Homeಕರ್ನಾಟಕನ. 20ರಿಂದ 'ಶಂಕರ್‌ನಾಗ್ ನಾಟಕೋತ್ಸವ' ಆರಂಭ

ನ. 20ರಿಂದ ‘ಶಂಕರ್‌ನಾಗ್ ನಾಟಕೋತ್ಸವ’ ಆರಂಭ

- Advertisement -
- Advertisement -

ಸಾಮಾಜಿಕ ವಿಚಾರಗಳನ್ನು ಇಟ್ಟುಕೊಂಡು ಹೊಸಹೊಸ ಪ್ರಯೋಗಗಳನ್ನು ನಡೆಸುವ ರಂಗಪಯಣ ತಂಡವು ಪ್ರತಿ ವರ್ಷದಂತೆ ಈ ವರ್ಷವೂ ‘ಶಂಕರ್‌ನಾಗ್ ನಾಟಕೋತ್ಸವ’ ಕಾರ್ಯಕ್ರಮ ನಡೆಸುತ್ತಿದೆ. ಈ ಉತ್ಸವವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದು, ಕಲಾಪ್ರೇಮಿಗಳು ಭಾಗಿಯಾಗಿ ರಂಗಭೂಮಿಗೆ ಜೀವ ತು೦ಬಬೇಕು ಎಂದು ರಂಗಪಯಣ ತಂಡ ಮನವಿ ಮಾಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ರಂಗಪಯಣ ತಂಡ, ”ಕನ್ನಡ ರಂಗಭೂಮಿಯಲ್ಲಿ ಇಲ್ಲಿನ ತನಕ ಸತತ 14 ವರ್ಷಗಳಿಂದ ನಡೆದಾಡುವ ರಂಗಭೂಮಿಯಾಗಿ ಸದಾ ಚಾಲ್ತಿಯಲ್ಲಿದೆ. ಸದಾ ಹೊಸ ಹೊಸ ಪಯೋಗಗಳ ಮೂಲಕ ಇಲ್ಲಿಯ ತನಕ 15 ನಾಟಕಗಳನ್ನು ಕಟ್ಟಿದ್ದು, 1500ಕ್ಕೂ ಹೆಚ್ಚು ಪುಯೋಗಗಳನ್ನು ಕಂಡಿದೆ” ಎಂದು ತಿಳಿಸಿದ್ದಾರೆ.

”ನಮ್ಮ ಮಧ್ಯೆ ನಡೆಯುವ ಮತ್ತು ನಡೆಯುತ್ತಿರುವ ಹಲವು ಘಟನೆಗಳ ವಿಚಾರಗಳನ್ನು ಹುಡುಕಿ ತೆಗೆದು ಸಾಮಾಜಿಕ ವಿಚಾರಗಳನ್ನೇ ನಾಟಕವನ್ನಾಗಿ “ರಂಗಪಯಣ” ಕಟ್ಟಿದ್ದು, ಈ ತಂಡದ ಯಶಸ್ವಿ ಉತ್ಸವ ಎಂದರೆ ಅದು ಶಂಕರ್‌ನಾಗ್ ನಾಟಕೋತ್ಸವ” ಎಂದು ಹೇಳಿದ್ದಾರೆ.

”ಶಂಕರ್‌ನಾಗ್ ಎಂಬ ಚೇತನ ಉತ್ಸಾಹದ ಚಿಲುಮೆ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹಲವಾರು ಕನಸುಗಳನ್ನು ಕಂಡ ಶಕ್ತಿ ಅಂತಹ ಎಷ್ಟೋ ಕನಸುಗಳು ಇಂದಿನ ಯುವಕ ಮಿತ್ರರಿಗೆ ತಲುಪಲಿ ರಂಗಭೂಮಿ ಜೀವಂತಿಕೆಯ ನೆಲದ ಕಡೆ ಆಕರ್ಷಿತರಾಗಲಿ ಎಂಬ ಉದ್ದೇಶದಿಂದ ಈ ಶಂಕರ್‌ನಾಗ್ ರಂಗೋತ್ಸವ ಕಾರ್ಯಕ್ರಮ ಆರಂಭಿಸಲಾಯಿತು. ಸತತ 5 ವರ್ಷ ಯಶಸ್ವಿಯಾಗಿ ಈ ಉತ್ಸವ ನಡೆಸಿಕೊಂಡು ಬಂದಿದ್ದು, ಆರನೇ ವರ್ಷಕ್ಕೆ ಕಾಲಿಟ್ಟಿದೆ” ಎಂದು ಹೇಳಿದ್ದಾರೆ.

”ತಂಡದ ನಾಯಕಿಯಾದ ನಯನಸೂಡರ ನಿರ್ದೇಶನದಲ್ಲಿ ಪ್ರತಿವರ್ಷ ಈ ಉತ್ಸವ ನಡೆಯುತ್ತದೆ. ಸರ್ಕಾರದಿಂದ ಯಾವುದೇ ಸಹಾಯ ಪಡೆಯದೆ ನಡೆಯುವ ಈ ಉತ್ಸವ ಜನರ, ರಂಗಹಿರಿಯರ, ರಂಗತಂಡಗಳ ಕಲಾಭಿಮಾನಿಗಳ ಸಹಕಾರದಿಂದ ನಡೆಯುತ್ತಾ ಬಂದಿದ್ದು, ಈಗ ಆರನೇ ವರ್ಷಕ್ಕೆ ಕಾಲಿಡುತ್ತಿದೆ. ಇದೇ ನವೆಂಬರ್ 20ರಂದು  ನಾಟಕೋತ್ಸವ ಆರಂಭವಾಗಿ 24ಕ್ಕೆ ಮುಕ್ತಾಯಗೊಳ್ಳಲಿದೆ. ಈ ಉತ್ಸವದಲ್ಲಿ ತಾವು ಸಾಕ್ಷಿಯಾಗಬೇಕು” ಎಂದು ರಂಗಪಯಣ ತಂಡ ಮನವಿ ಮಾಡಿದೆ.

ನಾಟಕಗಳ ವಿವರ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...