ಎಮ್ಮೆ ಕಳ್ಳರು : ಪುಟ್ಕತೆ

0

ಕಳ್ಳರು ತುಂಬಾ ಕಿಲಾಡಿಗಳು. ಅವರು ಎಮ್ಮೆಯನ್ನು ಕದಿಯುವಾಗ ಮೊದಲು ಅದರಕೊರಳಿಗೆ ಕಟ್ಟಿರುವ ಗಂಟೆಯನ್ನು ಬಿಚ್ಚುತ್ತಾರೆ. ನಂತರ ಒಬ್ಬ ಕಳ್ಳ ಆ ಘಂಟೆಯನ್ನು ಬಾರಿಸುತ್ತಾ ಪೂರ್ವ ದಿಕ್ಕಿನೆಡೆ ಓಡುತ್ತಾನೆ. ಮಿಕ್ಕ ಕಳ್ಳರು ಎಮ್ಮೆಯನ್ನು ಹೊಡೆದುಕೊಂಡು ಪಶ್ಚಿಮ ದಿಕ್ಕಿನಲ್ಲಿ ಸಾಗುತ್ತಾರೆ. ಗಂಟೆಯ ಸದ್ದನ್ನು ಕೇಳಿದ ಹಳ್ಳಿಗರು ಸ್ವಾಭಾವಿಕವಾಗಿ ಪೂರ್ವ ದಿಕ್ಕಿನೆಡೆ ಓಡುತ್ತಾರೆ. ಆಗ ಆ ಕಳ್ಳ ಆ ಗಂಟೆಯನ್ನು ಬಿಸಾಕಿ ಎತ್ತಲೋ ತಪ್ಪಿಸಕೊಂಡು ಓಡಿ ಹೋಗುತ್ತಾನೆ. ಹಳ್ಳಿಗರು ಆ ಗಂಟೆಯನ್ನು ತೆಗೆದುಕೊಂಡು ದುಃಖದಿಂದ ಹಿಂತಿರುಗುವರು. ಎಮ್ಮೆಯನ್ನು ಕದ್ದ ಕಳ್ಳರು ಹಿರಿ ಹಿರಿ ಹಿಗ್ಗುವರು.

ನಮ್ಮ ಎಮ್ಮೆ: ಶಿಕ್ಷಣ, ಉದ್ಯೋಗ, ಆರೋಗ್ಯ, ಮಹಿಳೆಯರ ಸುರಕ್ಷೆ, ರೈತರ ಕಾಳಜಿ, ನೀರು, ರಸ್ತೆ, ಸಾರಿಗೆ ಮುಂತಾದ ಮುಖ್ಯ ವಿಚಾರಗಳು

ಎಮ್ಮೆಯ ಗಂಟೆ: ಯುದ್ಧ, ಮಂದಿರ, ಮಸೀದಿ, ಚರ್ಚು, ಹಿಂದೂ ಮುಸ್ಲಿಂ ವೈರತ್ವ ಇತ್ಯಾದಿ ರೋಚಕ ವಿಚಾರಗಳು

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here