳರಿಮೆ ಹೊಂದುವಿರಿ
ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು //

ಮುಟ್ಟು ಕಾಣದ ಹೆಣ್ಣು ಬಸಿರು ಹೊಂದುವುದಿಲ್ಲ
ತಾಯಿಯಾಗುವುದಿನ್ನು ಸಾಧ್ಯವೇನು?
ನಮ್ಮನ್ನು ಹೆತ್ತವಳು ಮುಟ್ಟಾಗದಿರುತಿದ್ರೆ
ಭೂಮಿಯಲಿ ನಾವು ಇರುತ್ತಿದ್ದೆವೇನು //

ಮುಟ್ಟುಸ್ರಾವಗಳೆಲ್ಲ ಪ್ರಕೃತಿಯ ಸಹಜ ಕ್ರಿಯೆ
ಬೆವರು ಬಾಧೆಗಳಂತೆ ಅಲ್ಲವೇನು?
ಮುಟ್ಟಾದ ಹೆಣ್ಣನ್ನು ದೂರ ಅಟ್ಟುವುದೇಕೆ
ಅವಳು ಮಾಡಿದ ಘೋರ ಪಾಪವೇನು //

ಜಗದ ಜೀವಿಗಳೆಲ್ಲ ದೈವ ಸೃಷ್ಟಿ ಆದರೆ
ಮುಟ್ಟು ಕೂಡಾ ಪವಿತ್ರ ಹೌದು ತಾನೇ?
ದೇವರದೇ ಸೃಷ್ಟಿಯು ಶುಭದ ಕಾರ್ಯಗಳಲ್ಲಿ
ವರ್ಜ್ಯ ಅನ್ನುವುದೆಲ್ಲ ತಪ್ಪು ತಾನೇ //

ಮುಟ್ಟಿನ ಕುರಿತಾಗಿ ಸತ್ಯ ಸಂಗತಿ ಅರಿತು
ಹೊಸ ದೃಷ್ಟಿಯನು ನಾವು ಹೊಂದಬೇಕು
ಕುರುಡು ನಂಬಿಕೆಗಳನು ಇಲ್ಲವಾಗಿಸಿ ನಾವು
ಮಾನವೀಯತೆಯಿಂದ ಬದುಕಬೇಕು //..

“ಮುಟ್ಟಾಗುವುದು ಅಪವಿತ್ರ ಅನ್ನೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಈ ಭೈರಪ್ಪನಿಗೆ ತನ್ನ ಮನೆಯಲ್ಲಿರುವ ಹೆಣ್ಮಕ್ಳು ನೆನಪಾಗುವುದೇ ಇಲ್ವಾ?” ಎಂದು ಮಹಾಲಿಂಗಪ್ಪ ಆಲಬಾಳರವರು ಪ್ರಶ್ನಿಸಿದ್ದಾರೆ.

“ಹೆಣ್ಣು ಮಕ್ಳ ಮುಟ್ಟಿನ ಸ್ರಾವ ಅವರ ಗರ್ಭಕೋಶದಲ್ಲಿ ಮಾತ್ರ ಇರುತ್ತೆ.
(ಕೆಲವು) ಗಂಡಸರಿಗೆ ಸದಾ ಕಾಲ ತಲೇಲೆ ಇರುತ್ತೆ. ಯಾರಪ್ಪಾ ಹೆಚ್ಚು ಮೈಲಿಗೆ ಈಗ?” ಎಂದು ಪ್ರೀತಿ ನಾಗರಾಜ್ ಪ್ರಶ್ನೆ ಹಾಕಿದ್ದಾರೆ..

“ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲಾ
ಮುಟ್ಟಬೇಡವೆಂದು ತೊಲಗುವ ಹಾರುವನು
ಹುಟ್ಟಿದನು ಎಲ್ಲಿ ಸರ್ವಜ್ಞ?” ಎಂದು ನೀಲಾ ಕೆ ಗುಲಬರ್ಗಾ ರವರು ಬರೆದುಕೊಂಡಿದ್ದಾರೆ.

“ಭೈರಪ್ಪನವರೇ ನಮ್ಗೆ ‘ಕಾಯಕವೇ ಕೈಲಾಸ’
ಕೈಲಾಸದಂತ ಆಫೀಸ್ಗೆ ಮುಟ್ಟಾದಾಗ ನಾವು ಹೋಗೋದು ಬೇಡ.
ನಿಮ್ ಹೆಸರಲ್ಲಿ ತಿಂಗ್ಳಿಗೆ ಮೂರ್ ದಿನ ರಜೆ ಕೊಡಿಸ್ಬಿಡಿ ಪ್ಲೀಸ್” ಎಂದು ಚೈತ್ರ ಕೋಟುರುರವರು ಟ್ರೋಲ್ ಮಾಡಿದ್ದಾರೆ.

ತಕಳ್ರಪ್ಪಾ… ಮುಟ್ಟಲ್ಲೇ ಹುಟ್ಟಿದವರು ಮುಟ್ಟಿನ ಬಗ್ಗೆ ಮಾತಾಡುತ್ತಾರೆ! ಎಂದು ಕಾದಂಬಿನಿ ರಾವಿಯವರು ಕಿಚಾಯಿಸಿದ್ದಾರೆ.

ಹಿರಿಯ ಸಾಹಿತಿಯೊಬ್ಬರು ಬರೆದ ಈ ಹೇಳಿಕೆ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದನ್ನು ಕಾದಂಬಿನಿ ರಾವಿಯವರು ಮೊದಲು ಷೇರ್ ಮಾಡಿಕೊಂಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಸವಣ್ಣ ಅಂತರ್ಜಾತೀಯ ವಿವಾಹ ಮಾಡಿಸಿದ ಸಂದರ್ಭದಲ್ಲಿ ಸಮಾಜದಲಿ ಆರಥಿಕತೆ ಪಕವವಾಗಿರಲಿಲ ಎಂದು ಹೇಳಿದ ಭೈರಪ್ಪನವರೆ ನಿಮ್ಮ ಬುದ್ಧಿಗೆ ಸವಲಪ ಸಗಣಿ ಹಾಕಿಕೊಳ್ಳಿ. ಬಸವಣ್ಣನವರು ಆ ಇಬ್ಬರು ಗಂಡು ಹೆಣ್ಣು ಪೃಕೃತಿ ಸಹಜ ಆಕರ್ಷಣೆಗೊಂಡಿದರಿಂದ ಅವರಿಬ್ಬರಿಗೂ ಮುತಸದಿಯ ಜಾಗೃತೆ ವಹಿಸಿ ಆಗಿನ ಕಾಲದ ಸಮಾಜ ಹಾಕಿಕೊಂಡ ಜಾತಿಯತೆಯ ಸಾಮಾಜಿಕ ಕಟ್ಟಳೆಯಿಂದ ಇವರಿಬ್ಬರಿಗೂ ತೊಂದರೆಯಾಗಬಾರದೆಂಬ ಕಳಕಳಿಯಿಂದ ಇಬ್ಬರಿಗೂ ಸಾಂಕೇತಿಕವಾಗಿ ಲಿಂಗ ದೀಕ್ಷೆ ಕೊಟ್ಟು ಸತಿಪತಿ ಗಳಾಗಿ ಬಾಳುವಂತೆ ಮದುವೆ ಮಾಡಿಸಿ ಜಾತ್ಯತೀತದ ಆದರ್ಶ ವನ್ನು ಎತ್ತಿ ಹಿಡಿದರು. ವಸ್ತು ಸ್ಥಿತಿ ವಿಷಯದ ಅಜಾನಿಗಳಾದ ನೀವು ನಿಮ್ಮ ಗೊಮುಖ ವಾಘೃದ ಮುಖವಾಡ ಹಾಕಿ ಕೊಂಡು ಕೈಗೆ ಮೈಕ್ ಮತ್ತು ನಿಂತು ಕೊಳಲು ಪುಕ್ಕಟೆಯ ವೇದಿಕೆ ಸಿಕಿದರಿಂದ ನಾನು ಹೇಳುವೆನೊ ಜನ ಅದನ್ನು ಕೇಳುತ್ತಾರೆ ಎಂಬ ಅಹಂನಿಂದ ಬಸವಣ್ಣನವರ ಮಾಡಿಸಿದ ಮದುವೆಯನ್ನು ಆರಥಿಕತೆ ರೂಪಕ್ಕೆ ಹೋಗಿ ಜೊಡಿಸಿದಿರಲ ನಿಮ್ಮ ಅಪೃಬುದತೆಗೆ ಛೀ ಮಾರಿ ಹಾಕುತಿದೆನೆ.
    ಹಾಗಾದರೆ ಇವತಿಗೆ ಆರಥಿಕತೆ ಪಕವವಾಗಿದೆ ಎನುವುದಾದರೆ ಒಬ್ಬರಿಗೂಬಬರಿಗೂ ಯಾವ ಆಕರ್ಷಣೆ ಇಲ್ಲದೇ ಕೇವಲ ಆರಥಿಕ ಆಕರ್ಷಣೆ ಗೊಸಕರ ಮದುವೆ ಯಾಗಬೇಕಾ. ಛೀ

LEAVE A REPLY

Please enter your comment!
Please enter your name here

- Advertisment -

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...