Homeಮುಖಪುಟಜಪಾನ್‌ನಲ್ಲಿ ಸರಣಿ ಭೂಕಂಪ: 10ಕ್ಕೂ ಅಧಿಕ ಮಂದಿ ಸಾವು

ಜಪಾನ್‌ನಲ್ಲಿ ಸರಣಿ ಭೂಕಂಪ: 10ಕ್ಕೂ ಅಧಿಕ ಮಂದಿ ಸಾವು

- Advertisement -
- Advertisement -

ಜಪಾನ್‌ನಲ್ಲಿ ಹೊಸ ವರ್ಷದ ಮೊದಲ ದಿನದಂದು ಸಂಭವಿಸಿದ ಪ್ರಬಲ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಪ್ರಸ್ತುತ (ಜ.2, ಬೆಳಿಗ್ಗೆ 9 ಗಂಟೆ) 13ಕ್ಕೆ ಏರಿಕೆಯಾಗಿದೆ. ಭೂಕಂಪದ ಬಳಿಕ ನೀಡಲಾಗಿದ್ದ ಸುನಾಮಿ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ.

ನಿನ್ನೆ (ಜ.1) ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಉತ್ತರ ಮಧ್ಯ ಜಪಾನ್‌ನಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದ ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆ ನೀಡಿತ್ತು.

ಸುನಾಮಿ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇಶಿಕಾವಾ ಕರಾವಳಿಗೆ ಬೃಹದಾಕಾರದ ಸಮುದ್ರದ ಅಲೆಗಳು ಬಂದು ಅಪ್ಪಳಿಸಿತ್ತು. ಇದರಿಂದ ಜನರು ಆತಂಕಿರಾಗಿದ್ದರು. ಜಪಾನ್ ಸರ್ಕಾರ ಕೂಡ ಕರಾವಳಿ ಪ್ರದೇಶದ ಜನರು ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿತ್ತು.

ಭೂಕಂಪದಿಂದ ಕರಾವಳಿ ಪ್ರದೇಶಗಳ ಕೆಲ ಕಟ್ಟಡಗಳಿಗೆ ಹಾನಿಯಾಗಿದೆ. ರಸ್ತೆಗಳು ಬಿರುಕು ಬಿಟ್ಟಿದ್ದು, ಕೆಲವೆಡೆ ಬೆಂಕಿ ಅವಘಡ ಸಂಭವಿಸಿ ಕಟ್ಟಡಗಳು ಸುಟ್ಟು ಹೋಗಿವೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾದ ಕಾರಣ ವರ್ಷದ ಮೊದಲ ದಿನವೇ ನಾಗರಿಕರು ಇಡೀ ರಾತ್ರಿ ಕತ್ತಲೆಯಲ್ಲಿ ಸಯಮ ಕಳೆಯುವಂತಾಯಿತು. ಜಪಾನ್ ಮಿಲಿಟರಿ ಬೇಸ್ ನಲ್ಲಿ ಕನಿಷ್ಠ ಸಾವಿರಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

155 ಬಾರಿ ಕಂಪನ :

ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ 7.5 ತೀವ್ರತೆಯ ಮೊದಲ ಪ್ರಬಲ ಕಂಪನದ ಬಳಿಕ ಸುಮಾರು 155 ಬಾರಿ ಭೂಮಿ ಕಂಪಿಸಿದೆ ಎಂದು ವರದಿಗಳು ಹೇಳಿವೆ. ಮೊದಲ ಆರು ಕಂಪನಗಳು ಪ್ರಬಲವಾಗಿದ್ದು, ಈ ಕಂಪನಗಳು ರಿಕ್ಟರ್ ಮಾಪಕದಲ್ಲಿ 6.2 ರಿಂದ 6.7ರವರೆಗೂ ದಾಖಲಾಗಿವೆ. ಬಳಿಕ ಕನಿಷ್ಠ 3 ರಂತೆ 140ಕ್ಕೂ ಅಧಿಕ ಕಂಪನಗಳು ಸಂಭವಿಸಿವೆ ಎಂದು ಭೂಕಂಪನ ಮಾಪನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬಾಂಗ್ಲಾದೇಶ: ನೋಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ. ಯೂನುಸ್‌ಗೆ ಜೈಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...