Homeಮುಖಪುಟಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

- Advertisement -
- Advertisement -

ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಇನ್ನು ಮುಂದೆ ಸೆನ್ಸಾರ್ ಮಾಡಬೇಕು ಎಂದು ಒತ್ತಾಯಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಬಾರ್ ಅಂಡ್‌‌ ಬೆಂಚ್ ವರದಿ ಮಾಡಿದೆ.

ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು “ಖಲಿಸ್ತಾನಿ ಭಯೋತ್ಪಾದಕರು” ಎಂದು ಆರೋಪಿಸಿ ಕಂಗನಾ ಅವರು ಮಾಡಿರುವ ಪೋಸ್ಟ್‌ಗೆ ಅರ್ಜಿದಾರರಾದ ವಕೀಲ ಚಂದರ್ಜಿತ್ ಸಿಂಗ್ ಚಂದರ್‌ಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಘೋಷಿಸಿದ ಒಂದು ದಿನದ ನಂತರ ಕಂಗನಾ ಈ ಹೇಳಿಕೆ ನೀಡಿದ್ದರು.

ಆದಾಗ್ಯೂ, ಅಂತಹ ಪ್ರಕರಣಗಳಲ್ಲಿ ಯಾವುದೇ ಮೂರನೇ ವ್ಯಕ್ತಿಯಿಂದ ಅರ್ಜಿಗಳನ್ನು ಅನುಮತಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ವಿಚಾರಣೆಯ ಸಂದರ್ಭದಲ್ಲಿ, ನಟಿಯ ಹೇಳಿಕೆಗಳನ್ನು ಓದದಂತೆ ನ್ಯಾಯಾಲಯವು ಅರ್ಜಿದಾರರಿಗೆ ಸಲಹೆ ನೀಡಿತು. “ನೀವು ಅವರ ಹೇಳಿಕೆಗಳನ್ನು ಹೆಚ್ಚು ಪ್ರಚಾರ ಮಾಡುತ್ತೀರಿ, ನೀವು ಅವರ ಉದ್ದೇಶಕ್ಕಾಗಿ ಹೆಚ್ಚು ಸೇವೆ ಸಲ್ಲಿಸುತ್ತೀರಿ” ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. “ನೀವು ನಿಮ್ಮ ಸ್ವಂತ ಉದ್ದೇಶಕ್ಕೂ ಅಪಚಾರ ಮಾಡುತ್ತಿದ್ದೀರಿ” ಎಂದೂ ಕೋರ್ಟ್ ತಿಳಿಸಿದೆ.

“ಅವರು ಹೇಳಿದ್ದನ್ನು ಪ್ರಚಾರ ಮಾಡುವ ಮೂಲಕ ನೀವು ನಿಮ್ಮ ಉದ್ದೇಶಕ್ಕೆ ಅಪಚಾರ ಮಾಡುತ್ತಿದ್ದೀರಿ. ನೀವು ಅದನ್ನು ಹೆಚ್ಚು ಪ್ರಚಾರ ಮಾಡಿದರೆ, ನೀವು ಅವರ ಉದ್ದೇಶಕ್ಕಾಗಿ ಹೆಚ್ಚು ಸೇವೆ ಸಲ್ಲಿಸುತ್ತೀರಿ. ಆದ್ದರಿಂದ, ದಯವಿಟ್ಟು ಪುನರಾವರ್ತಿಸುವುದನ್ನು ನಿಲ್ಲಿಸಿ” ಎಂದು ನ್ಯಾಯಮೂರ್ತಿ ಸೂಚಿಸಿದ್ದಾರೆ.

“ಸಾಮಾನ್ಯ ಭಾರತೀಯ ನಾಗರಿಕರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ವ್ಯತ್ಯಾಸಗಳನ್ನು ತಿಳಿದಿದ್ದಾರೆ ಎಂದು ನೀವು ಭಾವಿಸುವುದಿಲ್ಲವೇ?” ಎಂದು ಪೀಠವು ಅರ್ಜಿದಾರರನ್ನು ಕೇಳಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಕಂಗನಾ ವಿರುದ್ಧ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಮುಂಬೈನ ಖಾರ್ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು ಎಂದು ಚಂದ್ರಪಾಲ್ ಒತ್ತಾಯಿಸಿದರು. ಈ ಪ್ರಕರಣಗಳ ದೋಷಾರೋಪ ಪಟ್ಟಿಯನ್ನು ಆರು ತಿಂಗಳೊಳಗೆ ಸಲ್ಲಿಸಬೇಕು ಮತ್ತು ಎರಡು ವರ್ಷಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ರಣಾವತ್‌‌ ಅವರ ಪೋಸ್ಟ್ 1984ರ ಸಿಖ್ ವಿರೋಧಿ ದಂಗೆಯನ್ನು ಸಮರ್ಥಿಸುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಅಂತಹ ಹೇಳಿಕೆಗಳು ಜನಾಂಗೀಯ ತಾರತಮ್ಯಕ್ಕೆ, ಗಲಭೆಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು.

“ಟೀಕೆಗಳು ನಮ್ಮ ದೇಶದ ಏಕತೆಗೆ ಸಂಪೂರ್ಣವಾಗಿ ವಿರುದ್ಧವಾಗಿವೆ. ಕಂಗನಾ ಅವರು ಕಠಿಣ ಶಿಕ್ಷೆಗೆ ಅರ್ಹರಾಗಿದ್ದಾರೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. “ಅವರನ್ನು ಕ್ಷಮಿಸಲು ಸಾಧ್ಯವಿಲ್ಲ” ಎಂದು ಹೇಳಲಾಗಿದೆ.

ದೆಹಲಿ ಸರ್ಕಾರದ ಶಾಂತಿ ಮತ್ತು ಸೌಹಾರ್ದ ಸಮಿತಿಯು ನವೆಂಬರ್ 25 ರಂದು ಕಂಗನಾ ಅವರ ಪ್ರತಿಕ್ರಿಯೆಗಳಿಗೆ ಸಮನ್ಸ್ ನೀಡಿತ್ತು.

ಇತ್ತೀಚಿನ ವರ್ಷಗಳಲ್ಲಿ, ರಣಾವತ್‌ ಅವರು ತಮ್ಮ ಕಾಮೆಂಟ್‌ಗಳು ಮತ್ತು ಆಧಾರರಹಿತ ಆರೋಪಗಳ ಕಾರಣಕ್ಕೆ ಪದೇ ಪದೇ ವಿವಾದಗಳನ್ನು ಎದುರಿಸುತ್ತಿದ್ದಾರೆ. ಗೀತರಚನೆಕಾರ ಜಾವೇದ್ ಅಖ್ತರ್ ಅವರ ಬಗ್ಗೆ ಹೇಳಿಕೆ ನೀಡಿ ಮಾನನಷ್ಟ ಮೊಕದ್ದಮೆಯನ್ನೂ ಎದುರಿಸುತ್ತಿದ್ದಾರೆ.

ಟ್ವಿಟರ್ ಸಂಸ್ಥೆಯು ಕಂಗನಾ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. “ದ್ವೇಷಪೂರಿತ ಮತ್ತು ನಿಂದನೀಯ ನಡವಳಿಕೆ ಕುರಿತ ಕಂಪನಿಯ ನಿಯಮವನ್ನು ಕಂಗನಾ ಪದೇ ಪದೇ ಉಲ್ಲಂಘಿಸಿದ್ದಾರೆ” ಎಂದು ಟ್ವಿಟರ್ ವಕ್ತಾರರು ಹೇಳಿದ್ದರು.


ಇದನ್ನೂ ಓದಿರಿ: ಗಾಂಧೀಜಿಗೆ ಅವಹೇಳನ ಪ್ರಕರಣ: 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಾಳಿಚರಣ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

0
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೆರಿದೆ. ಕರ್ನಾಟಕ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆಗಳು ಸಂವಿಧಾನ ವಿರೋಧಿಯಾಗಿದ್ದು, ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಎಳೆಯ...