Homeಮುಖಪುಟಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-2

ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-2

- Advertisement -
- Advertisement -

ರೈತರ ಆದಾಯ ದುಪ್ಪಟ್ಟು 2

21) ಗುರಿ: ಹೆಚ್ಚು ಮೌಲ್ಯ ತಂದುಕೊಡಬಲ್ಲ ಬೆಳೆ ವೈವಿಧ್ಯಗಳಿಗೆ ವಿಸ್ತರಿಸಿಕೊಳ್ಳುವುದಕ್ಕಾಗಿ ರೈತರಿಗೆ ಪ್ರೋತ್ಸಾಹ.
ಸಾಧನೆ: ತೋಟಗಾರಿಕೆ ಮತ್ತು ಹಣ್ಣು ತರಕಾರಿಗಳಂತಹ ಆರ್ಥಿಕವಾಗಿ ಹೆಚ್ಚಿನ ಮೌಲ್ಯ ತಂದುಕೊಡಬಲ್ಲ ಬೆಳೆಗಳ ಪ್ರಮಾಣದಲ್ಲಿ ವಾರ್ಷಿಕ 5% ಏರಿಕೆಯ ಗುರಿ ಸರ್ಕಾರಕ್ಕಿತ್ತು.

(ಮಾಹಿತಿ ಮೂಲ: National Account Statistics, CMIE; ಸೌಜನ್ಯ ಹಿಂದೂಸ್ಥಾನ್ ಟೈಮ್ಸ್)

22) ಗುರಿ: ಮೌಲ್ಯವರ್ಧನೆಯಲ್ಲಿ ಹೆಚ್ಚಿನ ಪಾಲು ರೈತರಿಗೆ ಸಿಗುವಂತೆ ನೀತಿಗಳಲ್ಲಿ ಬದಲಾವಣೆ ಮಾಡುವುದು.

ಸಾಧನೆ:

* ಕನಿಷ್ಠ ಬೆಂಬಲ ಬೆಲೆಯನ್ನು ಕನಿಷ್ಠ ಮೀಸಲು ಬೆಲೆಯಾಗಿ ಪರಿವರ್ತಿಸುವ ಉದ್ದೇಶ ಪೂರ್ತಿಯಾಗಿಲ್ಲ

* ತಂತ್ರಜ್ಞಾನ ಆಧರಿತ ಕೃಷಿ ಸಲಹಾ ಸೇವೆಗೆ ವ್ಯವಸ್ಥೆಯೊಂದನ್ನು ರೂಪಿಸುವ ಕೆಲಸ ಆಗಿಲ್ಲ. ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (DIC) ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ನಡುವೆ ಬೇಡಿಕೆ ಆಧರಿತ ಟೆಲಿ ಕೃಷಿ ಸಲಹಾ ಸೇವೆ ಆರಂಭಿಸಲು 2021 ಜೂನ್ ತಿಂಗಳಲ್ಲಿ ಒಂದು ಒಪ್ಪಂದ ಆಗಿದೆ. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಉದ್ದೇಶಿತ ಸಮಗ್ರ ವ್ಯವಸ್ಥೆಯ ಬಗ್ಗೆ ಕೆಲಸ ಇನ್ನೂ ಚಿಂತನೆಯ ಹಂತದಲ್ಲೇ ಇದೆ.

* ಆವಶ್ಯಕ ವಸ್ತುಗಳ ಕಾಯಿದೆ ತಿದ್ದುಪಡಿ ಮಾಡಲಾಗಿದೆ.

23) ಗುರಿ: APMC ಕಾಯಿದೆ ರದ್ದತಿ; ಮಾದರಿ APLM ಕಾಯಿದೆ ಅನುಷ್ಠಾನ, ಗುತ್ತಿಗೆ ಕೃಷಿ ಕಾಯಿದೆ ಮತ್ತು ಭೂಮಿ ಗುತ್ತಿಗೆ ಕಾಯಿದೆಗಳ ಅನುಷ್ಠಾನ.

ಸಾಧನೆ: ಸರ್ಕಾರ ಈಗಾಗಲೇ ಉದ್ದೇಶಿತ ಕೃಷಿ ಕಾಯಿದೆಗಳನ್ನೆಲ್ಲ ಜಾರಿಗೆ ತಂದಿದೆ. ಇದರಿಂದಾಗಿ ರೈತರು ಅಸಮಾಧಾನಗೊಂಡಿದ್ದು ಕಳೆದ ಒಂದು ವರ್ಷದಿಂದ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ವಿಷಯ ನ್ಯಾಯಾಲಯದ ಎದುರೂ ಇದೆ. ಹಾಗಾಗಿ, ಇವು ಸರ್ಕಾರಕ್ಕೆ ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿವೆ.

24) ಗುರಿ: ಸ್ಥಿರವಾದ ಮತ್ತು ಸಾತತ್ಯವುಳ್ಳ ಕೃಷಿ ರಫ್ತು ನೀತಿ. ಕೃಷಿ ಉತ್ಪನ್ನಗಳ ರಫ್ತಿನ ಮೇಲಿನ ನಿಷೇಧಗಳ ರದ್ದತಿ

ಸಾಧನೆ: ಕೇಂದ್ರ ಸರ್ಕಾರವು ಹೊಸ ಕೃಷಿ ರಫ್ತು ನೀತಿ-2018 ನ್ನು 2018ರ ಡಿಸೆಂಬರಿನಲ್ಲಿ ಅಂಗೀಕರಿಸಿದೆ. ಆದರೆ, ನೀತಿಯಲ್ಲಿ ಹೇಳಲಾಗಿರುವ ಬಹುತೇಕ ಅಂಶಗಳು – ಉದಾಹರಣೆಗೆ, ಕ್ಲಸ್ಟರ್‌ಗಳ ಬೆಳವಣಿಗೆ, ಮೂಲಭೂತ ಸೌಕರ್ಯಗಳು, ಬ್ರ್ಯಾಂಡ್ ಇಂಡಿಯಾ, ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ದೊಡ್ಡ ಮಟ್ಟದ ಖಾಸಗಿ ಹೂಡಿಕೆ, ಗುಣಮಟ್ಟ ಸುಧಾರಣೆ ಇತ್ಯಾದಿ ಅಂಶಗಳೆಲ್ಲ ಇನ್ನೂ ಕಾಗದದ ಮೇಲಷ್ಟೇ ಇವೆ.

25) ಗುರಿ: ನಿಖರತೆ ಸಹಿತ ಕೃಷಿಗೆ (ಪ್ರಿಸಿಷನ್ ಅಗ್ರಿಕಲ್ಚರ್) ಪ್ರೋತ್ಸಾಹ ಮತ್ತು ಕೃಷಿ ಸಂಶೋಧನೆಗೆ ಹೂಡಿಕೆಯಲ್ಲಿ ಹೆಚ್ಚಳ

ಸಾಧನೆ: ಕೇಂದ್ರ ಕೃಷಿ ಸಂಬಂಧಿ ಇಲಾಖೆಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ, ವರದಿ ಲಭ್ಯವಿರುವ ಮೂರು ವರ್ಷಗಳಲ್ಲಿ ಮಾಡಿದ ವೆಚ್ಚ ಇಲ್ಲಿದೆ:

(ಮಾಹಿತಿ ಮೂಲ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ಅಂಕಿಸಂಖ್ಯೆಗಳ ವರದಿ 2019-20)

ರೈತರ ಆದಾಯ ದುಪ್ಪಟ್ಟು 3

26) ಗುರಿ: ರೈತರಿಗೆ ಆಧುನಿಕ ಮೂಲಸೌಕರ್ಯಗಳನ್ನು ಗ್ರಾಮೀಣ ಭಾಗದಲ್ಲಿ ಒದಗಿಸುವುದು ಮತ್ತು ಸಮಗ್ರವಾದ ಮೌಲ್ಯ ಸರಪಳಿ ರಚಿಸುವುದು.

ಸಾಧನೆ: ಕೃಷಿ ಶಾಸನಗಳು ಚಾಲ್ತಿಗೆ ಬರಲು ರೈತರ ವಿರೋಧ ಇರುವ ಹಿನ್ನೆಲೆಯಲ್ಲಿ ಈ ಯಾವುದೇ ಬೆಳವಣಿಗೆಗಳು ಸಂಭವಿಸಿಲ್ಲ. ಬಹುತೇಕ ಎಲ್ಲವೂ ಕಾಗದಪತ್ರಗಳಲ್ಲೇ ಉಳಿದಿವೆ.

27)ಗುರಿ: ಕೃಷಿ ಮೌಲ್ಯ ಸರಪಳಿಗೆ ಮೂಲಭೂತ ಸೌಕರ್ಯಗಳ ದರ್ಜೆ ನೀಡುವುದು
ಸಾಧನೆ: ಇದಿನ್ನೂ ಚಿಂತನೆಯ ಹಂತದಲ್ಲೇ ಇದೆ.

28) ಗುರಿ: ಉತ್ಪಾದನೆಗೂ ಸಂಸ್ಕರಣೆಗೂ ಸಂಬಂಧ ಏರ್ಪಡಿಸುವುದು, ಗ್ರಾಮಮಟ್ಟದಲ್ಲಿ ಸಂಗ್ರಹಣಾ ಕೇಂದ್ರಗಳನ್ನು ನಿರ್ಮಿಸುವುದು.

ಸಾಧನೆ: ಕೃಷಿ ಶಾಸನಗಳು ಚಾಲ್ತಿಗೆ ಬರಲು ರೈತರ ವಿರೋಧ ಇರುವ ಹಿನ್ನೆಲೆಯಲ್ಲಿ ಈ ಯಾವುದೇ ಬೆಳವಣಿಗೆಗಳು ಸಂಭವಿಸಿಲ್ಲ. ಬಹುತೇಕ ಎಲ್ಲವೂ ಕಾಗದಪತ್ರಗಳಲ್ಲೇ ಉಳಿದಿವೆ.

29) ಗುರಿ: ರಫ್ತು ಉದ್ದೇಶಿತ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವುದು
ಸಾಧನೆ: ರಫ್ತು ಉದ್ದೇಶಿತ ಕಸ್ಟರ್‌ಗಳನ್ನು 05-02-2021ರಂದು ಗುರುತಿಸಿ ಪ್ರಕಟಿಸಲಾಗಿದೆ. ಆದರೆ, ಇದಿನ್ನೂ ಕಾರ್ಯರೂಪಕ್ಕೆ ಬರಬೇಕಷ್ಟೇ.

ಆರ್ಥಿಕ ಒಳಗೊಳ್ಳುವಿಕೆ

30) ಗುರಿ: ಬ್ಯಾಂಕ್ ಖಾತೆಗಳಿಗೆ, ವಿಮೆಗೆ ಮತ್ತು ಪಿಂಚಿಣಿಗೆ ಎಲ್ಲರಿಗೂ ಅವಕಾಶ ಕಲ್ಪಿಸುವುದು.

ಸಾಧನೆ: ಪ್ರಧಾನಮಂತ್ರಿಗಳ ಜನಧನ ಯೋಜನೆಯಡಿ ಎಲ್ಲರಿಗೂ ಬ್ಯಾಂಕ್ ಖಾತೆ ಉದ್ದೇಶದಿಂದ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಅವುಗಳಲ್ಲಿ 86% ಖಾತೆಗಳು ಮಾತ್ರ ಕಾರ್ಯಾಚರಣೆಯಲ್ಲಿವೆ. ಈ ಯೋಜನೆಯ ಬೆಳವಣಿಗೆ ಈ ಕೆಳಗಿನಂತಿದೆ.

(ಮಾಹಿತಿ ಮೂಲ: PIB ಸರ್ಕಾರಿ ಪ್ರಕಟಣೆ)

2015ರ NSSO ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸುಮಾರು 80% ಮಂದಿ ಯಾವುದೇ ವಿಧದ ವಿಮಾ ರಕ್ಷಣೆ ಹೊಂದಿರಲಿಲ್ಲ. 20-21ರ ಹೊತ್ತಿಗೆ 53 ಕೋಟಿ ಮಂದಿ ಆಯುಶ್ಮಾನ್ ಭಾರತ್ ಯೋಜನೆಯಡಿ ವಿಮಾ ರಕ್ಷಣೆ ಹೊಂದಿದ್ದಾರೆ.

ಅಟಲ್ ಪಿಂಚಿಣಿ ಯೋಜನೆಯಡಿ, 2020 ಸೆಪ್ಟಂಬರ್ ಹೊತ್ತಿಗೆ, 2 ಕೋಟಿ ಜನ ಫಲಾನುಭವಿಗಳನ್ನು ಗುರುತಿಸಲಾಗಿದೆ.

31) ಗುರಿ: ಶಾಲಾ ಪಠ್ಯದಲ್ಲಿ ಆರ್ಥಿಕ ಶಿಕ್ಷಣವನ್ನು ಒಳಗೊಳ್ಳುವುದು
ಸಾಧನೆ: ಹೊಸ ಶಿಕ್ಷಣ ನೀತಿ ಈಗಷ್ಟೇ ಜಾರಿಗೆ ಬಂದಿದ್ದು, ಇದರಲ್ಲಿ ಆರ್ಥಿಕ ಶಿಕ್ಷಣವನ್ನು ಹೇಗೆ ಒಳಗೊಳ್ಳಲಾಗುವುದು ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

32) ಗುರಿ: ಸಣ್ಣ ಪ್ರಮಾಣದ ಸಾಲಗಾರರಲ್ಲಿ ಮತ್ತು ಮನೆವಾರ್ತೆ ಸಾಲಗಾರರಲ್ಲಿ ಸಾಲಕ್ಕೆ ಅರ್ಹರನ್ನು ಗುರುತಿಸುವುದಕ್ಕಾಗಿ ತಂತ್ರಜ್ಞಾನದ ಬಳಕೆ

ಸಾಧನೆ: ಈಗಾಗಲೇ ಬ್ಯಾಂಕುಗಳಲ್ಲಿ CIBIL ಸ್ಕೋರ್ ತಂತ್ರಜ್ಞಾನ ಲಭ್ಯವಿದೆ. ಇನ್ನು ರೈತರ ಭೂಮಿ ಮಾಲಿಕತ್ವ ಡಿಜಿಟೈಸೇಷನ್ ಮತ್ತಿತರ, ಡೇಟಾ ಸಂಗ್ರಹ ಕೆಲಸಗಳು ಅಲ್ಲಲ್ಲಿ ಗುಪ್ಪೆಯಾಗಿ ನಡೆದಿವೆ. ಇವನ್ನೆಲ್ಲ ಸಂಗ್ರಹಿಸಿ, ವಿಶ್ಲೇಷಿಸಿ ಫಲಾನುಭವಿಗಳನ್ನು ಗುರುತಿಸಲು ವ್ಯವಸ್ಥೆ ಇನ್ನಷ್ಟೇ ಆಗಬೇಕಿದೆ. ಇದು ಪಾರದರ್ಶಕವಾಗಿ ನಡೆಯದಿದ್ದರೆ, ಸುಸೂತ್ರವಾದ ಖಾಸಗಿತನದ ರಕ್ಷಣೆಗೆ ಕಾನೂನಿನ ತಳಪಾಯ ಇಲ್ಲದಿದ್ದರೆ, ಇದು ಅತ್ಯಂತ ಅಪಾಯಕಾರಿ ತೀರ್ಮಾನ ಆಗಲಿದೆ. ಯಾಕೆಂದರೆ ಮರುಪಾವತಿ ಸಾಮರ್ಥ್ಯ ಇರುವವರಿಗೆ ಮಾತ್ರ (ಶ್ರೀಮಂತರಿಗೆ) ಸಾಲ ಸಿಗುವ ಸ್ಥಿತಿ ಬರಲಿದೆ.

33) ಗುರಿ: ಆನ್‌ಲೈನ್, ಡಿಜಿಟಲ್ ಮತ್ತು ಕಾಗದ ರಹಿತ ಬ್ಯಾಂಕಿಂಗ್ ವ್ಯವಸ್ಥೆ ಒದಗಿಸುವುದು
ಸಾಧನೆ: ಪೋಸ್ಟ್ ಆಫೀಸ್ ಮೂಲಕ ಬ್ಯಾಂಕಿಂಗ್ ಸೇವೆ 2018 ಸೆಪ್ಟಂಬರ್ ಒಂದರಿಂದ ಆರಂಭಗೊಂಡಿದೆ. ದೇಶದಾದ್ಯಂತ 1.55 ಲಕ್ಷ ಅಂಚೆಕಚೇರಿಗಳಲ್ಲಿ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಲಾಗಿದೆ. 2020ರ ಡಿಸೆಂಬರ್ 15ರಂದು “ಡಾಕ್ ಪೇ” ಎಂಬ ಡಿಜಿಟಲ್ ಪಾವತಿ ಆಪ್ಲಿಕೇಷನ್‌ಅನ್ನೂ ಸರ್ಕಾರ ಆರಂಭಿಸಿದೆ. (ಮಾಹಿತಿ PIB ಸರ್ಕಾರಿ ಪ್ರಕಟಣೆ)

ಅಲ್ಲಿ ಸಿಬ್ಬಂದಿಗಳು ಕೇವಲ 3 ಲಕ್ಷ ಇರುವುದು ಮತ್ತು ತಂತ್ರಜ್ಞಾನಕ್ಕೆ ಸಿಬ್ಬಂದಿ ಹೊಂದಿಕೊಂಡಿರದಿರುವುದು ಕ್ಷಿಪ್ರ ಸೇವೆಗೆ ತೊಂದರೆಯಾಗಿದೆ. ಬೇರೆ ಹಲವು ಡಿಜಿಟಲ್ ಪೇಮೆಂಟ್ ಬ್ಯಾಂಕುಗಳು ಆರಂಭಗೊಂಡಿವೆ, ಆದರೆ ಬ್ಯಾಂಕ್ ವ್ಯವಹಾರಗಳಲ್ಲಿ ಅಮಾಯಕರು ಮೋಸಹೋಗುವ ಪ್ರಕರಣಗಳು ಒಂದೇ ಸಮನೆ ಏರಿಕೆ ಕಾಣುತ್ತಿವೆ.

ಡಿಜಿಟಲ್ ಪಾವತಿಗಳು ಮತ್ತು ಮೋಸ

(ಮಾಹಿತಿ ಮೂಲ: ರಿಸರ್ವ್ ಬ್ಯಾಂಕ್ ವರದಿ)

ಎಲ್ಲರಿಗೂ ವಸತಿ

34) ಗುರಿ: ಪ್ರತಿ ಕುಟುಂಬಕ್ಕೂ ಪಕ್ಕಾ ಮನೆ, ನೀರಿನ ಸಂಪರ್ಕ, ಶೌಚಾಲಯ ಮತ್ತು 24×7 ವಿದ್ಯುತ್ ಒದಗಿಸುವುದು.

ಸಾಧನೆ:

* 2022ರೊಳಗೆ ಎಲ್ಲರಿಗೆ ವಸತಿ ಒದಗಿಸುವ ಉದ್ದೇಶದಿಂದ ಹೊರಟಿರುವ ಕೇಂದ್ರ ಸರ್ಕಾರ ವಿವಿಧ ಯೋಜನೆಗಳಡಿ 2.95 ಕೋಟಿ ಗ್ರಾಮೀಣ ಮನೆಗಳು ಮತ್ತು 1.2 ಕೋಟಿ ನಗರ ಪ್ರದೇಶದ ಮನೆಗಳನ್ನು ನಿರ್ಮಿಸುವ ಉದ್ದೇಶ ಹೊಂದಿತ್ತು. ಇವುಗಳಲ್ಲಿ ನಗರ ಪ್ರದೇಶಗಳಲ್ಲಿ 1.13 ಕೋಟಿ ಮನೆಗಳನ್ನು ಮಂಜೂರು ಮಾಡಿದ್ದು, ಅವುಗಳಲ್ಲಿ ಸುಮಾರು 50 ಲಕ್ಷ ಮನೆಗಳು ಪೂರ್ಣಗೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ 1.95 ಕೋಟಿ ಮನೆಗಳು ಮಂಜೂರಾಗಿದ್ದು, ಅವುಗಳಲ್ಲಿ 1.41 ಕೋಟಿ ಮನೆಗಳು ಪೂರ್ಣಗೊಂಡಿವೆ. ಈ ಲೆಕ್ಕಾಚಾರ ಜುಲೈ 13, 2021ರದು. (ಮಾಹಿತಿ ಮೂಲ: PIB ಪ್ರಕಟಣೆ)

* 2019ರ ಹೊತ್ತಿಗೆ ದೇಶದ 19.20 ಕೋಟಿ ಗ್ರಾಮೀಣ ವಸತಿಗಳಲ್ಲಿ 3.23 ಕೋಟಿ (17%) ಮನೆಗಳಿಗೆ ಮಾತ್ರ ಕುಡಿಯುವ ನೀರಿನ ಸಂಪರ್ಕ ಇತ್ತು. ಈಗ 2021ರ ಹೊತ್ತಿಗೆ ಅದನ್ನು ಹೆಚ್ಚಿಸಿ 8.05 ಕೋಟಿ (42%) ವಸತಿಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. (ಮಾಹಿತಿ ಮೂಲ: ಜಲ ಜೀವನ್ ಮಿಷನ್ ಡ್ಯಾಷ್ ಬೋರ್ಡ್)

PC : The Financial Express

* ಕಳೆದ 5 ವರ್ಷಗಳಲ್ಲಿ ಭಾರತ ಸರ್ಕಾರವು 10.61 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ, ಭಾರತದ ಜನಸಂಖ್ಯೆಯ 99.94% ಭಾಗ ಈಗ ಶೌಚಾಲಯಗಳನ್ನು ಹೊಂದಿದೆ ಎಂದಿದೆ. ಈ ಪ್ರಮಾಣ 2015ರಲ್ಲಿ 43% ಇತ್ತು ಎನ್ನುತ್ತದೆ ಸ್ವಚ್ಛ ಭಾರತ್ ಮಿಷನ್‌ನ ವೆಬ್‌ಸೈಟ್.

* 2010ರ ಹೊತ್ತಿಗೆ 67% ಮನೆಗಳಲ್ಲಿ ವಿದ್ಯುತ್ ಸಂಪರ್ಕ ಇದ್ದರೆ ಈಗ 2020ರ ಹೊತ್ತಿಗೆ 96% ವಿದ್ಯುತ್ ಸಂಪರ್ಕ ಸಾಧಿಸಲಾಗಿದೆ. (ಮಾಹಿತಿ ಮೂಲ: CEEW ವೆಬ್‌ಸೈಟ್). ವಿದ್ಯುತ್ ಹೆಚ್ಚುವರಿ ಉತ್ಪಾದನೆ ಆಗುತ್ತಿದ್ದರೂ, ಡಿಸ್ಕಾಮ್‌ಗಳ ಕಾರ್ಯವೈಫಲ್ಯದ ಕಾರಣದಿಂದಾಗಿ 24×7 ವಿದ್ಯುತ್ ಒದಗಿಸಲು ಸಾಧ್ಯ ಆಗುತ್ತಿಲ್ಲ ಎಂಬ ವಾದ ಕೇಳಿಸುತ್ತಿದೆ.

35) ಗುರಿ: ವಸತಿ ಯೋಜನೆಗಳನ್ನು ಚದರಡಿಗೆ ಇಷ್ಟು ವೆಚ್ಚ ಎಂದು ಲೆಕ್ಕ ಹಾಕುವ ಬದಲು ಆ ಕಟ್ಟೋಣದ ಬಾಳ್ವಿಕೆ ಅವಧಿ ಆಧರಿಸಿ ಲೆಕ್ಕಾಚಾರ ಮಾಡುವುದು (ಲೈಫ್ ಸೈಕಲ್ ಕಾಸ್ಟ್ ಅಪ್ರೋಚ್).
ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ. ಯಾವುದೇ ಬೆಳವಣಿಗೆಗಳಾದಂತಿಲ್ಲ.

36) ಗುರಿ: ರಾಜ್ಯಗಳು ಮತ್ತು ಒಕ್ಕೂಟ ಸರಕಾರಗಳಿಗೆ ಸೇರಿದ ನಷ್ಟದಲ್ಲಿರುವ ಸಾರ್ವಜನಿಕ ರಂಗದ ಉದ್ಯಮಗಳ ಭೂಮಿಯ ಬಳಕೆ.

ಸಾಧನೆ: ರಾಜ್ಯಗಳು ಮತ್ತು ಒಕ್ಕೂಟ ಸರಕಾರಗಳಿಗೆ ಸೇರಿದ ಇಲಾಖೆಗಳ, ನಷ್ಟದಲ್ಲಿರುವ ಸಾರ್ವಜನಿಕ ರಂಗದ ಉದ್ಯಮಗಳ ಹೆಚ್ಚುವರಿ ಭೂಮಿಯನ್ನು ಸ್ಪೆಷಲ್ ಪರ್ಪಸ್ ವೆಹಿಕಲ್ ಕಂಪನಿಯೊಂದನ್ನು ರೂಪಿಸಿ, ಅದರ ಮೂಲಕ ’ಮಾನೆಟೈಸ್’ ಮಾಡುವುದಾಗಿ 2020-21ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ತಿಳಿಸಿದ್ದಾರೆ.

ಮೂಲದಲ್ಲಿ, ’ಎಲ್ಲರಿಗೂ ವಸತಿ’ ಯೋಜನೆಯ ಭಾಗವಾಗಿ ಕೈಗೆಟಕುವ ದರದ ಮನೆಗಳನ್ನು ನಿರ್ಮಿಸಿ ಒದಗಿಸಲು, ಈ ಹೆಚ್ಚುವರಿ ಭೂಮಿಯನ್ನು ಬಳಸುವುದಾಗಿ ಹೇಳಲಾಗಿತ್ತು.

ಅದಕ್ಕಾಗಿ ಭೂಮಿಯನ್ನು ಗುರುತಿಸಲು ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ (DPE) ಸೂಚಿಸಲಾಗಿತ್ತು. ನೀತಿ ಆಯೋಗ ಇದಕ್ಕೆ ವಿಸ್ತೃತ ಯೋಜನೆಯನ್ನೂ ಸಿದ್ಧಪಡಿಸುತ್ತಿತ್ತು. ಈಗ ಏಕಾಏಕಿ ಅದನ್ನೆಲ್ಲ ಮಾರಿ ಹಣ ಗಳಿಸಲು ಸರ್ಕಾರ ತೀರ್ಮಾನಿಸಿದೆ.

37) ಗುರಿ: ಕೈಗೆಟಕುವ ದರದ ವಸತಿಗಳಿಗೆ ಸಾಲವನ್ನು ಆದ್ಯತಾ ಕ್ಷೇತ್ರದಲ್ಲಿ ಒಂದು ಉಪವಿಭಾಗವಾಗಿ ಪರಿಗಣಿಸುವುದು.

ಸಾಧನೆ: ಸಣ್ಣ ಹೂಡಿಕೆಯ, ಕೈಗೆಟಕುವ ದರದ ಮನೆಗಳಿಗೆ ಆದ್ಯತೆಯ ಸಾಲ ನೀಡಿಕೆ ಇನ್ನೂ ಚಿಂತನೆಯ ಹಂತದಲ್ಲೇ ಇದೆ. ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಆದಾಯ ತೆರಿಗೆಯ 80EEA ಅಡಿಯಲ್ಲಿ ತೆರಿಗೆ ವಿನಾಯಿತಿ ಬಿಟ್ಟರೆ ಬೇರೇನೂ ಬೆಳವಣಿಗೆಗಳು ಆಗಿರುವಂತೆ ಕಾಣಿಸುತ್ತಿಲ್ಲ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ


ಇದನ್ನೂ ಓದಿ: ಅವರೇ ಹಾಕಿಕೊಂಡ ಟಾರ್ಗೆಟ್ ಮೂಲಕ ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...