ಕೊವ್ಯಾಕ್ಸಿನ್

ವಿವಾದಾತ್ಮಕ ಲಸಿಕೆ ಕೊವ್ಯಾಕ್ಸಿನ್‌ನ ಮೂರನೇ ಹಂತದ ಟ್ರಯಲ್‌ನಲ್ಲಿ ಲಸಿಕೆ ಪಡೆದ ವ್ಯಕ್ತಿಯೊಬ್ಬರು ಸಾವೀಗೀಡಾಗಿದ್ದಾರೆ. ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಕೊವ್ಯಾಕ್ಸಿನ್ ಉತ್ಪಾದಕ ಭಾರತ್ ಬಯೋಟೆಕ್, ವ್ಯಕ್ತಿಗೆ ವಿಷ ಸೇವನೆ ಮಾಡಿಸಿರುವ ಶಂಕೆಯಿದ್ದು, ಆ ಕಾರಣಕ್ಕೆ ಹೃದಯ ಉಸಿರಾಟ ವೈಫಲ್ಯದಿಂದ ವ್ಯಕ್ತಿ ಮೃತನಾಗಿರಬಹುದು. ಈ ಪ್ರಕರಣ ಈಗ ಪೊಲೀಸ್ ತನಿಖೆಯಲ್ಲಿದೆ ಎಂದು ವಿವರಣೆ ನೀಡಿದೆ. ಈ ಹೇಳಿಕೆಯು ಭೋಪಾಲ್‌ನ ಗಾಂಧಿ ಮೆಡಿಕಲ್ ಕಾಲೇಜ್ ನೀಡಿದ ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿದೆ.

‘ನಮ್ಮ ಒಬ್ಬ ಸ್ವಯಂಸೇವಕ ಡಿಸೆಂಬರ್ 21 ರಂದು ಮೃತಪಟ್ಟ. ಈ ಸಾವಿನ ಕುರಿತು ಮೃತರ ಮಗ ಪೀಪಲ್ಸ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್‌ಗೆ ವರದಿ ಮಾಡಿದರು. ಮೃತ ಸ್ವಯಂಸೇವಕ ಮೂರನೇ ಹಂತದ ಟ್ರಯಲ್‌ಗೆ ಸೇರ್ಪಡೆಯಾಗುವ ಮುನ್ನ ಎಲ್ಲ ಮಾನದಂಡಗಳಲ್ಲೂ ಅರ್ಹರಾಗಿದ್ದರು. ಆ ವ್ಯಕ್ತಿಗೆ ಡೋಸ್ ನೀಡಿದ ಹಿಂದಿನ 7 ದಿನಗಳ ಕಾಲ ಅವರು ಆರೋಗ್ಯವಂತರಾಗಿದ್ದರು ಎಂದು ನಮ್ಮ ದಾಖಲೆ ಹೇಳುತ್ತಿವೆ. ಡೋಸ್ ಪಡೆದ 9 ದಿನಗಳ ನಂತರ ಆ ವ್ಯಕ್ತಿ ಮೃತರಾಗಿದ್ದು, ಪ್ರಾಥಮಿಕ ಪರಿಶೀಲನೆಗಳ ಪ್ರಕಾರ ಸಾವು ಡೋಸಿಂಗ್ ಕಾರಣದಿಂದ ಸಂಭವಿಸಿಲ್ಲ’ ಎಂದು ಭಾರತ್ ಬಯೋಟೆಕ್ ಪ್ರಕಟಣೆ ಹೇಳುತ್ತಿದೆ.

“ಮೃತ ಸ್ವಯಂಸೇವಕ ‘ಅಧ್ಯಯನದ ಲಸಿಕೆ’ (study vaccine) ಅಥವಾ ಪ್ಲಾಸಿಬೊ ಪಡೆದಿದ್ದರೆ ಎಂಬುದನ್ನು ನಾವು ಖಚಿತವಾಗಿ ಹೇಳಲು ಆಧಾರಗಳಿಲ್ಲ” ಎಂದೂ ಹೇಳುವ ಮೂಲಕ ಭಾರತ್ ಬಯೋಟೆಕ್ ಗೊಂದಲ ಮೂಡಿಸಿದೆ.

ಭಾರತದ ಔಷಧ ನಿಯಂತ್ರಕರು ಕೊವಿಶೀಲ್ಡ್ ಮತ್ತು ಈ ವಿವಾದಾತ್ಮಕ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಈಗಾಗಲೇ ಅನುಮತಿ ನೀಡಿದ್ದಾರೆ. ಜನೆವರಿ 16 ರಿಂದ ಲಸಿಕಾ ಕಾರ್ಯಕ್ರಮ ಆರಂಭವಾಗಲಿದೆ.

3ನೇ ಹಂತದ ಟ್ರಯಲ್ಸ್ ಪೂರ್ಣಗೊಳಿಸಿಲ್ಲ ಮತ್ತು ಸುರಕ್ಷತಾ, ಪರಿಣಾಮಕಾರಿತ್ವದ ದತ್ತಾಂಶ-ಮಾಹಿತಿಯನ್ನು ಪ್ರಕಟಿಸಿಲ್ಲ ಎಂಬ ವಿವಾದಕ್ಕೆ ಈಡಾಗಿರುವ ಏಕೈಕ ದೇಸಿ ಲಸಿಕೆ ಕೊವ್ಯಾಕ್ಸಿನ್, ಈಗ 3ನೇ ಹಂತದ ಟ್ರಯಲ್‌ನ ಸ್ವಯಂಸೇವಕರೊಬ್ಬರ ಸಾವಿನ ನಂತರ ಇನ್ನಷ್ಟು ಆತಂಕ ಮೂಡಿಸಿದೆ.

2019ರ ‘ನ್ಯೂ ಡ್ರಗ್ಸ್ & ಕ್ಲಿನಿಕಲ್ ಟ್ರಯಲ್ ರೂಲ್ಸ್’ (NDCT) ಪ್ರಕಾರ ಈ ಪ್ರಕರಣವನ್ನು ಕಂಪನಿಯ ಸೈಟ್ ತಂಡವು, Institutional Ethics Committee, the Central Drugs Control Standards Organization (CDSCO) and the Data Safety Monitoring Board (DSMB) ಸಂಸ್ಥೆಗಳಿಗೆ ವರದಿ ಮಾಡಿದೆ.

ಸ್ವಯಂಸೇವಕರಲ್ಲಿ ಮೊದಲೇ ಸುಪ್ತವಾಗಿದ್ದ ರೋಗಗಳೂ ಸಾವಿಗೆ ಕಾರಣ ಇರಬಹುದು ಎಂಬ ಭಾರತ್ ಬಯೋಟೆಕ್ ಹೇಳಿಕೆಯನ್ನೂ ಗಮನಿಸಬೇಕು. ಆದರೆ ಯಾವುದೇ ಕಾರಣವಿರಲಿ, ಟ್ರಯಲ್ಸ್‌ನಲ್ಲಿ ಸ್ವಯಂಸೇವಕ ಸಾವೀಗೀಡಾದರೆ ಅದನ್ನು ಉನ್ನತ ಸಂಸ್ಥೆಗಳ ಗಮನಕ್ಕೆ ತರಬೇಕು ಎಂದು New Drugs & Clinical Trials Rules (NDCT) ಹೇಳುತ್ತದೆ.

ಈಗ ಉನ್ನತ ಸಂಸ್ಥೆಗಳ ಗಮನಕ್ಕೆ ಈ ವಿಷಯ ಬಂದಾಗಿದೆ. ಅವರು ಕ್ರಮ ಕೈಗೊಳ್ಳಬಹುದು ಎಂದು ಯಾವ ವಿಶ್ವಾಸದಿಂದ ಹೇಳುವುದು?


ಇದನ್ನೂ ಓದಿ: ದೇಶದ ಪ್ರಧಾನಿ ರಾಹುಲ್ ಗಾಂಧಿಯೋ, ಮೋದಿಯೋ?: ಸುವರ್ಣ ನ್ಯೂಸ್, ಕನ್ನಡಪ್ರಭ ವಿರುದ್ಧ ಸ್ಪೋಟಗೊಂಡ ಆಕ್ರೋಶ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here