Homeಅಂತರಾಷ್ಟ್ರೀಯ ‘ಹಸಿವಾದಾಗ ಹೆಂಡತಿಯನ್ನು ತಿನ್ನಬಹುದು...’! ಸೌದಿಯಲ್ಲಿ ಹೀಗೊಂದು ಫತ್ವಾ ಹೊರಬಿದ್ದಿದೆಯಾ?

 ‘ಹಸಿವಾದಾಗ ಹೆಂಡತಿಯನ್ನು ತಿನ್ನಬಹುದು…’! ಸೌದಿಯಲ್ಲಿ ಹೀಗೊಂದು ಫತ್ವಾ ಹೊರಬಿದ್ದಿದೆಯಾ?

- Advertisement -
- Advertisement -

ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಇಂಥದ್ದೊಂದು ಸುದ್ದಿ ವೈರಲ್ ಆಗುತ್ತಿದೆ. 2015ರಿಂದ ಇದು ಆಗಾಗ ಕಾಣಿಸಿಕೊಂಡು ‘ಮುಸ್ಲಿಮ ಜಗತ್ತು ಕ್ರೂರ’ ಎಂಬ ಹುಳವನ್ನು ತಲೆಗೆ ಬಿಟ್ಟು ಮರೆಯಾಗುತ್ತ ಬಂದಿದೆ.

ಏನಿದರ ಮರ್ಮ?

ಮಿಥ್ಯ: ಸೌದಿಯ ಪ್ರಮುಖ ಧರ್ಮಗುರುವೊಬ್ಬರು ಫತ್ವಾ ಹೊರಡಿಸಿದ್ದು, ಹಸಿವಾದಾಗ ಹೆಂಡತಿಯನ್ನು ತಿಂದರೆ ತಪ್ಪೇನಿಲ್ಲ ಎಂದು ಅಮಾನವೀಯತೆ ಪ್ರದರ್ಶಿಸಿದ್ದಾರೆ. ಈ ಕುರಿತು  ಆರಂಭದಲ್ಲಿ ಟ್ವೀಟ್ ಮಾಡಿದವರ ಪೈಕಿ ಖುಷಿ ಸಿಂಗ್ ಎನ್ನುವವರು, ‘ಸೌದಿಯ ಧರ್ಮಗುರು ಅಜೀಜ್ ಅಬ್ದುಲ್ ಈ ರೀತಿಯ ಫತ್ವಾ ಹೊರಡಿಸಿದ್ದಾನೆ. ಭಾರತದ ಸ್ತ್ರೀವಾದಿಗಳಿಗೆ ಅಜೀಜ್ ಅಬ್ದುಲ್‍ನಂತಹ ಪತಿಯರು ಸಿಗಲಿ’ ಎಂದು ವ್ಯಂಗ್ಯವಾಡಿದ್ದಾರೆ. ಇದೇ ಬಗೆಯ ಟ್ವೀಟ್‍ಗಳನ್ನು ಸಾಕಷ್ಟು ಜನ ಮಾಡುತ್ತಿದ್ದು, ಅವರೆಲ್ಲರ ಸಿಟ್ಟು ಭಾರತದ ಸ್ತ್ರೀವಾದಿಗಳು ಮತ್ತು ‘ಇಸ್ಲಾಂ ಪ್ರಿಯರ’ ಮೇಲಿರುವುದು ವಿಚಿತ್ರವಾಗಿದೆ.

ಸತ್ಯ: ಸೌದಿಯಲ್ಲಿ ಮಹಿಳೆಯರನ್ನು ತುಂಬ ಕೀಳಾಗಿ ಪರಿಗಣಿಸಲಾಗುತ್ತದೆ ಎಂಬ ಅನಿಸಿಕೆಯನ್ನು ಹರಡಲು ಹೀಗೆ ಸಾಹಸ ಮಾಡುತ್ತಿರುವವರ ಪೈಕಿ ಬಹುಪಾಲು ಜನರು ಬಲಪಂಥೀಯ ಸಿದ್ದಾಂತಗಳ ಆರಾಧಕರೇ ಆಗಿದ್ದಾರೆ. ಸೌದಿಯಲ್ಲಿ ಅಂತಹ ಯಾವ ಫತ್ವಾವನ್ನೂ ಹೊರಡಿಸಿಲ್ಲ. ಅಷ್ಟಕ್ಕೂ ಇದು 2015ರಲ್ಲಿ ಹರಿದಾಡಿದ್ದ ಫೇಕ್ ನೈಸ್ ಆಗಿದ್ದು ಈಗ ಮತ್ತೆ ಅದಕ್ಕೆ ಜೀವ ಕೊಡಲಾಗಿದೆ ಅಷ್ಟೇ. ಇದೊಂದು ಫೇಕ್ ಸುದ್ದಿ ಎಂದು ಹಲವಾರು ಪೋರ್ಟಲ್‍ಗಳು ಸಾಬೀತು ಮಾಡುತ್ತ ಬಂದಿದ್ದರೂ ಮತ್ತೆ ಈ ವಾರ ಈ ಫೇಕ್ ನ್ಯೂಸ್ ಓಡಾಡುತ್ತಿದೆ.

ಸೌದಿಯಲ್ಲಿ ಭೀಕರ ಹಸಿವಿನ ಸಮಸ್ಯೆಯೇ? 

ಕಾಮನ್‍ಸೆನ್ಸ್ ಇದ್ದವರಿಗೆ ಗೊತ್ತು, ಸೌದಿಯಲ್ಲೇನೂ ಭೀಕರ ಹಸಿವಿನ ಸಮಸ್ಯೆ ಇಲ್ಲವೆಂದು. ಹಾಗೆಯೇ ಇಂತಹ ಫತ್ವಾ ಹೊರಡಿಸಿದರೆ ಅಲ್ಲೂ ಕ್ರಮ ಕೈಗೊಳ್ಳುತ್ತಾರೆ. ಮೊದಲಿಗೆ ಇದು ಮಿರರ್ ಪತ್ರಿಕೆಯಲ್ಲಿ ಕಾಣಿಸಿಕೊಂಡಿತ್ತು. ಅದನ್ನೇ ನೆಟ್ಟಿಗರು ಸತ್ಯ ಎಂಬಂತೆ ಹರಡುತ್ತಿದ್ದಾರೆ. ಹಾಗಂತ ಯಾವ ಫತ್ವಾವನ್ನು ಹೊರಡಿಸಿಲ್ಲ ಎಂದು ಅಲ್ಲಿನ ಧರ್ಮಗುರುಗಳು ಪದೇ ಪದೇ ಹೇಳಿದ್ದಾರೆ.

ಸುಳ್ಳನ್ನು ಹರಡುವುದೂ ಒಂದು ಮಾನಸಿಕ ಕಾಯಿಲೆ ಆಗುತ್ತಿದೆಯಾ? ಎಂಬ ಪ್ರಶ್ನೆ ಈಗ ಮತ್ತಷ್ಟು ಮುಖ್ಯವೆನಿಸುತ್ತದೆ.

ಕೃಪೆ: ಆಲ್ಟ್ ನ್ಯೂಸ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಬಿಜೆಪಿಯ12 ಸಭೆ: ದಾಖಲೆ ಕೇಳಿದ ಕಾಂಗ್ರೆಸ್

0
ಬಿಜೆಪಿ ಚೀನಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದ್ದು, 2008 ರಿಂದ ಬಿಜೆಪಿ ನಾಯಕರು ಮತ್ತು ಚೀನಾದ ಅಧಿಕಾರಿಗಳ ನಡುವೆ 12 ಉನ್ನತ ಮಟ್ಟದ ಸಭೆಗಳು ನಡೆದಿವೆ ಎಂದು ಆರೋಪಿಸಿದೆ....