Homeಮುಖಪುಟರಾಮಮಂದಿರಕ್ಕೆ ಧನಸಹಾಯ ನೀಡಲು ಬಯಸಿದ ನಾಲ್ವರ ಹಂತಕ ಪೇದೆ

ರಾಮಮಂದಿರಕ್ಕೆ ಧನಸಹಾಯ ನೀಡಲು ಬಯಸಿದ ನಾಲ್ವರ ಹಂತಕ ಪೇದೆ

- Advertisement -
- Advertisement -

ಜೈಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೂವರು ಮುಸ್ಲಿಮರು ಸೇರಿ ನಾಲ್ವರನ್ನು ಹತ್ಯೆಗೈದ ಭಯಾನಕ ಕೃತ್ಯದ ಆರೋಪಿ ಆರ್‌ಪಿಎಫ್ ಪೇದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಧನ ಸಹಾಯ ನೀಡಲು ಬಯಸಿದ್ದಾನೆ ಎಂದು ವರದಿಯಾಗಿದೆ.

ನಾಲ್ವರನ್ನು ಹತ್ಯೆಗೈದ ಪ್ರಕರಣದಲ್ಲಿ ಪ್ರಸ್ತುತ ಜೈಲಿನಲ್ಲಿರುವ ಚೇತನ್ ಸಿಂಗ್ ತಮ್ಮ ಬ್ಯಾಂಕ್ ಖಾತೆಯನ್ನು ಡಿ-ಫ್ರೀಜ್ ಮಾಡಲು ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಲು ಬಯಸಿದ್ದಾನೆ ಎಂದು ಮಿಡ್‌ಡೇ ನ್ಯೂಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದಲ್ಲದೆ ಆತ ತನಗೆ ಉದ್ಯೋಗ ನೀಡಿದ್ದ ಸಂಸ್ಥೆಗೆ ಪತ್ರ ಬರೆದು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ತಮ್ಮ ಕುಟುಂಬಕ್ಕೆ ಸಹಾಯ ಮಾಡಲು ತಮ್ಮ ಸಂಬಳ ಮುಂದುವರಿಸಬೇಕೆಂದು ಕೇಳಿಕೊಂಡಿದ್ದಾನೆ.

ವರದಿ ಪ್ರಕಾರ, ಸಿಂಗ್ ಈಗ ನಾನು ಯಾವುದೇ ಕೊಲೆಗಳನ್ನು ಮಾಡಿಲ್ಲ ಮತ್ತು ಕಳೆದ ಕೆಲವು ವರ್ಷಗಳಿಂದ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾನೆ. ಅವನು ನನ್ನನ್ನು ಇನ್ನೊಂದು ಆತ್ಮ ವಶಪಡಿಸಿಕೊಂಡಿದೆ ಎಂದು ಭಾಸವಾಗುತ್ತದೆ ಎಂದು ಹೇಳುತ್ತಿದ್ದಾನೆ.

ಜು.31 ರಂದು ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಟಿಕಾರಾಂ ಮೀನಾ ಮತ್ತು ಮೂವರು ಪ್ರಯಾಣಿಕರಾದ ಅಬ್ದುಲ್ ಕಾದರ್ ಮೊಹಮ್ಮದ್ ಹುಸೇನ್ ಭಾನ್‌ಪುರವಾಲಾ, ಸೈಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಚೇತನ್‌ ಸಿಂಗ್‌ ಗುಂಡಿಟ್ಟು ಹತ್ಯೆ ಮಾಡಿದ್ದು, ಆರೋಪಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಆಘಾತಕಾರಿ ಘಟನೆಯನ್ನು ಇತರ ಪ್ರಯಾಣಿಕರು ವಿಡಿಯೋ ಮಾಡಿದ್ದರು. ವಿಡಿಯೋದಲ್ಲಿ ಗಡ್ಡದಾರಿ ಮುಸ್ಲಿಮರ ಮೇಲೆ ಚೇತನ್‌ ಸಿಂಗ್‌ ಫೈರಿಂಗ್‌ ಮಾಡುವುದು ಸೆರೆಯಾಗಿತ್ತು. ಈತ ವಿಡಿಯೋದಲ್ಲಿ ಮುಸ್ಲಿಮರು ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿದ್ದಾರೆ. ಇದನ್ನು ಮಾಧ್ಯಮಗಳು ತೋರಿಸುತ್ತಿರುವುದು. ನೀವು ಭಾರತದಲ್ಲಿ ಬದುಕಲು ಬಯಸುವುದಾದರೆ ಮೋದಿ, ಯೋಗಿ ಹಾಗೂ ನಿಮ್ಮ ಠಾಕ್ರೆಗೆ ಮತ ಚಲಾಯಿಸಿ ಎಂದು ಹೇಳಿರುವುದು ಕೂಡ ವೀಡಿಯೊದಲ್ಲಿ ದಾಖಲಾಗಿದೆ.

ಘಟನೆಯ ನಂತರ ಚೌಧರಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಶಸ್ತ್ರಾಸ್ತ್ರ ಕಾಯಿದೆ ಮತ್ತು ಭಾರತೀಯ ರೈಲ್ವೇ ಕಾಯ್ದೆಯ ಸೆಕ್ಷನ್‌ಗಳು ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಘಟನೆಯ ಕುರಿತು ಸಮಗ್ರ ತನಿಖೆಗೆ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರೈಲ್ವೆ ಮಂಡಳಿ ರೂಪಿಸಿತ್ತು.

ಉತ್ತರಪ್ರದೇಶದ ಹತ್ರಾಸ್‌ ಮೂಲದ ಚೇತನ್ ಸಿಂಗ್‌ನನ್ನು ಕಳೆದ ಮಾರ್ಚ್‌ನಲ್ಲಿ ಭಾವನಗರ ವಿಭಾಗದಿಂದ ಮುಂಬೈಗೆ ವರ್ಗಾವಣೆ ಮಾಡಲಾಗಿತ್ತು. ಇತ್ತೀಚೆಗೆ ಹತ್ರಾಸ್‌ಗೆ ಭೇಟಿ ನೀಡಿದ್ದ ದುಷ್ಕರ್ಮಿ ಜು.17ರಂದು ಊರಿಗೆ ಹಿಂದಿರುಗಿದ್ದ. ಈತ ರೈಲಿನಲ್ಲಿ ಕೃತ್ಯದ ಬಳಿಕ ಪರಾರಿಯಾಗಲು ಯತ್ನಿಸಿದ್ದು ರೈಲ್ವೆ ಪೊಲೀಸ್ ಸಿಬ್ಬಂದಿ ಬಂಧಿಸಿದ್ದರು.

ಈತನ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿದಾಗ ಈ ಮೊದಲು ಕೂಡ ಈತ ಮುಸ್ಲಿಂ ದ್ವೇಷದ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಎನ್ನುವುದು ಬಯಲಾಗಿದೆ. ಆರ್ ಪಿಎಫ್ ಪೇದೆ ಚೇತನ್‌ ಸಿಂಗ್‌ ಅದೇ ರೈಲಿನಲ್ಲಿ ಕೃತ್ಯ ನಡೆಸಿದ ದಿನ ಬುರ್ಖಾಧಾರಿ ಮಹಿಳೆಗೆ ಜೈ ಮಾತಾ ದಿ ಎಂದು ಘೋಷಣೆ ಕೂಗುವಂತೆ ಆಗ್ರಹಿಸಿದ್ದಾನೆ ಎಂದು ತನಿಖೆಯ ವೇಳೆ ಬಯಲಾಗಿದೆ. ಪ್ರಕರಣದಲ್ಲಿ ಮಹಿಳೆಯನ್ನು ನಿರ್ಣಾಯಕ ಸಾಕ್ಷಿಯನ್ನಾಗಿ ಮಾಡಲಾಗಿದೆ. ವರದಿಗಳ ಪ್ರಕಾರ ರೈಲಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ.

ಹತ್ಯೆ ಆರೋಪಿ ಚೌಧರಿ ಮೊದಲು B-3 ಕೋಚ್‌ನಲ್ಲಿ ಬುರ್ಖಾ ಧರಿಸಿದ್ದ ಪ್ರಯಾಣಿಕ ಮಹಿಳೆಯನ್ನು ಗುರಿಯಾಗಿಸಿಕೊಂಡಿದ್ದ ಮತ್ತು ಗನ್‌ನ್ನು ತೋರಿಸಿ ಎರಡೆರಡು ಬಾರಿ ಜೈ ಮಾತಾ ದಿ ಎಂದು ಕೂಗುವಂತೆ ಒತ್ತಾಯಿಸಿದ್ದಾನೆ ಎಂದು ತನಿಖೆಯ ವೇಳೆ ಬಹಿರಂಗವಾಗಿತ್ತು.

ಇದನ್ನು ಓದಿ: ಪ್ರಾದೇಶಿಕ ಪಕ್ಷಗಳ ಆಸ್ತಿಗಳಲ್ಲಿ ಗಣನೀಯ ಹೆಚ್ಚಳ: ಮೊದಲ ಸ್ಥಾನದಲ್ಲಿರುವ ಸಮಾಜವಾದಿ ಪಕ್ಷ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...