Homeಕ್ರೀಡೆಕ್ರಿಕೆಟ್ಟಿ20 ವಿಶ್ವಕಪ್ ಕ್ರಿಕೆಟ್: ಬಲಿಷ್ಠ ಇಂಗ್ಲೆಂಡ್ ಮಣಿಸಿದ ಐರ್ಲೆಂಡ್

ಟಿ20 ವಿಶ್ವಕಪ್ ಕ್ರಿಕೆಟ್: ಬಲಿಷ್ಠ ಇಂಗ್ಲೆಂಡ್ ಮಣಿಸಿದ ಐರ್ಲೆಂಡ್

ಎರಡು ಬಾರಿ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಮನೆಗೆ ಕಳಿಸಿದ್ದ ಐರ್ಲೆಂಡ್ ತಂಡವು ಇಂದು ಮತ್ತೊಂದು ಭರ್ಜರಿ ಜಯ ದಾಖಲಿಸಿದೆ.

- Advertisement -
- Advertisement -

ಎರಡು ಬಾರಿ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಮನೆಗೆ ಕಳಿಸಿದ್ದ ಐರ್ಲೆಂಡ್ ತಂಡವು ಇಂದು ಮತ್ತೊಂದು ಭರ್ಜರಿ ಜಯ ದಾಖಲಿಸಿದೆ. ಟಿ20 ವಿಶ್ವಕಪ್ ಸೂಪರ್ 12 ಹಂತದ ಮೊದಲನೇ ಗುಂಪಿನ ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದಿಂದ ಐರ್ಲೆಂಡ್ ತಂಡವು 5 ರನ್‌ಗಳ ಜಯಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡದ ನಾಯಕ ಆಂಡಿ ಬಾಲ್ಬಿರ್ನಿಯವರ ಸೊಗಸಾದ ಆಟದಿಂದ ಗಮನ ಸೆಳೆಯಿತು. ಅವರು 47 ಎಸೆತಗಳಲ್ಲಿ 62 ರನ್ ಗಳಿಸಿದರೆ, ಲೋರ್ಕನ್ ಟಕರ್ 27 ಎಸೆತಗಳಲ್ಲಿ 34 ರನ್ ಗಳಿಸಿದರು. ಇವರಿಬ್ಬರೂ ಮೂರನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟದ ಮೂಲಕ ಐರ್ಲೆಂಡ್ 19.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 157 ರನ್ ಗಳಿಸಲು ಸಹಾಯಕರಾದರು.

158 ರನ್‌ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ಆರಂಭಿಕ ಆಘಾತ ಕಂಡಿತು. ರನ್ ಖಾತೆ ತೆರೆಯುವ ಮುನ್ನವೇ ಜಾಸ್ ಬಟ್ಲರ್ ಔಟಾದರೆ ಅಲೆಕ್ಸ್ ಹೇಲ್ಸ್ 7 ರನ್‌ಗೆ ವಿಕೆಟ್ ಒಪ್ಪಿಸಿದರು. ತಂಡ 29 ರನ್ ಗಳಿಸಿದ್ದಾಗ ಬೆನ್ ಸ್ಟೋಕ್ ಔಟಾದರು. ಐರ್ಲೆಂಡ್ ತಂಡದ ಜೋಸ್ವ ಲಿಟಲ್ 02 ವಿಕೆಟ್ ಪಡೆದು ಮಿಂಚಿದರು. ಡೇವಿಡ್ ಮಲಾನ್ 35 ರನ್ ಮತ್ತು ಮೋಹಿನ್ ಅಲಿ 24 ರನ್ ಗಳಿಸಿ ಇಂಗ್ಲೆಂಡ್ 100 ರ ಗಡಿ ದಾಟಲು ನೆರವಾದರು. ಆದರೆ ಆಗ ಸುರಿದ ಮಳೆಯಿಂದಾಗಿ ಪಂದ್ಯ ಮುಂದುವರೆಸಲಾಗಲಿಲ್ಲ.

ಇಂಗ್ಲೆಂಡ್ ತಂಡ 14.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿದಾಗ ಭಾರೀ ಮಳೆ ಸುರಿದ ಪರಿಣಾಮ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐರ್ಲೆಂಡ್ ವಿಜಯಿ ಎಂದು ಘೋಷಿಸಲಾಯಿತು. ನಿಯಮದ ಪ್ರಕಾರ ಇಂಗ್ಲೆಂಡ್ 05 ರನ್ ಹಿಂದಿತ್ತು.

ಅರ್ಹತಾ ಪಂದ್ಯದಲ್ಲಿ ಐರ್ಲೆಂಡ್ ತಂಡವು ವೆಸ್ಟ್ ಇಂಡಿಯಾ ನೀಡಿದ 147 ರನ್‌ಗಳ ಗುರಿಯನ್ನು 17.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಮುಟ್ಟಿ ವಿಜಯ ಸಾಧಿಸಿತ್ತು. ಆ ಮೂಲಕ ಸೂಪರ್ 12ಗೆ ಅರ್ಹತೆ ಪಡೆದ ಅದು ಈಗ ಇಂಗ್ಲೆಂಡ್ ಅನ್ನು ಸಹ ಮಣಿಸಿ ಹೆಚ್ಚಿಸಿಕೊಂಡಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಸೆಮಿಫೈನಲ್‌ಗೇರಲು ಭಾರತದ ಮುಂದಿನ ಹಾದಿ ಹೀಗಿದೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...