Homeಮುಖಪುಟಕೇಸರೀಕರಣಗೊಂಡ ವಂದೇ ಭಾರತ್‌ ರೈಲು

ಕೇಸರೀಕರಣಗೊಂಡ ವಂದೇ ಭಾರತ್‌ ರೈಲು

- Advertisement -
- Advertisement -

‘ಕೇಸರೀಕರಣ’ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ವ್ಯಾಪಕವಾಗಿ ಕೇಳಿ ಬಂದ ಆರೋಪ. ಶಿಕ್ಷಣ ಸಂಸ್ಥೆಗಳು, ಪಠ್ಯ ಪುಸ್ತಕಗಳು, ಸಾರಿಗೆ ಸಂಸ್ಥೆಗಳು ಸೇರಿ ವಿವಿಧ ಇಲಾಖೆಗಳಲ್ಲಿ ಇದಕ್ಕೆ ಪೂರಕವಾದ ಬೆಳವಣಿಗೆಗಳು ಕಂಡು ಬಂದಿದ್ದವು. ಇದೀಗ ರೈಲ್ವೇ ಇಲಾಖೆಯಲ್ಲೂ ಕೇಸರೀಕರಣ ಆರೋಪ ಕೇಳಿ ಬಂದಿದೆ. ದೇಶದ ಎರಡನೇ ‘ಕೇಸರಿ’ ಬಣ್ಣದ ವಂದೇ ಭಾರತ್‌ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟನೆ ಮಾಡಲಿದ್ದಾರೆ.

ಬಿಜೆಪಿ ಆಡಳಿತದ ಕೆಲವು ರಾಜ್ಯಗಳಲ್ಲಿ ಇದಕ್ಕೆ ಮೊದಲು ರೈಲ್ವೇ ನಿಲ್ಧಾಣ, ಬಸ್‌ ನಿಲ್ಧಾಣಗಳಿಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ನಗರಗಳ ಹೆಸರನ್ನು ಬದಲಿಸಲಾಗಿತ್ತು. ಉತ್ತರಪ್ರದೇಶದಲ್ಲಿ ಯೋಗಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಶಾಲಾ ಮಕ್ಕಳ ಬ್ಯಾಗನ್ನು ಕೇಸರೀಕರಣಗೊಳಿಸಿದ್ದರು. ಈ ಮೊದಲು ಉತ್ತರಪ್ರದೇಶದಲ್ಲಿ
ಲಕ್ಷಣ್ ಮತ್ತು ರಾಣಿಲಕ್ಷ್ಮೀಬಾಯಿ ಪ್ರಶಸ್ತಿ ಸಮಾರಂಭವನ್ನು ಸಂಪೂರ್ಣ ಕೇಸರೀಕರಣಗೊಳಿಸಿದ್ದ ಯೋಗಿ ಸರಕಾರ ಪ್ರಶಸ್ತಿ ಪತ್ರ, ಬುಕ್ಲೆಟ್, ಪ್ರಶಸ್ತಿ ವಿಜೇತ ಸಮಾರಂಭದ ಉಸ್ತುವಾರಿಗಳ ಉಡುಗೆತೊಡುಗೆಯನ್ನೂ ಕೇಸರಿಮಯಗೊಳಿಸಿತ್ತು. ಇದಲ್ಲದೆ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ 50 ಕೇಸರಿ ಬಸ್‌ಗಳನ್ನು ಬಿಡುಗಡೆಗೊಳಿಸಿತ್ತು. ಈ ಬಸ್ಸುಗಳಿಗೆ ‘ಸಂಕಲ್ಪ ಸೇವಾ’ ಎಂದು ಹೆಸರಿಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ಈ ಬಸ್ಸುಗಳ ಓಡಾಟ ನಡೆಸುತ್ತಿದೆ.

ಎರಡನೇ ‘ಕೇಸರಿ’ ಬಣ್ಣದ ವಂದೇ ಭಾರತ್‌ ರೈಲು ಸಂಚಾರ ಆರಂಭ:

ವಾರಣಾಸಿ ಮತ್ತು ನವದೆಹಲಿ ನಡುವಿನ ಎರಡನೇ ವಂದೇ ಭಾರತ್ ರೈಲನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದು, ಇದು ಕೇಸರಿ ಬಣ್ಣದಲ್ಲಿ ಇರಲಿದೆ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ರೈಲ್ವೆ ಸಚಿವಾಲಯವು ದೇಶದಲ್ಲಿ ಪ್ರಾರಂಭಿಸಿರುವ ಎರಡನೇ ಕೇಸರಿ ಬಣ್ಣದ ವಂದೇ ಭಾರತ್ ರೈಲು ಇದಾಗಿದೆ ಮತ್ತು ರೈಲ್ವೇ ಸಚಿವಾಲಯವು ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಕೇಸರಿ ಬಣ್ಣದ ರೈಲಿನ ಫೋಟೋವನ್ನು ಹಂಚಿಕೊಂಡಿದೆ.

ನೂತನ ರೈಲು ವೈ-ಫೈ ಸೌಲಭ್ಯ, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಪ್ಲಶ್ ಇಂಟೀರಿಯರ್‌ಗಳು, ಟಚ್ ಮಾಡದೆ ತೆರೆಯುವಂತಹ ಬಯೋ-ವ್ಯಾಕ್ಯೂಮ್ ಟಾಯ್ಲೆಟ್‌ಗಳು, ಎಲ್ಇಡಿ ಲೈಟಿಂಗ್, ಪ್ರತಿ ಸೀಟಿನ ಕೆಳಗೆ ಚಾರ್ಜಿಂಗ್ ಪಾಯಿಂಟ್‌ಗಳು, ಉತ್ತಮ ಹವಾನಿಯಂತ್ರಣ ವ್ಯವಸ್ಥೆ ಕೂಡ ಹೊಂದಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ಇಂದು ಮಧ್ಯಾಹ್ನ  2:15ಕ್ಕೆ ರೈಲಿನ ಉದ್ಘಾಟನೆ ನಡೆಯಲಿದ್ದು, ವಾರಣಾಸಿಯಿಂದ ನವದೆಹಲಿಗೆ ಅದರ ಉದ್ಘಾಟನೆಯ ಅಂಗವಾಗಿ ರೈಲು ಸಂಚರಿಸಲಿದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನಗಳು ರೈಲು ವಾರಣಾಸಿಯಿಂದ ನವದೆಹಲಿಗೆ ಬೆಳಿಗ್ಗೆ 6 ಗಂಟೆಗೆ ಸಂಚರಿಸಲಿದೆ. ರೈಲು ಮಧ್ಯಾಹ್ನ 2.5ಕ್ಕೆ ನವದೆಹಲಿ ತಲುಪುತ್ತದೆ ಮತ್ತು 55 ನಿಮಿಷಗಳ ನಂತರ 3 ಗಂಟೆಗೆ ವಾಪಾಸ್ಸು ವಾರಣಾಸಿಗೆ ಹೊರಡಲಿದೆ.

ರೈಲ್ವೇ ಇಲಾಖೆಯು ತನ್ನ ಮೊದಲ ಕೇಸರಿ-ಬೂದು ಬಣ್ಣದ ವಂದೇ ಭಾರತ್ ರೈಲನ್ನು ಸೆ.24ರಂದು ಕೇರಳದ ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ಪ್ರಾರಂಭಿಸಿತ್ತು. ಸೆ.24ರಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನ ಮಂತ್ರಿಗಳು ಉದ್ಘಾಟನೆ ಮಾಡಿದ ಒಂಬತ್ತು ವಂದೇ ಭಾರತ್ ರೈಲುಗಳಲ್ಲಿ ಇದೂ ಒಂದಾಗಿತ್ತು. ಈ ವೇಳೆ ರೈಲ್ವೇಗಳ ಕೇಸರೀಕರಣದ ಬಗ್ಗೆ ಚರ್ಚೆಯಾಗಿತ್ತು.

ಪತ್ರಕರ್ತ ಮೊಹಮ್ಮದ್ ಜುಬೇರ್, ಈ ವಂದೇ ಭಾರತ್‌ನಲ್ಲಿನ ಹಸಿರು ಬಣ್ಣವು ‘ಅಚ್ಛೇ ದಿನ್” ರೀತಿ ಕಾಣೆಯಾಗಿದೆ. ರೈಲಿನಲ್ಲಿ ತ್ರಿವರ್ಣ ಕಾಣೆಯಾಗಿದೆ ಎಂದು ಹೇಳಿದ್ದರು. ಸಾಮಾಜಿಕ ಜಾಲತಾಣಗಳ ಬಳಕೆದಾರರು ಕೇಸರಿ ಮತ್ತು ಬಿಳಿ ಬಣ್ಣ ಇದೆ ಆದರೆ ಹಸಿರು ಎಲ್ಲಿದೆ?  ಅದರ ನಡುವೆ ಧರ್ಮಚಕ್ರ ಕಾಣೆಯಾಗಿದೆ ಎಂದು ಹೇಳಿದ್ದರು.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಪತ್ರಕರ್ತರೊಂದಿಗೆ ಮಾತನಾಡುವಾಗ ಕೇಸರಿ ಬಣ್ಣದಲ್ಲೇ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವುದರ ಹಿಂದಿನ ರಾಜಕೀಯ ಲೆಕ್ಕಾಚಾರದ ಬಗ್ಗೆ ಉತ್ತರಿಸಲು ನಿರಾಕರಿಸಿದ್ದರು. ವಂದೇ ಭಾರತ್‌ ರೈಲಿಗೆ ಕೇಸರಿ ಬಣ್ಣದ ಆಯ್ಕೆಯು ವೈಜ್ಞಾನಿಕ ಚಿಂತನೆಯಿಂದ ಕೂಡಿದೆ. ಮಾನವನ ಕಣ್ಣಿಗೆ ಗೋಚರತೆಯ ದೃಷ್ಟಿಕೋನದಿಂದ ಈ ಬಣ್ಣಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳಿದ್ದರು.

ವಂದೇ ಭಾರತ್ ರೈಲು:

2019ರಲ್ಲಿ ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚಾಲನೆಗೊಂಡಿತ್ತು. 16 ಬೋಗಿಗಳಿರುವ ಈ ಒಂದು ಎಕ್ಸ್‌ಪ್ರೆಸ್ ರೈಲಿನ ನಿರ್ಮಾಣಕ್ಕೆ ಅಂದಾಜು 115 ಕೋಟಿ ರೂ ತಗುಲುತ್ತದೆ ಎಂದು ಹೇಳಲಾಗಿದೆ. ಭಾರತದಲ್ಲಿ ಸದ್ಯ ಒಟ್ಟು 34 ವಂದೇ ಭಾರತ್ ರೈಲುಗಳು ದೈನಂದಿನ ಕಾರ್ಯಾಚರಣೆಯಲ್ಲಿ ತೊಡಗಿವೆ. ಬ್ರಾಡ್ ಗೇಜ್  ವಿದ್ಯುದೀಕೃತ ನೆಟ್‌ವರ್ಕ್ ಹೊಂದಿರುವ ರಾಜ್ಯಗಳಲ್ಲಿ ಈ ನೂತನ ಒಂದೇ ಭಾರತ್ ರೈಲು ಸಂಚಾರ ನಡೆಸಲಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಥಳೀಯವಾಗಿ ನಿರ್ಮಿತ ಮತ್ತು ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿವೆ.

ಕಳೆದ ಡಿ.8ರಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2047ರ ವೇಳೆಗೆ ದೇಶದಲ್ಲಿ 4,500 ವಂದೇ ಭಾರತ್ ರೈಲುಗಳು ಓಡಾಡಲಿದೆ ಎಂದು ಹೇಳಿದ್ದರು. ಇತ್ತೀಚೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ 12,000ಕ್ಕೂ ಹೆಚ್ಚು ಹೊಸ ರೈಲುಗಳ ತಯಾರಿ ಬಗ್ಗೆ ಮಾಹಿತಿ ನೀಡಿದ್ದರು.

ಇದನ್ನು ಓದಿ: ಯುದ್ಧ ಸೃಷ್ಟಿಸಿದ ಅವಾಂತರ: ಗಾಝಾ ರೋಗಕ್ಕೆ ಫಲವತ್ತತೆಯ ನೆಲ!

 

 

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...