Homeಮುಖಪುಟಸಿದ್ದು ಜನಪ್ರಿಯ ನಾಯಕರು, ಜನಾಭಿಪ್ರಾಯದಿಂದ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ವೈರಲ್ ಆಡಿಯೋದಲ್ಲಿರುವುದೇನು?

ಸಿದ್ದು ಜನಪ್ರಿಯ ನಾಯಕರು, ಜನಾಭಿಪ್ರಾಯದಿಂದ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ವೈರಲ್ ಆಡಿಯೋದಲ್ಲಿರುವುದೇನು?

ಅಮಿತ್ ಶಾ ಅವರದು ಒಂಥರಾ ರೌಡಿಸಂ, ಯಾರನ್ನೂ ಬಿಡೋಲ್ಲ. ಅಂದ್ರೆ ಯಾರಾದ್ರೂ ಇತರ ಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ ಅದನ್ನು ಸಹಿಸೋಲ್ಲ. ಅವರ ಬುಡ ಬಿಡೋಲ್ಲ

- Advertisement -
- Advertisement -

ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿಯ ಕಾರ್ಯಕರ್ತರ ಜೊತೆ ರಾಜ್ಯ ರಾಜಕೀಯದ ಆಗುಹೋಗುಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ಒಂದು ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಂಭಾಷಣೆ ತಮ್ಮದಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆ. ಆದರೆ ಅದರಲ್ಲಿ ಇರು ಮಾತುಗಳು ಗಮನ ಸೆಳೆಯುತ್ತಿವೆ. ವೈರಲ್ ಆಡಿಯೋದಲ್ಲೇನಿದೆ ಎಂಬುದನ್ನು ಇಲ್ಲಿ ನೀಡುವ ಪ್ರಯತ್ನ ಮಾಡಿದ್ದೇವೆ.

ಗುಬ್ಬಿ ಶ್ರೀನಿವಾಸ್, ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ, ಗನ್ ಮಂಜು, ಡಾ.ಶ್ರೀನಿವಾಸಮೂರ್ತಿ, ಅನ್ನದಾನಿ, ಡಿ.ಸಿ ತಮ್ಮಣ್ಣ, ಎಂ.ಶ್ರೀನಿವಾಸ್, ಸಾ.ರಾ ಮಹೇಶ್, ಟಿ.ನರಸೀಪುರದ ಶಾಸಕ, ರಾಮನಗರದಲ್ಲಿ ಒಬ್ಬರು ಸೋಲುತ್ತಾರೆ. ಚನ್ನಪಟ್ಟಣ ಅಂತಲೇ ಅಲ್ಲ, ಅಲ್ಲಿ ಕುಮಾರಸ್ವಾಮಿಯವರು ಗೆಲ್ಲಬಹುದು. ಆದರೆ ರಾಮನಗರದ ಮೂವರು ಶಾಸಕರಲ್ಲಿ ಒಬ್ಬರು ಸೋಲುತ್ತಾರೆ. ಒಟ್ಟಿನಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ 12 ಜನ ಹಾಲಿ ಶಾಸಕರು ಸೋಲುತ್ತಾರೆ. ಉತ್ತರ ಕರ್ನಾಟಕದಲ್ಲಿ 5 ಜನರಲ್ಲಿ 3 ಜನ ಸೋಲುತ್ತಾರೆ. ಅದೇ ರೀತಿ ಮಧುಗಿರಿಯ ವೀರಭದ್ರಯ್ಯ, ಬೇಲೂರು ಲಿಂಗೇಶ್, ಚಿಂತಾಮಣಿಯಲ್ಲಿ ಕೃಷ್ಣಾ ರೆಡ್ಡಿ, ಸಕಲೇಶಪುರದಲ್ಲಿ ಕುಮಾರಸ್ವಾಮಿ ಸೇರಿದಂತೆ ಒಟ್ಟು 19 ಜನ ಶಾಸಕರು ಸೋಲುತ್ತಾರೆ ಎಂದು ಹೇಳಲಾಗಿದೆ.

ಸಾ.ರಾ ಮಹೇಶ್ ಯಾಕೆ ಸೋಲುತ್ತಾರೆಂದರೆ ಕಳೆದ ಬಾರಿ ಅವರು ಕಡಿಮೆ ಅಂತರದಲ್ಲಿ ಸೋತಿದ್ದರು. ಈ ಬಾರಿ ಇಬ್ಬರೂ ಒಕ್ಕಲಿಗ ಕ್ಯಾಂಡಿಡೇಟ್ ಇದ್ದು ಕಾಂಗ್ರೆಸ್‌ ಅಲ್ಲಿ ಗೆಲ್ಲುತ್ತದೆ. ಬಿಜೆಪಿಯಿಂದ ನಾವು ಕಳೆದ ಬಾರಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದೆವು. ದೇವೇಗೌಡರ ಜೊತೆ ಮಾತನಾಡಿದ್ದೆವು. ಎಂದು ಹೇಳುವುದು ದಾಖಲಾಗಿದೆ.

ಈ ಬಾರಿ ಜನಾಭಿಪ್ರಾಯದಿಂದ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಆದರೆ, ನಾವು ಬಿಜೆಪಿ ಸರ್ಕಾರ ರಚಿಸುತ್ತೇವೆ. ಮಾವಿನ ಹಣ್ಣು ಮರದಲ್ಲಿಯೇ ಹಣ್ಣು ಆಗುವುದಕ್ಕೂ, ತಂದು ಕೆಮಿಕಲ್ ಹಾಕಿ ಹಣ್ಣು ಮಾಡುವುದಕ್ಕೂ ವ್ಯತ್ಯಾಸವಿದೆ. ಕಾಂಗ್ರೆಸ್ ಸ್ಟ್ರಾಂಗ್ ಇಲ್ಲ. ಸಿದ್ದರಾಮಯ್ಯನವರಿಗೆ ಪಟ್ಟ ಕಟ್ಟಲು ಹಿರಿಯ ನಾಯಕರಿಗೆ ಇಷ್ಟವಿಲ್ಲ. ಸಂಕ್ರಾಂತಿ ನಂತರ ಹಳೆ ಮೈಸೂರು ಭಾಗದಲ್ಲಿ ದೊಡ್ಡ ಬದಲಾವಣೆ ಮಾಡುತ್ತೀವಿ. ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿಗೆ ಬರುತ್ತಾರೆ. ಅದರಿಂದ ನಾಲ್ಕೈದು ಕ್ಷೇತ್ರಗಳಲ್ಲಿ ಬಿಜೆಪಿಗೆ 2-3 ಮತಗಳು ಪ್ಲಸ್ ಆಗುತ್ತವೆ. ಮಂಡ್ಯದಲ್ಲಿ ಒಬ್ಬರು ಬರುತ್ತಾರೆ. ಕೋಲಾರದಲ್ಲಿ ಒಬ್ಬರು ದಲಿತ ಲೀಡರ್ ಬರುತ್ತಾರೆ. ಅವರು 7-8 ಬಾರಿ ಸಂಸದರಾಗಿದ್ದರು. ಆದರೆ ನಮ್ಮವರೆ ಇನ್ನು ಒಪ್ಪುತ್ತಿಲ್ಲ.

25 ಜನರನ್ನು ಬಿಜೆಪಿಗೆ ತರುವ ಯೋಚನೆಯಲ್ಲಿದ್ದೇವೆ. ಚುನಾವಣೆ ಗೆದ್ದಮೇಲೆ ಆಪರೇಷನ್ ಕಮಲ ಮಾಡುವುದಿಲ್ಲ ನಾವು. ಮೊದಲೆ ಮಾಡಿಬಿಡುತ್ತೇವೆ. ಸುಮ್ಮನೆ ಯಾಕೆ ಆಪರೇಷನ್ ಕಮಲದ ಕೆಟ್ಟ ಹೆಸರು ಎಂದರು.

ಸಿದ್ದರಾಮಯ್ಯ ಅವರು ಜನಪ್ರಿಯ ನಾಯಕರು. ಅದರಲ್ಲಿ ಡೌಟ್ ಇಲ್ಲ. ಅವರು ಕೋಲಾರದಲ್ಲಿ ಗೆಲ್ಲುತ್ತಾರೆ. ಅವರಂತಹ ರಾಜಕಾರಣಿಗಳು ಇರಬೇಕು. ಆದರೆ ಅವರು ಎಷ್ಟು ಜನಪ್ರಿಯರು, 120 ಗೆಲ್ಲಿಸಿ, ಪಕ್ಷ ಬಹುಮತ ಪಡೆದು ಸರ್ಕಾರ ರಚಿಸುವಷ್ಟು ಜನಪ್ರಿಯರೆ ಎನ್ನುವುದು ಗೊತ್ತಿಲ್ಲ. ಅವರು ಕೋಲಾರದಲ್ಲಿ ಗೆಲ್ಲುತ್ತಾರೆ, ಅವರು ಗೆದ್ದ ಬಳಿಕವೇ ನಿಜವಾದ ರಾಜಕೀಯ ಶುರುವಾಗುತ್ತೆ. ಗೆದ್ದ ಮೇಲೆ ಅವರು ಮುಖ್ಯಮಂತ್ರಿ ಆಗದೇ ಬಿಡ್ತಾರಾ? ಇದು ಅವರ ಕೊನೆಯ ಪ್ರಯತ್ನ. ಆಗಲೇ ರಾಜಕೀಯ ಶುರುವಾಗುವುದು ಎಂದಿದ್ದಾರೆ.

ನಾನು ಕುಮಾರಸ್ವಾಮಿ ಅವರ ವಿರುದ್ಧ ಚನ್ನಪಟ್ಟದಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದೇನೆ. ಅದೇ ರೀತಿ ಸಚಿವ ಅಶೋಕ್‌ ಅವರು ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರ ಎದುರು, ಸಚಿವ ಅಶ್ವತ್ಥನಾರಾಯಣ ಅವರು ರಾಮನಗರದಲ್ಲಿ  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರ ಸ್ವಾಮಿ ಅವರ ಎದುರು ಸ್ಪರ್ಧಿಸಬೇಕು. ಹಾಗೆ ಕಟ್ಟಿ ಹಾಕಬೇಕು. ಹೇಗಿದ್ದರೂ ಪಕ್ಷವು ನಮ್ಮ ಬೆಂಬಲಕ್ಕೆ ಬರಲಿದೆ. ಸೋತರೆ ಎಂಎಲ್‌ಸಿ ಮಾಡಿ ಮಂತ್ರಿ ಮಾಡುತ್ತಾರೆ ಎಂದು ಹೇಳಲಾಗಿದೆ.

ಅಮಿತ್‌ ಶಾ ಹೇಳಿದ್ದಾರೆ ಹೊಂದಾಣಿಕೆ ಮಾಡಿಕೊಳ್ಳಬೇಡಿ ಅಂತ. ಬಹಳ ಕೆಟ್ಟದಾಗಿ ಹೇಳಿದರು. ಹೊಂದಾಣಿಕೆ ತಾಯಿಗೆ ದ್ರೋಹ ಬಗೆದ ಹಾಗೆ ಅಂತ. ಅಮಿತ್ ಶಾ ಅವರದು ಒಂಥರಾ ರೌಡಿಸಂ, ಯಾರನ್ನೂ ಬಿಡೋಲ್ಲ. ಅಂದ್ರೆ ಯಾರಾದ್ರೂ ಇತರ ಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ ಅದನ್ನು ಸಹಿಸೋಲ್ಲ. ಅವರ ಬುಡ ಬಿಡೋಲ್ಲ ಎಂದರು.

ʼಮೂವತ್ತು ಜನರನ್ನೂ ಅಮಿತ್‌ ಶಾ ಕರೆದಿದ್ದರು. ನನಗೆ ಗೊತ್ತು ಯಾರು ಪಕ್ಷಕ್ಕೆ ದ್ರೋಹ ಮಾಡ್ತಿದ್ದೀರಾ, ಇತರ ಪಕ್ಷಗಳ ಜೊತೆ ಅಂಡರ್ ಸ್ಟಾಂಡಿಂಗ್‌ ಮಾಡಿಕೊಂಡಿದ್ದೀರಾ ಎನ್ನುವುದು ಗೊತ್ತು ಎಂದು ಭಾರಿ ಕೆಟ್ಟದಾಗ್‌ ಮಾತನಾಡಿದ್ರು, ನೀಟಾಗಿ ಹೇಳಿದ್ರು, ಮೂರು ಗಂಟೆ ತಗೊಂಡ್ರು. ಪುನಃ ಕ್ಲಾಸ್ ತಗೋತ್ತಾರೆ ಅಂತೆ. ಆಗ ನಾನು ನೇರವಾಗಿ ಹೇಳಿಬಿಡ್ತೀನಿ. ನಾನು ಕುಮಾರಸ್ವಾಮಿ ಅವರ ವಿರುದ್ಧ ಚನ್ನಪಟ್ಟದಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದೇನೆ. ಅದೇ ರೀತಿ ಸಚಿವ ಅಶೋಕ್‌ ಅವರು ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರ ಎದುರು, ಸಚಿವ ಅಶ್ವತ್ಥನಾರಾಯಣ ಅವರು ರಾಮನಗರದಲ್ಲಿ  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರ ಸ್ವಾಮಿ ವಿರುದ್ಧ ಸ್ಪರ್ಧಿಸುತ್ತಾರೆ ಅಂತ 8-10 ಪಟ್ಟಿ ಮಾಡಿ ಹೇಳಿಬಿಡ್ತೀನಿ. ಆಗ ಚರ್ಚೆಯಾಗಲಿ. ಫೆಬ್ರವರಿ ಮಾರ್ಚ್‌ ನಲ್ಲಿ ಗೊತ್ತಾಗುತ್ತದೆ ಎಂದಿದ್ದಾರೆ. ಕೊನೆಯಲ್ಲಿ ಸಂಕ್ರಾಂತಿಯ ಶುಭಾಷಯಗಳನ್ನು ತಿಳಿಸಿರುವುದು ನೋಡಿದರೆ ಅದು ಇತ್ತೀಚಿನ ಆಡಿಯೋ ಎಂದು ದೃಢವಾಗುತ್ತದೆ.

ಇದನ್ನೂ ಓದಿ: ಪಂಚಮಸಾಲಿಯೊಳಗೆ ಯತ್ನಾಳ್- ನಿರಾಣಿ ಕುಸ್ತಿ: ಸಭ್ಯತೆ ಮೀರಿದ ಟೀಕಾಪ್ರಹಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಮತಾ ಕುರಿತು ಆಕ್ಷೇಪಾರ್ಹ ಟೀಕೆ; ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ವಿರುದ್ಧ ಚುನಾವಣಾ ಆಯೋಗಕ್ಕೆ...

0
ಸಾರ್ವಜನಿಕ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದಾರೆ ಎಂದು ಆರೋಪಿಸಿ ತಮ್ಲುಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶುಕ್ರವಾರ ಚುನಾವಣಾ...