Homeಮುಖಪುಟರೈತ ಹೋರಾಟಕ್ಕೆ ತೆರಳಿದ್ದ ಅಖಿಲೇಶ್ ಯಾದವ್‌ಗೆ ತಡೆ: ಮನೆಮುಂದೆಯೇ ಧರಣಿ-ಗೃಹಬಂಧನ

ರೈತ ಹೋರಾಟಕ್ಕೆ ತೆರಳಿದ್ದ ಅಖಿಲೇಶ್ ಯಾದವ್‌ಗೆ ತಡೆ: ಮನೆಮುಂದೆಯೇ ಧರಣಿ-ಗೃಹಬಂಧನ

ಈ ಕುರಿತು ಟ್ವೀಟ್‌ ಮಾಡಿರುವ ಅಖಿಲೇಶ್ ಯಾದವ್ "ನನಗೆ ತಿಳಿದ ಮಟ್ಟಿಗೆ ಎಲ್ಲಾ ಜನರು ನಿಮ್ಮ ವಿರುದ್ಧ ಇದ್ದಾರೆ. ಓ ದಬ್ಬಾಳಿಕೆಗಾರ, ನೀವು ಯಾರನ್ನು ಬಂಧಿಸುವಿರಿ?" ಎಂದು ಪ್ರಶ್ನಿಸಿದ್ದಾರೆ.

- Advertisement -
- Advertisement -

ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕಿಸಾನ್ ಯಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್‌ರನ್ನು ಉತ್ತರ ಪ್ರದೇಶ ಸರ್ಕಾರ ತಡೆದಿದೆ. ಇದರಿಂದ ಕುಪಿತಗೊಂಡ ಅವರು ಲಖನೌದ ತಮ್ಮ ಮನೆ ಮುಂದೆಯೇ ಧರಣಿ ನಡೆಸಿದ್ದು, ಅವರನ್ನು ಗೃಹಬಂಧನದಲ್ಲಿಡಲಾಗಿದೆ.

ಕೊರೊನಾ ಸಾಂಕ್ರಾಮಿಕ ಕಾಯ್ದೆಯನ್ವಯ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದೇವೆ. ಗುಂಪುಗೂಡಬಾರದೆಂದು ಹಲವ ಬಾರಿ ಮನವಿ ಮಾಡಿದರು ಅಖಿಲೇಶ್ ಆದಿಯಾಗಿ ಯಾರು ನಮ್ಮ ಮಾತು ಕೇಳಲಿಲ್ಲ. ಹಾಗಾಗಿ ಅವರನ್ನು ಗೃಹಬಂಧನದಲ್ಲಿಡಬೇಕಾಯಿತು ಎಂದು ಕನೌಜ್‌ ಜಿಲ್ಲಾಧಿಕಾರಿ ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

ಇಂದು ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಿಂದ ಹೊರಟು ಕನೌಜ್‌ನ ತಾತಿಯದಿಂದ ತಿವರವರೆಗೂ 13 ಕಿ.ಮೀ ಗಳ ಕಿಸಾನ್ ಯಾತ್ರೆ ನಡೆಸಲು ಯೋಜಿಸಲಾಗಿದೆ. ಅದಕ್ಕೆ ಇಂದು ಮಾಜಿ ಸಿಎಂ ಅಖಿಲೇಶ್ ಯಾದವ್ ಚಾಲನೆ ನೀಡಬೇಕಿತ್ತು. ಆದರೆ ಉತ್ತರ ಪ್ರದೇಶ ಸರ್ಕಾರ ಕೊರೊನಾ ನೆಪವೊಡ್ಡಿ ಅದಕ್ಕೆ ತಡೆಯೊಡ್ಡಿದೆ.

ಲಖನೌ ಪೊಲೀಸರು ಅಖಿಲೇಶ್ ಯಾದವ್‌ರವರ ನಿವಾಸದ ಸುತ್ತಲಿನ ರಸ್ತೆಗಳು ಮತ್ತು ಸಮಾಜವಾದಿ ಪಕ್ಷದ ಕಛೇರಿಯ ಸುತ್ತಲಿನ ರಸ್ತೆಗಳನ್ನು ಮುಚ್ಚಿ ಪ್ರತಿಭಟನೆ ನಡೆಯದಂತೆ ತಡೆದಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಘಟನೆ ಕುರಿತು ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧರಿ ಮಾತನಾಡಿ “ಶಾಂತಿಯುತವಾಗಿ ಪ್ರತಿಭಟನೆ ಮಾಡುವ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದು ಪ್ರಜಾತಂತ್ರ ವಿರೋಧಿ ನಡೆಯಾಗಿದೆ. ಅಖಿಲೇಶ್ ಯಾದವ್‌ರವರು ಕಿಸಾನ್ ಯಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ಆದಿತ್ಯನಾಥ್ ಸರ್ಕಾರ ಬೆದರಿದೆ. ಹಾಗಾಗಿ ಅವರನ್ನು ಬಂಧಿಸಲಾಗಿದೆ” ಎಂದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅಖಿಲೇಶ್ ಯಾದವ್ “ನನಗೆ ತಿಳಿದ ಮಟ್ಟಿಗೆ ಎಲ್ಲಾ ಜನರು ನಿಮ್ಮ ವಿರುದ್ಧ ಇದ್ದಾರೆ. ಓ ದಬ್ಬಾಳಿಕೆಗಾರ, ನೀವು ಯಾರನ್ನು ಬಂಧಿಸುವಿರಿ?” ಎಂದು ಪ್ರಶ್ನಿಸಿದ್ದಾರೆ.

ನಾಳೆ ನಡೆಯುವ ರೈತರ ಭಾರತ್‌ ಬಂದ್‌ಗೆ ಸಮಾಜವಾದಿ ಪಕ್ಷ ಸಂಪೂರ್ಣವಾಗಿ ಬೆಂಬಲ ನೀಡಿದೆ.


ಇದನ್ನೂ ಓದಿ: ಕಾರ್ಟೂನಿಸ್ಟ್‌ಗಳ ಕಣ್ಣಲ್ಲಿ ರೈತ ಹೋರಾಟ: ವೈರಲ್ ಆದ ಹೋರಾಟದ ಚಿತ್ರಗಳು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಪ್ರಣಾಳಿಕೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ಕೂಡ ಬಳಸಿಲ್ಲ: ಓವೈಸಿ ವಾಗ್ಧಾಳಿ

0
ಬಿಜೆಪಿ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ 'ಅಲ್ಪಸಂಖ್ಯಾತರು' ಎಂಬ ಪದವನ್ನು ಕೂಡ ಬಳಸಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಮುಸ್ಲಿಮರನ್ನು ಅಂಚಿಗೆ ತಳ್ಳಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ...