Homeಮುಖಪುಟಜಾರ್ಖಂಡ್: ಜೆಎಂಎಂ ಶಾಸಕ ದಿಢೀರ್ ರಾಜೀನಾಮೆ; ಸೊರೇನ್ ಪತ್ನಿಗೆ ಸಿಎಂ ಪಟ್ಟ?

ಜಾರ್ಖಂಡ್: ಜೆಎಂಎಂ ಶಾಸಕ ದಿಢೀರ್ ರಾಜೀನಾಮೆ; ಸೊರೇನ್ ಪತ್ನಿಗೆ ಸಿಎಂ ಪಟ್ಟ?

- Advertisement -
- Advertisement -

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಶಾಸಕ ಸರ್ಫರಾಝ್ ಅಹ್ಮದ್ ಅವರು ವಿಧಾನಸಭೆಗೆ ದಿಢೀರ್ ರಾಜೀನಾಮೆ ನೀಡಿರುವುದು ಜಾರ್ಖಂಡ್‌ನಲ್ಲಿ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಏಳನೇ ಸಮನ್ಸ್ ನಿರ್ಲಕ್ಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಸರ್ಫರಾಝ್ ಅವರಿಂದ ತೆರವಾದ ಸ್ಥಾನದ ಮೂಲಕ ಸಿಎಂ ಸೊರೇನ್ ಪತ್ನಿ ಕಲ್ಪನಾ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಸಿಎಂ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಬಿಜೆಪಿ ಅಂದಾಜಿಸಿದೆ.

ಬಿಜೆಪಿಯ ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಎಕ್ಸ್ ಪೋಸ್ಟ್ ನಲ್ಲಿ, “ಜೆಎಂಎಂ ಶಾಸಕನ ರಾಜೀನಾಮೆ ಅಧಿಕಾರದ ಬಲವಂತದ ಬದಲಾವಣೆಗೆ ಸಿದ್ಧತೆ. ಸಿಎಂ ಹೇಮಂತ್ ಸೊರೇನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದಾಗ, ಅವರ ಪತ್ನಿ ಕಲ್ಪನಾ ಮುಂದಿನ ಸಿಎಂ ಆಗಲಿದ್ದಾರೆ. ಸೊರೇನ್ ಕುಟುಂಬಕ್ಕೆ ಹೊಸ ವರ್ಷ ಯಾತನಾಮಯವಾಗಲಿದೆ” ಎಂದು ಹೇಳಿದ್ದಾರೆ.

 

ವಿಧಾನಸಭೆಯ ಸ್ಪೀಕರ್ ರವೀಂದ್ರನಾಥ್ ಮಹ್ತೋ ಅವರ ಪ್ರಕಟನೆಯ ಪ್ರಕಾರ, ಗಂಡೇ ಶಾಸಕ ಸರ್ಪರಾಝ್ ಅಹ್ಮದ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. “ಜಾರ್ಖಂಡ್ ವಿಧಾನಸಭಾ ಸ್ಪೀಕರ್ ಅವರು ಗಂಡೇ ಕ್ಷೇತ್ರದ ಶಾಸಕ ಸರ್ಫರಾಝ್ ಅಹ್ಮದ್ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ ಎಂದು ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ. ಡಿಸೆಂಬರ್ 31, 2023 ರಿಂದ ಜಾರಿಗೆ ಬರುವಂತೆ ಅವರ ಕ್ಷೇತ್ರವು ಖಾಲಿಯಾಗಿದೆ” ಎಂದು ವಿಧಾನಸಭೆ ಸಚಿವಾಲಯದ ಪ್ರಕಟನೆ ತಿಳಿಸಿದೆ.

“ಸರ್ಪರಾಜ್ ಅಹ್ಮದ್‌ರವರು ಭಾನುವಾರ ನನ್ನನ್ನು ಭೇಟಿಯಾಗಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ರಾಜೀನಾಮೆಗೆ ಕಾರಣ ತಿಳಿಸಿಲ್ಲ. ಆ ಬಗ್ಗೆ ಕೇಳಬೇಕೆಂದು ನನಗೆ ಅನಿಸಿಲ್ಲ” ಎಂದು ಸ್ಪೀಕರ್ ಮಹ್ತೋ ಹೇಳಿದ್ದಾಗಿ ವರದಿಗಳು ತಿಳಿಸಿವೆ.

ಜೆಎಂಎಂ ಪಕ್ಷದ ಮೂಲಗಳು, ಶಾಸಕ ಸರ್ಫರಾಝ್ ತನ್ನ ವೈಯುಕ್ತಿಕ ಕಾರಣಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿಸಿದೆ. ಆದರೆ, ಸಿಎಂ ಸೊರೇನ್ ಅವರನ್ನು ಇಡಿ ಬಂಧಿಸಿದರೆ, ಮುಖ್ಯಮಂತ್ರಿಯಾಗಿ ಸೊರೇನ್ ಪತ್ನಿ ಕಲ್ಪನಾ ಅವರನ್ನು ನೇಮಕ ಮಾಡಲು ಸರ್ಫರಾಝ್ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಸರ್ಫರಾಝ್ ಅವರಿಂದ ತೆರವಾದ ಸ್ಥಾನಕ್ಕೆ ಕಲ್ಪನಾ ಅವರನ್ನು ನಿಲ್ಲಿಸಿ ವಿಧಾನಸಭೆಗೆ ಕರೆತಂದು ಬಳಿಕ ಸಿಎಂ ಮಾಡುವ ಯೋಜನೆ ಇದೆ ಎಂದು ಪಕ್ಷದ ನಾಯಕರೊಬ್ಬರನ್ನು ಉಲ್ಲೇಖಿಸಿ ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಗಂಡೇ ವಿಧಾನಸಭಾ ಕ್ಷೇತ್ರ ಮುಸ್ಲಿಮರು ಮತ್ತು ಆದಿವಾಸಿಗಳ ಪ್ರಾಬಲ್ಯದ ಪ್ರದೇಶ. ಇಲ್ಲಿ ಜೆಎಂಎಂ ಪಕ್ಷದ ಸಲ್ಕೇನ್ ಸೊರೇನ್ ಮತ್ತು ಸರ್ಫರಾಝ್ ಅಹ್ಮದ್ ಎರಡು ದಶಕಗಳಿಂದ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಜೆಎಂಎಂನ ಯಾವುದೇ ಅಭ್ಯರ್ಥಿ ಚುನಾವಣೆಗೆ ನಿಂತರೂ ಗೆಲ್ಲುವುದು ಖಚಿತ. ಈ ಕಾರಣಕ್ಕೆ ಕಲ್ಪನಾ ಅವರನ್ನು ಅಲ್ಲಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ರಾಂಚಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಇತ್ತೀಚೆಗೆ ಸಿಎಂ ಸೊರೇನ್ ಅವರಿಗೆ ಇಡಿ ಏಳನೇ ಸಮನ್ಸ್ ನೀಡಿದೆ. ಆದರೆ, ಸೊರೇನ್ ಇದುವರೆಗೆ ಇಡಿ ಮುಂದೆ ಹಾಜರಾಗಿಲ್ಲ. ಅಕ್ರಮ ಹಣ ವರ್ಗಾವಣೆ(ಪಿಎಂಎಲ್‌) ಪ್ರಕರಣ ಸೊರೇನ್ ವಿರುದ್ಧ ದಾಖಲಾಗಿರುವುದರಿಂದ ಅವರನ್ನು ಇಡಿ ಯಾವುದೇ ಸಮಯದಲ್ಲೂ ಬಂಧಿಸುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ, ಸಿಎಂ ಪತ್ನಿಗೆ ಪಟ್ಟ ಕಟ್ಟಲು ಪ್ಲ್ಯಾನ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿನ ದಾಳಿಗೆ ನಾಲ್ವರು ಬಲಿ, 5 ಜಿಲ್ಲೆಗಳಲ್ಲಿ ಕರ್ಫ್ಯೂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...