Homeಸಾಹಿತ್ಯ-ಸಂಸ್ಕೃತಿಕಥೆ'ತನುಬಿಂದಿಗೆ' ನಾಗರಾಜ ಕೋರಿಯವರ ಕತೆ

‘ತನುಬಿಂದಿಗೆ’ ನಾಗರಾಜ ಕೋರಿಯವರ ಕತೆ

- Advertisement -
- Advertisement -

ಅದು ಇಳಿಸಂಜೆ. ಊರಿಗೆ ಮಳೆ ಬಾರದಕ್ಕಾಗಿ ಊರು ದೇವಿಗೆ ತನುಬಿಂದಿಗೆ ಇಡಲು ಜನ ಮಾತಾಡಿಕೊಳ್ಳಲು ಜಮೆಯಾಗಿತ್ತು. ಊರಲ್ಲಿನ ಒಂದು ಉಪ್ಪರಿಗೆ ಮೇಲೆ ನಿಂತು, ಪಶ್ಚಿಮ ದಿಕ್ಕಿನ ಕಡೆ ನೋಡಿದರೆ ಅಡವಿಯೆಂಬೋ ಅಡವಿ ಒಣಒಣ ಕಾಣತೊಡಗಿತ್ತು. ಮತ್ತಷ್ಟು ಕಣ್ಣಗಲಿಸಿ ಊರ ದಿಕ್ಕಿಗೆ ನೋಡಿದರೆ ಮುನಿಯಪ್ಪನ ಹೊಲವೆಲ್ಲಾ ಕೆರೆ ನೀರಿನಿಂದ ಹಸಿರಾಗಿತ್ತು. ಮುನಿಯಪ್ಪ ಊರಿಗೆ ಹಸಿರು ಶೆಲ್ಲೆಯ ದೊಡ್ಡ ಸಾಹುಕಾರ. ಸಾಕಷ್ಟು ಪಿತ್ರಾರ್ಜಿತ ಆಸ್ತಿ ಇತ್ತು.

ಈ ಊರಿಗೆ ಹತ್ತನ್ನೆರಡು ಸಲ ಬರಗಾಲ ಬಂದರೂ ಊರಿಗೆ ಅನ್ನ, ನೀರು, ಬಟ್ಟೆ ಕೊಟ್ಟು ಹಸಿವು ನೀಗಿಸುವ ಶಕ್ತಿ ಈತನಿಗಿತ್ತು. ಆದರೆ ಅಂತಹ ಔದಾರ್ಯದ ಗುಣ ಎಳ್ಳಷ್ಟೂ ಇರಲಿಲ್ಲ. ತಾನು ಹಿಂದೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾಗುವ ಉಪಾಯ ಹೂಡಿ ತಮ್ಮ ಹೊಲದಲ್ಲೇ ಊರು ಮಂದಿ ನೀರು ಕುಡಿಯಲೆಂದು ಕೆರೆ ಕಟ್ಟಿಸಿದ. ಆಗಿನಿಂದ ಆ ಕೆರೆ ಸಮತಟ್ಟಾಗಿ ತುಂಬಿ ತುಳುಕಿ ಆಣೆಕಟ್ಟಿನಂತೆ ವಿಶಾಲವಾಗಿ ಕಾಣುತಿತ್ತು. ಆಗಾಗ ಸರ್ಕಾರದವರು ಜನರು ನೀರು ಕುಡಿದಾದರೂ ಬದುಕಲೆಂದು ತುಂಗಭದ್ರಾ ಆಣೆಕಟ್ಟಿನಿಂದ ನೀರು ಬಿಡುತಿದ್ದರು.

ಮುನಿಯಪ್ಪ ತನ್ನ ನಾಲ್ಕೈದು ಚೇಲಾಗಳನ್ನು ಕಾವಲು ಬಿಟ್ಟು ಕೆರೆ ತುಂಬಿಸಿಕೊಳ್ಳುತಿದ್ದ. ಇದರಿಂದ ಉಳಿದವರ ಕೆರೆಕಟ್ಟೆಗಳು ನೀರಿಲ್ಲದೆ ಬಿಕೋ ಎನ್ನುತಿದ್ದವು. ಮುನಿಯಪ್ಪ ಊರಿಗೆ ಉದಾರವಾಗಿ ಕಾಣಲು, ಕೆರಿಗೆ ತಂತಿಬೇಲಿ ಹಾಕಿಸದೆ ಜನರಿಗೆ ಸರಾಗವಾಗಿ ನೀರು ಕುಡಿಯಲು ಹಾಗೆ ಬಿಟ್ಟಿದ್ದ. ತಾನು ಆ ಕೆರೆ ನೀರಿನಿಂದ ಕೊಬ್ಬು, ಶೇಂಗಾ, ಹತ್ತಿ ಸಮೃದ್ಧವಾಗಿ ಬೆಳೆಯುತಿದ್ದ. ತನ್ನ ಕೆರೆಯಲ್ಲಿ ಹೊಲೆಯರೂ ನೀರು ತುಂಬುತ್ತಿರುವುದು ಮುನಿಯಪ್ಪನಿಗೆ ಸಿಟ್ಟು ತರಿಸಿತ್ತು. ಅವರಿಗೆ ನೀರು ತುಂಬುವುದನ್ನು ನಿಷೇಧಿಸಿದ. ಅಕಸ್ಮಾತ್ತಾಗಿ ಕಣ್ಣು ತಪ್ಪಿಸಿ ನೀರು ತರಲು ಹೋದರೆ ಆಳುಗಳಿಂದ ಹಿಗ್ಗಾಮುಗ್ಗಾ ಥಳಿಸಿ ಕಳಿಸುತ್ತಿದ್ದ. ಹೊಲೆಯರು ಮುನಿಯಪ್ಪನಿಗೆ ಶಾಪ ಹಾಕಿ ಮಣ್ಣು ತೂರಿ ದೂರ ಸರಿದರು. ಆದರೆ ಕೂಲಿಗೆಂದು ಅವನ ಹೊಲಕ್ಕೆ ಹೋಗುವುದು ಅನಿವಾರ್ಯವಾಗಿತ್ತು.

ಇದನ್ನು ಓದಿ: ನೀರು (ಪುಟ್ಕತೆ)

ಮುನಿಯಪ್ಪನ ಹೊಲಕ್ಕೆ ಕೂಲಿ ಬರುತಿದ್ದ ಹೊಲೆಯರ ಸುಂಕವ್ವ ಕುರಿ ಮರಿಯನ್ನು ಜೊತೆಗೆ ಹೊಡೆದು ತರುತ್ತಿದ್ದಳು. ಒಂದಿನ ತುಂಬಿನಿಂತ ಹಚ್ಚನ ಜ್ವಾಳದ ಸಸಿಯನ್ನು ಕುರಿಮರಿ ಕಡಿದಿತ್ತು. ಮುನಿಯಪ್ಪ ಸಿಟ್ಟಿಗೇರಿ ‘ಏ..ನಿಮ್ಮೌನ್ ತುಡುಗು ರಂಡೆ ಕುರಿಮರಿ ಸರಿಗಿ ಕಟ್ಟಾಕರ ಬರಲ್ಲೇನು..’ ಎಂದು ಅಷ್ಟು ಮಂದ್ಯಾಗ ಬೈದಿದ್ದ. ಸುಂಕವ್ವ ಅವಮಾನಿತಳಾಗಿ ‘ಯಣ್ಣಾ ಬಾಯಿ ಬಿಗಿದಿಡಿದು ಮಾತಾಡು. ಹೆಣ್ಮಕ್ಕಳಂದ್ರೆ ಸೋವಿ ಸಿಕ್ಕಾರೇನು’ ಎಂದು ಒದರಾಡಿ ಕೂಲಿ ಕೆಲಸ ಅರ್ಧಕ್ಕೆ ನಿಲ್ಲಿಸಿ ಮನೆಗೆ ಬಂದಿದ್ದಳು. ಮಣ್ಣು ತಿಂದರೂ ಪರವಾಗಿಲ್ಲ, ಮುನಿಯಪ್ಪನ ಹೊಲಕ್ಕೆ ಹೋಗಬಾರದೆಂದು ನಿಶ್ಚಯಿಸಿದಳು.

ಪೊತನಾಳ ಸಂತಿಗೆ ಹೋಗಿದ್ದ ಗಂಡ ರಂಗಪ್ಪ ಬಂದ. ಸುಂಕವ್ವಳನ್ನು ನೋಡಿ ‘ಯಾಕ ಏನಾಯಿತು. ಕೂಲಿ ಕೆಲ್ಸಕ ಹೋಗಿದ್ದಲಾ…’ ಅಂತ ಗಾಬರಿಗೊಂಡು ಕೇಳಿದ. ಸುಂಕವ್ವ ನಡೆದ ಹಕೀಕತ್ತು ಹೇಳಿದಳು. ರಂಗಪ್ಪನಿಗೂ ಬೇಜಾರಾಯಿತು. ದಿಕ್ಕು ತೋಚದೆ ಚಿಂತಿಸಿದರು. ರಂಗಪ್ಪ ‘ಈ ಬರ ಶನಿವಾರ ಬೆಂಗಳೂರಿಗೆ ದುಡ್ಯಾಕ ಹೋಗಮು.. ಮಂದೆಲ್ಲಾ ನಾಳೆ ಬರೊ ಶನಿವಾರನ ಎಲ್ಲಾರು ತಯಾರಾಗ್ಯಾರ.. ಈ ಗೋಳಾರ ತಪ್‍ತೈತಿ..’ ಎಂದು ಹೇಳಿದ.

ಬೆಂಗಳೂರಿಗೆ ದುಡಿಯಾಕ ಹೋಗುವುದನ್ನು ನೆನಪಿಸಿಕೊಂಡು ಸುಂಕವ್ವಳಿಗೆ ದುಃಖ ಉಮ್ಮಳಿಸಿ ಬಂತು. ದುಡ್ಡಿದಿದ್ದರಲ್ಲೇ ಅಷ್ಟಿಷ್ಟು ದುಡ್ಡು ಉಳಿಸಿ ಚಿನ್ನೂರು ಸಂತ್ಯಾಗ ಕುರಿಮರಿ ತಂದು, ಎಂಬತ್ತು ಕೋಳಿನೂ ಬಿಟ್ಟು ಬೆಂಗಳೂರಿಗೆ ಹೇಗೆ ಹೋಗುವುದೆಂದು ಸುಂಕವ್ವ ಚಿಂತಿತಳಾದಳು. ದುಡಿಮೆ ಅನಿವಾರ್ಯವಾಗಿತ್ತು. ಮಲ್ಲ ಬೇರೆ ಸಣ್ಣವ. ಶಿವಜ್ಜಿ ಹತ್ತಿರ ಬಿಟ್ಟು ಹೋಗಲು ಮನಸ್ಸು ಕಸಿವಿಸಿಯಾಗುತ್ತಿತ್ತು. ಶಿವಜ್ಜಿ ಆಗಾಗ ಕದ್ದುಮುಚ್ಚಿ ಸೆರೆ ಕುಡಿಯುತ್ತಿರುವುದೂ ಈ ಕಸಿವಿಸಿಗೆ ಕಾರಣವಾಗಿತ್ತು.

ಇದನ್ನು ಓದಿ: ಎಮ್ಮೆ ಕಳ್ಳರು : ಪುಟ್ಕತೆ

ಸುಂಕವ್ವನ ಮನಸ್ಥಿತಿ ಅರಿತವಳಂತೆ ಶಿವಜ್ಜಿ ‘ಇವತ್ತಿನಿಂದ ನಾನು ಕುಡಿಯಲ್ಲ. ನನ್ನ ಮೊಮ್ಮಗನ ನಾನು ನೋಡಿಕಂತಿನಿ. ನೀವು ಗಂಡ ಹೆಣ್ತಿ ಆರಾಮಾಗಿ ದುಡುಕಂಡು ಬರ್ರಿ..’ ಎಂದು ಪ್ರಮಾಣ ಮಾಡಿದಳು. ಸುಂಕವ್ವ ಅತ್ತೆ ಮಾತು ನಂಬಿ ಬರೋ ಶನಿವಾರ ಬೆಂಗಳೂರಿಗೆ ಹೋಗಲು ನಿರ್ಧರಿಸಿದಳು. ಊರಲ್ಲಿ ತನುಬಿಂದಿಗೆ ಉತ್ಸವ ಇನ್ನೂ ನಾಲ್ಕೇ ದಿನ ಉಳಿದಿತ್ತು. ಮುನಿಯಪ್ಪ ತನ್ನ ಚೇಲಾಗಳೊಂದಿಗೆ ಮಂಗಳವಾರ ನಡೆಯುವ ತನುಬಿಂದಿಗೆ ಉತ್ಸವಕ್ಕೆ ರೊಕ್ಕದ ಪಟ್ಟಿ ಮಾಡಲು ಹೇಳಿದ್ದ. ಆಗ ಎಲ್ಲರ ಮನೆಯಂತೆ ರೊಕ್ಕದ ಪಟ್ಟಿಗೆ ಸುಂಕವ್ವನ ಮನೆಗೆ ಬಂದಿದ್ದರು. ಮನೆಯಲ್ಲಿ ನೋಡಿದರೆ ಐಪೈಸೆ ಇಲ್ಲದ ಸ್ಥಿತಿ.

‘ದೈವದಂತೆ ನಾವು..’ ಎಂದು ತವರು ಮನೆಯವರು ಮಗನಿಗೆಂದು ಮಾಡಿಸಿದ್ದ ‘ಕಿವಿ ಮುರುವು’ ಒತ್ತೆ ಇಟ್ಟು ನೂರಾ ಒಂದು ರೂಪಾಯಿ ಪಟ್ಟಿ ಬರಿಸಿದಳು. ಇನ್ನುಳಿದ ದುಡ್ಡಿನಿಂದ ಬೆಂಗಳೂರಿಗೆ ಹೋಗಲು ಅಕ್ಕಿ, ಜ್ವಾಳದ ಹಿಟ್ಟು, ಹುಂಚೆಕಾರ ಮುಂತಾದವುಗಳನ್ನು ಸಿದ್ಧತೆ ಮಾಡಿಕೊಂಡಳು. ಕೆಲವರು ‘ತನುಬಿಂದಿಗೆ ಉತ್ಸವ ಮುಗಿಸಿಕೊಂಡು ಹೋಗ್ರಿ’ ಅಂತ ಸೂಕ್ಷ್ಮಿಲೆ ಒತ್ತಿ ಹೇಳಿದರು. ಆದರೆ ಸುಂಕವ್ವನ ಮನಸ್ಸು ತನುಬಿಂದಿಗೆ ಉತ್ಸವಕ್ಕಿಂತ ಹೊಟ್ಟೆ, ಬಟ್ಟೆಗಾಗಿ ದುಡಿದು, ಮಗನನ್ನು ಓದಿಸಬೇಕೆಂಬ ಛಲ ಹೂಡಿದಂತಿತ್ತು. ಮಗ ಮಲ್ಲ ಸುಂಕವ್ವನ ಸೆರಗು ಹಿಡಿದು ತಾನೂ ಬರುತ್ತೇನೆಂದು ಅಳತೊಡಗಿದ. ಶಿವಜ್ಜಿ ತಮಣಿ ಮಾಡಿ ಹತ್ತು ರೂಪಾಯಿ ಕೈಲಿಟ್ಟಾಗ ರಂಪಾಟ ಕಡಿಮೆಯಾಗಿತ್ತು. ಮಗನನ್ನು ರಮಿಸಿ ಸುಂಕವ್ವ ರಂಗಪ್ಪ ಗಂಟು ಕಟ್ಟಿದ ಚೀಲಗಳನ್ನೆಲ್ಲಾ ಹೊತ್ತುಕೊಂಡು ಬೆಂಗಳೂರಿಗೆ ತೆರಳಲು ಸಜ್ಜಾಗಿದ್ದ. ಗಾಡಿ ಕಡೆ ಹೆಜ್ಜೆ ಬೆಳೆಸಿದರು.

ಮರುದಿನ ತನುಬಿಂದಿಗೆಯ ಉತ್ಸವಕ್ಕೆ ಮಂದಿ ಮನಿಗೆ ಸುಣ್ಣಬಣ್ಣ ಬಳಿದು ಅಲಂಕೃತಗೊಳಿಸಿದ್ದರು. ದೇವಿಗುಡಿ ಹೊಸ ಕಮಾನಿನೊಂದಿಗೆ ಎದ್ದು ಕಂಡಿತು. ಶಿವಜ್ಜಿಯು ಮಂದಿಯಂತೆ ಮನೆ ಸಾರಿಸಿ, ಮನೆ ಜಗಲಿಗೆ ಸುಣ್ಣ, ಸುರುಮ, ಬಳಿದು ಸೊಸೆ ಕೊಟ್ಟು ಹೋಗಿದ್ದ ಐನೂರು ರೂಪಾಯಿಯಲ್ಲಿಯೇ ಹೋಳಿಗೆ ನೈವೇದ್ಯಕ್ಕೆ ಬೇಕಾದ ಪರಿಕರಗಳನ್ನು ಮಲ್ಲನ ಕೂಡ ತರಿಸಿ ಹಬ್ಬ ಮಾಡಲು ಶುರುಮಾಡಿತ್ತು. ಮಲ್ಲ ಹಳೆ ಪೆಟಾರಿಯಲ್ಲಿ ಮುಡುಪಾಗಿದ್ದ ಅಂಗಿ ತೊಟ್ಟುಕೊಂಡು, ಶಿವಜ್ಜಿಯು ಹೋಳಿಗೆ ಮಾಡಲಿಟ್ಟಿದ್ದ ಹೂರಣ ತಿಂದು, ದೋಸ್ತರೊಂದಿಗೆ ಉತ್ಸವದ ಕಡೆ ಹೊರಟ.

ಊರು ಮಂದಿ ಸಕಲ ವಾದ್ಯಗಳ ಸಮೇತ, ಕುಂಬಾರ ಮನಿಂದ ಮಣ್ಣಿನ ಮಡಿಕೆ, ಹೂಗಾರ ಮನಿಂದ ಸೂಸಗ, ಬಾರಕೇರಿ ಮನಿಂದ ಕಬ್ಬು, ಬಳಿಗಾರ ಮನಿಂದ ಹಸಿರು ಬಳೆ ತಂದು ಮೆರವಣಿಗೆ ಮೂಲಕ ಗಂಗಿಪೂಜೆಗೆಂದು ಬತ್ತಿ ಹೋದ ನದಿಕಡೆಗೆ ಸಾಗಿತ್ತು. ಒಂದಿಷ್ಟು ತೇವ ಇದ್ದ ಜಾಗದಲ್ಲಿ ಒರತಿ ತೋಡಿ ಗಂಗಿಪೂಜೆ ಮಾಡಿ ಪೂಜಾರಿಯಿಂದ ತನುಬಿಂದಿಗೆ ಹೊತ್ತುಕೊಂಡು ಮತ್ತೆ ಊರಕಡೆ ವಾಪಸ್ಸಾದರು. ತನುಬಿಂದಿಗೆಯ ಉತ್ಸವದಲ್ಲಿ ಯುವಕರ ಪಡೆ ಗಂಡುಗೊಡ್ಲಿ, ಆಯುಧ ಹಿಡಿದುಕೊಂಡು ಕೇಕೆ ಹೊಡಿಯುತ್ತ, ಕುಣಿಯುತ್ತ ದೇವಿಗುಡಿ ಕಡೆ ಹೆಜ್ಜೆ ಬೆಳಿಸಿದ್ದರು.

ಗಂಡುಜೋಗಮ್ಮರು ಹಡ್ಲಿಗೆ ಹಿಡಿದುಕೊಂಡು ಉಧೋ.. ಉಧೋ.. ಅನ್ನುತ್ತಾ, ಭಂಡಾರ ಉಗ್ಗುತ್ತ ಸಾಗಿದ್ದರು. ಇವರೆಲ್ಲರ ನಡುವೆ ಮುನಿಯಪ್ಪ ಬೆಳ್ಳಗೆ ಹೊಳೆಯುತ್ತ, ಜನರನ್ನು ಹೋಳುಮಾಡಿ ತನುಬಿಂದಿಗೆಯ ಉತ್ಸವವನ್ನು ಕಡಿಕಿಲೆ ಸಾಗಿಸುತಿದ್ದ. ಮಲ್ಲ ಅಷ್ಟು ಮಂದ್ಯಾಗ ತೂರಿ ತನುಬಿಂದಿಗೆ ಹೊತ್ತ ಪೂಜಾರಿಯನ್ನು ಕುತೂಹಲದಿಂದ ನೋಡಿದ. ಅಲ್ಲೇ ಮುನಿಯಪ್ಪ ಕಾಣಿಸಿದ. ತನ್ನವ್ವನಿಗೆ ಮುನಿಯಪ್ಪ ಬೈದದ್ದು, ಇವನಿಂದಾಗಿಯೇ ಊರಿನಲ್ಲಿ ಕೆಲಸವಿಲ್ಲದೇ ತಂದೆ-ತಾಯಿ ದುಡಿಯಲು ಬೆಂಗಳೂರಿಗೆ ಹೋಗುವಂತಾಗಿದ್ದು ನೆನಪಾಗಿ ಅವನೊಳಗೆ ಸಿಟ್ಟು ಉಕ್ಕಿ ಬಂತು.

ಮುನಿಯಪ್ಪನ ಹೊಲದಲ್ಲಿನ ಜ್ವಾಳವನ್ನು ಕುರಿಮರಿಗೆ ಮೇಯಿಸಲು ಇದೆ ಸರಿಯಾದ ಸಮಯವೆಂದು ಭಾವಿಸಿದ. ಆಗಲೇ ಇಳಿಸಂಜೆ. ಜೋಳದ ಹೊಲದಲ್ಲಿ ಕುರಿಮರಿ ಬಿಟ್ಟ. ಕುರಿಮರಿಗೆ ನಿಜಕ್ಕೂ ಹಬ್ಬವೆನಿಸಿತು. ತಾಸೊತ್ತಿನಲ್ಲೆ ಹೊಟ್ಟೆ ಬಿರಿಯುವಂತೆ ಮೇಯಿತು. ಮಲ್ಲ ಕುರಿಮರಿಗೆ ನೀರು ಕುಡಿಸಲು ಕೆರೆಗೆ ಬಿಟ್ಟ. ಅದು ನೀರು ಕುಡಿದನಂತರ ಹೊರ ಬಾರದೆ ಕಾಲು ಕೆಸರಲ್ಲಿ ಸಿಕ್ಕಿಕೊಂಡು ಬ್ಯಾ..ಬ್ಯಾ.. ಎಂದು ಒದರತೊಡಗಿತು. ಮಲ್ಲ ಕೆಸರಿನಿಂದ ಕುರಿಮರಿ ಹೊರ ತರಲು ನೆಗೆದ. ನೆಗೆದಿದ್ದರಿಂದಲೋ ಏನೋ.. ಹಾಕು ಮಣ್ಣಿನ ಹೊಂಡವಾದ ಕಾರಣ ಅವನ ಕಾಲು ಕೆಸರಲ್ಲಿ ಸಿಕ್ಕಿಕೊಂಡವು. ಕೂಗಿದರೂ ಯಾರೂ ಕೆರೆಯತ್ತ ಸುಳಿಯಲಿಲ್ಲ. ಆಗಲೇ ರಾತ್ರಿಯಾಗತೊಡಗಿತ್ತು. ಜನ ಉತ್ಸವದ ಅಮಲಿನಲ್ಲಿದ್ದರು. ಮಲ್ಲ ಕೊಸರಾಡಿ ಕೊಸರಾಡಿದಂತೆಲ್ಲಾ ಮತ್ತಷ್ಟು ಒಳ ಇಳಿಯತೊಡಗಿದ. ಮೇಲೇಳಲಾರದೆ ಒಳಗಿದ ಬಾಯಿಗೆ ನೀರೂ ಸಿಗದೆ..ರಾತ್ರಿ ದಟ್ಟವಾಗುತ್ತಿದ್ದಂತೆ ಮಲ್ಲನ ಉಸಿರಾಟವೂ ನಿಧಾನವಾಯಿತು. ಕೆಸರಲ್ಲಿ ಒಂದಾದ.

ಊರ ಜನ ‘ಸುಂಕವ್ವ ತನುಬಿಂದಿಗೆ ಉತ್ಸವ ಬಿಟ್ಟು ಬೆಂಗಳೂರಿಗೆ ಹೋದ್ಲು. ಅದಕ್ಕ ದ್ಯಾಮವ್ವ ಮಗನ್ನ ಬಲಿ ತಗೊಂಡು ಏನಂತ ತೋರಿಸಿದ್ಲು ನೋಡು..’ ಎಂದು ಗುಸುಗುಸು ಮಾತಾಡಿಕೊಂಡರು.

* * * *

ಸಮಾನಾಸಕ್ತ ಸಂಗಾತಿಗಳು ಪ್ರತಿ ವರ್ಷ ಆಯಾ ಕಾಲದ ಬಿಕ್ಕಟ್ಟಿನ ಸಂಗತಿಯನ್ನು ಎದುರುಗೊಳ್ಳುವ `ನಾವುನಮ್ಮಲ್ಲಿ’ ಬಳಗ ಆಗಸ್ಟ್ 17, 18 ರಂದು ಗಂಗಾವತಿಯಲ್ಲಿ `ದೇಶಭಕ್ತಿಯ ಆಯಾಮಗಳು’ ಎನ್ನುವ ಚರ್ಚೆ ಸಂವಾದವನ್ನು ಆಯೋಜಿಸಿದ್ದಾರೆ. ಪ್ರತಿ ವರ್ಷ ಹೊಸ ತಲೆಮಾರಿನ ಒಬ್ಬರ ಒಂದು ಕೃತಿಯನ್ನು ಆಯ್ಕೆ ಮಾಡಿ ಪ್ರಕಟಿಸುತ್ತಾರೆ. ಈ ವರ್ಷ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರು ಗ್ರಾಮದ ನಾಗರಾಜ ಕೋರಿ ಅವರ `ತನುಬಿಂದಿಗೆ’ ಕಥಾಸಂಕಲನವನ್ನು ಆಯ್ಕೆ ಮಾಡಿ ಪ್ರಕಟಿಸುತ್ತಿದ್ದಾರೆ. ಕತೆಗಾರ ಅಮರೇಶ ನುಗಡೋಣಿ ನಾಗರಾಜ ಕೋರಿ ಕತೆಗಳ ಕುರಿತಂತೆ, `ಕಂಡ ಬದುಕನ್ನು ಅದರ ಒಡಲಿಗತ್ತಿದ ನುಡಿಯಿಂದಲೇ ಕತೆ ಮಾಡಿ ಹೇಳಿದ್ದಾನೆ. ಹೀಗಾಗಿ ಮುಗ್ದತೆ ಕಾಣುತ್ತದೆ, ಅದರಿಂದಾಗಿ ಮಳೆಬಿದ್ದ ತಿಂಗಳಲ್ಲಿ ಅಲ್ಲಲ್ಲಿ ನೆಲದ ಮೇಲೆ ಚಿಗುರುವ ಗಿಡ. ಬಳ್ಳಿಗಳಿಗೆ ಹೂ ಮೂಡುತ್ತವೆ. ಅವು ಭೂಮಿಗಿಂತ ಚೆಂದ. ಗಮನಿಸಿದರೆ, ಅವುಗಳಿಗೆ ಗೊತ್ತಾದರೆ ಮುದ ನೀಡುವಷ್ಟು ಸುಂದರವಾಗಿ ಮುಖ ತೋರಿಸುತ್ತವೆ, ಹೀಗಿವೆ ನಾಗರಾಜ ಕೋರಿಯ ಕತೆಗಳು’ ಎನ್ನುತ್ತಾರೆ. ಪತ್ರಿಕೆಯ ಓದುಗರಿಗಾಗಿ ಈ ಸಂಕಲನದ ಹೆಸರಿನ `ತನುಬಿಂದಿಗೆ’ ಕತೆಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...