Homeಚಳವಳಿಹೊಸ ಸಂಸತ್ ಯೋಜನೆ ನಿಲ್ಲಿಸಿ, ಆಮ್ಲಜನಕ ಪೂರೈಸಿ: ಇಂದು ಟ್ವಿಟರ್ ಅಭಿಯಾನ

ಹೊಸ ಸಂಸತ್ ಯೋಜನೆ ನಿಲ್ಲಿಸಿ, ಆಮ್ಲಜನಕ ಪೂರೈಸಿ: ಇಂದು ಟ್ವಿಟರ್ ಅಭಿಯಾನ

#StopCentralVistaStartOxygen 20 ಸಾವಿರ ಕೋಟಿ ರೂ.ಗಳನ್ನು ಮನುಷ್ಯರ ಜೀವ ಉಳಿಸಲು ವಿನಿಯೋಗಿಸಿ ಎಂದು ಕೇಂದ್ರಕ್ಕೆ ಆಗ್ರಹ ಮಾಡಲಾಗುತ್ತದೆ

- Advertisement -
- Advertisement -

‘ಕಟ್ಟಡಗಳಿಗಿಂತ ಮನುಷ್ಯ ಜೀವಗಳು ಅಮೂಲ್ಯ. ಸೆಂಟ್ರಲ್ ವಿಸ್ತಾ ನಿರ್ಮಾಣವನ್ನು ನಿಲ್ಲಿಸಿ, 20 ಸಾವಿರ ಕೋಟಿ ರೂ.ಗಳನ್ನು ಮನುಷ್ಯರ ಜೀವ ಉಳಿಸಲು ವಿನಿಯೋಗಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ #StopCentralVistaStartOxygen (ಸಂಸತ್ ಯೋಜನೆ ನಿಲ್ಲಿಸಿ, ಆಮ್ಲಜನಕ ಪೂರೈಸಿ) ಟ್ವಿಟರ್ ಅಭಿಯಾನವು ಇಂದು ಬೆಳಿಗ್ಗೆ 10 ರಿಂದ ಪ್ರಾರಂಭವಾಗಿಲಿದೆ.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರ ಕುಸಿದು ಹೋಗಿದೆ. ಲಾಕ್‌ಡೌನ್ ನಡುವೆಯೂ ಕೇಂದ್ರ ಸರ್ಕಾರ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿ ನಿರ್ಮಾಣವನ್ನು ಮುಂದುವರೆಸಿದ್ದು ಕ್ರೌರ್ಯದ ಪರಮಾವಧಿಯಾಗಿದೆ. ಸದ್ಯದ ತುರ್ತು ಮನುಷ್ಯ ಜೀವಗಳನ್ನು ಉಳಿಸುವುದಾಗಿದೆ. ಇದು ಜೀವಗಳ ಪ್ರಶ್ನೆಯಾಗಿದ್ದು, ನಿರ್ಜೀವ ಕಟ್ಟಡಗಳನ್ನು ಮುಂದೆ ಎಂದಾದರೂ ಕಟ್ಟಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಅಕ್ಕಿ ಕೊಡಿ ಎಂದ ರೈತನಿಗೆ ‘ಸತ್ತೊಗು’ ಎಂದ ಆಹಾರ ಸಚಿವ ಉಮೇಶ್ ಕತ್ತಿ

ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್ ಹೊಸ ಸಂಸತ್ ಭವನ ಮತ್ತು ಇತರ ಕಟ್ಟಡಗಳನ್ನು ನಿರ್ಮಿಸುವ ದುಬಾರಿ ಯೋಜನೆಯಾಗಿದೆ. ಈಗಿರುವ ಸಂಸತ್ ಕಟ್ಟಡವೇ ಸಾಕಿತ್ತು. ಆದರೆ ಆ ಪ್ರದೇಶದ ಪರಿಸರ, ಐತಿಹಾಸಿಕ ಕಟ್ಟಡಗಳನ್ನು ನೆಲಕ್ಕೆ ಉರುಳಿಸಿ ಈ ಯೋಜನೆ ಜಾರಿ ಮಾಡಲಾಗುತ್ತಿದೆ.
ನಾವೆಲ್ಲರೂ ಇದನ್ನು ವಿರೋಧಿಸೋಣ. ಈ ಬಿಕ್ಕಟ್ಟಿನ ಸಮಯದಲ್ಲಿ ಯೋಜನೆಯ ಹಣದಲ್ಲಿ 20 ಸಾವಿರ ಕೋಟಿ ರೂ. ಗಳನ್ನು ಆರೋಗ್ಯ ಸೌಕರ್ಯ ವಿಸ್ತರಿಸಲು ಬಳಸಿ ಎಂದು ಆಗ್ರಹಿಸೋಣ.

ಸಾವಿರಾರು ಜನರನ್ನು ಕೊಂದು ಆರೋಗ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಕೋವಿಡ್ ಬಿಕ್ಕಟ್ಟು ತೀವ್ರವಾದ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಯೋಜನೆಯ ಕೆಲಸಗಳನ್ನು ಮುಂದುವರೆಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಇಂದು ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

“ಸೆಂಟ್ರಲ್ ವಿಸ್ತಾ- ಅನಿವಾರ್ಯವಲ್ಲ. ವಿಜನ್ ಹೊಂದಿರುವ ಕೇಂದ್ರ ಸರ್ಕಾರ ಅತ್ಯಗತ್ಯ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

“ಸೆಂಟ್ರಲ್ ವಿಸ್ತಾ ಯೋಜನೆಗೆ ಈಗಾಗಲೇ ಬಳಸಿದ ಹಣವನ್ನು ಹೆಚ್ಚಿನ ಜನರಿಗೆ ಲಸಿಕೆ ನೀಡಲು ಪ್ರತಿಪಕ್ಷಗಳು ಬಯಸಿದ್ದವು. ನಾವು ಹೆಚ್ಚು ಪಿಪಿಇ ಕಿಟ್‌ಗಳನ್ನು ಖರೀದಿಸಬಹುದಿತ್ತು, ವಲಸೆ ಕಾರ್ಮಿಕರಿಗೆ ನೇರ ವರ್ಗಾವಣೆ ಮಾಡಬಹುದಿತ್ತು” ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒ’ಬ್ರಿಯೆನ್ ಎನ್‌ಡಿಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಇದನ್ನೂ ಓದಿ: ಕೋಲಾರ: ಆಮ್ಲಜನಕ ಸಿಗದೆ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಾವು, ವೈದ್ಯರ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...