Homeಮುಖಪುಟಪ್ರಾದೇಶಿಕ ಪಕ್ಷಗಳ ಆಸ್ತಿಗಳಲ್ಲಿ ಗಣನೀಯ ಹೆಚ್ಚಳ: ಮೊದಲ ಸ್ಥಾನದಲ್ಲಿರುವ ಸಮಾಜವಾದಿ ಪಕ್ಷ

ಪ್ರಾದೇಶಿಕ ಪಕ್ಷಗಳ ಆಸ್ತಿಗಳಲ್ಲಿ ಗಣನೀಯ ಹೆಚ್ಚಳ: ಮೊದಲ ಸ್ಥಾನದಲ್ಲಿರುವ ಸಮಾಜವಾದಿ ಪಕ್ಷ

- Advertisement -
- Advertisement -

ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷವು ಭಾರತದ ಅತ್ಯಂತ ಶ್ರೀಮಂತ ಪಕ್ಷವಾಗಿದೆ. 2021-22ರಲ್ಲಿ ಅಖಿಲೇಶ್‌ ಯಾದವ್‌ ನಾಯಕತ್ವದ ಉತ್ತರಪ್ರದೇಶದ ಸಮಾಜವಾದಿ ಪಕ್ಷವು ಅತಿ ಹೆಚ್ಚು ಆಸ್ತಿಯನ್ನು ಹೊಂದಿದ್ದು, ಭಾರತದ ಶ್ರೀಮಂತ ಪ್ರಾದೇಶಿಕ ಪಕ್ಷವಾಗಿದೆ ಎಂದು ಪ್ರಜಾಸತ್ತಾತ್ಮಕ ಸುಧಾರಣಾ ಚಿಂತಕರ ಚಾವಡಿ ವರದಿ ತಿಳಿಸಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಾರ, 2020-21ರ ಹಣಕಾಸು ವರ್ಷದಲ್ಲಿ  ಸಮಾಜವಾದಿ ಪಕ್ಷವು ಒಟ್ಟು 561.46 ಕೋಟಿ ರೂ. ಆಸ್ತಿಯನ್ನು ಘೋಷಿಸಿದೆ. ಇದು 2021-22ರಲ್ಲಿ 568.369 ಕೋಟಿಗೆ ಹೆಚ್ಚಳವಾಗಿದೆ ಅಂದರೆ ಸಮಾಜವಾದಿ ಪಕ್ಷದ ಆಸ್ತಿಯಲ್ಲಿ 1.23 ಶೇಕಡಾ ಹೆಚ್ಚಳವಾಗಿದೆ.

ತೆಲಂಗಾಣದ ಚಂದ್ರಶೇಖರ್‌ ರಾವ್‌ ಅವರ ಭಾರತ್ ರಾಷ್ಟ್ರ ಸಮಿತಿ ಪಕ್ಷವು ದೇಶದ ಎರಡನೇ ಶ್ರೀಮಂತ  ಪ್ರಾದೇಶಿಕ ಪಕ್ಷವಾಗಿದ್ದು, 2020-21ರ ಆರ್ಥಿಕ ವರ್ಷದಲ್ಲಿ 319.55 ಕೋಟಿ ರೂ. ಆಸ್ತಿಯನ್ನು ಪಕ್ಷವು ಹೊಂದಿತ್ತು. ಆ ಬಳಿಕ 2021-22ರ ಆರ್ಥಿಕ ವರ್ಷದಲ್ಲಿ 512.24 ಕೋಟಿ ರೂ.ಗಳ ಒಟ್ಟು ಆಸ್ತಿಯನ್ನು ಬಿಆರ್‌ಎಸ್ ಘೋಷಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಡಿಎಂಕೆ, ಬಿಜೆಡಿ ಮತ್ತು ಜೆಡಿ(ಯು) ಪಕ್ಷಗಳ ಒಟ್ಟು ಆಸ್ತಿ ಶೇ.95ರಷ್ಟು ಹೆಚ್ಚಿದೆ. ದ್ರಾವಿಡ ಮುನ್ನೇತ್ರ ಕಳಗಂ 2020-21ರಲ್ಲಿ 115.708 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿತ್ತು. ಇದು 2021-22ರಲ್ಲಿ  399 ಕೋಟಿ ರೂ.ಗೆ ಹೆಚ್ಚಳವಾಗಿದೆ ಅಂದರೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಆಸ್ತಿಯಲ್ಲಿ  244.88ರಷ್ಟು ಹೆಚ್ಚಳವಾಗಿದೆ.

ಬಿಜು ಜನತಾ ದಳವು 2020-21ರಲ್ಲಿ 194 ಕೋಟಿ ರೂ. ಆಸ್ತಿಯನ್ನು ಘೋಷಿಸಿತ್ತು. ಇದು 2021-22ರಲ್ಲಿ ಶೇ.143 ರಷ್ಟು ಏರಿಕೆಯಾಗಿ 474 ಕೋಟಿ ರೂ.ಗೆ ತಲುಪಿದೆ. ಜೆಡಿ(ಯುಎಸ್) 2020-21ರಲ್ಲಿ 86 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿತ್ತು. 2022ರಲ್ಲಿ ಶೇಕಡ 95ಕ್ಕಿಂತ ಹೆಚ್ಚು ಅಂದರೆ 168 ಕೋಟಿ ರೂ. ಆಸ್ತಿಯನ್ನು ಘೋಷಿಸಿದೆ.

ಆಮ್ ಆದ್ಮಿ ಪಕ್ಷದ ಒಟ್ಟು ಆಸ್ತಿಯು 2020-21 ಮತ್ತು 2021-22ರ ನಡುವೆ 21.82 ಕೋಟಿಯಿಂದ 37.477 ಕೋಟಿಗೆ ಅಂದರೆ 71.76 ಶೇಕಡಾ ಹೆಚ್ಚಾಗಿದೆ. ಎಐಎಡಿಎಂಕೆ ಮತ್ತು ಟಿಡಿಪಿ ಪಕ್ಷಗಳು ಮಾತ್ರ ಟಾಪ್ 10 ಪ್ರಾದೇಶಿಕ ಪಕ್ಷಗಳ ಪೈಕಿ ತಮ್ಮ ಘೋಷಿತ ಆಸ್ತಿಯಲ್ಲಿ ಈ ಬಾರಿ ಇಳಿಕೆ ತೋರಿಸಿವೆ.

2020-21 ಮತ್ತು 2021-22ರ ನಡುವೆ ಎಐಎಡಿಎಂಕೆ ಆಸ್ತಿ 260.166 ಕೋಟಿ ರೂ.ನಿಂದ 256.13 ಕೋಟಿ ರೂ.ಗೆ ಮತ್ತು ಟಿಡಿಪಿಯ ಆಸ್ತಿ 133.423 ಕೋಟಿಯಿಂದ 129.372 ಕೋಟಿಗೆ ಇಳಿಕೆಯಾಗಿದೆ.

ಇದನ್ನು ಓದಿ: 8 ಭಾರತೀಯರಿಗೆ ಮರಣದಂಡನೆ: ಕತಾರ್ ದೊರೆ ಜೊತೆ ಮೋದಿ ವಿಷಯ ಪ್ರಸ್ತಾಪಿಸಿಲ್ಲ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read