Homeಮುಖಪುಟಪ್ರಜಾಪ್ರಭುತ್ವಕ್ಕೆ 'ಶ್ರದ್ಧಾಂಜಲಿ' ಸಲ್ಲಿಸಿದ ಶಿವಸೇನೆ ಸಂಸದ ಸಂಜಯ್ ರಾವತ್

ಪ್ರಜಾಪ್ರಭುತ್ವಕ್ಕೆ ‘ಶ್ರದ್ಧಾಂಜಲಿ’ ಸಲ್ಲಿಸಿದ ಶಿವಸೇನೆ ಸಂಸದ ಸಂಜಯ್ ರಾವತ್

- Advertisement -
- Advertisement -

ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪಕ್ಷವನ್ನು ನಿಜವಾದ ಶಿವಸೇನೆ ಎಂದು ಘೋಷಿಸಿ, ಎರಡೂ ಬಣದ ಶಾಸಕರನ್ನು ಅನರ್ಹಗೊಳಿಸುವ ಮನವಿಯನ್ನು ತಿರಸ್ಕರಿಸಿದ್ದಾರೆ. ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಗುರುವಾರ ಇದನ್ನು ಪ್ರಜಾಪ್ರಭುತ್ವದ ಸಾವು ಎಂದು ಕರೆದಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ’ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ, ಪ್ರಜಾಪ್ರಭುತ್ವ 1950-2023 ಶೋಕ: ಮಹಾರಾಷ್ಟ್ರ.’ ಎಂದು ಮರಾಠಿಯಲ್ಲಿ ಪ್ರಜಾಪ್ರಭುತ್ವ ಎಂದು ಬರೆದಿರುವ ಚೌಕಟ್ಟಿನ ಮೇಲೆ ಹಾರವನ್ನು ಹಾಕಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಬಾಳಾ ಠಾಕ್ರೆ ಅವರು ಸ್ಥಾಪಿಸಿದ ಪ್ರಾದೇಶಿಕ ಪಕ್ಷದ ಪ್ರಾಬಲ್ಯಕ್ಕಾಗಿ ಉದ್ಧವ್ ಠಾಕ್ರೆ ಬಣದ ಶಿವಸೇನೆ ಬಣ ಮತ್ತು ಬಿಜೆಪಿ ನೇತೃತ್ವದ ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಬುಧವಾರ ಸಾಕ್ಷಿಯಾಗಿದೆ.

ಶಿವಸೇನೆಯ ಎರಡು ಬಣಗಳು ಸಲ್ಲಿಸಿರುವ ದೀರ್ಘಕಾಲದ ಅರ್ಜಿಗಳನ್ನು ಪರಿಹರಿಸುವಂತೆ ಸುಪ್ರೀಂ ಕೋರ್ಟ್ ಗಡುವು ನಿಗದಿಪಡಿಸಿದ ವಾರಗಳ ನಂತರ ನಾರ್ವೇಕರ್ ಅವರ ನಿರ್ಧಾರವು ಮಹಾರಾಷ್ಟ್ರ ವಿಧಾನಸಭೆ ರಚನೆಯ ಸ್ಥಿರತೆಯನ್ನು ಖಚಿತಪಡಿಸಿದ್ದು, ಶಿಂಧೆ ಅವರ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾವುತ್, ‘ನ್ಯಾಯವನ್ನು ಪೂರೈಸಲು ನ್ಯಾಯಮಂಡಳಿಯಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ವಿಧಾನಸಭೆ ಸ್ಪೀಕರ್‌ಗೆ ನೀಡಿದೆ. ಆದರೆ, ಈಗ ಬಿಜೆಪಿ ನಾಯಕರಾಗಿರುವ ನಮ್ಮ ಅಸೆಂಬ್ಲಿ ಸ್ಪೀಕರ್ (ರಾಹುಲ್ ನಾರ್ವೇಕರ್), ಈ ಹಿಂದೆ ಶಿವಸೇನೆ, ಕಾಂಗ್ರೆಸ್ ಮತ್ತು ಇತರ ಹಲವು ಪಕ್ಷಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಏಕನಾಥ್ ಶಿಂಧೆಯ ‘ಅಪ್ರಾಮಾಣಿಕ ಬಣದ’ ವಕೀಲರಾಗಲು ಆಯ್ಕೆ ಮಾಡಿಕೊಂಡರು. ಹೀಗಿರುವಾಗ ನಮಗೆ ನ್ಯಾಯ ಸಿಗುವುದು ಹೇಗೆ’ ಎಂದು ಪ್ರಶ್ನಿಸಿದರು.

ತೀರ್ಪು ಪ್ರಕಟವಾದ ಕೂಡಲೇ ರಾವತ್ ಅವರು ಬಿಜೆಪಿಯನ್ನು ದೇಶದ್ರೋಹಿಗಳು ಎಂದು ಟೀಕಿಸಿದ್ದಾರೆ. ನಾರ್ವೇಕರ್ ಅವರ ತೀರ್ಪಿನ ವಿರುದ್ಧ ಶಿವಸೇನೆ (ಯುಬಿಟಿ) ಬಣ ಸುಪ್ರೀಂ ಕೋರ್ಟ್‌ಗೆ ಹೋಗಲಿದೆ ಎಂದು ಅವರು ಹೇಳಿದರು.

‘ಶಿವಸೇನೆ ಎಂದಿಗೂ ಮುಗಿಯುವುದಿಲ್ಲ ಮತ್ತು ಮಹಾರಾಷ್ಟ್ರದ ಜನರು ಈ ದೇಶದ್ರೋಹಿಗಳ ಸೇನೆಯನ್ನು ಒಪ್ಪಿಕೊಳ್ಳುವುದಿಲ್ಲ. ಇದು ಬಿಜೆಪಿಯ ಷಡ್ಯಂತ್ರ. ಮುಂದೊಂದು ದಿನ ಅವರು ಬಾಳಾಸಾಹೇಬ್ ಠಾಕ್ರೆಯವರ ಶಿವಸೇನೆಯನ್ನು ಮುಗಿಸುತ್ತಾರೆ ಎಂಬುದು ಅವರ ಕನಸಾಗಿತ್ತು. ಆದರೆ ಈ ಒಂದು ನಿರ್ಧಾರದಿಂದ ಶಿವಸೇನೆ ಮುಗಿಸಲು ಸಾಧ್ಯವಿಲ್ಲ’ ಎಂದರು.

ಸ್ಪೀಕರ್ ಆದೇಶವನ್ನು “ಪಿತೂರಿ” ಎಂದು ಹೇಳಿದ ಅವರು, ಇದು ಮರಾಠಿ ಸಮುದಾಯಕ್ಕೆ “ಕಪ್ಪು ದಿನ” ಎಂದರು. ‘ದಿಲ್ಲಿಯಿಂದ ಸ್ಪೀಕರ್ ಆದೇಶವನ್ನು ಸ್ವೀಕರಿಸಲಾಗಿದೆ, ನಾವು ಅದನ್ನು ಸ್ವೀಕರಿಸುವುದಿಲ್ಲ. ಈ ಆದೇಶ ಕಾನೂನು ಮತ್ತು ಸಂವಿಧಾನದ ಪ್ರಕಾರ ಅಲ್ಲ’ ಎಂದರು ಹೇಳಿದರು.

ಇದನ್ನೂ ಓದಿ; ಟಿಎಂಸಿ INDIA ಮೈತ್ರಿಕೂಟದ ಜೊತೆ ಇರಲಿದೆ: ಸೀಟು ಹಂಚಿಕೆ ವಿವಾದದ ಮಧ್ಯೆ ಮಮತಾ ಬ್ಯಾನರ್ಜಿ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...