Homeಅಂತರಾಷ್ಟ್ರೀಯಗ್ರೇಟಾ ಥನ್‌ಬರ್ಗ್ ಸೇರಿದಂತೆ ಸುಮುದ್ ಫ್ಲೋಟಿಲ್ಲಾ ತಂಡದ ಮೇಲೆ ದೌರ್ಜನ್ಯ: ಇಸ್ರೇಲ್ ವಿರುದ್ದ ಗಂಭೀರ ಆರೋಪ

ಗ್ರೇಟಾ ಥನ್‌ಬರ್ಗ್ ಸೇರಿದಂತೆ ಸುಮುದ್ ಫ್ಲೋಟಿಲ್ಲಾ ತಂಡದ ಮೇಲೆ ದೌರ್ಜನ್ಯ: ಇಸ್ರೇಲ್ ವಿರುದ್ದ ಗಂಭೀರ ಆರೋಪ

- Advertisement -
- Advertisement -

‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ’ ಮೂಲಕ ಗಾಝಾಗೆ ಮಾನವೀಯ ನೆರವು ತಲುಪಿಸಲು ಪ್ರಯತ್ನಿಸಿದ ಸುಮಾರು 137 ಹೋರಾಟಗಾರರನ್ನು ಇಸ್ರೇಲ್‌ ಬಂಧಿಸಿತ್ತು. ಶನಿವಾರ (ಅ.4) ಅವರೆಲ್ಲರನ್ನೂ ಟರ್ಕಿಗೆ ಗಡಿಪಾರು ಮಾಡಲಾಗಿದೆ.

ಟರ್ಕಿ ತಲುಪಿದ ಹೋರಾಟಗಾರರ ಪೈಕಿ ಇಬ್ಬರು, ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರನ್ನು ಬಂಧನದ ಸಮಯದಲ್ಲಿ ಇಸ್ರೇಲ್ ಸೇನೆ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಆರೋಪಿಸಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.

ಹೊಸ ಆರೋಪಗಳ ಬಗ್ಗೆ ಇಸ್ರೇಲಿ ನಾಯಕರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವರ ವಿದೇಶಾಂಗ ಸಚಿವಾಲಯವು ಬಂಧಿತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂಬ ವರದಿಗಳು ‘ಸಂಪೂರ್ಣ ಸುಳ್ಳು’ ಎಂದಿದೆ.

ಶನಿವಾರ ಇಸ್ತಾಂಬುಲ್ ವಿಮಾನ ನಿಲ್ದಾಣದ ತಲುಪಿದ ಹೋರಾಟಗಾರರಲ್ಲಿ 36 ಟರ್ಕಿಶ್ ಪ್ರಜೆಗಳು, ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಅಲ್ಜೀರಿಯಾ, ಮೊರಾಕೊ, ಇಟಲಿ, ಕುವೈತ್, ಲಿಬಿಯಾ, ಮಲೇಷ್ಯಾ, ಮಾರಿಟಾನಿಯಾ, ಸ್ವಿಟ್ಜರ್ಲೆಂಡ್, ಟುನೀಶಿಯಾ ಮತ್ತು ಜೋರ್ಡಾನ್ ನಾಗರಿಕರು ಸೇರಿದ್ದಾರೆ ಎಂದು ಟರ್ಕಿಶ್ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಗ್ರೇಟಾ ಥನ್‌ಬರ್ಗ್ ಅವರನ್ನು ‘ಭಯಾನಕವಾಗಿ ನಡೆಸಿಕೊಂಡರು’- ಹೋರಾಟಗಾರರ ಆರೋಪ

ಗ್ರೇಟಾ ಥನ್‌ಬರ್ಗ್ ಅವರನ್ನು ಇಸ್ರೇಲ್ ಸೇನೆ ಕೆಟ್ಟದ್ದಾಗಿ ನಡೆಸಿಕೊಂಡಿದೆ. ಆಕೆಯ ಕೂದಳು ಹಿಡಿದು ಎಳೆದಾಡಿದ್ದಾರೆ. ಇಸ್ರೇಲ್ ಧ್ವಜ ಧರಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೋರಾಟಗಾರರಾದ ಮಲೇಷ್ಯಾದ ಪ್ರಜೆ ಹಜ್ವಾನಿ ಹೆಲ್ಮಿ ಮತ್ತು ಅಮೆರಿಕನ್ ಪ್ರಜೆ ವಿಂಡ್‌ಫೀಲ್ಡ್ ಬೀವರ್ ಶನಿವಾರ ಇಸ್ತಾಂಬುಲ್ ವಿಮಾನ ನಿಲ್ದಾಣ ತಲುಪಿದಾಗ ಆರೋಪಿಸಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.

ಇಸ್ರೇಲ್ ನಮ್ಮನ್ನು ಬಂಧಿಸಿದ್ದ ವೇಳೆ ಪ್ರಾಣಿಗಳಂತೆ ನಡೆಸಿಕೊಂಡಿದೆ. ಶುದ್ದ ಆಹಾರ, ನೀರು ಒದಗಿಸಿಲ್ಲ. ನಮ್ಮಲ್ಲಿದ್ದ ಔಷಧ ಮತ್ತು ಇತರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು 28 ವರ್ಷದ ಹೆಲ್ಮಿ ಹೇಳಿದ್ದಾರೆ.

ಇಸ್ರೇಲ್‌ನ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ಬಂದಾಗ ತನ್ನನ್ನು ಕೋಣೆಗೆ ತಳ್ಳಲಾಯಿತು. ಗ್ರೇಟಾ ಥನ್‌ಬರ್ಗ್ ಅವರನ್ನು ಭಯಾನಕವಾಗಿ ಮತ್ತು ಪ್ರೊಪಗಂಡವಾಗಿ ನಡೆಸಿಕೊಂಡರು ಎಂದು 43 ವರ್ಷದ ಬೀವರ್ ಆರೋಪಿಸಿದ್ದಾರೆ.

ಗಾಝಾಗೆ ನೆರವು ಹೊತ್ತು ಸಾಗಿದ್ದ ಸುಮಾರು ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ತಂಡದ 40 ಬೋಟ್‌ಗಳನ್ನು ತಡೆದು, ಅವುಗಳಲ್ಲಿ ಇದ್ದ ಸುಮಾರು 450ಕ್ಕೂ ಹೆಚ್ಚು ಹೋರಾಟಗಾರರನ್ನು ಇಸ್ರೇಲ್ ಸೇನೆ ಬಂಧಿಸಿರುವುದಕ್ಕೆ ಜಾಗತಿಕ ಖಂಡನೆ ವ್ಯಕ್ತವಾಗಿದೆ.

ಬಂಧಿತ ಎಲ್ಲಾ ಮಾನವ ಹಕ್ಕು ಕಾರ್ಯಕರ್ತರು ಸುರಕ್ಷಿತ ಮತ್ತು ಉತ್ತಮ ಆರೋಗ್ಯದಲ್ಲಿದ್ದಾರೆ. ಇನ್ನುಳಿದವರನ್ನು ಸಾಧ್ಯವಾದಷ್ಟು ಬೇಗ ಗಡಿಪಾರು ಮಾಡಲಾಗುವುದು ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿದೆ.

ಪ್ರತ್ಯೇಕ ಪೋಸ್ಟ್‌ನಲ್ಲಿ, ಕೆಲವು ಫ್ಲೋಟಿಲ್ಲಾ ಸದಸ್ಯರು ದಾಖಲೆಗಳನ್ನು ಒದಗಿಸದೆ ಗಡಿಪಾರು ಪ್ರಕ್ರಿಯೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದೆ. ಈ ಆರೋಪವನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ.

ದೌರ್ಜನ್ಯದ ಆರೋಪಗಳನ್ನು ತಳ್ಳಿ ಹಾಕಿದ ಇಸ್ರೇಲ್

ಟರ್ಕಿಶ್ ಏರ್‌ಲೈನ್ಸ್ ವಿಮಾನದಲ್ಲಿ 26 ಇಟಾಲಿಯನ್ನರಿದ್ದರು, ಇನ್ನೂ 15 ಜನರನ್ನು ಇಸ್ರೇಲ್‌ನಲ್ಲಿ ಬಂಧಿಸಲಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಇತರ ರಾಷ್ಟ್ರಗಳ ಹೋರಾಟಗಾರರೊಂದಿಗೆ ಅವರನ್ನು ಗಡಿಪಾರು ಮಾಡುವ ಸಾಧ್ಯತೆ ಇದೆ ಎಂದು ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಹೇಳಿದ್ದಾರೆ.

ಉಳಿದ ನಮ್ಮ ಪ್ರಜೆಗಳನ್ನು ಗೌರವದಿಂದ ನಡೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾನು ಮತ್ತೊಮ್ಮೆ ಟೆಲ್ ಅವೀವ್‌ನಲ್ಲಿರುವ ಇಟಾಲಿಯನ್ ರಾಯಭಾರ ಕಚೇರಿಗೆ ಸೂಚನೆಗಳನ್ನು ನೀಡಿದ್ದೇನೆ ಎಂದು ತಜಾನಿ ಎಕ್ಸ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಗ್ಲೋಬಲ್ ಫ್ಲೋಟಿಲ್ಲಾದಲ್ಲಿದ್ದ ಇಟಾಲಿಯನ್ನರ ಮೊದಲ ಗುಂಪು (ನಾಲ್ವರು ಸಂಸದರು) ಶುಕ್ರವಾರ ರೋಮ್‌ ತಲುಪಿದ್ದಾರೆ ಎಂದು ರಾಯಿಟರ್ಸ್ ತಿಳಿಸಿದೆ.

“ಕಾನೂನುಬದ್ಧವಾಗಿ ವರ್ತಿಸಿದವರು ಬೋಟ್‌ಗಳಲ್ಲಿ ಇದ್ದವರು, ಕಾನೂನುಬಾಹಿರವಾಗಿ ವರ್ತಿಸಿದವರು ಗಾಝಾಗೆ ಮಾನವೀಯ ನೆರವು ತಲುಪದಂತೆ ತಡೆದವರು” ಎಂದು ಫ್ಲೋಟಿಲ್ಲಾದ ಭಾಗವಾಗಿದ್ದ ಇಟಾಲಿಯನ್ ಸಂಸದರಲ್ಲಿ ಒಬ್ಬರಾದ ಆರ್ಟುರೊ ಸ್ಕಾಟೊ ರೋಮ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“ನಮ್ಮನ್ನು ಕ್ರೂರವಾಗಿ ತಡೆಹಿಡಿಯಲಾಯಿತು … ಕ್ರೂರವಾಗಿ ಒತ್ತೆಯಾಳಾಗಿ ಇರಿಸಲಾಯಿತು” ಎಂದು ಇಟಲಿಯ ಮತ್ತೊಬ್ಬ ಸಂಸದೆ ಬೆನೆಡೆಟ್ಟಾ ಸ್ಕುಡೆರಿ ಆರೋಪಿಸಿದ್ದಾರೆ.

ಫ್ಲೋಟಿಲ್ಲಾ ಸದಸ್ಯರಿಗೆ ಕಾನೂನು ನೆರವು ನೀಡುವ ಇಸ್ರೇಲಿ ಗುಂಪಿನ ಅದಾಲಾ ಪ್ರಕಾರ, ಕೆಲವು ಬಂಧಿತರಿಗೆ ವಕೀಲರು, ನೀರು, ಔಷಧಿಗಳು ಮತ್ತು ಶೌಚಾಲಯಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ರಾಯಿಟರ್ಸ್ ವರದಿ ಹೇಳಿದೆ.

ಕೆಲವು ಹೋರಾಟಗಾರರು ‘ಫ್ರೀ ಪ್ಯಾಲೆಸ್ಟೈನ್’ ಎಂದು ಘೋಷಣೆ ಕೂಗಿದ ನಂತರ, ಅವರ ಕೈಗಳನ್ನು ಜಿಪ್-ಟೈ (ಕೇಬಲ್ ಟೈ) ಬಳಸಿ ಕಟ್ಟಿ, ಕನಿಷ್ಠ ಐದು ಗಂಟೆಗಳ ಕಾಲ ಮಂಡಿಯೂರಿ ಕುಳಿತುಕೊಳ್ಳುವಂತೆ ಒತ್ತಾಯಿಸಲಾಯಿತು ಎಂದು ಆದಾಲ ವಿವರಿಸಿದ್ದಾರೆ.

ದಾಳಿ ನಿಲ್ಲಿಸುವಂತೆ ಟ್ರಂಪ್ ಕರೆ ಬೆನ್ನಲ್ಲೇ ಗಾಜಾದಲ್ಲಿ ಇಸ್ರೇಲ್ ದಾಳಿ; 6 ಜನರು ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...