Homeಮುಖಪುಟವಿದ್ಯಾರ್ಥಿಗಳನ್ನು ಟ್ಯೂಷನ್‌ಗೆ ಸೆಳೆಯಲು ISRO ವಿಜ್ಞಾನಿಯೆಂದು ಹೇಳಿಕೊಂಡಿದ್ದ ಗುಜರಾತ್‌ನ ಶಿಕ್ಷಕ ಅರೆಸ್ಟ್

ವಿದ್ಯಾರ್ಥಿಗಳನ್ನು ಟ್ಯೂಷನ್‌ಗೆ ಸೆಳೆಯಲು ISRO ವಿಜ್ಞಾನಿಯೆಂದು ಹೇಳಿಕೊಂಡಿದ್ದ ಗುಜರಾತ್‌ನ ಶಿಕ್ಷಕ ಅರೆಸ್ಟ್

- Advertisement -
- Advertisement -

ವಿದ್ಯಾರ್ಥಿಗಳನ್ನು ತನ್ನ ಟ್ಯೂಷನ್‌ಗೆ ಸೆಳೆಯಲು ಗುಜರಾತ್‌ನ ಖಾಸಗಿ ಶಿಕ್ಷಕನೊಬ್ಬ ತಾನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಯೆಂದು ಹೇಳಿಕೊಂಡಿದ್ದಾನೆ ಎಂಬ ಆರೋಪದ ಮೇಲೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಮಿಥುಲ್ ತ್ರಿವೇದಿ ಎನ್ನುವವರೇ ಈ ನಕಲಿ ವಿಜ್ಞಾನಿ. ಅವರು ಚಂದ್ರಯಾನ-3 ಚಂದ್ರನ ಮಿಷನ್‌ಗಾಗಿ ಲ್ಯಾಂಡರ್ ಮಾಡ್ಯೂಲ್‌ನ್ನು ವಿನ್ಯಾಸಗೊಳಿಸಿರುವುದಾಗಿ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

”ತ್ರಿವೇದಿ ಅವರು ಇಸ್ರೋದ ”ಪ್ರಾಚೀನ ವಿಜ್ಞಾನ ಅಪ್ಲಿಕೇಶನ್ ವಿಭಾಗದ ಸಹಾಯಕ ಮುಖ್ಯಸ್ಥರ” ಎಂದು ಹೇಳಿಕೊಂಡಿದ್ದಾರೆ ಮತ್ತು ಅದಕ್ಕಾಗಿ ಅವರು ನಕಲಿ ನೇಮಕಾತಿ ಪತ್ರವನ್ನು ತಯಾರಿಸಿದ್ದಾರೆ. ಇಸ್ರೋದ ಮುಂದಿನ ಯೋಜನೆಗೆ ”ಬಾಹ್ಯಾಕಾಶದಲ್ಲಿ ಪಾದರಸ ಬಲ” ಎಂಬ ಬಾಹ್ಯಾಕಾಶ ಸಂಶೋಧನೆಗೆ ಸದಸ್ಯನಾಗಿದ್ದೇನೆ ಎಂದು ನಕಲಿ ಪತ್ರವನ್ನು ಸಹ ಅವರು ತಯಾರಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

ಸೂರತ್ ಪೊಲೀಸರ ಅಪರಾಧ ವಿಭಾಗವು ತ್ರಿವೇದಿ ವಿರುದ್ಧ ಐಪಿಸಿ ಸೆಕ್ಷನ್ 419 (ಸೋಗು ಹಾಕುವ ಮೂಲಕ ವಂಚನೆ), 465 (ನಕಲಿ), 468 (ಮೋಸ ಮಾಡುವ ಉದ್ದೇಶಕ್ಕಾಗಿ ನಕಲಿ) ಮತ್ತು 471 (ನಕಲಿ ದಾಖಲೆಯನ್ನು ಬಳಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಈಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ಕಮಿಷನರ್ ಶರದ್ ಸಿಂಘಾಲ್, ”ನಾವು ಇಸ್ರೋವನ್ನು ಸಂಪರ್ಕಿಸಿದ್ದೇವೆ, ಆದರೆ ಅದು, ಆರೋಪಿ ತೋರಿಸಿದ ನೇಮಕಾತಿ ಪತ್ರವನ್ನು ತಾವು ನೀಡಿದ್ದಲ್ಲ ಎಂದು ಹೇಳಿದೆ. ಬಾಹ್ಯಾಕಾಶ ಸಂಸ್ಥೆಯು ಶೀಘ್ರದಲ್ಲೇ ನಮಗೆ ವಿವರವಾದ ಉತ್ತರವನ್ನು ಕಳುಹಿಸುತ್ತದೆ” ಎಂದು ಹೇಳಿದ್ದಾರೆ.

ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿತು. ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಹೊಂದಿರುವ ಬಾಹ್ಯಾಕಾಶ ನೌಕೆಯನ್ನು ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಇದಕ್ಕೂ ಮೊದಲು, ಕೇವಲ ಮೂರು ರಾಷ್ಟ್ರಗಳು – ಸಮರತಿಕ, ಸೋವಿಯತ್ ಒಕ್ಕೂಟ ಮತ್ತು ಚೀನಾ – ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯನ್ನು ಇಳಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...