Homeಮುಖಪುಟವಿದೇಶದಿಂದ ಬರುವವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ವಿದೇಶದಿಂದ ಬರುವವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

- Advertisement -
- Advertisement -

ವಿದೇಶದಿಂದ ಸ್ವದೇಶಕ್ಕೆ ಬರುವವರಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿ ಆದೇಶ ಹೊರಡಿಸಿದೆ.

ಹೊರ ದೇಶಗಳಿಂದ ಬರುವ ಪ್ರಯಾಣಿಕರು 14 ದಿನಗಳು ಕ್ವಾರಂಟೈನ್ ಮತ್ತು 7 ದಿನಗಳು ಐಸೋಲೇಷನ್ ನಲ್ಲಿರುವುದು ಕಡ್ಡಾಯಗೊಳಿಸಲಾಗಿದೆ. ವಿದೇಶದಿಂದ ಬರುವವರು ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್ ಮತ್ತು ಐಸೋಲೇಷನ್ ನಲ್ಲಿರುವುದು ಕಡ್ಡಾಯವಾಗಿದೆ.

ಮನೆ ಅಥವಾ ವಸತಿ ಸೇರುವ ಮೊದಲು ಥರ್ಮಲ್ ಸ್ಕ್ಯಾನ್ ಮಾಡಿ ಕ್ವಾರಂಟೈನ್ ಮತ್ತು ಐಸೋಲೇಷನ್ ಒಳಪಡುವ ನಿಯಮಕ್ಕೆ ಬದ್ದರಾಗಿರುತ್ತೇವೆಂಬ ಖಾತ್ರಿ ನೀಡಬೇಕು.

ಆದರೆ ಕೆಲವು ಪ್ರಕರಣಗಳಿಗೆ ವಿನಾಯಿತಿ ನೀಡಲಾಗಿದೆ. ಗರ್ಭಿಣಿ, ಕುಟುಂಬದಲ್ಲಿ ಮರಣ, ಮಾರಣಾಂತಿಕ ಕಾಯಿಲೆ, 10 ವರ್ಷದೊಳಗಿನ ಮಕ್ಕಳು ಇರುವವರು ಸ್ವಂತ ಮನೆಯಲ್ಲೇ 14 ದಿನ ಕ್ವಾರಂಟೈನ್ ಮತ್ತು 7 ದಿನ ಐಸೋಲೇಷನ್ ಗೆ ಒಳಪಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.

ಅಲ್ಲದೆ ವಿದೇಶದಿಂದ ಬಂದ ಪ್ರಯಾಣಿಕರು ತಮ್ಮ ಮೊಬೈಲ್ ಗಳಿಗೆ ಆರೋಗ್ಯ ಸೇತು ಆಪ್  ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಹಾಗೆಯೇ ವಿಮಾನ, ಹಡಗಿನಲ್ಲಿ ಬಂದವರನ್ನು ಥರ್ಮಲ್ ಸ್ಕ್ಯಾನ್ ಮಾಡಿದ ನಂತರ ವಸತಿಯಲ್ಲಿ ಇಡಲಾಗುವುದು. ಕಡ್ಡಾಯವಾಗಿ ಟಿಕೇಟ್ ಹೊಂದಿರಬೇಕು ಎಂಬ ನಿಯಮ ಹಾಕಲಾಗಿದೆ.

ಮನೆಯಲ್ಲಿ ಕ್ವಾರಂಟೈನ್ ಮತ್ತು ಐಸೋಲೇಷನ್ ಗೆ ಒಳಪಡುವವರು ತಮ್ಮ ಆರೋಗ್ಯ ನಿಯಂತ್ರಣ ಮಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.


ಓದಿ: ವಿದೇಶದಿಂದ ರೋಗ ತಂದವರನ್ನು ಕರೆಸಿದ ಸರ್ಕಾರ ದೇಶ ಕಟ್ಟಿದ ಕಾರ್ಮಿಕರನ್ನು ಇನ್ನೂ ಸಡೆಸುತ್ತಿದೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...