ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಿನಿಮಾ ಪ್ರಿಯರ ಮನಗೆದ್ದ ಇಬ್ಬರು ’ಸೂಫಿ’ಯರ ಅಮರ ಪ್ರೇಮದ ಕತೆಯಿರುವ ’ಸೂಫಿಯುಂ ಸುಜಾತಯುಂ’ ಚಿತ್ರದ ನಿರ್ದೇಶಕ ಶಾನವಾಸ್ ನಾರನೀಪುಳ ಅವರು ಹೃದಯಾಘಾತದಿಂದ ನಿನ್ನೆ ಮೃತಪಟ್ಟಿದ್ದಾರೆ.

ಶಾನವಾಸ್ ಅವರು ’ಕರಿ’ ಮತ್ತು ’ಸೂಫಿಯುಂ ಸುಜಾದಯುಂ’ ಎಂಬ ಎರಡು ಚಿತ್ರಗಳನ್ನಷ್ಟೇ ನಿರ್ದೇಶಿಸಿ ಹೆಸರು ಗಳಿಸಿದ್ದರು. ಇದರಲ್ಲಿ ಸೂಫಿಯುಂ ಸುಜಾದಯುಂ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಒಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ಚಿತ್ರವಾಗಿದೆ. ಹೃದ್ಯ ಪ್ರೇಮ ಕತೆಯಿರುವ ಈ ಚಿತ್ರವು ಸಿನಮಾ ಪ್ರಿಯರ ಮನಸ್ಸನ್ನು ಗೆದ್ದಿತ್ತು. ಸಂಗೀತ, ಸಿನಿಮಾಟೋಗ್ರಾಫಿ, ಎಡಿಟಿಂಗ್ ಸೇರಿದಂತೆ ಬೇರೆಯೆ ಲೋಕಕ್ಕೆ ಕೊಂಡೊಯ್ಯುವ ಸಿನಿಮಾವಾಗಿದೆ ’ಸೂಫಿಯುಂ ಸುಜಾದಯುಂ’.

ಇದನ್ನೂ ಓದಿ: ಬರಲಿದೆ ‘ಭೀಮಾ ಕೋರೆಗಾಂವ್’ ಚಿತ್ರ: ಸಾಮಾಜಿಕ ಮಾಧ್ಯಮಗಳಲ್ಲಿ ಫಸ್ಟ್‌ಲುಕ್ ವೈರಲ್!

ಸೂಫಿಯುಂ ಸುಜಾದಯುಂ ಚಿತ್ರದ ಒಂದು ದೃಶ್ಯ

ಚಿತ್ರದ ನಾಯಕಿ ಅದಿತಿ ರಾಮ್ ಹೈದರಿ, ತಮ್ಮ ಚಿತ್ರದ ನಿರ್ದೇಶಕನ ಸಾವಿನ ಬಗ್ಗೆ, “ಅವರ ಕಥೆಗಳಂತೆ ಅವರು ಮಾನವೀಯತೆ ಮತ್ತು ಸೂಕ್ಷ್ಮ ಮನಸ್ಸಿನವರಾಗಿದ್ದರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಶಾನವಾಸ್ ಸರ್‌. ಸೂಫಿಯುಂ ಸುಜಾದಯುಂನಲ್ಲಿ ನಮಗಾಗಿ ರಚಿಸಿದ ಸುಂದರವಾದ ಸ್ಥಳವನ್ನು ನಿಮ್ಮ ಸೂಫಿ ಆತ್ಮ ಕಂಡುಕೊಳ್ಳುತ್ತದೆ. ತುಂಬಾ ಬೇಗ ಹೋದಿರಿ, ನಿಮ್ಮ ಕುಟುಂಬಕ್ಕೆ ನನ್ನ ಸಂತಾಪ” ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.

ಚಿತ್ರದ ಸಹನಟನಾದ ಜಯಸೂರ್ಯ ಕೂಡಾ ತಮ್ಮ ನಿರ್ದೇಶಕನ ಸಾವಿಗೆ ಶ್ರದ್ದಾಂಜಲಿ ಕೋರಿದ್ದಾರೆ.

ಇದನ್ನೂ ಓದಿ: ನುಡಿ ನಮನ | ಮಾನವೀಯ ಕತೆಗಳನ್ನು ಕಟ್ಟಿಕೊಟ್ಟ ನಿರ್ದೇಶಕ ‘ಕಿಮ್‌ ಕಿ ಡುಕ್‌’

’ಸೂಫಿಯುಂ ಸುಜಾದಯುಂ’ ಸಿನಿಮಾದಲ್ಲಿ ’ಮುಲ್ಲಾ ಬಝಾರ್‌’ ಎಂಬ ಪ್ರೇಮದ ಸುಗಂಧ‌ ಮಾರುವ ಮಾರುಕಟ್ಟೆ ಕಾಣುತ್ತದೆ. ಇಲ್ಲಿ ಸುಗಂಧದ ಬಾಟಲಿಯ ಮುಚ್ಚಳ ತೆರೆದು ಇಬ್ಬರಲ್ಲೂ ಪ್ರೇಮ ಮೂಡಿಸುವುದರೊಂದಿಗೆ ನಮ್ಮನ್ನೂ ಪ್ರೇಮ ಲೋಕಕ್ಕೆ ದೂಡಿದ್ದರು ಶಾನವಾಝ್. ಸುಮಧುರವಾದ ಆಜಾನ್‌‌ಗೆ ತಕ್ಕಂತೆ ಕಥಕ್ ನೃತ್ಯವಾಡುವ ನಾಯಕಿ ಇಡೀ ಚಿತ್ರದಲ್ಲಿ ಒಂದು ಮಾತೂ ಆಡದ ಮೂಕಿ. ತನ್ನ ಸೂಫೀ ಗುರುಗಳ ಸಮಾಧಿಯಿಂದ ಎದ್ದು ಬಂದ ನೇರಳೆ ಮರದಲ್ಲಿ ಹಣ್ಣು ಬಿಟ್ಟಾಗ ನಿನಗೆ ಮಾತು ಬರುತ್ತದೆ ಎಂದು ಸೂಫಿ ಹೇಳುತ್ತಾನೆ. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ನಾಯಕಿಯು ಅನಿವಾಸಿ ಭಾರತೀಯನನ್ನು ಮದುವೆಯಾಗುವ ಆಕೆ ಸೂಫಿಯ ನೆನಪಲ್ಲೇ ಇರುತ್ತಾಳೆ.

ಚಿತ್ರದ ಜೀವಾಳವೇ ಪ್ರೇಮ. ತಿಳಿಯದವರ ಕಣ್ಣಲ್ಲಿ ಲವ್‌ ಜಿಹಾದ್ ಆಗಿರಬಹುದು ಎಂಬ ಅನುಮಾನ, ಆದರೆ ತಿಳಿದವರ ಕಣ್ಣಲ್ಲಿ ಅದು ಅಪ್ಪಟ ಪ್ರೇಮ. ಕೊನೆಗೊಮ್ಮೆ ತನ್ನ ಪ್ರೇಮಿಯನ್ನು ಭೇಟಿಯಾಗಲು ಬರುವ ಅನಿವಾರ್ಯ ಸಂದಂರ್ಭವೆ ಇಡೀ ಸಿನಿಮಾವನ್ನು ಜೀವಂತವಾಗಿಡುತ್ತದೆ. ಶಾನವಾಸ್ ಸಿನಿಮಾಗೆ ನಿರ್ದೇಶನ ಮಾಡಿರುವುದು ಮಾತ್ರವಲ್ಲದೆ, ಕತೆ ಕೂಡಾ ಅವರದ್ದೇ ಕಲ್ಪನೆಯದ್ದಾಗಿದೆ. ಒಂದು ಒಳ್ಳೆಯ ಸಿನಿಮಾ ನೀಡಿರುವ ಉದಯೋನ್ಮಕ ನಿರ್ದೇಶಕ ಅಗಲಿಕೆಯು, ಸಿನಿಮಾ ಪ್ರಿಯರನ್ನು ಕಣ್ಣೀರಾಗಿಸಿದೆ.

ಇದನ್ನೂ ಓದಿ: ಇಂಟರ್​​ನ್ಯಾಷನಲ್ ಎಮ್ಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ’ಡೆಲ್ಲಿ ಕ್ರೈಂ’ ವೆಬ್ ಸರಣಿ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here