2 ಬಾರಿ ಮಹಾಭಿಯೋಗಕ್ಕೆ ಗುರಿಯಾಗಿ ಅಮೆರಿಕ ಇತಿಹಾಸದಲ್ಲಿ ಕಪ್ಪುಚುಕ್ಕೆಯಾದ ಟ್ರಂಪ್!
PC: Getty Images

ಕಾಂಗ್ರೆಸ್‌ನಲ್ಲಿನ ಡೆಮೋಕ್ರಾಟ್‌ಗಳು ಸೋಮವಾರ ಟ್ರಂಪ್ ಅವರ ದುರ್ನಡತೆ ಆರೋಪಗಳನ್ನು ಪ್ರಸ್ತಾಪಿಸಲು ಯೋಜಿಸಿದ್ದಾರೆ. ಇದು ಟ್ರಂಪ್ ಎರಡನೆ ಬಾರಿಗೆ ದೋಷಾರೋಪಣೆ ಎದುರಿಸುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಟ್ರಂಪ್ ಅವರ ಚುನಾವಣಾ ವಂಚನೆಯ ಸುಳ್ಳು ಹೇಳಿಕೆಗಳು ಮತ್ತು ಕಾಂಗ್ರೆಸ್ ಮೇಲೆ (ಕ್ಯಾಪಿಟಲ್ ಮೇಲೆ) ದಾಳಿ ನಡೆಸಲು ಬೆಂಬಲಿಗರಿಗೆ ಪ್ರಚೋದನೆ ನೀಡಿದರು ಎಂಬ ಅಂಶಗಳ ಆಧಾರದಲ್ಲಿ ಈ ದೋಷಾರೋಪಣೆ ನಡೆಯಬಹುದು ಎನ್ನಲಾಗಿದೆ.

ದೋಷಾರೋಪಣೆ (Impeachment) ಹೇಗಿರುತ್ತದೆ?

ಇಂಪೀಚ್‌ಮೆಂಟ್ ಬಗ್ಗೆ ಇರುವ ಒಂದು ತಪ್ಪು ತಿಳುವಳಿಕೆ ಎಂದರೆ, ಅದು ಅಧ್ಯಕ್ಷ ಪದವಿಯಿಂದ ಕಿತ್ತು ಹಾಕುತ್ತದೆ ಎಂಬುದು. ಆದರೆ ಇದು ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ಅಂದರೆ ಕಾಂಗ್ರೆಸ್‌ನ ಕೆಳಮನೆಯು, ಗುರುತರ ಅಪರಾಧ ಅಥವಾ ದುಷ್ಕೃತ್ಯದ ಅಪಾದನೆಗಳನ್ನು ಮಾಡುವ ಪ್ರಕ್ರಿಯೆ. ಒಂಥರಾ ಕ್ರಿಮಿನಲ್ ಪ್ರಕರಣದಲ್ಲಿ ದೋಷಾರೋಪಣೆ ಮಾಡಿದಂತೆ.

435 ಸದಸ್ಯರ ಕೆಳಮನೆಯು ಸರಳ ಬಹುಮತದಲ್ಲಿ ಅಪಾದನೆಗಳನ್ನು ಪ್ರಸ್ತಾಪಿಸಲು ಯಶಸ್ವಿಯಾದರೆ, ಇದು ಸೆನೆಟ್ (ಮೇಲ್ಮನೆ)ಗೆ ವರ್ಗಾಯಿಸಲ್ಪಡುತ್ತದೆ. ಸೆನೆಟ್ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ.

ಅಮೆರಿಕದ ಸಂವಿಧಾನದ ಪ್ರಕಾರ, ಅಧ್ಯಕ್ಷನನ್ನು ಶಿಕ್ಷೆಗೆ ಒಳಪಡಿಸಲು ಮತ್ತು ಹುದ್ದೆಯಿಂದ ತೆಗೆಯಲು ಸೆನೆಟ್‌ನ 2/3 (ಮೂರನೇ ಎರಡು ಭಾಗ) ಬಹುಮತ ಅಗತ್ಯ.

ಆದರೆ ಹಳೆಯ ಎರಡು ಐತಿಹಾಸಿಕ ಪ್ರಕರಣಗಳನ್ನು ಗಮನಿಸಿದರೆ, ಟ್ರಂಪ್ ಪದಚ್ಯುತಿಗೆ ಸೆನೆಟ್‌ನಲ್ಲಿ ಸರಳ ಬಹುಮತವು ಸಾಕು ಎನಿಸುತ್ತದೆ, ಇದು ಭವಿಷ್ಯದಲ್ಲಿ ಟ್ರಂಪ್ ಆ ಹುದ್ದೆ ಏರುವುದನ್ನೂ ತಡೆಗಟ್ಟಬಹುದು.

ಈ ಜನವರಿಯಲ್ಲಿ ಸೆನೆಟ್ ಮೇಲೆ ನಿಯಂತ್ರಣ ಹೊಂದಲಿರುವ ಡೆಮಾಕ್ರಟ್ಸ್, 2024ರ ಚುನಾವಣೆಯಲ್ಲಿ ಟ್ರಂಪ್ ಸ್ಪರ್ಧಿಸಿದಂತೆ ನಿರ್ಣಯಿಸುವ ಅವಕಾಶವನ್ನೂ ಪಡೆಯಲಿದ್ದಾರೆ.

ಆದರೆ ಇಲ್ಲಿ ಒಂದು ತೊಡಕಿದೆ. ಚುನಾವಣೆಯ ಸ್ಪರ್ಧೆಯಿಂದ ಅನರ್ಹತೆಗೊಳಿಸುವ ಮತದಾನಕ್ಕೂ ಮೊದಲು, ಶಿಕ್ಷಿಸಬೇಕು ಮತ್ತು ಪದವಿಯಿಂದ ಪದಚ್ಯುತಿಗೊಳಿಸಬೇಕೇ ಎಂಬ ವಿಷಯದ ಮೇಲೆ ಮತದಾನ ನಡೆಯಲಿದೆ. ಮೊದಲನೆಯದು ಯಶಸ್ವಿಯಾದರಷ್ಟೇ ಎರಡನೆ ಪ್ರಕ್ರಿಯೆ ನಡೆಯಲಿದೆ.

ಯುನಿವರ್ಸಿಟಿ ಆಫ್ ಕ್ಯಾಲಿರೋಡಾದ ಕಾನೂನು ಪ್ರೊಫೆಸರ್ ಪೌಲ್ ಕ್ಯಾಂಪೋಸ್, ‘ಸೆನೆಟ್‌ಗೆ ಭವಿಷ್ಯದ ಚುನಾವಣೆಯಲ್ಲಿ ಸ್ಪರ್ಧಿಸಲಾರದಂತೆ ಅನರ್ಹಗೊಳಿಸುವ ವೋಟಿಂಗ್ ಅಧಿಕಾರ ಮಾತ್ರವಿದೆ. ಜನೆವರಿ 20ರಂದು ಟ್ರಂಪ್ ನಿರ್ಗಮಿಸಲಿರುವ ದಿನದವರೆಗೂ ಇಂಪೀಚ್‌ಮೆಂಟ್ ವಿಚಾರಣೆ ಚಾಲ್ತಿಯಲ್ಲಿದ್ದರೆ ಈ ವಿದ್ಯಮಾನ ಸಂಭವಿಸಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಿರ್ಗಮನದ ನಂತರ ಇಂಪ್ರೀಚ್‌ಮೆಂಟ್ ಸಾಧ್ಯವೇ?

ಈ ಕುರಿತು ಯಾವ ನ್ಯಾಯಾಲಯವೂ ಸ್ಪಷ್ಟವಾಗಿ ತಿಳಿಸಿಲ್ಲವಾದರೂ, ತಜ್ಞರ ಪ್ರಕಾರ, ಟ್ರಂಪ್ ನಿರ್ಗಮನದ ನಂತರವೂ ಭವಿಷ್ಯದಲ್ಲಿ ಈ ಹುದ್ದೆಗೇರದಂತೆ ಅನರ್ಹಗೊಳಿಸುವ ವಿಷಯ ಜೀವಂತವಿರುತ್ತದೆ.

ಎರಡು ಸಲ ದೋಷಾರೋಪಣೆ

ಈ ಹಿಂದಿನ ಯಾವುದಾದರೂ ಅಮೆರಿಕ ಅಧ್ಯಕ್ಷ ಎರಡು ಬಾರಿ ಇಂಪೀಚ್‌ಮೆಂಟ್ ಎದುರಿಸಿದ್ದಾರೆಯೇ? ಇಲ್ಲಿವರೆಗೆ ಇದು ಸಂಭವಿಸಿಲ್ಲ. ಈ ಕುರಿತು ಕಾಂಗ್ರೆಸ್ ಅಷ್ಟೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ.
2019ರಲ್ಲಿ ಟ್ರಂಪ್ ವಿರುದ್ಧ ಅಧಿಕಾರ ದುರ್ಬಳಕೆಯ ಕಾರಣದಲ್ಲಿ ಇಂಪೀಚ್‌ಮೆಂಟ್ ಮಾಡಲಾಗಿತ್ತು. ಆದರೆ ಮುಂದೆ ಫೆಬ್ರುವರಿ 2020ರಲ್ಲಿ ರಿಪಬ್ಲಿಕನ್‌ಗಳೇ ಹೆಚ್ಚಿದ್ದ ಸೆನೆಟ್ ಅವರನ್ನು ಆರೋಪಮುಕ್ತ ಮಾಡಿತ್ತು.
ಟ್ರಂಪ್ ಇಂಪೀಚ್‌ಮೆಂಟ್‌ಗೆ ಜೋ ಬೈಡೆನ್ ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಆದರೆ ಸೋಮವಾರ ಕಾಂಗ್ರೆಸ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಷ್ಟೇ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌


ಇದನ್ನೂ ಓದಿ: ಅಮೆರಿಕ ಕ್ಯಾಪಿಟಲ್ ಗಲಭೆ: ತ್ರಿವರ್ಣ ಧ್ವಜ ಹಾರಿಸಿದವರ‌ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲು

LEAVE A REPLY

Please enter your comment!
Please enter your name here