Homeಮುಖಪುಟಶಿವಸೇನೆ ಹೆಸರು, ಚಿಹ್ನೆ ಶಿಂಧೆ ಬಣಕ್ಕೆ: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಠಾಕ್ರೆ

ಶಿವಸೇನೆ ಹೆಸರು, ಚಿಹ್ನೆ ಶಿಂಧೆ ಬಣಕ್ಕೆ: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಠಾಕ್ರೆ

- Advertisement -
- Advertisement -

ಚುನಾವಣಾ ಆಯೋಗವು ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿರುವ ನಿರ್ಧಾರದ ಬಗ್ಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಸೋಮವಾರ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ಈ ವಿಷಯವನ್ನು ಆರಂಭಿಕ ಪಟ್ಟಿಗಾಗಿ ಪ್ರಸ್ತಾಪಿಸಿದರು. ಆದರೆ, ಈ ವಿಷಯವು ಉಲ್ಲೇಖಿತ ಪಟ್ಟಿಯ ಭಾಗವಾಗಿಲ್ಲದ ಕಾರಣ ಯಾವುದೇ ಆದೇಶವನ್ನು ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

“ನಿಯಮವು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯಿಸುತ್ತದೆ. ಹಾಗಾಗಿ ಸೂಕ್ತ ಪ್ರಕ್ರಿಯೆಯ ಮೂಲಕ ನಾಳೆ ಬನ್ನಿ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು ಎಂದು ಪಿಟಿಐ ವರದಿ ಮಾಡಿದೆ.

ಈ ಹಿಂದೆ, ಮಹಾರಾಷ್ಟ್ರದಲ್ಲಿ ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷಗಳ ಸಮ್ಮಿಶ್ರ ಸರ್ಕಾರವಿತ್ತು. ಆದರೆ, ಕಳೆದ ವ‍ರ್ಷ ಜೂನ್‌ನಲ್ಲಿ ಠಾಕ್ರೆ ನಾಯಕತ್ವದ ವಿರುದ್ಧ ಶಿಂಧೆ ಹಾಗೂ ಅವರ ಬೆಂಬಲಿತ ಶಾಸಕರ ಗುಂಪು ಬಂಡಾಯವೆದ್ದಿತು. ಇದರಿಂದ ಶಿವಸೇನೆ ವಿಭಜನೆಯಾಗಿ ಸರ್ಕಾರ ಪತನವಾಯಿತು.

ಇದನ್ನೂ ಓದಿ: ಇಂದಿರಾ ಗಾಂಧಿ ಕಾಂಗ್ರೆಸ್ ಚಿಹ್ನೆ ಕಳೆದುಕೊಂಡಿದ್ದನ್ನು ಠಾಕ್ರೆಗೆ ನೆನಪಿಸಿದ ಶರದ್ ಪವಾರ್

ಭಾರತದ ಚುನಾವಣಾ ಆಯೋಗವು ಫೆಬ್ರವರಿ 17 ರಂದು, ನೀಡಿರುವ ಆದೇಶದಿಂದ ಶಿವಸೇನೆಯ ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಹಿನ್ನಡೆಯಾಗಿದೆ. ಪಕ್ಷದ ಹೆಸರು “ಶಿವಸೇನಾ” ಮತ್ತು “ಬಿಲ್ಲು ಮತ್ತು ಬಾಣ” ಚಿಹ್ನೆಯನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ನೀಡಿದೆ.

ಚುನಾವಣಾ ಸಮಿತಿಯ ನಿರ್ಧಾರದ ನಂತರ, ಶಿವಸೇನೆಯ ವೆಬ್‌ಸೈಟ್ shivsena.in ಅನ್ನು ಅಳಿಸಲಾಗಿದೆ ಮತ್ತು ಅದರ ಟ್ವಿಟರ್ ಖಾತೆಯ ಹೆಸರನ್ನು ”ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ” ಎಂದು ಬದಲಾಯಿಸಲಾಗಿದೆ.

ಸೋಮವಾರ ಮುಂಬೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಠಾಕ್ರೆ ಅವರು ತಮ್ಮ ಬಣದ ಎಲ್ಲಾ ಶಾಸಕರನ್ನು ಕೇಳಿಕೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಜಾಗರೂಕರಾಗಿರಿ: ರಾಜಕೀಯ ಪಕ್ಷಗಳಿಗೆ ಠಾಕ್ರೆ ಎಚ್ಚರಿಕೆ

ಚುನಾವಣಾ ಆಯೋಗದ ಆದೇಶವನ್ನು ಗಮನದಲ್ಲಿಟ್ಟುಕೊಂಡು ಜಾಗರೂಕರಾಗಿರಬೇಕು ಎಂದು ರವಿವಾರ ಠಾಕ್ರೆ ಇತರ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

“ಶಿವಸೇನೆಗೆ ಏನಾಯಿತು, ನಮ್ಮನ್ನು ಹೇಗೆ ನಡೆಸಿಕೊಳ್ಳಲಾಗಿದೆ, ನಿಮಗೂ ಆಗಬಹುದು, ಎಲ್ಲಾ ಪಕ್ಷಗಳು ತಮ್ಮ ಕಣ್ಣುಗಳನ್ನು ತೆರೆದಿರಬೇಕು ಮತ್ತು ಜಾಗರೂಕರಾಗಿರಬೇಕು” ಎಂದು ಠಾಕ್ರೆ ಹೇಳಿದ್ದಾರೆ.

ಶಿಂಧೆಯವರ ಬಂಡಾಯವನ್ನು ನೆನಪಿಸಿಕೊಂಡ ಠಾಕ್ರೆ, ಪಕ್ಷ ಬಿಡಲು ಬಯಸುವವರು ಹೊರಹೋಗಲು ಸ್ವತಂತ್ರರು, ಅವರು ಬೇರೆ ಪಕ್ಷದೊಂದಿಗೆ ವಿಲೀನವಾಗಬೇಕಿತ್ತು. ಆದರೆ ಈ ವ್ಯಕ್ತಿ ನಮ್ಮನ್ನೇ ನಮ್ಮ ಸ್ವಂತ ಮನೆಯಿಂದ ಹೊರಹಾಕಲು ಮತ್ತು ನಮ್ಮ ಮನೆಯನ್ನೇ ಸ್ವಾಧೀನಪಡಿಸಿಕೊಳ್ಳಲು ಬಯಸಿದ್ದಾರೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹೇಳಿದರು.

“ನನ್ನ ತಂದೆ [ಬಾಳಾ ಸಾಹೇಬ್ ಠಾಕ್ರೆ] ಈ ಜನರನ್ನು ಬೆಳೆಸಿದರು ಮತ್ತು ಶಿವಸೈನಿಕರು ಅವರನ್ನು ಬೆಂಬಲಿಸಿದರು. ಆದರೆ ಈಗ ಅವರೇ ಮಾಲೀಕರಾಗಲು ಬಯಸುತ್ತಾರೆ ಮತ್ತು ನಮ್ಮ ಸಂಸ್ಥೆಗಳು (ಚುನಾವಣಾ ಆಯೋಗ) ಕಳ್ಳನನ್ನೇ ಮನೆಯ ಮಾಲೀಕರನ್ನಾಗಿ ಮಾಡಿ ನಿರ್ಧಾರ ತಗೆದುಕೊಂಡಿದೆ. ದೇಶದಲ್ಲಿ ಏನಾಗುತ್ತಿದೆ?” ಎಂದು ಪ್ರಶ್ನೆ ಮಾಡಿದ್ದಾರೆ.

ಸರದಿಯ ಆಧಾರದ ಮೇಲೆ ಕೇಸರಿ ಪಕ್ಷವು ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವ ತನ್ನ ಬದ್ಧತೆಯನ್ನು ತೋರಿದ್ದರೆ, ಭಾರತೀಯ ಜನತಾ ಪಕ್ಷದೊಂದಿಗಿನ ಶಿವಸೇನೆಯ ಮೈತ್ರಿಯು ಉಳಿಯುತ್ತಿತ್ತು ಎಂದು ಠಾಕ್ರೆ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಂಧ್ರಪ್ರದೇಶ: 7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ

0
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು...