Homeಕರ್ನಾಟಕಹಿರಿಯ ಸಾಹಿತಿ, ಚಿಂತಕ ಪ್ರೊ. ಬಿ. ಗಂಗಾಧರ ಮೂರ್ತಿ ನಿಧನ

ಹಿರಿಯ ಸಾಹಿತಿ, ಚಿಂತಕ ಪ್ರೊ. ಬಿ. ಗಂಗಾಧರ ಮೂರ್ತಿ ನಿಧನ

- Advertisement -
- Advertisement -

ಗೌರಿಬಿದನೂರು ನ್ಯಾಷನಲ್‌‌ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ, ಹಿರಿಯ ಸಾಹಿತಿ ಪ್ರೊಫೆಸರ್‌‌‌ ಬಿ. ಗಂಗಾಧರ ಮೂರ್ತಿ ಅವರು ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದ್ದಾರೆ. ಕಳೆದ ಆರು ತಿಂಗಳಿಂದ ಅವರು ಅನಾರೋಗ್ಯದಿಂದ ಇದ್ದರು ಎಂದು ತಿಳಿದು ಬಂದಿದೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ದಲಿತ ಚಳವಳಿಯ ಆರಂಭದಿಂದಲೂ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಅವರು ದಲಿತ ಸಂಘರ್ಷ ಸಮಿತಿಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಗೌರಿಬಿದನೂರಿನ ವಿಧುರಾಶ್ವತ್ಥದ ಸ್ವಾತಂತ್ರ ಹೋರಾಟದ ಸ್ಮಾರಕವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಚಾರವಾದಿ ಚಳವಳಿಗಳಲ್ಲಿ ಕೂಡಾ ಅವರು ಮುಂಚೂಣಿಯಲ್ಲಿ ಇದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೂಲತಃ ಹೊಳೆನರಸೀಪುರದವರಾದ ಗಂಗಾದರ ಮೂರ್ತಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಸುಮಾರು 30 ವರ್ಷಗಳ ಕಾಲ ಬೊಧನಾ ಕ್ಷೇತ್ರದಲ್ಲಿ ಸೇವೆ ಮಾಡಿದ್ದಾರೆ. ಭಾರತ ಜ್ಞಾನ-ವಿಜ್ಞಾನ ಸಮಿತಿ ಪ್ರಕಟಿಸುತ್ತಿದ್ದ ‘ಟೀಚರ್’ ಮಾಸಿಕದ ಮುಖ್ಯ ಸಂಪಾದಕರಾಗಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ಸಂಗ್ರಾಮದ ಚಿತ್ರಕಥನ: ದಕ್ಷಿಣದ ಜಲಿಯನ್ ವಾಲಾಬಾಗ್ ವಿದುರಾಶ್ವತ್ಥ ಉಳಿಸೋಣ

ಆನಂದ್ ತೇಲ್ತುಂಬ್ಡೆ ಅವರ ‘ದಲಿತರು ಮತ್ತು ಹಿಂದುತ್ವ’, ‘ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ’, ‘ಭಾರತದ ಬೌದ್ಧಿಕ ದಾರಿದ್ರ್ಯನಾಗಸಂದ್ರ ಭೂ ಆಕ್ರಮಣ ಚಳುವಳಿ’, ‘ಗೋಹತ್ಯೆ ನಿಷೇಧದ ಸುತ್ತಲಿನ ರಾಜಕೀಯ’, ‘ಅಂಬೇಡ್ಕರ್‌ ಮತ್ತು ಮುಸ್ಲಿಮರು: ಸುಳ್ಳುಗಳು ಮತ್ತು ಸತ್ಯಾಂಶಗಳು’, ‘ಭಾರತೀಯ ಸಂಸ್ಕೃತಿಯ ಜಾತಿ ಲಕ್ಷಣ’, ‘ಭಾರತದ ಬೌದ್ಧಿಕ ದಾರಿದ್ರ್ಯ’, ‘ಗೀತೆ ಒಳಗಿನ ಸತ್ಯ ಏನು?’, ‘ಮೌಢ್ಯ ವಿರೊಧಿ ಹೋರಾಟಗಾರ ಎಚ್ಚೆನ್’, ‘ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರು (ಸಂಕ್ಷಿಪ್ತ ಜೀವನ ಚಿತ್ರಣ)’, ‘ಕತ್ತೆ ಪುರಾಣ’, ‘ಸೂಫಿ ಕಥಾಲೋಕ’, ‘ಅನುಭವದ ಆರು ಕಥನಗಳು’ ಇವು ಅವರು ಪ್ರಮುಖ ಕೃತಿಗಳಾಗಿವೆ.

ಅವರು ಬರೆದ ವಿಮರ್ಶಾ ಲೇಖನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಅನುವಾದ ಕ್ಷೇತ್ರದ ಸೇವೆಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ. ಅವರು ಸೂಫಿ ಕಲ್ಚರ್ ಸಂಪಾದಕ  ಸಮಿತಿಯಲ್ಲಿ ಪ್ರವಾಚಕರಾಗಿದ್ದರು. ಭಾರತ ಜ್ಞಾನ-ವಿಜ್ಞಾನ ಸಮಿತಿ ಪ್ರಕಟಿಸುತ್ತಿದ್ದ ‘ಟೀಚರ್’ ಮಾಸಿಕದ ಮುಖ್ಯ ಸಂಪಾದಕರಾಗಿದ್ದರು.

ಇದನ್ನೂ ಓದಿ: ಆರ್‌ಎಸ್‌ಎಸ್‌ ಅಜೆಂಡಾಗಳನ್ನು ಬಯಲುಗೊಳಿಸುವ ಕನ್ನಡ ಕೃತಿಗಳು

ಬಿಜಿಎಮ್ ಎಂದೇ ಹೆಸರಾಗಿದ್ದ ಪ್ರೊ.ಬಿ.ಗಂಗಾಧರಮೂರ್ತಿಯವರು ಪತ್ನಿ, ಮೂವರು ಮಕ್ಕಳು ಮತ್ತು ಅಸಂಖ್ಯಾತ ಶಿಷ್ಯರನ್ನು ಅಗಲಿದ್ದಾರೆ. ಮೃತರ ದೇಹವನ್ನು ಗೌರಿಬಿದನೂರಿಗೆ ಕೊಂಡೊಯ್ದು ಅಲ್ಲಿ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಅವರ ತಮ್ಮ ದೇಹವನ್ನು ದಾನ ಮಾಡಿರುವುದರಿಂದ ಭಾನುವಾರ ಮಧ್ಯಾಹ್ನ 3 ಗಂಟೆಗೆ ಅಲ್ಲಿಂದ ಮತ್ತೆ ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆ ತರಲಾಗುತ್ತದೆ.

ಗಂಗಾಧರ ಮೂರ್ತಿ ಅವರ ನಿಧನಕ್ಕೆ ನಾಡಿನ ಸಾಹಿತಿಗಳು ಸೇರಿದಂತೆ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ. ಹಿರಿಯ ಚಿಂತಕ, ಹೋರಾಟಗಾರ ಸನತ್ ಕುಮಾರ್‌ ಬೆಳಗಲಿ ಅವರು, “ನಾಡಿನ ಹಿರಿಯ ಚಿಂತಕ, ಲೇಖಕ ಗಂಗಾಧರ ಮೂರ್ತಿ ಅವರು ಶನಿವಾರ ನಮ್ಮನ್ನು ಅಗಲಿದ್ದಾರೆ. ಗೌರಿಬಿದನೂರಿನಲ್ಲಿ ನ್ಯಾಷನಲ್ ಕಾಲೇಜ್ ಉಪನ್ಯಾಸಕರಾಗಿ ಸೇವೆ ಆರಂಭಿಸಿ ಅಲ್ಲೇ ನೆಲೆಸಿದ್ದ ಮೂರ್ತಿ ಹಲವಾರು ಜನ ಹೋರಾಟ ಗಳ ಸ್ಫೂರ್ತಿಯ ಸೆಲೆಯಾಗಿದ್ದವರು. ವಿಧುರಾಶ್ವತ್ಥದ ಸ್ವಾತಂತ್ರ ಹೋರಾಟದ ಸ್ಮಾರಕದ ಶಿಲ್ಪಿ ಮೂರ್ತಿ. ಅವರ ಅಗಲಿಕೆ ಅವಿಭಜಿತ ಕೋಲಾರ ಜಿಲ್ಲೆಗೆ ಮಾತ್ರವಲ್ಲದೆ, ಕರ್ನಾಟಕಕ್ಕೆ ಬಹುದೊಡ್ಡ ನಷ್ಟ. ನನ್ನ ಅತ್ಯಂತ ಆತ್ಮೀಯ ಹಿರಿಯ ಒಡನಾಡಿಯನ್ನು ಕಳೆದುಕೊಂಡೆ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...