Homeಅಂಕಣಗಳುಕೊರಗರ ಹಕ್ಕೊತ್ತಾಯಗಳಿಗಾಗಿ ರಾಜಿರಹಿತವಾಗಿ ದುಡಿಯುತ್ತಿರುವ ಹೋರಾಟಗಾರ್ತಿ ಸುಶೀಲ ನಾಡ

ಕೊರಗರ ಹಕ್ಕೊತ್ತಾಯಗಳಿಗಾಗಿ ರಾಜಿರಹಿತವಾಗಿ ದುಡಿಯುತ್ತಿರುವ ಹೋರಾಟಗಾರ್ತಿ ಸುಶೀಲ ನಾಡ

- Advertisement -
- Advertisement -
ಎಲೆ ಮರೆ – 15

`ಹೋರಾಟ ಚಳವಳಿ ಅಂದ್ರೆ ಒಬ್ರದೆ ಆಗಿರಲ್ಲ. ಎಲ್ರೂ ಒಟ್ಟು ಸೇರಿ ಮಾಡಿರ್ತೀವಿ, ಸಮುದಾಯದ ಸಮಸ್ಯೆ ಬಂದಾಗ ಎಲ್ರೂ ಸೇರಿ ಕೆಲಸ ಮಾಡ್ತೀವಿ. ಅದ್ರಲ್ಲಿ ಒಬ್ರು ಇಬ್ರನ್ನ ಬೇರೆ ಮಾಡಿ ನೋಡೋಕಾಗಲ್ಲ. ಹಂಗಾಗಿ ನನ್ನ ಬಗ್ಗೆ ಇಂತಿಂತಾದೆಲ್ಲ ನಾನು ಮಾಡಿದೆ ಅಂತೇಳಿದ್ರೆ ತಪ್ಪಾಗ್ತದೆ. ನಾವು ಮಾಡೋ ಎಲ್ಲಾ ಕೆಲಸದಲ್ಲೂ ಎಲ್ಲರ ಪಾಲು ಇರ್ತದೆ. ಎಲ್ಲವನ್ನೂ ಕೂಡಿಸಿ ಒಗ್ಗಟ್ಟು ಮಾಡೋದ್ರಲ್ಲಿ, ಒತ್ತಡ ಹಾಕೋದ್ರಲ್ಲಿ ಚೂರು ನಮ್ಮ ಪಾಲಿರ್ತದೆ. ಅಂತ ಸಮಯದಲ್ಲಿ ಗುಂಪಲ್ಲಿ ಮುಂದಿರ್ತೀವಿ ಅನ್ನೋದಷ್ಟೇ ನಮ್ಮದು’ ಹೀಗೆ ತನ್ನ ಸಮುದಾಯ ಪರವಾದ ಚಳವಳಿ ಹೋರಾಟ ನನ್ನ ಒಬ್ಬಳದಲ್ಲ ಎಂದು ಸಮುದಾಯದ ಪಾಲುದಾರಿಕೆ ಜತೆ ತನ್ನನ್ನು ಗುರುತಿಸಿಕೊಳ್ಳುವ ಉಡುಪಿ ಜಿಲ್ಲೆ ಬೈಂದೂರು ತಾಲೂಕು ನಾಡ ಗ್ರಾಮದ ಸುಶೀಲ ಅವರು 2007 ರಿಂದ ಕೊರಗ ಸಮುದಾಯ ಹಕ್ಕೊತ್ತಾಯಗಳಿಗಾಗಿ ಧ್ವನಿ ಎತ್ತುತ್ತಿದ್ದಾರೆ.

ದಕ್ಷಿಣ ಕನ್ನಡ ಮತ್ತು ಕರ್ನಾಟಕ ಕೇರಳದ ಗಡಿಭಾಗದಲ್ಲಿ ಹೆಚ್ಚಿರುವ ಈ ಭಾಗದ ಮೂಲನಿವಾಸಿಗಳಾದ ಕೊರಗರು ನಿರಂತರವಾಗಿ ತನ್ನ ಹಕ್ಕುಗಳಿಗಾಗಿ ಹೋರಾಟವನ್ನು ಜೀವಂತವಾಗಿಟ್ಟುಕೊಂಡ ಸಮುದಾಯ. ಈ ಕಾರಣಕ್ಕೆ ಕರ್ನಾಟಕದ ಬುಡಕಟ್ಟುಗಳಲ್ಲಿಯೇ ಕೊರಗ ಸಮುದಾಯಕ್ಕೆ ವಿಶಿಷ್ಟವಾದ ಚಳವಳಿಯ ಚರಿತ್ರೆಯಿದೆ.

ಆಗಸ್ಟ್ 18, 1993 ಕೊರಗ ಸಮುದಾಯದ ಐತಿಹಾಸಿಕ ಮೈಲುಗಲ್ಲಿನ ದಿನ. ಕಾಲ್ನಡಿಗೆಯಲ್ಲಿ ಮಂಗಳೂರಿನ ಬಾವುಟಗುಡ್ಡೆಯಿಂದ ಜಿಲ್ಲಾಧಿಕಾರಿಗಳ ಕಚೇರಿತನಕ ಹೋಗಿ ಕೊರಗ ಸಮುದಾಯ ತಮ್ಮ ಹಕ್ಕೊತ್ತಾಯಗಳಿಗಾಗಿ ಗಟ್ಟಿಯಾಗಿ ಧ್ವನಿ ಎತ್ತಿದ ದಿನ. ಪರಿಣಾಮ ಆಗ ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಮಹಮದ್ ಪೀರ್ ಅವರ ಅಧ್ಯಕ್ಷತೆಯಲ್ಲಿ ಅಧ್ಯಯನ ನಡೆಸಿ 1994 ರಲ್ಲಿ ವರದಿ ಸಲ್ಲಿಸಿತು. ಈ ವರದಿ ಕೊರಗ ಸಮುದಾಯದ ಪ್ರತಿ ಕುಟುಂಬಕ್ಕೆ 2 ಎಕರೆ ಜಮೀನು ನೀಡಬೇಕೆಂದು ಶಿಫಾರಸ್ಸು ಮಾಡಿತು. ಇದನ್ನು ಆಧರಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಜಾಗೃತವಾಯಿತು. ಆಗ ಈ ಸಂಘಟನೆಯ ಅಧ್ಯಕ್ಷರಾಗಿದ್ದ ಪಿ.ಗೋಕುಲದಾಸ ಅವರ ನೇತೃತ್ವದ ಕಾಳತ್ತೂರ್ ಚಲೋ ತೀವ್ರವಾದಾಗ 300 ಎಕರೆ ಜಾಗವನ್ನು 270 ಕುಟುಂಬಗಳಿಗೆ ಹಂಚಿ `ಕೊರಗರ ಭೂಮಿಹಕ್ಕು ಅಭಿಯಾನಕ್ಕೆ’ ಯಶಸ್ಸು ಸಿಕ್ಕಿತ್ತು. ಹೀಗೆ 1993 ರಲ್ಲಿ ಆರಂಭಗೊಂಡ ಭೂಮಿಹಕ್ಕು ಪ್ರತಿಪಾದನಾ ಅಭಿಯಾನ 450 ಕ್ಕೂ ಹೆಚ್ಚು ಕುಟುಂಬಗಳು 490 ಎಕರೆ ಜಮೀನಿನ ಹಕ್ಕುಪತ್ರ ಪಡೆಯಲು ಸಾಧ್ಯವಾಗಿದೆ.

ಮತ್ತೊಂದೆಡೆ ಅಜಲು ಎಂಬ ಅಮಾನವೀಯ ಕ್ರೌರ್ಯವನ್ನು ತಡೆಯಲು ಕೊರಗ ಸಮುದಾಯ ಸತತ ಎಂಟು ವರ್ಷ ಹೋರಾಡಿದ ಫಲವಾಗಿ 2000 ರ ಆಗಸ್ಟ್ 17 ರಂದು ಆಗಿನ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿಯವರು `ಅಜಲು ನಿಷೇಧ ಕಾಯ್ದೆ’ ತಂದರು. ಅಸ್ಪøಶ್ಯ ಸಮುದಾಯವೊಂದು ತನ್ನ ಇರುವಿಕೆಗಾಗಿ ಧ್ವನಿ ಎತ್ತಿದ ದಿನ, ಅಜಲು ಎಂಬ ಹೀನ ಪದ್ಧತಿಯಿಂದ ಮುಕ್ತಿ ಪಡೆದು ಕೊರಗ ಸಮುದಾಯಕ್ಕೆ ಹೊಸ ದಿನವಾಗಿ, ಕೊರಗ ಸಮುದಾಯದ ಸ್ವಾತಂತ್ರ್ಯ ಮತ್ತು ಭೂಮಿಹಕ್ಕಿನ ಯಶಸ್ಸಿನ ಹಿನ್ನೆಲೆಯಲ್ಲಿ ಕೊರಗರು ಆಗಸ್ಟ್ 18 ರಂದು ಪ್ರತಿವರ್ಷ `ಭೂಮಿಹಬ್ಬ’ ಆಚರಿಸುತ್ತಾರೆ. ಈ ಹೋರಾಟ ಪರಂಪರೆ ಕೊರಗ ಸಮುದಾಯ ಹೊಸ ತಲೆಮಾರನ್ನು ಚಳವಳಿಗೆ ಅಣಿಗೊಳಿಸಿದೆ. ಇಂತಹ ಚಳವಳಿಯ ಕಾವು ಪಡೆದು ಸಮುದಾಯಕ್ಕಾಗಿ ದಿಟ್ಟವಾಗಿ ಧ್ವನಿ ಎತ್ತುವ ಕೊರಗ ಸಮುದಾಯದ ಶಿಕ್ಷಿತ ಹೊಸ ತಲೆಮಾರು ಜಾಗೃತಗೊಂಡಿದೆ. ಹೀಗೆ ಗಮನ ಸೆಳೆದವರಲ್ಲಿ ಸುಶೀಲ ನಾಡ ಕೂಡ ಒಬ್ಬರು.

ಕೊರಗ ಸಮುದಾಯದ ಆರಂಭದ ದಿನಗಳ 1993ರ ಹೋರಾಟ ನಡೆಯುತ್ತಿದ್ದಾಗ ಸುಶೀಲ ಆಗಿನ್ನು ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಹುಡುಗಿ. ಹತ್ತನೆ ತರಗತಿತನಕ ಓದಿದ ಸುಶೀಲಾಗೆ ಮುಂದೆ ಓದಲು ಆಗಲಿಲ್ಲ. ಹಾಗಾಗಿ ತನ್ನೂರು ನಾಡದಲ್ಲಿಯೇ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ನಿಧಾನಕ್ಕೆ ನಮ್ಮ ಸಮುದಾಯವನ್ನು ಯಾಕೆ ಅಸ್ಪೃಶ್ಯರನ್ನಾಗಿ ನೋಡುತ್ತಾರೆ, ನಮ್ಮಲ್ಲೇಕೆ ಇನ್ನೂ ಬಡತನ ಅನಕ್ಷರತೆ ಇದೆ? ಇಂತಹ ಪ್ರಶ್ನೆಗಳೆಲ್ಲಾ ಕಾಡತೊಡಗಿ ಸಮುದಾಯದ ಪರವಾದ ಹಕ್ಕೊತ್ತಾಯಗಳಲ್ಲಿ ಭಾಗಿಯಾಗತೊಡಗಿದರು. 1998 ರಲ್ಲಿ ಸುಶೀಲಾ ಅವರಿಗೆ ಅಂಗನವಾಡಿ ಕಾರ್ಯಕರ್ತೆಯ ಕೆಲಸ ಸಿಗುತ್ತದೆ. ಅಲ್ಲಿಂದ ಸಮುದಾಯದ ಬಗ್ಗೆ ಮತ್ತಷ್ಟು ಅರಿವು ತಿಳಿವಳಿಕೆ ಹೆಚ್ಚುತ್ತಾ ಹೋಗುತ್ತದೆ. ಇದೇ ಸಂದರ್ಭಕ್ಕೆ `ಸಮಗ್ರ ಗ್ರಾಮೀಣ ಆಶ್ರಮ’ ಕೊರಗರ ಅಭಿವೃದ್ಧಿಗಾಗಿ ಕೆಲಸ ಮಾಡಲು ಸುಶೀಲಾರಂತಹ ಕೊರಗ ಸಮುದಾಯದ ಯುವ ಶಿಕ್ಷಿತರನ್ನು ಒಳಗೊಳ್ಳುತ್ತಾರೆ. ಆಗ ಸುಶೀಲ ನಾಡ ಅವರು `ಸಮಗ್ರ ಗ್ರಾಮೀಣ ಆಶ್ರಮ’ ದ ಸಂಘಟಿತ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಸುಶೀಲ ಅವರು ಸಮಾರು 27 ವರ್ಷವಿದ್ದಾಗ 2007 ರಿಂದ ಕೊರಗ ಸಮುದಾಯದ ಚಳವಳಿಯ ಭಾಗವಾಗಿ ಸಕ್ರಿಯರಾಗುತ್ತಾರೆ.

ಸುಶೀಲ ಅವರ ಕೊರಗ ಸಮುದಾಯದ ದೈನಂದಿನ ಸಮಸ್ಯೆಗಳ ಬಗೆಗೆ ಇತರರ ಜೊತೆ ಸೇರಿ ರಾಜಿಯಿಲ್ಲದ ಸಣ್ಣ ಸಣ್ಣ ಹೋರಾಟ ಚಳವಳಿಗಳನ್ನು ರೂಪಿಸತೊಡಗಿದರು. ಕೊರಗ ಸಮುದಾಯದ ಸಂಘಟನೆಯಲ್ಲಿ ಮಹಿಳೆ ಪುರುಷರು ಅಂತ ಭೇದವಿಲ್ಲ. ಒಮ್ಮೆ ಒಕ್ಕೂಟದ ಅಧ್ಯಕ್ಷರು ಗಂಡಸರಾದರೆ, ಮತ್ತೊಮ್ಮೆ ಮಹಿಳೆಯರಾಗುತ್ತಾರೆ. ಇದರ ಫಲವಾಗಿ ಸುಶೀಲ ಅವರು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆಯಾಗಿ 2011 ರಿಂದ 2013 ರ ತನಕ ಸಮರ್ಥವಾಗಿ ಸಮುದಾಯಕ್ಕಾಗಿ ದುಡಿದರು. ಇದೀಗ ಅಂಗನವಾಡಿ ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯಾಗಿಯೂ ಅಂಗನವಾಡಿ ನೌಕರರ ಪರವಾದ ಹೋರಾಟದಲ್ಲೂ ಸುಶೀಲ ತೊಡಗಿಕೊಂಡಿದ್ದಾರೆ.

ಸುಶೀಲ ಅವರು `ಅಂಗನವಾಡಿ ಕಾರ್ಯಕರ್ತೆಯಾಗಿದ್ದೂ ರಜಾದಿನಗಳಲ್ಲಿಯೂ, ಇರುವ ರಜಾ ಸೌಲಭ್ಯಗಳನ್ನು ಬಳಸಿಯೂ ಸಮುದಾಯಕ್ಕಾಗಿ ಹೋರಾಟ ಮಾಡುತ್ತಿರುವೆ. ನಾವು ನಮ್ಮ ಹಕ್ಕುಗಳನ್ನು ಕೇಳುವುದು ಸರಕಾರದ ವಿರುದ್ಧವಾಗುವುದಿಲ್ಲ, ಮೇಲಾಗಿ ಅಂಗನವಾಡಿ ನೌಕರರು ಸರಕಾರಿ ನೌಕರರೆಂದು ಸರಕಾರವೇ ಪರಿಗಣಿಸಿಲ್ಲ. ಹಾಗಾಗಿ ಹೋರಾಟಗಳಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ’ ಎನ್ನುತ್ತಾರೆ.

ಮುಂದುವರಿದು, `ಕೊರಗರಲ್ಲಿ ಶಿಕ್ಷಣದ ಜಾಗೃತಿ ಮೂಡಿದರೂ ಡ್ರಾಪೌಟ್ ಆಗೋದು ಬಾಳ, ಏಳು, ಎಂಟನೆ ತರಗತಿಗೆ ಶಾಲೆ ಬಿಟ್ಟು ಮಕ್ಕಳು ಬೇರೆ ಬೇರೆ ಕೆಲಸಗಳಲ್ಲಿ ತೊಡಗುತ್ತಾರೆ. ಇಷ್ಟು ವರ್ಷಕ್ಕೆ ಈಗ ಕೊರಗ ಸಮುದಾಯದಲ್ಲಿ ಮೊದಲ ವಿದ್ಯಾರ್ಥಿನಿ ಮೆಡಿಕಲ್ ಓದಿಗೆ ಸೇರಿಕೊಂಡಿದ್ದಾಳೆ. ಕಾನೂನುಪ್ರಕಾರ ಅಜಲು ಪದ್ಧತಿ ನಿಷೇಧವಾದರೂ, ದೊಡ್ಡದೊಡ್ಡ ಶ್ರೀಮಂತ ವ್ಯಕ್ತಿಗಳು ಈಗಲೂ ಅಜಲು ಮಾಡಿಸುತ್ತಾರೆ. ನನ್ನದು ಹೋರಾಟ ಚಳವಳಿ ಅಂತೇನು ಅಲ್ಲ, ನಮ್ಮ ಅಂಗನವಾಡಿ ಕೆಲಸ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ಸಮುದಾಯಕ್ಕೆ ಒಂದಷ್ಟು ಸಮಯ ಇಡೋದಷ್ಟೇ.

ನಮ್ಮ ಸಮುದಾಯಕ್ಕೆ ಸಮಸ್ಯೆ ಬಂದಾಗ ಅದನ್ನ ಪರಿಶೀಲಿಸೋದು, ಆ ಸಮಸ್ಯೆ ಈಡೇರೋತನಕ ಪಟ್ಟು ಬಿಡದೆ ಅದಕ್ಕಾಗಿ ಕೆಲಸ ಮಾಡೋದು. ಇದು ನಮ್ಮ ಹೋರಾಟದ ರೀತಿ. ನನಗೆ ಓದಿಗಿಂತ ಹೋರಾಟದ ಅನುಭವ ಕಲಿಸಿದ್ದೇ ಜಾಸ್ತಿ. ಹೋರಾಟಕ್ಕಾಗಿನೆ ಓದಬೇಕು ಅಂತೆಲ್ಲಾ ಕೂರೋದಿಲ್ಲ. ಯಾರಾದ್ರೂ ಬುಕ್ಸ್ ಕೊಟ್ರೆ ಓದ್ತೇನೆ. ನಿರಂಜನರ ಚಿರಸ್ಮರಣೆ..ಹೀಗೆ ಕೆಲವು ಪುಸ್ತಕಗಳನ್ನು ಹೆಸರಿಸಬಹುದು. ಕೊರಗ ಸಮುದಾಯದ ಬಗ್ಗೆ ಬಂದ ಪುಸ್ತಕಗಳನ್ನೆಲ್ಲಾ ಓದಿದ್ದೇನೆ. ಈಗ ವಾಟ್ಸಪ್ಪು, ಪೇಸ್‍ಬುಕ್ಕೂ ಬಳಸೋದ್ರಿಂದ. ವಾಟ್ಸಪ್ಪಿಗೆ ಬರುವ ನ್ಯಾಯಪಥದ ಎಲ್ಲಾ ಲೇಖನಗಳನ್ನು ಓದ್ತೀನಿ, ಟ್ರೂಥ್ ಇಂಡಿಯಾ ಅಂತ ಒಂದರಿಂದ ಲೇಖನಗಳು ಬರ್ತಾವೆ ಅದನ್ನೆಲ್ಲಾ ಓದ್ತೀನಿ. ಚಳವಳಿಯೇ ನನಗೆ ಓದುಬರಹ ಎಲ್ಲಾ ಆಗಿದೆ. ಭೂಮಿ ಹೋರಾಟ ಆಗಿದ್ದಾಗಲೂ, ಆ ನಂತರದ ಕೆಲಸಗಳು ತುಂಬಾ ಇರ್ತಾವೆ. ಭೂಮಿ ಹಕ್ಕುಪತ್ರಗಳ ಸಮಸ್ಯೆ, ಪುನರ್ವಸತಿ ಸಮಸ್ಯೆ, ನೀರಿನ ಸಮಸ್ಯೆ, ಆಧಾರ್‍ಕಾರ್ಡ್ ಮಾಡ್ಸೋದು, ರೇಷನ್ ಕಾರ್ಡ್ ಮಾಡ್ಸೋದು ಹೀಗೆ ಸಮುದಾಯದ ದಿನನಿತ್ಯದ ಸಮಸ್ಯೆಗಳನ್ನೂ ಚಳವಳಿ ಮಾಡಿ ಪಡಕೊಳ್ಳೋ ಸ್ಥಿತಿ ಇದೆ’ ಇಂದು ವಿವರಿಸುತ್ತಾರೆ.

ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸಬಿತ ಕೊರಗ ಅವರು `ಸುಶೀಲ ನಾಡ ಕೊರಗ ಸಮುದಾಯವನ್ನು ಜಾಗೃತಗೊಳಿಸುವಲ್ಲಿ ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾರೆ. ಸಮುದಾಯದ ಅಭಿವೃದ್ಧಿಗೆ ಆಯಾ ಸಮುದಾಯದ ಒಳಗಿಂದಲೇ ಪ್ರಜ್ಞಾವಂತರು ರೂಪುಗೊಳ್ಳಬೇಕಿದೆ’ ಎನ್ನುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...