Homeಕರ್ನಾಟಕಆದಿವಾಸಿಗಳ ಮೇಲೆ ನಡೆಯುತ್ತಿರುವ ‘ಆಪರೇಷನ್ ಖಗಾರ್’ ಯುದ್ದ ನಿಲ್ಲಿಸಿ: ಆದಿವಾಸಿಗಳ ಮೇಲಿನ ಯುದ್ಧ ವಿರೋಧಿ ಕರ್ನಾಟಕ...

ಆದಿವಾಸಿಗಳ ಮೇಲೆ ನಡೆಯುತ್ತಿರುವ ‘ಆಪರೇಷನ್ ಖಗಾರ್’ ಯುದ್ದ ನಿಲ್ಲಿಸಿ: ಆದಿವಾಸಿಗಳ ಮೇಲಿನ ಯುದ್ಧ ವಿರೋಧಿ ಕರ್ನಾಟಕ ಜನತೆಯ ಒಕ್ಕೂಟ ಆಗ್ರಹ

- Advertisement -
- Advertisement -

ಬೆಂಗಳೂರು: ‘ಭಾರತದ ದುಡಿಯುವ ಜನರ ಮತ್ತು ನೈಸರ್ಗಿಕ ಸಂಪತ್ತನ್ನು ಕೆಲವೇ ಕೆಲವು ವ್ಯಕ್ತಿಗಳು ಶೋಷಣೆ ಮಾಡುವವರೆಗೆ ಯುದ್ಧ ಮುಂದುವರೆಯುತ್ತದೆ’ ಎಂದು ಹೇಳಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಉಲ್ಲೇಖದೊಂದಿಗೆ, ಛತ್ತೀಸಗಡ ರಾಜ್ಯದಂತಹ ಮಧ್ಯ ಭಾರತದ ಆದಿವಾಸಿಗಳ ಮೇಲೆ ನಡೆಯುತ್ತಿರುವ ‘ಆಪರೇಷನ್ ಖಗಾರ್’ ಕುರಿತು ‘ಆದಿವಾಸಿಗಳ ಮೇಲಿನ ಯುದ್ಧ ವಿರೋಧಿ ಕರ್ನಾಟಕ ಜನತೆಯ ಒಕ್ಕೂಟ’ ಒಂದು ಪ್ರಕಟಣೆ ಹೊರಡಿಸಿದೆ. ಈ ಒಕ್ಕೂಟವು ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಒಳಗೊಂಡಿದೆ.

‘ಆಪರೇಷನ್ ಖಗರ್’: ಆದಿವಾಸಿಗಳ ಮೇಲಿನ ಯುದ್ಧ

2024ರ ಜನವರಿಯಿಂದ ನಡೆಯುತ್ತಿರುವ ಈ ‘ಆಪರೇಷನ್ ಖಗಾರ್’ ವಾಸ್ತವವಾಗಿ ಭಾರತದ ದೊಡ್ಡ ಬಂಡವಾಳಶಾಹಿಗಳು ಮತ್ತು ಸರ್ಕಾರದ ಜಂಟಿ ಕಾರ್ಯಾಚರಣೆಯಾಗಿದೆ ಎಂದು ಒಕ್ಕೂಟ ಆರೋಪಿಸಿದೆ. ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಮಧ್ಯ ಭಾರತದ ಅಪಾರ ಖನಿಜ ಸಂಪತ್ತನ್ನು ಲೂಟಿ ಮಾಡುವುದಾಗಿದೆ. ಅಂಬಾನಿ, ಅದಾನಿ, ವೇದಾಂತ, ಟಾಟಾ ಮುಂತಾದ ದೊಡ್ಡ ಗಣಿ ಕಂಪನಿಗಳ ಲಾಭಕ್ಕಾಗಿ ಆದಿವಾಸಿಗಳನ್ನು ಅವರ ಪ್ರದೇಶಗಳಿಂದ ಸ್ಥಳಾಂತರಿಸಲು ಸರ್ಕಾರ ಶಸ್ತ್ರಸಜ್ಜಿತ ಪಡೆಗಳನ್ನು ಬಳಸುತ್ತಿದೆ ಎಂದು ಹೇಳಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2026ರ ಮಾರ್ಚ್‌ ವೇಳೆಗೆ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ, ಈ ಹೇಳಿಕೆಯ ಹಿಂದಿನ ನಿಜವಾದ ಉದ್ದೇಶ, ದೊಡ್ಡ ಬಂಡವಾಳಶಾಹಿಗಳಿಗೆ ದಾರಿ ಮಾಡಿಕೊಡುವುದು ಎಂದು ಒಕ್ಕೂಟ ಆರೋಪಿಸಿದೆ. ಇದರ ಭಾಗವಾಗಿ ಈಗಾಗಲೇ ಗಡ್ಚಿರೋಲಿ (ಮಹಾರಾಷ್ಟ್ರ) ಮತ್ತು ರಾಯ್‌ಗಢ (ಛತ್ತೀಸ್‌ಗಢ) ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತು ಅರಣ್ಯನಾಶ ಪ್ರಾರಂಭವಾಗಿದೆ. ಬಸ್ತರ್ ಜಿಲ್ಲೆಯಲ್ಲಿ ಸೇನೆಯು ಅದಿವಾಸಿಗಳ ವಿರುದ್ಧ ದಮನ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾಧ್ಯಮಗಳ ಮೌನ

ಈ ಕಾರ್ಯಾಚರಣೆಯಲ್ಲಿ ಸರ್ಕಾರ 150ರಿಂದ 200 ಮಾವೋವಾದಿಗಳನ್ನು ಮತ್ತು 100 ರಿಂದ 150 ಮುಗ್ಧ ಆದಿವಾಸಿಗಳನ್ನು ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ. ಆದರೆ ಮುಖ್ಯವಾಹಿನಿ ಮಾಧ್ಯಮಗಳು ಈ ವಿಷಯವನ್ನು ಸರಿಯಾಗಿ ವರದಿ ಮಾಡುತ್ತಿಲ್ಲ. ಮಾಧ್ಯಮಗಳು ಕೋಟ್ಯಾಂತರ ರೂಪಾಯಿ ತಲೆದಂಡ ಹೊಂದಿರುವ ಹಿರಿಯ ಮಾವೋವಾದಿ ನಾಯಕರ ಹತ್ಯೆಯನ್ನು ಮಾತ್ರ ವರದಿ ಮಾಡುತ್ತಿವೆ. ಆದರೆ, ಅಮಾಯಕ ಆದಿವಾಸಿಗಳ ಸಾವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿವೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

‘ಆಪರೇಷನ್ ಖಗರ್’ ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳು (ಆರ್ಟಿಕಲ್ 21), ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಮತ್ತು ವಿಶ್ವಸಂಸ್ಥೆಯ ಆದಿವಾಸಿಗಳ ಹಕ್ಕುಗಳ ಘೋಷಣೆಯ ಉಲ್ಲಂಘನೆಯಾಗಿದೆ ಎಂದು ಒಕ್ಕೂಟ ಹೇಳಿದೆ. ಇದು ಕೇವಲ ದೊಡ್ಡ ಬಂಡವಾಳಶಾಹಿಗಳ ಲಾಭಕ್ಕಾಗಿ ನಡೆಸುತ್ತಿರುವ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಒಕ್ಕೂಟ ತಿಳಿಸಿದೆ.

ಶಾಂತಿ ಮಾತುಕತೆಗಳ ನಿರಾಕರಣೆ ಮತ್ತು ವ್ಯಾಪಕ ಪ್ರತಿರೋಧ

ಈ ಕಾರ್ಯಾಚರಣೆಯ ಅವಧಿಯಲ್ಲಿ, ತಲೆದಂಡ ಹೊಂದಿದ ಮಾವೋವಾದಿಗಳು ಎಂದಿಗೂ ಬಂಧನಕ್ಕೆ ಒಳಗಾದ ಅಥವಾ ಗಾಯಗೊಂಡ ಉದಾಹರಣೆಗಳಿಲ್ಲ. ಸರ್ಕಾರ ಬಹುಮಾನಗಳಿಗಾಗಿ ಅವರನ್ನು ಕಾನೂನು ಬಾಹಿರ ಎನ್‌ಕೌಂಟರ್‌ಗಳಲ್ಲಿ ಕೊಲ್ಲುತ್ತಿದೆ ಎಂದು ಆರೋಪಿಸಲಾಗಿದೆ. ನಾಗರಿಕ ಹಕ್ಕುಗಳ ಸಂಘಟನೆಗಳು ಮತ್ತು ಮಾವೋವಾದಿಗಳು ಕದನ ವಿರಾಮ ಘೋಷಿಸಿ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಲು ಪದೇ ಪದೇ ಮನವಿ ಮಾಡಿಕೊಂಡರೂ ಸರ್ಕಾರ ಅದನ್ನು ನಿರಾಕರಿಸುತ್ತಿದೆ. ಆದರೆ, ತೆಲಂಗಾಣ ಸರ್ಕಾರವು ಮಾವೋವಾದಿಗಳೊಂದಿಗೆ ಮಾತುಕತೆ ನಡೆಸಲು ಸಿದ್ಧತೆ ತೋರಿಸಿರುವುದು ಒಂದು ಸಕಾರಾತ್ಮಕ ಬೆಳವಣಿಗೆ ಎಂದು ಒಕ್ಕೂಟ ಹೇಳಿದೆ.

‘ಆಪರೇಷನ್ ಖಗಾರ್’ ಕೇವಲ ಸಶಸ್ತ್ರ ಮಾವೋವಾದಿಗಳನ್ನು ನಿಯಂತ್ರಿಸಲು ಸೀಮಿತವಾಗಿಲ್ಲ. ಅನ್ಯಾಯ ಮತ್ತು ಅಸಮಾನತೆಯ ವ್ಯವಸ್ಥೆಯನ್ನು ವಿರೋಧಿಸುವ ಎಲ್ಲ ಬಗೆಯ ಪ್ರತಿರೋಧಗಳನ್ನೂ ಹತ್ತಿಕ್ಕುವುದು ಇದರ ಮುಖ್ಯ ಉದ್ದೇಶ. ಅಹಿಂಸಾತ್ಮಕವಾಗಿ ಹೋರಾಟ ನಡೆಸುತ್ತಿದ್ದ ‘ಮೂಲವಾಸಿ ಬಚಾವೋ ಮಂಚ್’ ಸಂಘಟನೆಯನ್ನು ನಿಷೇಧಿಸಿರುವುದು ಮತ್ತು ಪ್ರಜಾಪ್ರಭುತ್ವವಾದಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ಹೇರಿರುವುದು ಇದಕ್ಕೆ ಸಾಕ್ಷಿ ಎಂದು ಒಕ್ಕೂಟ ಪ್ರತಿಪಾದಿಸಿದೆ. ಆದ್ದರಿಂದ, ‘ಆಪರೇಷನ್ ಖಗಾರ್’ ವಿರುದ್ಧದ ಪ್ರತಿರೋಧವು ಪ್ರಜಾಪ್ರಭುತ್ವವನ್ನು ಉಳಿಸುವ ಒಂದು ಜವಾಬ್ದಾರಿಯಾಗಿದೆ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

ಒಕ್ಕೂಟದ ಪ್ರಮುಖ ಬೇಡಿಕೆಗಳು

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ‘ಆದಿವಾಸಿಗಳ ಮೇಲಿನ ಯುದ್ಧ ವಿರೋಧಿ ಕರ್ನಾಟಕ ಜನತೆಯ ಒಕ್ಕೂಟ’ವು ಕೇಂದ್ರ ಸರ್ಕಾರಕ್ಕೆ ಈ ಕೆಳಗಿನ ಆಗ್ರಹಗಳನ್ನು ಮುಂದಿಟ್ಟಿದೆ:

  1. ‘ಆಪರೇಶನ್ ಖಗಾರ್’ ಅನ್ನು ತಕ್ಷಣವೇ ನಿಲ್ಲಿಸಬೇಕು.
  2. ಸಿಪಿಐ (ಮಾವೋವಾದಿ) ಪಕ್ಷದೊಂದಿಗೆ ತಕ್ಷಣದ ಕದನ ವಿರಾಮ ಮತ್ತು ಷರತ್ತುರಹಿತ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಬೇಕು.
  3. ಎಲ್ಲಾ ಕಾನೂನು ಬಾಹಿರ ಹತ್ಯೆಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು.

ಈ ಹೋರಾಟದಲ್ಲಿ ಎಲ್ಲರೂ ತಮ್ಮ ಧ್ವನಿ ಎತ್ತಬೇಕು ಎಂದು ಒಕ್ಕೂಟವು ದೇಶದ ನಾಗರಿಕರಲ್ಲಿ ವಿನಂತಿಸಿದೆ.

ಈ ಒಕ್ಕೂಟದ ಸಂಘಟನೆಗಳು (Organizations):

  1. ಆದಿವಾಸಿ ಸಂಘರ್ಷ ಮೋರ್ಚಾ
  2. ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್
  3. ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್
  4. ಅಂಬೇಡ್ಕರ್ ರೀಡಿಂಗ್ ಸರ್ಕಲ್
  5. ಭೀಮ ಸಂಘಟನೆಗಳ ಮಹಾ ಒಕ್ಕೂಟ
  6. ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ (ದೇವನಹಳ್ಳಿ)
  7. ಕಲೆಕ್ಟಿವ್
  8. ಡಿಎಸ್ಎಸ್
  9. ಡಿಎಸ್ಎಸ್ (ಅಂಬೇಡ್ಕರ್ ವಾದ)
  10. ದಲಿತ್ ಟೈಗರ್ಸ್
  11. ಡೊಮೆಸ್ಟಿಕ್ ವರ್ಕರ್ಸ್ ರೈಟ್ಸ್ ಯೂನಿಯನ್
  12. ಎದ್ದೇಳು ಕರ್ನಾಟಕ
  13. ಬಿ.ಆರ್. ಅಂಬೇಡ್ಕರ್ ದಲಿತ್ ಸೇನಾ ಸಮಿತಿ
  14. ಫ್ರೈಡೇಸ್ ಫಾರ್ ಫ್ಯೂಚರ್ – ಕರ್ನಾಟಕ
  15. ಗ್ರೋತ್ ವಾಚ್
  16. ಇಂಡಿಯನ್ ಸೋಷಿಯಲ್ ಆಕ್ಷನ್ ಫೋರಂ (ಇನ್ಸಾಫ್)
  17. ಕರ್ನಾಟಕ ಜನ ಜಾಗೃತಿ ವೇದಿಕೆ
  18. ಕರ್ನಾಟಕ ಜನಶಕ್ತಿ
  19. ಕನ್ನಡ ಪ್ಲಾನೆಟ್
  20. ಕರ್ನಾಟಕ ವಾಯ್ಸ್ ಆಫ್ ಪಬ್ಲಿಕ್
  21. ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ
  22. ಕರ್ನಾಟಕ ರೈತ ಸಂಘ (ಎಯುಸಿ)
  23. ಮೂಲನಿವಾಸಿಗಳ ಬಿ.ಆರ್. ಅಂಬೇಡ್ಕರ್ ಸೇನೆ
  24. ನ್ಯಾಷನಲ್ ಅಲಯನ್ಸ್ ಫಾರ್ ಜಸ್ಟಿಸ್, ಅಕೌಂಟಬಿಲಿಟಿ ಅಂಡ್ ರೈಟ್ಸ್
  25. ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ – ಕರ್ನಾಟಕ
  26. ಪ್ರಗತಿಪರ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಯೂನಿಯನ್
  27. ಪ್ರಜಾತಾಂತ್ರಿಕ ಜನರ ವೇದಿಕೆ (ಪಿಡಿಎಫ್)
  28. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್
  29. ಸ್ಪಾರ್ಕ್ ರೀಡಿಂಗ್ ಸರ್ಕಲ್
  30. ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್
  31. ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್
  32. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ಸಿಸ್ಟ್)
  33. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಮ್ಎಲ್) ಲಿಬರೇಷನ್

ಒಕ್ಕೂಟದಲ್ಲಿರುವ ವ್ಯಕ್ತಿಗಳು (Individuals):

  1. ಡಾ. ಜಿ. ರಾಮಕೃಷ್ಣ (ಲೇಖಕರು)
  2. ಶಿವಸುಂದರ್ (ಸಾಮಾಜಿಕ ಕಾರ್ಯಕರ್ತ ಮತ್ತು ಅಂಕಣಕಾರರು)
  3. ಡಾ. ನಿರಂಜನ ಆರಾಧ್ಯ (ಶಿಕ್ಷಣತಜ್ಞರು)
  4. ಶ್ರೀಪಾದ್ ಭಟ್ (ಶಿಕ್ಷಣತಜ್ಞರು)
  5. ಡಾ. ಪ್ರಜ್ವಲ್ ಶಾಸ್ತ್ರಿ (ಭೌತಶಾಸ್ತ್ರಜ್ಞ)
  6. ಮಧು ಭೂಷಣ್ (ಕಾರ್ಯಕರ್ತ)
  7. ಡಾ. ದು. ಸರಸ್ವತಿ (ರಂಗಭೂಮಿ ಕಲಾವಿದೆ)
  8. ಡಾ. ಸಬಿಹಾ ಭೂಮಿಗೌಡ (ನಿವೃತ್ತ ಉಪಕುಲಪತಿ)
  9. ವಿದ್ಯಾ ದಿನಕರ್ (ಕಾರ್ಯಕರ್ತೆ)
  10. ಡಾ. ಸುವ್ರತ್ ರಾಜು (ಭೌತಶಾಸ್ತ್ರಜ್ಞ)
  11. ರಾಮ್ನೀಕ್ ಸಿಂಗ್ (ನಾಟಕಕಾರ)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...