Homeಮುಖಪುಟಸ್ವಾಮಿ ಅಗ್ನಿವೇಶ್ ನಿಧನ; ಸಂಭ್ರಮಿಸಿದ ಮಾಜಿ ಐಪಿಎಸ್ ಅಧಿಕಾರಿ- ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಸ್ವಾಮಿ ಅಗ್ನಿವೇಶ್ ನಿಧನ; ಸಂಭ್ರಮಿಸಿದ ಮಾಜಿ ಐಪಿಎಸ್ ಅಧಿಕಾರಿ- ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

CBI ನ ಹಂಗಾಮಿ ನಿರ್ದೇಶಕರಾಗಿದ್ದ ನಾಗೇಶ್ವರ್‌ ರಾವ್‌ ಅದಕ್ಕಿಂತ ಮೊದಲು CBI ನ ಜಂಟಿ ನಿರ್ದೇಶಕರಾಗಿದ್ದರು. ತನ್ನ ಸೇವಾವಧಿಯುದ್ದಕ್ಕೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಲಂಚ, ಮನೀ ಲಾಂಡ್ರಿಂಗ್ ಮುಂತಾದ ಗಂಭೀರ ಆರೋಪಗಳನ್ನೆದುರಿಸಿದ್ದಾರೆ.

- Advertisement -
- Advertisement -

ಆರ್ಯ ಸಮಾಜದ ನಾಯಕ, ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಅವರ ಸಾವಿಗೆ ಮಾಜಿ ಐಪಿಎಸ್ ಅಧಿಕಾರಿ ಎಂ ನಾಗೇಶ್ವರ್‌ ರಾವ್ ಸಂಭ್ರಮಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಸ್ವಾಮಿ ಅಗ್ನಿವೇಶ್(80) ನಿನ್ನೆ ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್‌ ಬಿಲಿಯರಿ ಸೈನ್ಸಸ್​ ಆಸ್ಪತ್ರೆ (ILBS)ಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ವಾಮಿ ಅಗ್ನಿವೇಶ್ ಪಿತ್ತಜನಕಾಂಗದ ಸಿರೋಸಿಸ್ಗೆ ಚಿಕಿತ್ಸೆ ಪಡೆಯುತ್ತಿದ್ದರು.

ಸ್ವಾಮಿ ಅಗ್ನಿವೇಶ್ ಸಾವಿಗೆ ದೇಶದಾದ್ಯಂತ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ಸದಾ ವಿವಾದಗಳನ್ನು ಸೃಷ್ಟಿಸುವ ಮಾಜಿ ಐಪಿಎಸ್ ಅಧಿಕಾರಿ ನಾಗೇಶ್ವರ ರಾವ್ ಸಾವಿಗೆ ಸಂತಸ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಐಪಿಎಸ್‌ ನಾಗೇಶ್ವರ್‌ ರಾವ್‌ ವಿರುದ್ದ ಕ್ರಮ ಕೈಗೊಳ್ಳುವಂತೆ ಬೃಂದಾ ಕಾರಟ್‌ ಪತ್ರ

ತನ್ನ ಟ್ವೀಟ್‌ನಲ್ಲಿ, “ನೀವು ಕೇಸರಿ ಬಟ್ಟೆಗಳನ್ನು ಧರಿಸುವ ಹಿಂದೂ ವಿರೋಧಿ. ನೀವು ಹಿಂದೂ ಧರ್ಮಕ್ಕೆ ಅಪಾರ ಹಾನಿ ಮಾಡಿದ್ದೀರಿ. ನೀವು ತೆಲುಗು ಬ್ರಾಹ್ಮಣರಾಗಿ ಹುಟ್ಟಿದ್ದೀರಿ ಎಂದು ಹೇಳಲು ನನಗೆ ನಾಚಿಕೆಯಾಗುತ್ತದೆ. ಗೋಮುಖ ವ್ಯಾಘ್ರ. ಯಮರಾಜನ ವಿರುದ್ಧ ನನ್ನ ತಕರಾರು ಏನೆಂದರೆ ಇದಕ್ಕೆ ಯಾಕೆ ಇಷ್ಟು ದಿನ ಕಾಯುತ್ತಿದ್ದ!” ಎಂದು ಅತ್ಯಂತ ಕೀಳು ಮಟ್ಟದಲ್ಲಿ ಮಾನವೀಯತೆ ಇಲ್ಲದೆ ಹೇಳಿಕೆ ನೀಡಿದ್ದಾರೆ. (ಟ್ವೀಟ್‌ನ ಆರ್ಕೈವ್ ಇಲ್ಲಿದೆ)

ನಾಗೇಶ್ವರ ರಾವ್ ಟ್ವೀಟ್‌ಅನ್ನು ಖಂಡಿಸಿರುವ ಹಲವಾರು ವ್ಯಕ್ತಿಗಳು ಅವರ ವಿರುದ್ದ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರರಾದ ಪವನ್ ಖೇರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಆರ್ಯಸಮಾಜವನ್ನು ಆರೆಸ್ಸೆಸ್ ಆಪೋಷನ ಮಾಡುವುದನ್ನು ತಡೆಯಲು ಸ್ವಾಮಿಅಗ್ನಿವೇಶ್ ಬಂಡೆಯಂತೆ ನಿಂತರು. ನಾನೊಬ್ಬ ಹಿಂದೂ ಆಗಿ, ಚಾರ್ವಕನ ಅನುಯಾಯಿಗಳಿಗೆ ನನ್ನ ಧರ್ಮ ನೀಡಿದ ಜಾಗವನ್ನು ನಾನು ಮೆಚ್ಚುತ್ತೇನೆ. ಹಿಂದೂ ಧರ್ಮ ತುಂಬಾ ವಿಶಾಲ, ಆಳವಾಗಿದೆ. ಜೊತೆಗೆ ನಿಮ್ಮ ಟ್ವೀಟ್‌ನಲ್ಲಿ ಕಂಡುಬರುವಂತಹ ಅವಿವೇಕಿತನದ ದ್ವೇಷವನ್ನು ತಿರಸ್ಕರಿಸುವಷ್ಟು ಸುರಕ್ಷಿತವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಇನ್ನಿಲ್ಲ

ಇಂಡಿಯನ್ ಪೊಲೀಸ್ ಫೌಂಡೇಶನ್ ನಾಗೇಶ್ವರ್‌ ರಾವ್ ಅವರ ಹೇಳಿಕೆಯನ್ನು ವಿರೋಧಿಸಿದ್ದು, “ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಇಂತಹ ದ್ವೇಷ ಸಂದೇಶಗಳನ್ನು ಟ್ವೀಟ್ ಮಾಡಿ ಅವರು ಧರಿಸಿದ್ದ ಪೊಲೀಸ್ ಸಮವಸ್ತ್ರವನ್ನು ಅಪವಿತ್ರಗೊಳಿಸಿದ್ದಾರೆ ಮತ್ತು ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ. ಅವರು ದೇಶದ ಇಡೀ ಪೊಲೀಸ್ ಪಡೆಗಳನ್ನು, ವಿಶೇಷವಾಗಿ ಯುವ ಅಧಿಕಾರಿಗಳನ್ನು ನಿರಾಶೆಗೊಳಿಸಿದ್ದಾರೆ” ಎಂದು ಹೇಳಿದೆ.

CNN-News18 ಸಂಪಾದಕಿಯಾಗಿರುವ ಅರುನಿಮಾ, “ನೀಚ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಬಂದು ಸುರಿಯುತ್ತಿದ್ದಾರೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾಗೇಶ್ವರ್ ರಾವ್ ಇದಕ್ಕೆ ಉದಾಹರಣೆಯಾಗಿದ್ದಾರೆ. ಇನ್ನು ಕೆಲವು ಐಪಿಎಸ್ ಅಧಿಕಾರಿಗಳು ಬಹಿರಂಗವಾಗಿ ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿ ಪ್ರಚಾರ ಮಾಡುತ್ತಿದ್ದಾರೆ. ಇದು ಆಡಳಿತ ಕಚೇರಿಯ ಪ್ರಮಾಣವಚನವೆ? ಟ್ರೈನಿಂಗ್‌ ಅಕಾಡೆಮಿಯಲ್ಲಿ ನೀಡಲಾದ ತರಬೇತಿಯೆ?” ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸಾಕೆತ್‌ ಗೋಖಲೆ, “ಈ ಕೆಟ್ಟ ವ್ಯಕ್ತಿ ನಿವೃತ್ತ ಐಪಿಎಸ್. ನಾಗರಿಕ ಸೇವಾಯಲ್ಲಿ ಇಲ್ಲದಿದ್ದರೂ ಅವರ ಹೆಸರಲ್ಲಿ ’ಐಪಿಎಸ್’ ಅನ್ನು ಬಳಸುವುದನ್ನು ಮುಂದುವರೆಸಿದ್ದಾರೆ. ಇಂದು ಸಂಜೆ ವೇಳೆಗೆ ನಿಮ್ಮ ಹೆಸರಿನಿಂದ ’ಐಪಿಎಸ್’ ಪದವನ್ನು ತೆಗೆದುಹಾಕಿ. ಇಲ್ಲದಿದ್ದರೆ ಪ್ರಕರಣ ದಾಖಲಿಸಲಾಗುವುದು” ಎಂದು ಹೇಳಿದ್ದಾರೆ.

ಇತಿಹಾಸಗಾರ ಇರ್ಫಾನ್ ಹಬೀಬ್, “ನಾಚಿಕೆಯಾಗಬೇಕು ನಿಮಗೆ. ಪೊಲೀಸ್ ಅಧಿಕಾರಿಯಾಗಿ ನೀವು ಏನು ಮಾಡಿರಬೇಕು ಎಂದು ಊಹಿಸಬಲ್ಲಿರಾ? ಸತ್ತವರನ್ನು ನಿಂದಿಸುವುದು ಹಿಂದುತ್ವವಾಗಿರಬಹುದು ಆದರೆ ಖಂಡಿತವಾಗಿಯೂ ಹಿಂದೂ ಧರ್ಮವಲ್ಲ. ನೀವು ಚಿಕಿತ್ಸೆ ಪಡೆಯಿರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1986 ಬ್ಯಾಚ್‌ನ IPS ಅಧಿಕಾರಿಯಾಗಿದ್ದ, ಒಂದೂವರೆ ವರುಷದ ಹಿಂದೆ CBI ನ ಹಂಗಾಮಿ ನಿರ್ದೇಶಕರಾಗಿದ್ದ ನಾಗೇಶ್ವರ್‌ ರಾವ್‌ ಅದಕ್ಕಿಂತ ಮೊದಲು CBI ನ ಜಂಟಿ ನಿರ್ದೇಶಕರಾಗಿದ್ದರು. ತನ್ನ ಸೇವಾವಧಿಯುದ್ದಕ್ಕೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಲಂಚ, ಮನೀ ಲಾಂಡ್ರಿಂಗ್ ಮುಂತಾದ ಗಂಭೀರ ಆರೋಪಗಳನ್ನೆದುರಿಸಿದ್ದಾರೆ. ಕಳೆದ ಜುಲೈನಲ್ಲಿ ಅವರು ನಿವೃತ್ತಿಯಾಗಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ‘ಆರ್‌ಎಸ್‌ಎಸ್ ಕಾರ್ಯಕರ್ತರು ಹಂದಿಗಳು’ ಎಂದ ವಿದ್ಯಾರ್ಥಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...