Homeಕರ್ನಾಟಕಇದು ಬದಲಾಗುತ್ತದೆಂಬ ವಿಶ್ವಾಸ ನನಗಿದೆ -ಸಸಿಕಾಂತ್ ಸೆಂಥಿಲ್ ಸಂದರ್ಶನ..

ಇದು ಬದಲಾಗುತ್ತದೆಂಬ ವಿಶ್ವಾಸ ನನಗಿದೆ -ಸಸಿಕಾಂತ್ ಸೆಂಥಿಲ್ ಸಂದರ್ಶನ..

- Advertisement -
- Advertisement -
ತಮ್ಮ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದನಂತರ ಸಸಿಕಾಂತ್ ಅವರು ಇನ್ನಷ್ಟು ಬಿಜಿಯಾಗಿದ್ದಾರೆ. ನಮ್ಮ ದೇಶದ ಪ್ರಜಾಪ್ರಭುತ್ವದ ಉಳಿವಿಗೆ ಹೋರಾಡುತ್ತಿರುವ ಅವರು ನಮ್ಮ ಪತ್ರಿಕೆಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಸಂದರ್ಶನ ನಡೆಸಿದವರು: ರಾಜಶೇಖರ್‌ ಅಕ್ಕಿ

ಪ್ರ – ರಾಜೀನಾಮೆ ನಿರ್ಧಾರದ ಬಗ್ಗೆ ಈಗ ಏನನ್ನಿಸುತ್ತಿದೆ? ಹಳೆಯ ನಿಲುವು ಸರಿಯಿತ್ತು ಎಂತಲೇ ಅನ್ನಿಸುತ್ತದೆಯಾ?

ಸಸಿಕಾಂತ್ – ಹೌದು, ಖಂಡಿತವಾಗಿಯೂ ಸರಿ ಅನ್ಸುತ್ತೆ. ಈಗ ನಾವು ನಮ್ಮ ದೇಶದ ಒಂದು ವಿಶಿಷ್ಟ ಸಮಯದಲ್ಲಿ ಹಾದು ಹೋಗುತ್ತಿದ್ದೇವೆ. ಹಾಗಾಗಿ ಇದರಲ್ಲಿ ನನ್ನ ಪಾತ್ರ ಏನು ಎಂದು ಯೋಚಿಸಿ, ಈ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಮಾಡುವ ಕೆಲಸವೇ ನನ್ನ ಅಜೆಂಡಾ ಎಂದು ತೀರ್ಮಾನಿಸಿದೆ. ನಿರ್ದಿಷ್ಟವಾಗಿ ಹೇಗೆ ಮಾಡುತ್ತೀನಿ, ಒಬ್ಬ ವ್ಯಕ್ತಿಯಾಗಿ ಏನು ಮಾಡಬಹುದು ಎನ್ನುವ ಪ್ರಶ್ನೆ ಇದ್ದರೂ, ಈ ದೇಶದ ಪರಿಕಲ್ಪನೆಯ ಬಗ್ಗೆ ತಿಳಿದುಕೊಂಡವರು ನನಗೆ ಬೆಂಬಲ ಸೂಚಿಸಿದ್ದಾರೆ. ಗ್ರಾಸ್‍ರೂಟ್ ಮಟ್ಟದಲ್ಲಿ ಕೆಲಸ ಮಾಡುವುದು ನನ್ನ ಸದ್ಯದ ಗುರಿಯಾಗಿದೆ. ಈ ವ್ಯವಸ್ಥೆಯ ವಿರುದ್ಧ ತಳಮಟ್ಟದಲ್ಲಿ ಕೆಲಸ ಮಾಡುವವರ ಜೊತೆಗೆ ಕೈಜೋಡಿಸುತ್ತೇನೆ. ಈ ಕೆಲಸವನ್ನು ಸರ್ವೀಸ್‍ನಲ್ಲಿ ಇದ್ದು ಮಾಡಲು ಆಗುತ್ತಿದ್ದಿಲ್ಲ. ಹಾಗಾಗಿ ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ.

ಪ್ರ – ರಾಜೀನಾಮೆಗೆ ನಿಮ್ಮ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು?

– ನನ್ನ ಕುಟುಂಬದವರೆಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಸರ್ವೀಸ್‍ಗೆ ಬರುವುದಕ್ಕಿಂತ ಮುಂಚೆಯೂ ನಾವೆಲ್ಲರೂ ಚಳವಳಿಯಲ್ಲಿ ಭಾಗಿಯಾಗುತ್ತಿದ್ದೇವೆ. ನನ್ನ ಪತ್ನಿ ಮತ್ತು ನಾನು ಕಾಲೇಜು ದಿನಗಳಿಂದ ಜೊತೆಗಿದ್ದೇವೆ. ಒಂದರ್ಥದಲ್ಲಿ ಅವಳೇ ನನ್ನನ್ನು ಕೆಲಸ ಬಿಡುವಂತೆ ಒತ್ತಾಯ ಮಾಡಿದಳು.

ಪ್ರ – ನಿಮ್ಮ ರೀತಿ ಆಲೋಚನೆ ಮಾಡುತ್ತಿರುವ ಐಎಎಸ್/ಐಪಿಎಸ್ ಅಧಿಕಾರಿಗಳು ಕೆಲವರಷ್ಟೇನಾ, ಬಹಳ ಜನ ಇದ್ದಾರಾ?

– ಬಹಳ ಜನ ಇದ್ದಾರೆ. ಏಕೆಂದರೆ ಸರ್ವೀಸ್‍ನಲ್ಲಿ ಇದ್ದವರು ನಮ್ಮ ಸಂವಿಧಾನದ ಮೇಲೆ ಆಣೆ ಮಾಡಿರುತ್ತೀವಿ ಹಾಗೂ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತಂದರೆ ಅದನ್ನು ಗಮನಿಸುವ ಮೊದಲಿಗರು ನಾವಾಗಿರುತ್ತೇವೆ. ಈ ಕಾರಣದಿಂದ ನಮ್ಮಲ್ಲಿ ಅನೇಕರಿಗೆ ಅಸಮಾಧಾನ ಇದ್ದದ್ದು ನನಗೆ ಕಂಡುಬಂದಿದೆ. ಸೇವಾನಿಯಮಗಳ ಕಾರಣದಿಂದ ಅವರುಗಳು ಬಹಿರಂಗವಾಗಿ ಮಾತನಾಡದಿದ್ದರೂ ಈಗ ಏನಾಗುತ್ತಿದೆ, ಇದು ಅತ್ಯಂತ ಗಂಭೀರ ಬೆಳವಣಿಗೆ ಎಂದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ.

ಪ್ರ – ರಾಜೀನಾಮೆ ನಂತರ ನಿಮ್ಮ ಕಾರ್ಯಕ್ಷೇತ್ರವನ್ನಾಗಿ ಕರ್ನಾಟಕವನ್ನೇ ಆರಿಸಿಕೊಂಡಂತಿದೆ. ಇದಕ್ಕೇನಾದರೂ ವಿಶೇಷ ಕಾರಣಗಳಿವೆಯಾ ಅಥವಾ ಕರ್ನಾಟಕ ಮಾತ್ರ ನಿಮ್ಮ ಕಾರ್ಯಕ್ಷೇತ್ರ ಅಲ್ಲವಾ?

– ಹಾಗೇನೂ ಇಲ್ಲ. ನಾನು ಭಾರತಾದ್ಯಂತ ಅಲೆದಾಡುತ್ತಿದ್ದೇನೆ. ನಾನು ಯಾವ ವಲಯದಲ್ಲಿ ಕೆಲಸ ಮಾಡಬೇಕು ಎನ್ನುವುದನ್ನು ನಿರ್ಧರಿಸಿದ್ದೇನೆ. ಹೆಚ್ಚಿನ ಎಕ್ಸಪೋಷರ್ ಇರದ ತಳಮಟ್ಟದಲ್ಲಿ ಕೆಲಸ ಮಾಡುವೆ. ಕರ್ನಾಟಕ ನನ್ನ ಹೋಮ್‍ಟೌನ್ ಆಗಿದೆ. ಹಾಗಾಗಿ ಇಲ್ಲಿ ಹೆಚ್ಚು ಜನರನ್ನು ಭೇಟಿಯಾಗುತ್ತಿದ್ದೇನೆ.

ಪ್ರ – ‘ಸಾರ್ವಜನಿಕ ಅಭಿಪ್ರಾಯ – ಪಬ್ಲಿಕ್ ಒಪೀನಿಯನ್’ ಮೂಡಿಸಲು ಗಮನ ಕೊಡಬೇಕು ಎಂದು ನೀವು ಪದೇ ಪದೇ ಹೇಳುತ್ತಿದ್ದೀರಿ. ಇದರ ಅರ್ಥವೇನು?

– ಸರಳ ವಿಷಯ ಹೇಳುವೆ. ಏನೇ ಹೇಳಿದರೂ ಇದು ಒಂದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರ. ಇವರ ಐಡಿಯಾಲಜಿ ನಮ್ಮ ಸಂವಿಧಾನಕ್ಕೆ ವಿರುದ್ಧವಾಗಿದೆ. ಹಾಗೂ ನಮ್ಮ ದೇಶದ ಮೂಲ ಪರಿಕಲ್ಪನೆಗೆ ವಿರುದ್ಧವಾಗಿದೆ. ಭಾರತೀಯತೆಗೆ ವಿರುದ್ಧವಾಗಿದೆ. ಇದರಿಂದ ಮುಕ್ತಿ ಪಡೆಯಬೇಕೆಂದರೆ ಈ ಐಡಿಯಾಲಜಿಯವರು ಆಡಳಿತದಲ್ಲಿ ಇರಬಾರದು. ಅದನ್ನು ನಾವು ಪ್ರಜಾಸತ್ತಾತ್ಮಕ ರೀತಿಯಲ್ಲೇ ಮಾಡಬೇಕಿದೆ. ಅಂದರೆ ಚುನಾವಣಾ ರಾಜಕೀಯ. ಅವರನ್ನು ಗೆಲ್ಲಿಸಿದ ಜನರಿಂದಲೇ ಸೋಲಿಸಬೇಕು. ಅದಕ್ಕಿರುವ ಬಂಡವಾಳ? ಈ ಸರಕಾರದ ಮೇಲಿರುವ ಸಾರ್ವಜನಿಕ ಅಭಿಪ್ರಾಯ. 2014 ಮತ್ತು 2019ರಲ್ಲಿ ಇವರಿಂದ ಏನೋ ಒಳ್ಳೇದಾಗುತ್ತೆ ಅಥವಾ ಇತರರಿಂದ ಒಳ್ಳೇದಾಗಲ್ಲ ಎನ್ನುವ ಅಭಿಪ್ರಾಯವನ್ನು ಮೂಡಿಸಲಾಯಿತು. ಇವರಿಂದ ಒಳ್ಳೇದಾಗುತ್ತೆ ಮತ್ತು ಇತರರಿಂದ ಬೇರೇನೋ ಕೆಟ್ಟದಾಗುತ್ತೆ ಎನ್ನುವ ಭಯವನ್ನು ಮೂಡಿಸುವುದೂ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಕೆಲಸವೇ. ಅವರ ಪ್ರೊಪಗಾಂಡಾದಿಂದ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸಲಾಗಿದೆ. 1947ರಿಂದ 2014ರ ತನಕ ಈ ಪ್ರೊಪಗಾಂಡಾಕ್ಕೆ ಈ ದೇಶ ಪ್ರತಿರೋಧ ತೋರಿತು. ಒಂದರ್ಥದಲ್ಲಿ 2011ರಲ್ಲಿ ಮೋದಿ ಶಾ ಮುಂಚೂಣಿಗೆ ಬಂದನಂತರ ಈ ಪ್ರೊಪಗಾಂಡ ಶುರುವಾಯಿತು ಹಾಗೂ ಈ ಪ್ರೊಪಗಾಂಡಾದ ಬಲೆಗೆ ಅನೇಕರು ಬಿದ್ದಿದ್ದಾರೆ. ಹಾಗಾಗಿ ಸಾರ್ವಜನಿಕ ಅಭಿಪ್ರಾಯದ ಆಧಾರದ ಮೇಲೆಯೇ ಚುನಾವಣಾ ರಾಜಕೀಯ ನಡೆಯಲಿದೆ.

ಈಗ ಜನಕ್ಕೆ ಅರಿವು ಮೂಡಿಸಬೇಕಿದೆ. ಈ ಪ್ರೊಪಗಾಂಡಾದ ಹಿಂದಿರುವ ಷಡ್ಯಂತ್ರವನ್ನು ಬಹಿರಂಗಪಡಿಸಬೇಕಿದೆ. ಉದಾಹರಣೆಗೆ ನೋಟು ರದ್ದತಿ ತೆಗೆದುಕೊಳ್ಳಿ. ಜಾರಿಗೆ ತಂದ ಮೊದಲ ದಿನಗಳಲ್ಲಿ ಬಹುತೇಕರು ಆ ಕ್ರಮವನ್ನು ಬೆಂಬಲಿಸಿದರು. ಆದರೆ ಈಗ ಸತ್ಯ ಹೊರಬಿದ್ದಿದೆ. ಅದರಿಂದ ಅವರು ಹೇಳಿಕೊಂಡ ಯಾವ ಲಾಭಗಳೂ ಆಗಲಿಲ್ಲ. ಆದರೆ ಅದೇ ಬೆಂಬಲ ಪೌರತ್ವ ತಿದ್ದುಪಡಿ ಕಾಯ್ದೆಯ ವಿಷಯದಲ್ಲಿ ಕಾಣುತ್ತಿಲ್ಲ. ಅವರುಗಳು ಸುಲಭವಾಗಿ ಈ ಕ್ರಮವನ್ನೂ ಒಂದು ಒಳ್ಳೆಯ ಕ್ರಮ, ನುಸುಳುಕೋರರನ್ನು ಹೊರದಬ್ಬಲು ಮಾಡುತ್ತಿರುವ ಕ್ರಮ ಎಂದು ಮನವರಿಕೆ ಮಾಡಬೇಕಾಗಿತ್ತು. ಆದರೆ ಜನ ಸುಲಭವಾಗಿ ನಂಬುತ್ತಿಲ್ಲ. ಆ ಕಾರಣಕ್ಕಾಗಿಯೆ ಇಂದು ಆದಂತಹ ಬೃಹತ್ ಪ್ರತಿಭಟನೆಗಳನ್ನು ನೋಡುತ್ತಿದ್ದೇವೆ. ಸತ್ಯ ಎಲ್ಲರಿಗೂ ತಿಳಿಯುತ್ತಿರುವುದರಿಂದ ಈ ಪ್ರತಿಕ್ರಿಯೆ ಕಾಣಿಸುತ್ತಿದೆ. ಹಾಗಾಗಿ ಶಿಕ್ಷಿತ ಜನರ ಜವಾಬ್ದಾರಿ ಏನೆಂದರೆ, ಇಂತಹ ಪ್ರೊಪಗಾಂಡಾಗಳ ಹಿಂದೆ ಇರುವ ವಾಸ್ತವವನ್ನು ಎಲ್ಲರೆದುರಿಗೆ ಇಡುವುದು. ಹಾಗಾಗಿ ಇದೊಂದು ಚಳವಳಿಯಾಗಿ ರೂಪುಗೊಂಡಿದೆ.
ಇಂದು ಮುಖ್ಯವಾಹಿನಿ ಮಾಧ್ಯಮ ನಮ್ಮ ಕೈಯಲ್ಲಿ ಇಲ್ಲ; ಹಿಂದೆ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಕೆಲಸ ಅತ್ಯಂತ ಬದ್ಧತೆಯುಳ್ಳ ಪತ್ರಕರ್ತರಿಂದ ಆಗುತ್ತಿತ್ತು. ಈಗ ಆ ಕೆಲಸ ಜನರೇ ಮಾಡಬೇಕಿದೆ.

ಪ್ರ- ತಮಿಳುನಾಡು ಮಿಕ್ಕ ರಾಜ್ಯಗಳಿಗಿಂತ ಭಿನ್ನವಾಗಿರಲು ಕಾರಣಗಳೇನು?

– ತಮಿಳುನಾಡಿಗೆ ಒಂದು ವಿಭಿನ್ನ ಇತಿಹಾಸವಿದೆ. ಅದನ್ನು 60, 70 ಮತ್ತು 80ರ ದಶಕದಲ್ಲಿ ಒಂದು ಅತ್ಯಂತ ಗಟ್ಟಿಯಾದ ಸಾಮಾಜಿಕ ಚಳವಳಿಯು ಮುನ್ನಡೆಸಿತ್ತು. ಅದನ್ನು ಸೆಲ್ಫ್ ರೆಸ್ಪೆಕ್ಟ್ ಮೂವ್‍ಮೆಂಟ್. (ಆತ್ಮಗೌರವದ ಚಳವಳಿ) ಎಂದು ಕರೆಯಲಾಗಿತ್ತು. ಅದನ್ನು ಪ್ರಾರಂಭಿಸಿದವರು ಪೆರಿಯಾರ್. ಆಗ ವಿಚಾರವಾದಿ ಚಿಂತನೆ ಮುಂಚೂಣಿಗೆ ಬಂತು. ತಮಿಳುನಾಡಿನ ಜನರು ಈ ಪುರೋಹಿತಶಾಹಿ ಷಡ್ಯಂತ್ರವನ್ನು ತಿರಸ್ಕರಿಸಿದರು. ಕರ್ನಾಟಕದಲ್ಲಿ ನಾವು ಒಳ್ಳೆಯ ಜನರು. ಆದರೆ ಸಂಪ್ರದಾಯಸ್ಥ ಗುಣ ಇನ್ನೂ ಇದೆ. ಹೌದು ತಮಿಳುನಾಡಿನಲ್ಲಿ ಹೀರೋ ವರ್ಷಿಪ್ ಇದೆ. ಆದರೆ ಅವರನ್ನೂ ಕಾನೂನಾತ್ಮಕ ಚೌಕಟ್ಟಿನಲ್ಲಿಯೇ ನೋಡುತ್ತಾರೆಯೇ ಹೊರತು ಅವರ ಜಾತಿ ಅಥವಾ ಮತದ ಆಧಾರದ ಮೇಲೆ ಅಲ್ಲ.

ಕರ್ನಾಟಕದಲ್ಲಿಯೂ ಇನ್ನೊಂದು ವಿಚಾರವಾದಿ ಆಂದೋಲನ ಹುಟ್ಟುಹಾಕಬೇಕಿದೆ. ಬಸವಣ್ಣ ಅತಿ ದೊಡ್ಡ ವಿಚಾರವಾದಿ. ಈಗ ಇನ್ನೊಂದು ಬೇಕಿದೆ.

ಪ್ರ- ಎನ್‍ಆರ್‍ಸಿ-ಸಿಎಎ ವಿಚಾರದಲ್ಲಿ ಅಸ್ಸಾಂನ ಅನುಭವ ಏನು ಹೇಳುತ್ತದೆ?

– ಅಸ್ಸಾಮಿನಲ್ಲಿ ಆದ ಪೌರತ್ವ ನೋಂದಣಿಯಲ್ಲಿ 19 ಲಕ್ಷ ಜನರನ್ನು ಹೊರಗಿನಿಂದ ಬಂದವರು ಎಂದು ಹೇಳಲಾಗಿದೆ. ಅದರಲ್ಲಿ ಸುಮಾರು ಐದು ಲಕ್ಷ ಮುಸ್ಲಿಮರಿದ್ದರೆ ಮಿಕ್ಕವರು ಮುಸ್ಲಿಮೇತರರು. ಅವರೂ ಸಹ ಅಧಿಕಾರಿಗಳ ಹತ್ತಿರ ತಾವು ಭಾರತೀಯ ನಾಗರಿಕರು ಎಂದು ತೋರಿಸುವ ದಾಖಲೆಗಳನ್ನು, ಅಫಿಡವಿಟ್‍ಗಳನ್ನು ಸಲ್ಲಿಸಿದ್ದಾರೆ. ಈ ಕಾನೂನು ಬಂದನಂತರ ಅವರೀಗ ತಾವು ಭಾರತೀಯರಲ್ಲ; ಧಾರ್ಮಿಕ ಕಿರುಕುಳದಿಂದ ಈ ದೇಶಕ್ಕೆ ಬಂದವರು ಎಂದು ಹೇಳಿ, ಆ ಪ್ರಕಾರ ಅಫಿಡವಿಟ್ ಮಾಡಿಸಬೇಕಾಗಿದೆ. ಈ ಮುಂಚೆ ಸುಳ್ಳು ಹೇಳಿದರು ಎಂದು ಅವರ ಮೇಲೆ ಫೋರ್ಜರಿ ಪ್ರಕರಣ ಹಾಕಬಹುದು. ಹಾಗಾಗಿ ಈ ಕಾನೂನನ್ನು ಯಾರಿಗೆ ಮಾಡಿದ್ದಾರೆ, ಏತಕ್ಕಾಗಿ ಮಾಡಿದ್ದಾರೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ. ಆದರೆ ಒಂದು ಸಮುದಾಯಕ್ಕೆ ಬೆದರಿಕೆಯ ಸಂದೇಶವನ್ನಂತೂ ಕಳಿಸುತ್ತದೆ.

ಪ್ರ – ಇಂದಿನ ರಾಜಕೀಯ ನೋಡಿದರೆ ನಿಮಗೆ ಹೋಪ್ (ಭರವಸೆ) ಕಾಣಿಸುತ್ತಿದೆಯಾ?

– ಖಂಡಿತವಾಗಿಯೂ ಕಾಣುತ್ತಿದೆ. ನಾವು (ನಮ್ಮ ಸಮಯದ) ಇತಿಹಾಸದ ಅತ್ಯಂತ ಇಂಟರೆಸ್ಟಿಂಗ್ ಸಮಯದಲ್ಲಿದ್ದೇವೆ. ಜನರು ಹೇಳುತ್ತಾರೆ ನಮ್ಮ ದೇಶದಲ್ಲಿ ಗೊಂದಲ/ಅವ್ಯವಸ್ಥೆ (chaos) ಇದೆ ಎಂದು ಹೇಳುತ್ತಾರೆ.

ಈ chaos ನಮ್ಮನ್ನು ಉಳಿಸುತ್ತೆ ಎಂದು ನಾನು ಹೇಳಬಯಸುತ್ತೇನೆ. ನಮ್ಮ chaos ನಲ್ಲೂ ಒಂದು ರೀತಿಯ ಸೌಂದರ್ಯವಿದೆ, ಒಂದು ರೀತಿಯ ವ್ಯವಸ್ಥೆ ಇದೆ. ಇರಲಿ, ನಾನು ಏಕೆ ಆಶಾದಾಯಕವಾಗಿದ್ದೇನೆ ಎಂದರೆ, ಈ ಸರ್ವಾಧಿಕಾರಿ ವ್ಯವಸ್ಥೆ; ಇತಿಹಾಸವನ್ನು ನೋಡಿದರೆ ಗೊತ್ತಾಗುತ್ತೆ. ಇಂತಹ ಸರ್ವಾಧಿಕಾರಿ ವ್ಯವಸ್ಥೆ ನಮ್ಮಂತಹ ವಿವಿಧತೆ, ಭಿನ್ನತೆ ಇರುವಂತಹ ಸಮಾಜದಲ್ಲಿ ಒಂದು ದಶಕಕ್ಕಿಂತ ಹೆಚ್ಚು ನಿಲ್ಲಲು ಸಾಧ್ಯವಾಗುವುದಿಲ್ಲ ಹಾಗೂ ಕಳೆದ ಐದು ವರ್ಷಗಳಲ್ಲಿ ಅಧಿಕಾರದಲ್ಲಿರುವ ಇವರು ತಮ್ಮನ್ನು ತಾವು ಮೂರ್ಖರಿಂದ ಸುತ್ತುವರೆಸಿಕೊಂಡಿದ್ದಾರೆ. ಇವರಿಗೆ ಜಟಿಲ ವಿಷಯಗಳನ್ನು ನಿಭಾಯಿಸಲು ಆಗುವುದಿಲ್ಲ; ಉದಾಹರಣೆಗೆ ಆರ್ಥಿಕತೆ.

ಇವರಿಗೆ ತಿಳಿಯುವುದೂ ಇಲ್ಲ ಹಾಗೂ ತಮ್ಮ ದರ್ಪದ ಕಾರಣದಿಂದ ಬೇರೆಯವರ ಮಾತನ್ನು ಕೇಳಲು ತಯ್ಯಾರಿಲ್ಲ. ಹಾಗಾಗಿ ಕುಸಿದ ಆರ್ಥಿಕತೆಯ ಪರಿಣಾಮ ಎಲ್ಲರಿಗೂ ತಟ್ಟಲಿದೆ. ಅದು ಧರ್ಮ ನೋಡುವುದಿಲ್ಲ. ಹಾಗಾಗಿ ಇವರ ಜನಪ್ರಿಯತೆ ಕುಸಿಯುವುದು ಖಚಿತವಾಗಿದೆ.

(ಸಸಿಕಾಂತ್ ಅವರೊಂದಿಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ಚರ್ಚಿಸುವುದಿದ್ದರೂ, ಸಮಯದ ಅಭಾವದಿಂದ ಆಗಲಿಲ್ಲ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...