Homeಅಂತರಾಷ್ಟ್ರೀಯಪಾಲ್ ಲಿಂಚ್ ಅವರ ಕಾದಂಬರಿ 'ಪ್ರೊಫೆಟ್ ಸಾಂಗ್‌'ಗೆ 2023ರ ಬೂಕರ್ ಪ್ರಶಸ್ತಿ

ಪಾಲ್ ಲಿಂಚ್ ಅವರ ಕಾದಂಬರಿ ‘ಪ್ರೊಫೆಟ್ ಸಾಂಗ್‌’ಗೆ 2023ರ ಬೂಕರ್ ಪ್ರಶಸ್ತಿ

- Advertisement -
- Advertisement -

ಐರಿಶ್ ಲೇಖಕ ಪಾಲ್ ಲಿಂಚ್ ಅವರ 5ನೇ ಕಾದಂಬರಿ ಪ್ರೊಫೆಟ್ ಸಾಂಗ್‌ 2023ರ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಈ ಕಾದಂಬರಿಯನ್ನು ಮನಮುಟ್ಟುವಂತಿದೆ ಮತ್ತು ಆತ್ಮಾವಲೋಕನಕ್ಕೆ ಪೂರಕ ಅಂಶಗಳನ್ನು ಒಳಗೊಂಡಿದೆ.  ಅದು ನಮ್ಮ ಪ್ರಸ್ತುತ ಕ್ಷಣದ ಸಾಮಾಜಿಕ ಮತ್ತು ರಾಜಕೀಯ ಆತಂಕಗಳ ಕುರಿತು ಬೆಳಕು ಚೆಲ್ಲುತ್ತದೆ ಎಂದು ತೀರ್ಪುಗಾರ ಇಸಿ ಎಡುಗ್ಯಾನ್ ಅವರು ಹೇಳಿದ್ದಾರೆ.

ಬೂಕರ್ ಪ್ರಶಸ್ತಿಗೆ ಸ್ವತಃ 2 ಬಾರಿ ಶಾರ್ಟ್‌ಲಿಸ್ಟ್ ಆಗಿರುವ ಕೆನಡಾದ ಕಾದಂಬರಿಕಾರ ಎಡುಗ್ಯಾನ್, ಲಿಂಚ್‌ಗೆ  ಬಹುಮಾನವನ್ನು ನೀಡುವ ನಿರ್ಧಾರವು ಸರ್ವಸಮ್ಮತವಾಗಿರಲಿಲ್ಲ ಮತ್ತು ಸುಮಾರು 6 ಗಂಟೆಗಳ ಕಾಲ ನಡೆದ ಚರ್ಚೆ ಮತ್ತು ಬಹು ಸುತ್ತಿನ ಮತದಾನದ ಮೂಲಕ ಇತ್ಯರ್ಥವಾಯಿತು ಎಂದು ಹೇಳಿದ್ದರು. ಅವರಿಗೆ ಬಹುಮಾನ 50,000 ಪೌಂಡ್ ಸಿಗಲಿದೆ.

ಐರ್ಲ್ಯಾಂಡ್‌ನಲ್ಲಿ ಮಹಿಳೆಯೊಬ್ಬರು ತನ್ನ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುವ ಭಯಾನಕ ಸಂಗತಿಗಳನ್ನು ಅವು ಒಳಗೊಂಡಿದೆ. ದೇಶದಲ್ಲಿನ ದಬ್ಬಾಳಿಕೆಯ ಘಟನೆಯನ್ನು ಎಳೆಎಳೆಯಾಗಿ ಮುಂದಿಡುವ ಪ್ರಯತ್ನವನ್ನು ಕಾದಂಬರಿಕಾರರು ಪ್ರಯತ್ನಿಸಿದ್ದಾರೆ. ಈ ಕಾದಂಬರಿ ಭಾವನಾತ್ಮಕ ಕಥೆಯನ್ನು ಒಳಗೊಂಡಿದ್ದು, ಧೈರ್ಯ ಮತ್ತು ಶೌರ್ಯದ ಬಗ್ಗೆ ವಿವರಿಸುತ್ತದೆ.

ನಾನು ಬೂಕರ್‌ ಪ್ರಶಸ್ತಿಯನ್ನು ಐರ್ಲೆಂಡ್‌ಗೆ ತಂದಿದ್ದೇನೆ. ಇದರಿಂದ ಅಪಾರ ಸಂತೋಷವಾಗಿದೆ ಎಂದು ಮಾಜಿ ಚಲನಚಿತ್ರ ವಿಮರ್ಶಕ ಲಿಂಚ್ ಬಹುಮಾನವನ್ನು ಸ್ವೀಕರಿಸಿದ ನಂತರ ಹೇಳಿದ್ದಾರೆ. ನಾನು ಅನೇಕ ವರ್ಷಗಳ ಹಿಂದೆ ಸಿಸಿಲಿಯಲ್ಲಿ ರಜಾದಿನಗಳಲ್ಲಿ ಒಂದು ಕ್ಷಣ ನಾನು ಬರೆಯಬೇಕು ಎಂದು ನಿರ್ಧರಿಸಿದೆ.  ನಾನು ಮಾಡಿದ ಕೆಲಸದಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಡಬ್ಲಿನ್‌ನಲ್ಲಿ ಮಹಿಳೆ ಮತ್ತು ಮೂವರು ಮಕ್ಕಳಿಗೆ ಇರಿತದ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು, ಇದಾದ ಕೆಲವೇ ದಿನಗಳಲ್ಲಿ ಈ ಪ್ರಶ್ತಸ್ತಿ  ಹೊರಬಿದ್ದಿದೆ. ಡಬ್ಲಿನ್‌ನಲ್ಲಿ ಎಚ್ಚರಿಕೆ ಇದೆ ಎಂದು ನಿರ್ದಿಷ್ಟವಾಗಿ ಹೇಳಲು ನಾನು ಈ ಪುಸ್ತಕವನ್ನು ಬರೆದಿಲ್ಲ, ಈ ಪುಸ್ತಕದಲ್ಲಿ ನಡೆಯುತ್ತಿರುವ ಸಂಗತಿಗಳು ಯುಗಯುಗಾಂತರಗಳಲ್ಲಿ ಕಾಲಾತೀತವಾಗಿ ಸಂಭವಿಸುತ್ತಿವೆ ಮತ್ತು ಬಹುಶಃ ನಾವು ನಮ್ಮದೇ ಆದ ಪ್ರತಿಕ್ರಿಯೆಗಳನ್ನು ಗಾಢವಾಗಿಸಬೇಕಾಗಬಹುದು ಎಂಬ ಸಂದೇಶವನ್ನು ವ್ಯಕ್ತಪಡಿಸಲು ನಾನು ಪುಸ್ತಕವನ್ನು ಬರೆದಿದ್ದೇನೆ. ಸ್ಪಷ್ಟವಾಗಿ ರಾಜಕೀಯ ಕಾದಂಬರಿಯಲ್ಲ ಎಂದು ಪಾಲ್ ಲಿಂಚ್ ಹೇಳಿದರು.

ಬೂಕರ್‌ ಪ್ರಶಸ್ತಿಗೆ 163 ಕಾದಂಬರಿಗಳು ಸ್ಪರ್ಧೆಯಲ್ಲಿದ್ದವು. ಇದರಲ್ಲಿ ಯುಕೆ, ಯುಎಸ್, ಐರ್ಲ್ಯಾಂಡ್‌, ಕೆನಡಾದ ಐವರ ಕಾದಂಬರಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಚೆಟ್ನಾ ಮಾರೂ ಅವರ ವೆಸ್ಟರ್ನ್ ಲೇನ್, ಪಾಲ್ ಲಿಂಚ್ ಅವರ ಪ್ರೊಫೆಸ್ಟ್ ಸಾಂಗ್, ಪಾಲ್ ಮುರ್ರೆ ಅವರ ದಿ ಬೀ ಸ್ಟಿಂಗ್, ಜೋನಾಥನ್ ಎಸ್ಕೋಫರಿ ಅವರ ಈಫ್ ಐ ಸರ್ವೈವ್ ಯು ಮತ್ತು ಪಾಲ್ ಹಾರ್ಡಿಂಗ್ ಅವರ ಈ ಅದರ್ ಈಡನ್ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

ಇದನ್ನು ಓದಿ: ಗೋವಾ: ಚಲನಚಿತ್ರೋತ್ಸವದಲ್ಲಿ ಕೈಬಿಟ್ಟ ಜಾತಿ ತಾರತಮ್ಯದ ಕುರಿತ ಕವಿತೆ; ವಿವಾದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...