Homeಮುಖಪುಟಕೊಲಿಜಿಯಂ ಶಿಫಾರಸು: ಕೇಂದ್ರ ಸರ್ಕಾರ ನಿರ್ಲಕ್ಷ್ಯ

ಕೊಲಿಜಿಯಂ ಶಿಫಾರಸು: ಕೇಂದ್ರ ಸರ್ಕಾರ ನಿರ್ಲಕ್ಷ್ಯ

- Advertisement -
- Advertisement -

12 ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಕೊಲಿಜಿಯಂ ನೀಡಿರುವ ಶಿಫಾರಸ್ಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಉನ್ನತ ಮೂಲಗಳು ಆರೋಪಿಸಿವೆ.

ಒಟ್ಟು 68 ನ್ಯಾಯಮೂರ್ತಿಗಳ ನೇಮಕ ಮಾಡುವಂತೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸ್ಸು ಮಾಡಿದ್ದು, ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

ಆಗಸ್ಟ್‌ 25ರಿಂದ ಸೆಪ್ಟೆಂಬರ್ 1ರವರೆಗೆ ನಡೆದ ಕೊಲಿಜಿಯಂ ಪರಿಶೀಲನೆಯ ಮುಂದೆ 112 ಮಂದಿಯ ಹೆಸರುಗಳಿದ್ದವು. ಶಿಫಾರಸ್ಸು ಮಾಡಲಾಗಿರುವ 68 ಹೆಸರುಗಳಲ್ಲಿ 44 ನ್ಯಾಯಾವಾದಿ ಹಿನ್ನೆಲೆಯವರಾಗಿದ್ದು, 24 ಮಂದಿ ನ್ಯಾಯಾಂಗದ ಸೇವೆಯ ಹಿನ್ನೆಲೆಯವರಾಗಿದ್ದಾರೆ.

ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ಶಿಫಾರಸು ಮಾಡಿದ್ದ ಎಲ್ಲ ಹೆಸರುಗಳಿಗೆ ಕೇಂದ್ರ ಸರ್ಕಾರ ತ್ವರಿತವಾಗಿ ಅನುಮೋದನೆ ನೀಡಿತ್ತು. ಆಗಸ್ಟ್‌ 31ರಂದು ಮೂವರು ಮಹಿಳೆಯರು ಸೇರಿದಂತೆ 9 ಮಂದಿ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸಿದ್ದರು.

ಹೈಕೋರ್ಟ್‌ಗಳಲ್ಲಿ ತೀವ್ರತರನಾಗಿ ನ್ಯಾಯಮೂರ್ತಿಗಳ ಕೊರತೆ ಇದ್ದು, ಖಾಲಿ ಹುದ್ದೆಗಳನ್ನು ತುಂಬುವ ನಿಟ್ಟಿನಲ್ಲಿ 12 ಹೈಕೋರ್ಟ್‌ಗಳಿಗೆ ಒಮ್ಮೆಲೆ 68 ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಕೊಲಿಜಿಯಂ ಸೂಚಿಸಿದ್ದು, ಅಪೂತಪೂರ್ವ ಕ್ಷಣವೆಂದೇ ವಿಶ್ಲೇಷಿಸಲಾಗಿತ್ತು.

ಜಸ್ಟೀಸ್‌ ಎನ್.ವಿ.ರಮಣ, ಜಸ್ಟೀಸ್‌ ಯು.ಯು.ಲಲಿತ್‌, ಜಸ್ಟೀಸ್‌ ಎ.ಎಂ.ಖಾನ್ವಿಲ್ಖರ್‌ ಅವರನ್ನು ಒಳಗೊಂಡಿದ್ದ ಕೊಲಿಜಿಯಂ, 8 ನ್ಯಾಯಮೂರ್ತಿಗಳನ್ನು ಕೇರಳ ಹೈಕೋರ್ಟ್‌ಗೆ, ಕೊಲ್ಕತ್ತ ಹಾಗೂ ರಾಜಸ್ಥಾನಕ್ಕೆ ತಲಾ 6, ಗುಜರಾತ್‌ ಮತ್ತು ಜಾರ್ಖಾಂಡ್‌ಗೆ ತಲಾ 5, ಪಂಜಾಬ್‌, ಹರಿಯಾಣ, ಮದ್ರಾಸ್‌ಗೆ ತಲಾ 4, ಛತ್ತೀಸ್‌ಗಡಕ್ಕೆ ಇಬ್ಬರು, ಮಧ್ಯಪ್ರದೇಶಕ್ಕೆ ಒಬ್ಬರು ನ್ಯಾಯಮೂರ್ತಿಗಳನ್ನು ನೇಮಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ.

ಮಿಜೋರಂನ ಮೊದಲ ಮಹಿಳಾ ನ್ಯಾಯಾಂಗ ಅಧಿಕಾರಿಯೆಂದು ಗುರುತಿಸಲಾಗಿರುವ ಮರ್ಲಿ ವಂಕಂಗ್‌ ಹೆಸರನ್ನು ಗುವಾಹತಿ ಹೈಕೋರ್ಟ್‌ಗೆ ಶಿಫಾರಸ್ಸು ಮಾಡಲಾಗಿದೆ. ಪರಿಶಿಷ್ಟ ಪಂಗಡದವರೂ ಆಗಿರುವ ಮರ್ಲಿ ಅವರನ್ನು ಒಳಗೊಂಡಂತೆ 9 ಮಹಿಳೆಯರ ಹೆಸರುಗಳನ್ನು ವಿವಿಧ ಕೋರ್ಟ್‌ಗಳಿಗೆ ನೇಮಿಸಲು ತಿಳಿಸಲಾಗಿದೆ.

ಇದನ್ನೂ ಓದಿ:‘ಆಮ್ಲಜನಕವನ್ನು ಹೊರಬಿಡುವ ಏಕೈಕ ಪ್ರಾಣಿ ದನ’- ಅಲಹಾಬಾದ್‌ ಹೈಕೋರ್ಟ್ ವಿಚಿತ್ರ ಹೇಳಿಕೆ

ತೆಲಂಗಾಣ ಹೈಕೋರ್ಟ್‌ಗೆ ನೇಮಕ ಮಾಡುವಂತೆ 7 ಮಂದಿಯ ಹೆಸರನ್ನು ಆ.17ರಂದು ಶಿಫಾರಸು ಮಾಡಿದ್ದ ಐವರು ನ್ಯಾಯಮೂರ್ತಿಗಳಿದ್ದ ಕೊಲಿಜಿಯಂ, ಮೂವರು ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡಂತೆ 9 ಮಂದಿಯನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸುವಂತೆ ಐತಿಹಾಸಿಕ ನಿರ್ಧಾರ ಪ್ರಕಟಿಸಿತ್ತು. ಅದರಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿತ್ತು. ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ, ವಿಕ್ರಮ್ ನಾಥ್‌, ಜೀತೇಂದ್ರಕುಮಾರ್‌ ಮಹೇಶ್ವರಿ, ಹಿಮಾ ಕೊಹ್ಲಿ, ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಈಚೆಗೆ ಪ್ರಮಾಣ ವಚನ ಸ್ವೀಕರಿಸಿದ್ದರು.

ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಸೆಪ್ಟೆಂಬರ್‌ 1ರವರೆಗೆ ಹೇಳುವುದಾದರೆ 25 ಹೈಕೋರ್ಟ್‌ಗಳಲ್ಲಿ 281 ಕಾಯಂ ನ್ಯಾಯಾಧೀಶರು, 184 ಹೆಚ್ಚುವರಿ ನ್ಯಾಯಾಧೀಶರು ನೇಮಕ ಆಗಬೇಕಿದೆ. ಅದರಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ 68, ಪಂಜಾಬ್, ಹರಿಯಾಣ ಹೈಕೋರ್ಟ್‌ನಲ್ಲಿ ತಲಾ 40, ಕೊಲ್ಕತ್ತಾ ಹೈಕೋರ್ಟ್‌ನಲ್ಲಿ 36 ಹುದ್ದೆಗಳು ಭರ್ತಿಯಾಗಬೇಕಿದೆ.

ಇದನ್ನೂ ಓದಿ: ಸುಪ್ರೀಂಗೆ ಹೊಸ ನ್ಯಾಯಾಧೀಶರ ನೇಮಕಾತಿ: ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಜೆಐ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಮ್ಮ ವರದಿಯಲ್ಲಿ ಮತ್ತು ಜೂತೆಗೆ
    ಬಹಳವಾಗಿ advertisement ಬರಲಾರಂಬಿಸಿವೆ.
    ಅಪ್ಪಿ ತಪ್ಪೀ touch ಆದರೆ ಸಾಕು ನಿಮ್ಮ permanent ಆಗಿ ಹೊರಗಡೆ ಹೋಗಿಬಿಡುತ್ತೇವೆ.
    ಇದು ಒಳ್ಳೆಯ ಬೆಳವಣಿಗೆ ಅಲ್ಲ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...