Homeಮುಖಪುಟಚುನಾವಣಾ ಬಾಂಡ್‌ ಹಗರಣದ ಕುರಿತು ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ

ಚುನಾವಣಾ ಬಾಂಡ್‌ ಹಗರಣದ ಕುರಿತು ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ

- Advertisement -
- Advertisement -

‘ಚುನಾವಣಾ ಬಾಂಡ್ ಹಗರಣ’ದ ಕುರಿತು ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿರುವ ನಿವೃತ್ತ ಅಧಿಕಾರಿಗಳ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸಿದೆ.

ಸಾಲ ಪರಿಹಾರ ಮತ್ತು ಎಲ್ಲಾ ಬೆಳೆಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆಯೊಂದಿಗೆ ಚುನಾವಣಾ ಬಾಂಡ್‌ಗಳನ್ನು ಉಲ್ಲೇಖಿಸಿದ ಸಂಯುಕ್ತ ಕಿಸಾನ್ ಮೋರ್ಚಾ, ಕಾರ್ಪೊರೇಟ್ ದಾನಿಗಳನ್ನು ಮೆಚ್ಚಿಸಲು ಮೂರು ಕೃಷಿ ಕಾನೂನುಗಳು, ನಾಲ್ಕು ಕಾರ್ಮಿಕ ಸಂಹಿತೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಖಾಸಗೀಕರಣದಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಹಗರಣದ ಬಗ್ಗೆ ‘ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆ ಮತ್ತು ಪ್ರಧಾನಿ ನರೇಂದ್ರ ಮೋದಿ, ಸಂಪುಟ ಸದಸ್ಯರು ಮತ್ತು ಬಿಜೆಪಿ ನಾಯಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಅಭಿಯಾನಕ್ಕೆ’ ಸಂಯುಕ್ತ ಕಿಸಾನ್ ಮೋರ್ಚಾ ರೈತರಿಗೆ ಆಗ್ರಹಿಸಿದೆ.

2014-2022ರಲ್ಲಿ 1,00,474 ರೈತರು ಮತ್ತು 3,12,214 ದಿನಗೂಲಿ ಕಾರ್ಮಿಕರು ಎಂದರೆ ಒಟ್ಟು 4,12,688 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಭರವಸೆಯ ಹೊರತಾಗಿಯೂ ಮೋದಿ ಸರ್ಕಾರ ರೈತರು ಮತ್ತು ರೈತ ಕಾರ್ಮಿಕರ ಮನೆಗಳಿಗೆ ಒಂದು ರೂಪಾಯಿ ಸಾಲ ಪರಿಹಾರವನ್ನು ನೀಡಲಿಲ್ಲ. ತೀವ್ರ ಕೃಷಿ ಬಿಕ್ಕಟ್ಟಿನ ಮಧ್ಯೆ ಪ್ರಧಾನಿಯ ದ್ವಂದ್ವ ನೀತಿಗಾಗಿ ಬಿಜೆಪಿಯನ್ನು ಶಿಕ್ಷಿಸಬೇಕಿದೆ. ರೈತರು ಮತ್ತು ಸಾಮಾನ್ಯ ಜನರು ಇದಕ್ಕೆ ತಕ್ಕ ಉತ್ತರವನ್ನು ಎಸ್‌ಕೆಎಂ ಮನವಿಯನ್ನು ಮಾಡಿಕೊಂಡಿದೆ.

ಚುನಾವಣಾ ಬಾಂಡ್ ದತ್ತಾಂಶವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು, ದೆಹಲಿ ಮದ್ಯ ನೀತಿ ಪ್ರಕರಣದ ಪ್ರಮುಖ ಆರೋಪಿ ಅರಬಿಂದೋ ಫಾರ್ಮಾದ ಶರತ್ ಚಂದ್ರ ರೆಡ್ಡಿಯಿಂದ ಬಿಜೆಪಿ 55 ಕೋಟಿ ಪಡೆದಿರುವುದು ಈ ಚುನಾವಣಾ ಅವಧಿಯಲ್ಲಿ ಬೆಳಕಿಗೆ ಬರುತ್ತಿಲ್ಲ ಎಂದು ಎಸ್‌ಕೆಎಂ ಹೇಳಿದೆ.

ಈ ಹಿಂದೆ ಬಿಜೆಪಿಗೆ ಹಣ ನೀಡದ ಕಾರ್ಪೊರೇಟ್ ಕಂಪನಿಗಳಿಂದ ಹಣ ಸುಲಿಗೆ ಮಾಡಲು ಇಡಿ, ಸಿಬಿಐ ಮತ್ತು ಇತರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ. ‘ಭ್ರಷ್ಟಾಚಾರ ರಹಿತ ಆಡಳಿತ’, ‘ಪ್ರತಿಪಕ್ಷ ಭ್ರಷ್ಟವಾಗಿದೆ’ ಎಂದು ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಹೇಳುತ್ತಿದೆ. ಚುನಾವಣಾ ಬಾಂಡ್ ಹಗರಣವು ಬಿಜೆಪಿಯನ್ನು ಅತ್ಯಂತ ಭ್ರಷ್ಟ ರಾಜಕೀಯ ಪಕ್ಷ ಮತ್ತು ಬಿಜೆಪಿ ಚುನಾವಣಾ ಬಾಂಡ್ ಹಗರಣದ ಮುಖ್ಯ ಫಲಾನುಭವಿ ಎಂದು ಬಹಿರಂಗಪಡಿಸಿದೆ ಎಂದು ಎಸ್‌ಕೆಎಂ ಹೇಳಿದೆ.

ಇದನ್ನು ಓದಿ: ಲೋಕಸಭೆ ಚುನಾವಣೆ: ರಾಜ್ಯದಲ್ಲಿ ‘ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿ’ ರಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಬಡವರೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ..’; ಪ್ರಧಾನಿ ಮೋದಿ...

0
'ದೇಶದ ಬಡವರು ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ. 'ಪ್ರತಿಪಕ್ಷಗಳ ಇಂಡಿಯಾ...