Homeಮುಖಪುಟಹೈದರಾಬಾದಿಗರಿಂದ ಟ್ರೋಲ್‌ಗೊಳಗಾಗುತ್ತಿರುವ ಸಂಸದ ತೇಜಸ್ವಿ ಸೂರ್ಯ!

ಹೈದರಾಬಾದಿಗರಿಂದ ಟ್ರೋಲ್‌ಗೊಳಗಾಗುತ್ತಿರುವ ಸಂಸದ ತೇಜಸ್ವಿ ಸೂರ್ಯ!

- Advertisement -
- Advertisement -

ಗ್ರೇಟರ್‌ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರದಲ್ಲಿರುವ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹೈದರಾಬಾದಿಗರು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.

#DengeyTejasviSurya ಎಂಬ ಹ್ಯಾಶ್ ಟ್ಯಾಗ್ ಭಾರತದಲ್ಲೇ ಟಾಪ್ ಟ್ರೆಂಡಿಂಗ್‌ನಲ್ಲಿದ್ದು, ಇದರ ವಿರುದ್ದ ಸ್ವಾಗತಂ ತೇಜಸ್ವಿ ಸೂರ್ಯ ಎಂಬ ಪದ ಕೂಡಾ ಟ್ರೆಂಡಿಂಗ್‌ನಲ್ಲಿದೆ.

ಹೈದರಾಬಾದ್​ನ ಪಾಲಿಕೆ ಚುನಾವಣೆಯ ಪ್ರಚಾರದಲ್ಲಿ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ತೇಜಸ್ವಿ ಸೂರ್ಯ, ಹೈದರಾಬಾದನ್ನು ಭಾಗ್ಯನಗರ ಎಂದು ಹೆಸರು ಬದಲಾವಣೆ ಮಾಡಬೇಕು ಎಂದು ಹೇಳಿದ್ದರು. ಇದರ ವಿರುದ್ದವಾಗಿ ಅಲ್ಲಿನ ಬಿಜೆಪಿಯೇತರ ಪಕ್ಷಗಳ ಬೆಂಬಲಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲ್ ಮಾಡುತ್ತಿರುವ ಪದ ಕೆಟ್ಟದಾಗಿರುವುದರಿಂದ ಕೆಲವರು ಇದಕ್ಕೆ ಆಕ್ಷೇಪ ಎತ್ತಿದ್ದಾರೆ.

ಇದನ್ನೂ ಓದಿ: ಮಾಸ್ಕ್ ಧರಿಸದ ಕಾರಣ 250 ರೂ ದಂಡ ಕಟ್ಟಿದ ಸಂಸದ ತೇಜಸ್ವಿ ಸೂರ್ಯ!

ಇದನ್ನೂ ಓದಿ: ತೇಜಸ್ವಿ ಸೂರ್ಯನ ಕೋಮುವಾದಿ ಭಾಷಣ ಬೇಡ: ಜರ್ಮನ್ ಭಾರತೀಯರ ಒತ್ತಾಯ

ಸಧ್ಯ ಟ್ರೆಂಡಿಂಗ್‌ನಲ್ಲಿ ಇರುವ ಪದದ ಬಗ್ಗೆ ಹಲವಾರು ಜನರು ಆಕ್ಷೇಪ ಎತ್ತಿದ್ದಾರೆ

ಇದನ್ನೂ ಓದಿ: ಹೋಲಿಕೆ ಹಾಸ್ಯಾಸ್ಪದ: ಸಂಸದ ತೇಜಸ್ವಿ ಸೂರ್ಯರ ಕಾಲೆಳೆದ ಕಾರ್ತಿ ಚಿದಂಬರಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ: ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ

0
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿ ಆದೇಶಿಸಿದ್ದು, ಸಿಐಡಿಯ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 18ರಂದು ಸಂಜೆ ಹುಬ್ಬಳ್ಳಿಯ...