Homeಅಂಕಣಗಳುತೆಲಂಗಾಣ ಎನ್‌ಕೌಂಟರ್‌: ಸಮರ್ಥನೀಯವು ಅಲ್ಲ, ಪರಿಹಾರವೂ ಅಲ್ಲ.

ತೆಲಂಗಾಣ ಎನ್‌ಕೌಂಟರ್‌: ಸಮರ್ಥನೀಯವು ಅಲ್ಲ, ಪರಿಹಾರವೂ ಅಲ್ಲ.

- Advertisement -
- Advertisement -

ಹೈದರಾಬಾದಿನ ಪಶುವೈದ್ಯೆ ಅತ್ಯಾಚಾರ-ಹತ್ಯೆಯನ್ನೂ ಯಾರೂ ಒಪ್ಪಲು ಸಾಧ್ಯವಿಲ್ಲ. ಅದು ಸಮರ್ಥನೀಯವೂ ಅಲ್ಲ. ಪಶುವೈದ್ಯೆಯನ್ನು ಕ್ರೂರಿಗಳು ಎತ್ತಿಕೊಂಡು ಹೋಗಿ ತೃಷೆ ತೀರಿದ ನಂತರ ಪೆಟ್ರೋಲ್ ಹಾಕಿ ಸುಟ್ಟಿರುವುದು ಮಾನವ ಲೋಕವನ್ನು ಬೆಚ್ಚಿ ಬೀಳಿಸಿದೆ. ಅದೇ ರೀತಿ ಪಶುವೈದ್ಯೆ ಹತ್ಯೆಯಾದ ಕೆಲವು ದಿನಗಳಲ್ಲೇ ಆರೋಪಿಗಳನ್ನು ಕ್ರೂರವಾಗಿ ಪೊಲೀಸರು ಎನ್‌ ಕೌಂಟರ್‌ ಮಾಡಿದ್ದಾರೆ.

ಪಶುವೈದ್ಯೆಯ ಅತ್ಯಾಚಾರ-ಹತ್ಯೆಗೂ ಮುನ್ನ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಅತ್ಯಾಚಾರ-ಕೊಲೆ ಪ್ರಕರಣಗಳು ನಡೆದಿರಲಿಲ್ಲ ಎಂದು ಪ್ರಶ್ನೆ ಮಾಡಿಕೊಂಡರೆ, ಈ ಪ್ರಕರಣಕ್ಕೂ ಕ್ರೂರವಾದ ಅತ್ಯಾಚಾರ ನಡೆದಿವೆ. ಹಲವು ಪ್ರಕರಣಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗ ಹೆಣ್ಣನ್ನು ಸೀಮೆಎಣ್ಣೆ, ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದೂ ಉಂಟು. ಆದರೆ ಇಲ್ಲೆಲ್ಲ ಯಾಕೆ ಆರೋಪಿಗಳನ್ನು ಎನ್ ಕೌಂಟರ್ ಮಾಡಲಿಲ್ಲ ಎಂದರೆ ಆರೋಪಿಗಳು ಮೇಲ್ಜಾತಿಯವರಾಗಿದ್ದು, ಪ್ರಬಲ ವ್ಯಕ್ತಿಗಳಾಗಿದ್ದರೆಂಬುದು ತಿಳಿದುಬಂದಿರುವ ಸಂಗತಿ.

ಪಶುವೈದ್ಯೆ ಮೇಲ್ನೋಟಕ್ಕೆ ಮೇಲ್ವರ್ಗ, ಜಾತಿಗೆ ಸೇರಿದ ಸಂತ್ರಸ್ತೆ. ಹೀಗೆಂದು ಹೇಳಿದರೆ ಕೆಲವರಿಗೆ ಸಿಟ್ಟು ಬರಬಹುದು. ಇದು ಸಹಜವೂ ಹೌದು. ಆದರೆ ಅವರ ಮೇಲಿನ ಹಲ್ಲೆಯನ್ನು ನಾವೆಲ್ಲರೂ ಖಂಡಿಸಿದ್ದೇವೆ. ಇಡೀ ದೇಶದ್ಯಂತ ಜಾತಿಬೇಧವಿಲ್ಲದೇ ಎಲ್ಲರೂ ತೀವ್ರವಾಗಿ ಖಂಡಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ನಾಲ್ವರು ಆರೋಪಿಗಳನ್ನು ಗುಂಡಿಟ್ಟು ಎನ್‌ಕೌಂಟರ್‌. ಇದರಲ್ಲಿ ರಾಜಕೀಯ ಲಾಭವೂ ಇರಬಹುದು. ಮೇಲ್ಜಾತಿಯ ಹೆಣ್ಣು ಮಗಳಿಗೆ ಆದ ಅನ್ಯಾಯವೇ, ಕೆಳಜಾತಿ ಹೆಣ್ಣು ಮಗಳಿಗೆ ಆದಾಗ ಈ ಸಮಾಜ ನಿರ್ಲಕ್ಷ್ಯ ಧೋರಣೆಯಿಂದ ನಡೆದುಕೊಂಡಿದೆ. ಕೆಳಜಾತಿಯ ಹೆಣ್ಣು ಮಗಳು ಅತ್ಯಾಚಾರಕ್ಕೆ ಒಳಗಾಗಿ ಕೊಲ್ಲಲ್ಪಟ್ಟರು ಮೇಲ್ಜಾತಿಯ ಮತ್ತು ಇತರ ಜಾತಿಗಳು ಜನರು ತಮಗೂ ಆ ಪ್ರಕರಣಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಾರೆ. ಅಂದರೆ ಮೇಲ್ಜಾತಿಯ ಗಂಡು ಗೂಳಿಗಳು ಏನು ಬೇಕಾದರೂ ಮಾಡಬಹುದು ಎಂಬ ಸನಾತನ ಧೋರಣೆ ಅದು.

ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಪ್ರಾಬಲ್ಯವಿದ್ದ ಮತ್ತು ಹಣಬಲವಿದ್ದ ಯಾರೇ ಇಂತಹ ಸಮಾಜಘಾತುಕ ಕೃತ್ಯದಲ್ಲಿ ಭಾಗಿಯಾದರೂ ಅವರಿಗೆ ಕನಿಷ್ಠ ಶಿಕ್ಷೆ, ಇಲ್ಲವೇ ಶಿಕ್ಷೆಯೇ ಆಗದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತದೆ. ಅತ್ಯಾಚಾರ ಸಂತ್ರಸ್ಥೆ ಅಥವಾ ಅತ್ಯಾಚಾರಕ್ಕೆ ಒಳಗಾಗಿ ಬರ್ಬರವಾಗಿ ಕೊಲೆಯಾದ ಮಹಿಳೆ/ಬಾಲಕಿ ಯಾವುದೇ ಜಾತಿಗೆ, ಧರ್ಮಕ್ಕೆ ಸೇರಿರಲಿ ಆಕೆ ಒಬ್ಬ ಹೆಣ್ಣು ಎಂದು ಪರಿಗಣಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೇ ಹೊರತು, ಜಾತಿ, ಧರ್ಮ ಮತ್ತು ಹಣಬಲದ ಆಧಾರದ ಮೇಲೆ ಆರೊಪಿಗಳನ್ನು ಹತ್ಯೆ ಮಾಡಬಾರದು. ನಮಗೆ ನಮ್ಮದೇ ಆದ ಕಾನೂನು, ನ್ಯಾಯ ಇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ನಮ್ಮ ರಾಜ್ಯದಲ್ಲೇ ನಡೆದ ಕೆಲವು ಘಟನೆಗಳನ್ನು ಪ್ರಸ್ತಾಪಿಸುವುದಾದರೆ ಉಮೇಶ್ ರೆಡ್ಡಿ ಪ್ರಕರಣ. ಆತ ಹತ್ತಾರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿ. ಆತನನ್ನು ಇದೇ ಪೊಲೀಸರು ಗುಂಡಿಕ್ಕಿ ಎನ್ ಕೌಂಟರ್ ಮಾಡಬಹುದಿತ್ತು. ಹಾಗೆ ಆಗಲೇ ಇಲ್ಲ. ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಮಹಿಳಾ ಸಂಘಟನೆಗಳು ಒಕ್ಕೊರಲಿನಿಂದ ಕೂಗಿ ಆಗ್ರಹಿಸಿದವು. ಕಾನೂನು ತಿಳುವಳಿಕೆ ಇದ್ದ ಉಮೇಶ್ ರೆಡ್ಡಿ ಪೊಲೀಸ್ ಪೇದೆಯಾಗಿದ್ದವನು. ಅವನಿಗೆ ಜೀವಾವಧಿ ಶಿಕ್ಷೆಯಾಯಿತು. ಉತ್ತರ  ಕರ್ನಾಟಕದ ದಾನಮ್ಮ, ದಕ್ಷಿಣ ಕನ್ನಡದ ಸೌಜನ್ಯ ಪ್ರಕಣಗಳ ಆರೋಪಿಗಳಿಗೆ ಸಮರ್ಪಕ ಶಿಕ್ಷೆ ಆಗಲೇ ಇಲ್ಲ. ಪೊಲೀಸ್ ವ್ಯವಸ್ಥೆ ಪ್ರಭಾವಿಗಳ ಮರ್ಜಿಗೆ ಒಳಗಾಯಿತು. ದಾನಮ್ಮ ಮತ್ತು ಸೌಜನ್ಯ ಕೆಳಜಾತಿಗೆ ಸೇರಿದವರು. ಇಲ್ಲಿ ಮೇಲ್ಜಾತಿಯ ವ್ಯಕ್ತಿಗಳು ಆರೋಪಿಗಳಾಗಿದ್ದರು. ಹೀಗಾಗಿ ಇಲ್ಲಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಲೇ ಇಲ್ಲ.

ಪಶುವೈದ್ಯೆಯ ಪ್ರಕರಣದಲ್ಲಿ ಆರೋಪಿಗಳನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದಕ್ಕೆ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ಹಾಗಿದ್ದ ಮೇಲೆ ಬೇರೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸಮಾಜ ಒತ್ತಡ ಹಾಕಲಿಲ್ಲವೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ಯೂಡಲ್ ವ್ಯವಸ್ಥೆಯನ್ನು ಹೊಂದಿದೆ. ಈ ಪ್ಯೂಡಲ್ ವ್ಯವಸ್ಥೆ ಪೊಲೀಸರೊಂದಿಗೆ ಶಾಮೀಲಾಗಿ ಎನ್ ಕೌಂಟರ್ ನಡೆದಿರಲು ಸಾಧ್ಯವಿವೆ. ಆದರೆ ಪೊಲೀಸರು ದಿಢೀರನೇ ಎನ್ ಕೌಂಟರ್ ಮಾಡಿರುವುದು ಸರ್ವಥಾ ಸಮರ್ಥನೀಯವಲ್ಲ. ಬೇರೆ ಪ್ರಕರಣಗಳಲ್ಲಿ ಆಂಧ್ರ ಪೊಲೀಸರು ಇದೇ ರೀತಿ ವರ್ತಿಸಿದರೇ? ಉತ್ತರ ಮಾತ್ರ ಇಲ್ಲ.

ಮಹಿಳಾ ಹೋರಾಟಗಾರ್ತಿ ಬಾ.ಹ.ರಮಾಕುಮಾರಿ ಅವರು ಹೇಳುವಂತೆ ಪಶುವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ ಖಂಡನೀಯ. ಅದರ ಸಮರ್ಥನೆಗೆ ಯಾರು ಇಳಿದರೂ ಸರಿಯಲ್ಲ. ಆದರೆ ಅತ್ಯಚಾರ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆಯಾಗಬೇಕು. ಹೀಗೆ ಎನ್ ಕೌಂಟರ್ ಮಾಡುವುದನ್ನು ಬೆಂಬಲಿಸಲೂಬಾರದು. ಮುಂದೆ ಇದನ್ನೇ ಮಾದರಿಯಾಗಿಸಿಕೊಂಡ ಪ್ಯೂಡಲ್ ವ್ಯವಸ್ಥೆಯಲ್ಲಿ ಜನರೇ ಕಾನೂನನ್ನು ಕೈಗೆತ್ತಿಕೊಂಡು ಕೊಲ್ಲಲು ಆರಂಭಿಸಿದರೆ ಆತಂಕ ಉಂಟುಮಾಡುತ್ತದೆ. ಯಾವ ಮಹಿಳೆಯ ಮೇಲೇ ಲೈಂಗಿಕ ದೌರ್ಜನ್ಯ ಜೊತೆಗೆ ಕೊಲೆ ನಡೆದರೂ ಅದು ಎಂಥಾ ಪ್ರಭಾವಿಯಾದರೂ ಸಮನಾಗಿ ಶಿಕ್ಷೆಯಾಗಬೇಕು. ಉಳ್ಳವರಿಗೆ ಒಂದು ಬಡವರಿಗೆ ಒಂದು ನ್ಯಾಯ ಆಗಬಾರದು ಎನ್ನುತ್ತಾರೆ.

ದೇಶದಲ್ಲಿ ಇದೇ ಮೊದಲಿಗೆ ಅತ್ಯಾಚಾರ-ಕೊಲೆ ಆರೋಪಿಗಳನ್ನು ಎನ್ ಕೌಂಟರ್ ಮಾಡಿದೆ. ಇದು ಇತರ ಕಡೆಯೂ ಸನ್ನಿಯಂತೆ ಹರಡುವ ಅಪಾಯವಿದೆ. ದೇಶದೆಲ್ಲೆಡೆ ಇದು ಮಾದರಿ ಹಬ್ಬಿದರೆ ಜನರೇ ನಡುಬೀದಿಯಲ್ಲಿ ನಿಂತು ಕೊಲೆ ಮಾಡಲು ಹಿಂಜರಿಯುವುದಿಲ್ಲ. ಇದನ್ನು ಪೊಲೀಸ್ ಇಲಾಖೆ ಅರ್ಥಮಾಡಿಕೊಳ್ಳಬೇಕಿತ್ತು. ಪೊಲೀಸ್ ವೈಫಲ್ಯಗಳನ್ನು ಮುಚ್ಚಿಹಾಕಲು ಎನ್ ಕೌಂಟರ್ ಮಾಡಲಾಗಿದೆ ಮತ್ತು ಸರ್ಕಾರದ ಒತ್ತಡವೂ ಈ ಎನ್ ಕೌಂಟರ್ ಗೆ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

ದಲಿತರು, ಮುಸ್ಲಿಮರು, ಹಿಂದುಳಿದ ಜಾತಿಗಳ ಮಹಿಳೆ/ಬಾಲಕಿಯರ ಮೇಲೆ ಅತ್ಯಾಚಾರ-ಕೊಲೆ ನಡೆದರೂ ಅಲ್ಲಿ ಸಂತ್ರಸ್ಥ ಕುಟುಂಬಗಳಿಗೆ ನ್ಯಾಯ ಸಿಗುವುದು ದುರ್ಬರ. ಅಷ್ಟೇ ಅಲ್ಲ, ಕೆಳಜಾತಿ ಧರ್ಮಕ್ಕೆ ಸೇರಿದ ಹೆಣ್ಣೇ ಅತ್ಯಾಚಾರಕ್ಕೆ ಒಳಗಾಗಲಿ, ಗಂಡೇ ಅತ್ಯಾಚಾರದಲ್ಲಿ ಭಾಗಿಯಾಗಿದ್ದರೂ ಶಿಕ್ಷೆ ಇವರೇ ಅನುಭವಿಸಬೇಕು. ಮೇಲ್ಜಾತಿಯ, ಧರ್ಮದ ಮತ್ತು ಹಣಬಲವುಳ್ಳ ಆರೋಪಿಗಳು ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಇದರಿಂದ ಸಮಾಜಕ್ಕೆ ಹೋಗುವ ಸಂದೇಶವೆಂದರೆ ಉಳ್ಳವರು ಏನು ಮಾಡಿದರೂ ಜಯಿಸಬಹುದು. ಇಲ್ಲವದವರು ಮಾತ್ರ ನೋವು ಸಂಕಟಕ್ಕೆ ಗುರಿಯಾಗುತ್ತಲೇ ಇರುತ್ತಾರೆ ಎಂಬುದು. ಅತ್ಯಾಚಾರ ಯಾರೇ ಮಾಡಲಿ, ಕೊಲೆ ಯಾರೇ ಮಾಡಿರಲಿ ಎಲ್ಲರಿಗೂ ಒಂದೇ ರೀತಿಯ ಶಿಕ್ಷೆಯಾಗಬೇಕು. ಆದರೆ ಅದು ಸಮರ್ಪಕ ತ್ವರಿತ ವಿಚಾರಣೆಯ ನಂತರ ನ್ಯಾಯಾಲಯದ ಮೂಲಕ ಆಗಬೇಕೆ ಹೊರತು ಕಾಡಿನ ನ್ಯಾಯದ ರೀತಿಯಲ್ಲಿ ಅಲ್ಲ.

(ವಿವಿಧ ಲೇಖಕರು ತಮ್ಮ ಲೇಖನಗಳಲ್ಲಿ ಬರೆಯುವ ಅಭಿಪ್ರಾಯಗಳು ಅವರ ಸ್ವಂತದ್ದಾಗಿರುತ್ತವೆ. ಅವು ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅಭಿಪ್ರಾಯಗಳು ಆಗಿರಬೇಕೆಂದೇನಿಲ್ಲ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಕೆಳಜಾತಿ, ಮೇಲ್ಜಾತಿ, ಮಧ್ಯಜಾತಿ ಯಾವುದಕ್ಕೆ ಸೇರಿದ ಹೆಣ್ಣುಮಗಳ‌ ಮೇಲೆ ನಡೆಯುವ ಅತ್ಯಾಚಾರವಾಗಲಿ, ದೇಶದ ಯಾವ ಸಂದಿಯಲ್ಲಾಗಲಿ, ಅದು ಅತ್ಯಾಚಾರ ಅಷ್ಟೇ. ಹೆಣ್ಣು ಯಾವತ್ತೂ ಕೆಳಜಾತಿಯೇ.

    ಇಂದು ನಡೆದ ಎನ್ ಕೌಂಟರನ್ನು‌ ತಾಯಿಯಾಗಿ ನಾನು ಸ್ವಾಗತಿಸುವೆ/ವಿರೋಧಿಸುವೆ.

    ನಮ್ಮ ಮನೆಗಳ ಹೆಣ್ಣು ಮಕ್ಕಳನ್ನು‌ ಪ್ರಿಯಾಂಕ ಜಾಗದಲ್ಲಿ ಕಲ್ಪಿಸಿಕೊಂಡು ನೋಡಿ. ಮರು ಚಣವೆ ಅನಿಸುತ್ತದೆ, ಪೋಲೀಸರಲ್ಲ ನಾವೇ ಎನ್ಕೌಂಟರ್ ಮಾಡಿಬಿಡೋಣವೆಂದು. ಅತ್ಯಾಚಾರಿಗಳ ತಾಯಂದಿರ ಜಾಗದಲ್ಲಿ ನಿಂತು ನೋಡಿ , ಬದುಕಿರುವ ತನಕ‌ ಕಠಿಣ ಶಿಕ್ಷೆ ಅಂತಾದರೂ ಆಗಿದ್ದರೆ , ಮಗ ಜೀವಬೆರಸೆ ಯಾದರೂ ಇರುತ್ತಿದ್ದನೇ ಎನಿಸುತ್ತದೆ.

    ನನಗೆ ಈ ಲೇಖನ ಇಷ್ಟವಾಗಲಿಲ್ಲ.

  2. In our country there are certain group of people who talk as if they are messaiah of minority and down trodden class of people. who ever may be subject to attracity like rape and murder should not be clasified as uppercast and lowercast. We have seen the same group maintain silence when upper cast person undergoing the same pain. Its group and people like yours who are dividing nation on cast and religion. I strongly condem atrocity on person of any cast or religion. No political party or leader should use such cases for their gain.

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...