Homeಕರ್ನಾಟಕಸೂಲಿಬೆಲೆ ಹೇಳುವುದು ನಿಮಗೆ ಸುಳ್ಳಾಗಿರಬಹುದು, ನಮಗಲ್ಲ: ರಂಗಾಯಣ ನಿರ್ದೇಶಕ

ಸೂಲಿಬೆಲೆ ಹೇಳುವುದು ನಿಮಗೆ ಸುಳ್ಳಾಗಿರಬಹುದು, ನಮಗಲ್ಲ: ರಂಗಾಯಣ ನಿರ್ದೇಶಕ

"ಬಹುತ್ವ ನಿಮ್ಮ ಸಿದ್ಧಾಂತ, ಅದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ; ನಮಗಲ್ಲ" ಎನ್ನುವ ಕಾರ್ಯಪ್ಪ ಅವರಿಗೆ ಸಾಂವಿಧಾನಿಕ ಆಶಯಗಳ ಬಗ್ಗೆ ನಂಬಿಕೆ ಇದೆಯೇ?

- Advertisement -
- Advertisement -

“ಚಕ್ರವರ್ತಿ ಸೂಲಿಬೆಲೆ ಅವರು ಹೇಳುವುದು ನಿಮಗೆ ಸುಳ್ಳಾಗಿರಬಹುದು, ಆದರೆ ನಮಗಲ್ಲ” ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.

ಡಿ.10ರಿಂದ ಡಿ.19ರವರೆಗೆ ನಡೆಯಲಿರುವ ಪ್ರತಿಷ್ಟಿತ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದ ವಿಚಾರ ಸಂಕಿರಣಕ್ಕೆ ಬಿಜೆಪಿ ಪ್ರಚಾರಕ ಚಕ್ರವರ್ತಿ ಸೂಲಿಬೆಲೆಯವರನ್ನು ಕರೆಸಲಾಗುತ್ತಿದೆ. ಈ ಕುರಿತಂತೆ ಪತ್ರಕರ್ತರು ಪ್ರಶ್ನಿಸಿದಾಗ, ತಮ್ಮ ನಿಲುವನ್ನು ಕಾರ್ಯಪ್ಪ ಅವರು ಸಮರ್ಥಿಸಿಕೊಂಡಿದ್ದಾರೆ. ಚಕ್ರವರ್ತಿ ಸೂಲಿಬೆಲೆಯವರಿಗೆ ‘ಸಮಾಜ ಸೇವಕ’ ಎಂದು ವಿಶೇಷಣವನ್ನು ನೀಡಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಉಡಾಫೆಯಾಗಿ ಕಾರ್ಯಪ್ಪ ಅವರು ಉತ್ತರಿಸಿದ್ದಾರೆ.

ಅಡ್ಡಂಡ ಸಿ.ಕಾರ್ಯಪ್ಪ ಅವರು ಮೈಸೂರು ರಂಗಾಯಣದ ನಿರ್ದೇಶಕರಾದ ಬಳಿಕ ಒಂದಿಲ್ಲೊಂದು ವಿವಾದಗಳಲ್ಲಿ ರಂಗಾಯಣ ಸಿಲುಕುತ್ತಲೇ ಇದ್ದು, ಪ್ರಸಕ್ತ ಬಹುರೂಪಿ ಕಾರ್ಯಕ್ರಮವೂ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬಲಪಂಥೀಯ ವಿಚಾರಧಾರೆಯ ಅಡ್ಡಂಡ ಸಿ.ಕಾರ್ಯಪ್ಪ ಅವರು ಅದೇ ವಿಚಾರಧಾರೆಯುಳ್ಳವರನ್ನು ಹೆಚ್ಚಿನ ಸಂಖ್ಯೆಯಲ್ಲಿ ರಂಗಾಯಣಕ್ಕೆ ಕರೆಸಿಕೊಳ್ಳುವುದು ಮತ್ತು ಹೆಚ್ಚಿನ ಅವಕಾಶ ನೀಡುವುದು ಈಗ ಗುಟ್ಟಿನ ವಿಷಯವೇನಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾ, ಸುಳ್ಳು ಸುದ್ದಿಗಳನ್ನು ಹರಡುತ್ತಾ, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಒಳಗಾಗಿರುವ ಚಕ್ರವರ್ತಿ ಸೂಲಿಬೆಲೆ ಅಂಥವರನ್ನು ಬಹುರೂಪಿ ನಾಟಕೋತ್ಸವ ವಿಚಾರಸಂಕಿರಣದ ಸಮಾರೋಪ ಭಾಷಣಕ್ಕೆ ಕರೆಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.


ಇದನ್ನೂ ಓದಿರಿ: ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರು ರಾಜ್ಯದ ‘ಅಪೌಷ್ಟಿಕತೆ’ ತಿಳಿದಿಲ್ಲವೇ? ಬಸವಣ್ಣನವರ ವಚನ ಓದಿಲ್ಲವೇ?


ಡಿಸೆಂಬರ್‌ 10ರಿಂದ ಡಿ.19ರವರೆಗೆ ಬಹುರೂಪಿ ನಡೆಯಲಿದ್ದು, ಉದ್ಘಾಟನಾ ಸಮಾರಂಭ ಡಿಸೆಂಬರ್‌‌ 11ರಂದು ಜರುಗಲಿದೆ. ಡಿಸೆಂಬರ್‌ 12 ಮತ್ತು 13ರಂದು ಬಹುರೂಪಿ ವಿಚಾರಸಂಕಿರಣ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಡಿ.13ರಂದು ನಡೆಯುವ ಭಾಷಣ ಸ್ಪರ್ಧೆಯ ಬಳಿಕ, ಅಂದು ಸಂಜೆ 4 ಗಂಟೆಗೆ ಬಿಜೆಪಿ ಪ್ರಚಾರಕ ಚಕ್ರವರ್ತಿ ಸೂಲಿಬೆಲೆಯವರು ವಿಚಾರಸಂಕಿರಣದ ಸಮಾರೋಪ ಭಾಷಣ ಮಾಡಲಿದ್ದಾರೆ.

“ಚಕ್ರವರ್ತಿ ಸೂಲಿಬೆಲೆಯವರು ಸಮಾರೋಪ ಭಾಷಣಕ್ಕೆ ಸೂಕ್ತವ್ಯಕ್ತಿ ಎನಿಸಿದ್ದರಿಂದ ನಾವು ಕರೆದಿದ್ದೇವೆ. ಚಕ್ರವರ್ತಿ ಸೂಲಿಬೆಲೆಯವರ ವಿಚಾರವನ್ನು ಬಿಟ್ಟುಬಿಡಿ. ಅವರನ್ನು ಕರೆದಿದ್ದೇವೆ. ಬರ್ತಾರೆ, ಸಮಾರೋಪ ಭಾಷಣ ಮಾಡ್ತಾರೆ. ಆ ಭಾಷಣದಲ್ಲಿ ದೋಷಗಳನ್ನು ಕಂಡು ಹಿಡಿದು ಅದನ್ನು ಪ್ರಕಟಿಸಿ, ಅದು ನಿಮ್ಮ ಸ್ವಾತಂತ್ರ್ಯ” ಎಂದು ಪತ್ರತರ್ಕರಿಗೆ ಬೋಧನೆ ಮಾಡಿದ್ದಾರೆ.

“ಜನರಿಗೆ ಇವರಿಂದ ಏನು ಸಂದೇಶ ಕೊಡುತ್ತೀರಿ?” ಎಂದು ಕೇಳಿದರೆ, “ಯುವಕರಿಗೆ ಸಂದೇಶವನ್ನು ಕೊಡುತ್ತೀವಿ” ಎಂದಿದ್ದಾರೆ. “ನಾವು ಚರ್ಚೆ ಮಾಡಿ ಒಂದಿಷ್ಟು ಜನರನ್ನು ಕರೆದಿದ್ದೇವೆ” ಎಂದು ಕಾರ್ಯಪ್ಪ ಪ್ರತಿಕ್ರಿಯೆ ನೀಡುತ್ತಾರೆ. “ಚಕ್ರವರ್ತಿ ಸೂಲಿಬೆಲೆಯವರು ರೈತರ ಬಗ್ಗೆ, ರಂಗಭೂಮಿ ಬಗ್ಗೆ ಯಾವತ್ತೂ ಮಾತನಾಡಲ್ಲ. ಯಾರೋ ಒಬ್ಬರನ್ನು ಒಲೈಸುತ್ತಾರೆ” ಎಂದು ಪತ್ರಕರ್ತರು ಕೇಳಿದರೆ, “ಮಾಧ್ಯಮದ ಕೆಲವರಿಗೆ ಹಾಗೆ ಅನ್ನಿಸಿರಬಹುದು, ಎಲ್ಲರಿಗೂ ಅಲ್ಲ” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.


ಇದನ್ನೂ ಓದಿರಿ: ಮಾಂಸಾಹಾರದ ಮೇಲಿನ ಕೀಳರಿಮೆ ತೊಲಗಬೇಕಿದೆ: ಚಿತ್ರಸಾಹಿತಿ ಕವಿರಾಜ್‌ ಬರಹಕ್ಕೆ ಮಿಡಿದ ಕನ್ನಡಿಗರು


ಹೆಚ್ಚಿನ ವಿವರಗಳಿಗಾಗಿ ಅಡ್ಡಂಡ ಕಾರ್ಯಪ್ಪ ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿದಾಗಲೂ ಹೀಗೆಯೇ ಉಡಾಫೆ ಉತ್ತರಗಳನ್ನೇ ನೀಡಿದರು. “ಚಕ್ರವರ್ತಿ ಸೂಲಿಬೆಲೆಯವರು ಸುಳ್ಳುಗಳನ್ನು ಹೇಳುತ್ತಾ ಬಂದಿದ್ದಾರೆ. ಅವರನ್ನು ಕರೆಸುವುದು ಎಷ್ಟು ಸರಿ? ಸಂಘಪರಿವಾರದ ವಿಚಾರಧಾರೆಗಳ ವ್ಯಕ್ತಿಗಳಾದರೂ ಎಲ್ಲ ಜನವರ್ಗವನ್ನು ಗೌರವಿಸುವ ಬಲಪಂಥೀಯರನ್ನು ಕರೆಸಬಹುದಲ್ಲ?” ಎಂದು ಕೇಳಿದೆವು. ನಮ್ಮ ಮಾಧ್ಯಮದ ಕುರಿತೂ ಲಘುವಾಗಿ ಮಾತನಾಡುತ್ತಲೇ ಉತ್ತರಿಸಿದ ಅವರು, “ನಿಮಗೆ ಅವರು ಸುಳ್ಳು ಹೇಳಿದ್ದಾರೆಂದು ಅನಿಸಬಹುದು. ಆದರೆ ನಮಗೆ ಅವರು ಸತ್ಯಗಳನ್ನು ಹೇಳುತ್ತಿದ್ದಾರೆ ಅನಿಸುತ್ತದೆ. ಅವರನ್ನು ಕಂಡರೆ ನಿಮಗೆ ಆಗಲ್ಲ, ನಮಗೆ ಅವರನ್ನು ಕಂಡರೆ ಆಗುತ್ತದೆ” ಎಂದರು.

“ಬಹುರೂಪಿಯು ಬಹುತ್ವವನ್ನು ಪ್ರತಿನಿಧಿಸುವ ಒಂದು ಕಾರ್ಯಕ್ರಮ. ಬಹುತ್ವದ ಬಗ್ಗೆ ನಂಬಿಕೆ ಇರದವರನ್ನು ವೇದಿಕೆಗೆ ಕರೆಸುವುದು ಎಷ್ಟು ಸರಿ?” ಎಂದು ಕೇಳಿದರೆ, “ಈ ಸಿದ್ಧಾಂತವನ್ನೆಲ್ಲ ನಿಮಗೆ ಇಟ್ಟುಕೊಳ್ಳಿ. ನಮಗಲ್ಲ. ಇನ್ನೊಬ್ಬರನ್ನು ಓಲೈಸಲು ಆಗಲ್ಲ. ಸೂಲಿಬೆಲೆ ನಿಮಗೆ ಸುಳ್ಳುಗಾರರಾಗಿರಬಹುದು. ನಮಗೆ ಸುಳ್ಳುಗಾರನಲ್ಲ. ಒಂದು ವರ್ಷ ಅಧಿಕಾರದಲ್ಲಿರುತ್ತೇನೆ, ಏನು ಬರೆದುಕೊಳ್ಳುತ್ತೀರೋ ಬರೆದುಕೊಳ್ಳಿ. ಯಾವುದಕ್ಕೂ ಧೃತಿಗೆಡುವುದಿಲ್ಲ” ಎಂದ ಅವರು ಬಹುತ್ವದ ವಿಷಯವನ್ನೇ ನಿರಾಕರಿಸಿದರು.

“ಸ್ವತಃ ಚಕ್ರವರ್ತಿ ಸೂಲಿಬೆಲೆಯವರೇ ತಾವು ಹೇಳಿರುವ ಮಾತುಗಳನ್ನು ಸತ್ಯವೆಂದು ಸಾಬೀತು ಮಾಡಲು ಸಾಧ್ಯವಾಗದಿರುವಾಗ, ನೀವು ಹೇಗೆ ಅವರು ಹೇಳುತ್ತಿರುವುದು ಸತ್ಯ ಎಂದು ಸಾಬೀತು ಮಾಡುತ್ತೀರಿ?” ಎಂದು ಕೇಳಿದೆವು. “ನಾನು ಅಷ್ಟು ಆಳಕ್ಕೆ ಇಳಿದಿಲ್ಲರ್‍ರೀ, ನೀವು ಆಳಕ್ಕೆ ಇಳಿದು ಏಕಮುಖ ವಿಚಾರಗಳನ್ನು ಬಿತ್ತುವ ಜನ್ಮದಲ್ಲಿ ಹುಟ್ಟಿದ್ದೀರಿ, ವಿವಾದ ಮಾಡಿಕೊಳ್ಳಿ” ಎಂದು ಹೇಳುತ್ತಾ ಮಾತುಮುಗಿಸಿದರು.

ಎಲ್ಲ ಜನವರ್ಗವನ್ನು ಕಟ್ಟು ನಿಟ್ಟಿನಲ್ಲಿ ರಂಗಾಯಣ ಮಾಡಿರುವ ಕೆಲಸಕ್ಕೆ ಅದರದ್ದೇ ಆದ ತೂಕವಿದೆ. ಬಿ.ವಿ.ಕಾರಂತರಂತಹ ರಂಗಭೂಮಿ ಭೀಷ್ಮರು ಕಟ್ಟಿದ ರಂಗಾಯಣದಲ್ಲಿ ಹಲವು ಮಹನೀಯರು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅರ್ಥಪೂರ್ಣ ಪ್ರಯೋಗಗಳನ್ನು ರಂಗಾಯಣ ಮಾಡಿದೆ. ಆದರೆ ಮಹಾನ್‌ ಇತಿಹಾಸವನ್ನು ಹೊಂದಿರುವ ರಂಗಾಯಣದ ಚುಕ್ಕಾಣಿ ಹಿಡಿದಿರುವ ಕಾರ್ಯಪ್ಪ ಅವರು ಆಡುವ ಮಾತುಗಳು ಆತಂಕವನ್ನು ಹುಟ್ಟಿಸುತ್ತವೆ. “ಬಹುತ್ವ ನಿಮ್ಮ ಸಿದ್ಧಾಂತ, ಅದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ; ನಮಗಲ್ಲ” ಎನ್ನುವ ಕಾರ್ಯಪ್ಪ ಅವರಿಗೆ ಸಾಂವಿಧಾನಿಕ ಆಶಯಗಳ ಬಗ್ಗೆ ನಂಬಿಕೆ ಇದೆಯೇ? ಬಹುತ್ವ ಸಂವಿಧಾನದ ಸಿದ್ಧಾಂತವೆಂದು ಅವರಿಗೆ ತಿಳಿದಿಲ್ಲವೇ? ಜನರ ತೆರಿಗೆ ಹಣದಲ್ಲಿ ನಡೆಯುವ ರಂಗಾಯಣದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ಮಾತನಾಡಬಹುದೇ?


ಇದನ್ನೂ ಓದಿರಿ: ಹೋರಾಟಗಾರ್ತಿ ‘ಸುಧಾ ಭಾರದ್ವಾಜ್‌’ ಅವರಿಗೆ ಜಾಮೀನು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹುಚ್ಚರಂತೆ ಪ್ರಶ್ನೆ ಮಾಡುತ್ತಿರುವ ಈ ಲೇಖನವನ್ನು ಓದುತಿದ್ದರೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತಿದೆ, ತಲೆ ಬುಡ ವಿಲದಂತೆ ಹೀಗೆ ಏನೇನೋ ಬರೆದರೆ ಜನರು ಇದನ್ನು ಓದಿ ಒಪ್ಪಿಕೊಳುತಾರೆ ಅಂದುಕೊಂಡಿದೀರಾ? ರಾಷ್ಟ್ರದ ಬಗ್ಗೆ ಪ್ರಚಾರ ಮಾಡುವ ಮನುಷ್ಯನನ್ನು ಮೋದಿಯ ಬಗ್ಗೆ 30-40 ಭಾಷಣ ಮಾಡಿದಕ್ಕೆ ಬಿಜೆಪಿ ಪ್ರಚಾರಕ ಎಂದು ಒತ್ತಿ ಒತ್ತಿ ಹೇಳಿದರೆ ಓದುವ ಜನ ನಗುತಾರೆ ಹೊರತು ಇದನ್ನು ಒಪ್ಪಿಕೊಳುವುದಿಲ್ಲ, ವೆಬ್ಸೈಟ್ ನಲ್ಲಿ ಕುಳಿತುಕೊಂಡು ಯಾವದ್ಯಾವುದೋ ವಿಚಾರಗಳ್ಳನ್ನ ಸಂಗ್ರಹಿಸಿ ವೆಬ್ಸೈಟ್ ನಲ್ಲಿ ಬಿಟ್ಟು ಸುಲಭವಾಗಿ ಕುಳಿತಲ್ಲಿಯೇ ದುಡ್ಡು ಮಾಡಿದಷ್ಟು ಸುಲಭವಾಲ್ಲ ಸಾವಿರಾರು ಜನರು ಒಪ್ಪುವಂತೆ ಭಾಷಣ ಮಾಡುವುದು ಅದನ್ನು ಮೊದಲು ತಿಳಿದುಕೊಳ್ಳಿ…..

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...