Homeಮುಖಪುಟತೆಲಂಗಾಣ ಎನ್‌ಕೌಂಟರ್‌: ಪೊಲೀಸರು ಮತ್ತು ಕೆಸಿಆರ್‌ ಅನ್ನು ಹೊಗಳಿದ ಜಗನ್‌

ತೆಲಂಗಾಣ ಎನ್‌ಕೌಂಟರ್‌: ಪೊಲೀಸರು ಮತ್ತು ಕೆಸಿಆರ್‌ ಅನ್ನು ಹೊಗಳಿದ ಜಗನ್‌

- Advertisement -
- Advertisement -

ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಗುಂಡಿಕ್ಕಿ ಕೊಂದ ಕ್ರಮವನ್ನು ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೆಚ್ಚಿಕೊಂಡಿದ್ದಾರೆ. ಅದಕ್ಕಾಗಿ ತೆಲಂಗಾಣ ಪೊಲೀಸರು ಮತ್ತು ಮುಖ್ಯ ಮಂತ್ರಿ ಕೆಸಿಆರ್‌ ರವರನ್ನು ಹೊಗಳಿದ್ದಾರೆ.

“ಈ ಘಟನೆ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ. ನಾಲ್ಕು ಜನರು ಅವಳ ದ್ವಿಚಕ್ರ ವಾಹನವನ್ನು ಪಂಕ್ಚರ್ ಮಾಡಿದ್ದಾರೆ. ಭೀಕರ ಘಟನೆಗೆ ಪೊಲೀಸರು, ನಾಯಕರು ಹೇಗೆ ಪ್ರತಿಕ್ರಿಯಿಸಬೇಕು? ನಾವು ನಮ್ಮನ್ನು ಪ್ರಶ್ನಿಸಬೇಕಾಗಿದೆ” ಎಂದು ತೆಲಂಗಾಣ ವಿಧಾನಸಭೆಯಲ್ಲಿ ಜಗನ್ ರೆಡ್ಡಿ ಹೇಳಿದ್ದಾರೆ.

“ಅವರನ್ನು ಸಾಯಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ನನಗನ್ನಿಸುತ್ತದೆ. ನೀವೇನು ಭಾವಿಸುತ್ತೀರಿ ಎಂದು ಅವರು ಕೇಳಿದ್ದಾರೆ.

ನನಗೂ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಸಹೋದರಿ ಮತ್ತು ಹೆಂಡತಿ ಇದ್ದಾರೆ ಎಂದ ಅವರು “ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿ, ಈ ಘಟನೆ ನನಗೆ ತೀವ್ರ ಸಂಕಟವನ್ನುಂಟುಮಾಡಿತು. ತಂದೆಯಾಗಿ, ಇಂತಹ ಘಟನೆಗಳಿಗೆ ನಾನು ಹೇಗೆ ಪ್ರತಿಕ್ರಿಯಿಸಬೇಕು? ಯಾವ ರೀತಿಯ ಶಿಕ್ಷೆಯು ಪೋಷಕರಿಗೆ ಪರಿಹಾರ ನೀಡುತ್ತದೆ” ಎಂದು ಅವರು ಕೇಳಿದ್ದಾರೆ.

“ಒಂದು ಚಲನಚಿತ್ರದಲ್ಲಿನ ನಾಯಕ ಯಾರನ್ನಾದರೂ ಎನ್‌ಕೌಂಟರ್‌ನಲ್ಲಿ ಕೊಂದರೆ, ನಾವೆಲ್ಲರೂ ಚಪ್ಪಾಳೆ ತಟ್ಟಿ ಚಲನಚಿತ್ರ ಒಳ್ಳೆಯದು ಎಂದು ಹೇಳುತ್ತೇವೆ. ಧೈರ್ಯಶಾಲಿ ವ್ಯಕ್ತಿಯು ನಿಜ ಜೀವನದಲ್ಲಿ ಹಾಗೆ ಮಾಡಿದರೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ದೆಹಲಿಯಿಂದ ಇಳಿಯುತ್ತಾರೆ. ಅವರು ಇದು ತಪ್ಪು ಎಂದು ಹೇಳುತ್ತಾರೆ. ಅದು ಹಾಗೆ ಆಗಬಾರದು “ಎಂದು ಜಗನ್‌ ರೆಡ್ಡಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...